40 ಅಡಿ ಎತ್ತರದಿಂದ ಕುಸಿದ ಕ್ರೇನ್ ತಪ್ಪಿದ ಭಾರೀ ಅನಾಹುತ..!

ನಗರದಲ್ಲಿ ನಮ್ಮ ಮೆಟ್ರೋ ಕಾಮಗಾರಿ ವೇಳೆ ಅವಘಡ ಸಂಭವಿಸಿದೆ. 40 ಅಡಿ ಎತ್ತರದಿಂದ ಕ್ರೇನ್ ಕುಸಿದು ಬಿದ್ದಿದ್ದು, ಭಾರೀ ಅನಾಹುತ ತಪ್ಪಿದೆ.ಸಿಲ್ಕ್ ಬೋರ್ಡ್ ಬಳಿ ಮೆಟ್ರೋ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿತ್ತು. ಕಾರ್ಮಿಕರು ಕೆಲಸ ಮಾಡುವಾಗಲೇ ಕ್ರೇನ್ ಕುಸಿದಿದೆ. ಭಾನುವಾರ ಆಗಿದ್ದರಿಂದ ರಸ್ತೆಯಲ್ಲಿ ವಾಹನಗಳ ಸಂಚಾರ ಕಡಿಮೆ ಇತ್ತು. ಆದ್ದರಿಂದ ದೊಡ್ಡ ಅನಾಹುತ ತಪ್ಪಿದಂತೆ ಆಗಿದೆ.

ಮೆಟ್ರೋ ಸೆಗ್ಮೆಂಟ್ ಜೋಡಣೆ ಮಾಡುತ್ತಿದ್ದ ಕ್ರೇನ್ ಅರ್ಧಕ್ಕೆ ತುಂಡಾಗಿದ್ದು ಸುಮಾರು 40 ಅಡಿ ಎತ್ತರಿಂದ ಕೇನ್ ಕೆಳಗೆ ಉರುಳಿದೆ. ಸಮಯದಲ್ಲಿ ಕೆಲಸ ಮಾಡುತ್ತದ್ದ ನೂರಾರು ಕಾರ್ಮಿಕರು ಪ್ರಾಣಾಪಾಯದಿಂದ ಪಾರಾದರು. ಘಟನೆ ಹಲವಾರು ಗಂಟೆಗಳ ಕಾಲ ನಿರ್ಮಾಣ ಸ್ಥಳದಲ್ಲಿ ಆತಂಕ ಮೂಡಿಸಿತ್ತು.

ಸಿಲ್ಕ್ ಬೋರ್ಡ್ಕೆ. ಆರ್. ಪುರಂ ಮಾರ್ಗದ ಕಾಮಗಾರಿ ವೇಳೆ ಘಟನೆ ನಡೆದಿದೆ. ಲಾಂಚಿಂಗ್ ಗಾರ್ಡ್ ಎಂಬ ಮೆಷಿನ್ ಅರ್ಧಕ್ಕೆ ತುಂಡಾಗಿ ಕೆಳಕ್ಕೆ ಕುಸಿದಿದೆ. ಸರಿಯಾದ ಸಮಯಕ್ಕೆ ಅಧಿಕಾರಿಗಳು ಆಗಮಿಸಿಲ್ಲ ಎಂದು ಕಾರ್ಮಿಕರು ಆರೋಪಿಸಿದ್ದಾರೆ.

ಘಟನೆ ಬಗ್ಗೆ ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಜುಂ ಪರ್ವೇಜ್ ಪ್ರತಿಕ್ರಿಯೆ ನೀಡಿದ್ದಾರೆ. ಫೇಸ್ 2 ಕಾಮಗಾರಿ ವೇಳೆ ಮೊದಲ ಬಾರಿಗೆ ಇಂತಹ ಘಟನೆ ನಡೆದಿದೆ. ನಾಲ್ಕು ಲಾಂಚರ್ಗಳ ಮೂಲಕ ಕಾಮಗಾರಿ ಕೈಗೊಳ್ಳಲಾಗಿತ್ತು ಎಂದರು. ಘಟನೆ ಕುರಿತು ತನಿಖೆ ನಡೆಸಲು ಸೂಚಿಸಲಾಗಿದೆ. ಕಟ್ ಆಗಿರುವ ಲಾಂಚರ್ ಮತ್ತೆ ಬಳಕೆ ಮಾಡಲು ಸಾಧ್ಯವಿಲ್ಲ. ಘಟನೆಯಿಂದ ಕಾಮಗಾರಿ 15 ದಿನ ವಿಳಂಬವಾಗುವ ಸಾಧ್ಯತೆ ಇದೆ ಎಂದು ಹೇಳಿದರು.

ಸಿಲ್ಕ್ ಬೋರ್ಡ್ಕೆ. ಆರ್. ಪುರಂ ಮಾರ್ಗ ನಮ್ಮ ಮೆಟ್ರೋ ಯೋಜನೆಯ ಫೇಸ್ 2 ಯೋಜನೆಯಡಿ ಸಿಲ್ಕ್ ಬೋರ್ಡ್ಕೆ. ಆರ್. ಪುರಂ ನಡುವೆ ಮೆಟ್ರೋ ಮಾರ್ಗ ನಿರ್ಮಾಣವಾಗುತ್ತಿದೆ. 19.45 ಕಿ. ಮಿ. ಮಾರ್ಗವಿದಾಗಿದೆ. ಇದರ ಯೋಜನಾ ವೆಚ್ಚ 4202 ಕೋಟಿ ರೂ.ಗಳು

ಮಾರ್ಗದಲ್ಲಿ ಕೆ. ಆರ್. ಪುರಂ, ಮಹದೇವಪುರ, ಡಿಆರ್ಡಿಓ ಸ್ಪೋರ್ಟ್ ಕಾಂಪ್ಲೆಕ್ಸ್, ದೊಡ್ಡಾನೆಕುಂದಿ, ಇಸ್ರೋ, ಮಾರತ್ಹಳ್ಳಿ, ಕಾಡುಬೀಸನಹಳ್ಳಿ, ಬೆಳ್ಳಂದೂರು, ಇಬ್ಬಲೂರು, ಆಗರ ಕೆರೆ, ಎಚ್. ಎಸ್. ಆರ್. ಲೇಔಟ್, ಸಿಲ್ಕ್ ಬೋರ್ಡ್ ನಿಲ್ದಾಣಗಳು ಬರುತ್ತವೆ. ಕೆ. ಆರ್. ಪುರಂ ಮತ್ತು ಸಿಲ್ಕ್ ಬೋರ್ಡ್ ಇಂಟರ್ ಚೇಂಜ್ ನಿಲ್ದಾಣಗಳಿವೆ.

ಐಟಿ ಕಂಪನಿಗಳೇ ಹೆಚ್ಚಾಗಿರುವ ಮಾರ್ಗದಲ್ಲಿ ಸಾಗುವ ಮಾರ್ಗವಿದಾಗಿದೆ. ಟೆಂಡರ್ ಮತ್ತು ಮರು ಟೆಂಡರ್ ಕಾರಣದಿಂದಾಗಿ ಸಿಲ್ಕ್ ಬೋರ್ಡ್ಕೆ. ಆರ್. ಪುರಂ ಮಾರ್ಗದ ಕಾಮಗಾರಿ ಸ್ವಲ್ಪ ವಿಳಂಬವಾಗುವ ಸಾಧ್ಯತೆ ಇದೆ.

ಬಾವಿ ಪತ್ತೆಯಾಗಿತ್ತು ಸೆಪ್ಟೆಂಬರ್ 30ರಂದು ಭದ್ರ ಟಿಬಿಎಂಯಂತ್ರ ನಮ್ಮ ಮೆಟ್ರೋ ಸುರಂಗ ಮಾರ್ಗ ಕೊರೆಯುವಾಗ ಹಳೆಯ ಬಾವಿ ಪತ್ತೆಯಾಗಿತ್ತು. ಕಟ್ಟಡದ ಕೆಲಭಾಗದಲ್ಲಿ ಬಾವಿ ಪತ್ತೆಯಾದ ಕಾರಣ ಕಟ್ಟಡದಲ್ಲಿದ್ದ ಜನರನ್ನು ಸ್ಥಳಾಂತರ ಮಾಡಲಾಗಿತ್ತು.

ಬೆಂಗಳೂರು ನಗರದಲ್ಲಿ ಗೊಟ್ಟಿಗೆರೆನಾಗವಾರ ನಡುವಿನ ರೀಚ್-6 ಮಾರ್ಗ, ಡೇರಿ ವೃತ್ತದಿಂದ ನಾಗವಾರ ನಡುವೆ 13.9 ಕಿ. ಮೀ. ಸುರಂಗ ಮಾರ್ಗ ಸೇರಿದಂತೆ ವಿವಿಧ ಮಾರ್ಗಗಳ ಕಾಮಗಾರಿ ನಡೆಯುತ್ತಿದೆ.

ಅಕ್ಟೋಬರ್ 20ಕ್ಕೆ ಬೆಂಗಳೂರು ನಗರದಲ್ಲಿ ನಮ್ಮ ಮೆಟ್ರೋ ಸೇವೆ ಆರಂಭವಾಗಿ ಬರೋಬ್ಬರಿ 10 ವರ್ಷಗಳಾಗಿವೆ. 2011 ಅಕ್ಟೋಬರ್ 20 ರಿಂದ ಇಲ್ಲಿಯವರೆಗೆ 60 ಕೋಟಿ ಮಂದಿ ಮೆಟ್ರೋದಲ್ಲಿ ಪ್ರಯಾಣ ಬೆಳೆಸಿದ್ದಾರೆ. ಹಸಿರು ಮತ್ತು ನೇರಳೆ ಸೇರಿದಂತೆ ಒಟ್ಟು ಎರಡು ಮಾರ್ಗದಲ್ಲಿ ಪ್ರಸ್ತುತ ಮೆಟ್ರೋ ರೈಲು ಸಂಚಾರ ನಡೆಸುತ್ತಿದೆ.

ತಾಜಾ ಸುದ್ಧಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ :

https://play.google.com/store/apps/details?id=com.speed.newskannada

Please follow and like us
Please follow and like us:

Leave a Reply

Your email address will not be published. Required fields are marked *

Next Post

ಹೆಚ್.ಡಿ. ಕುಮಾರಸ್ವಾಮಿ ಅವರೇ ಅಲ್ಪಸಂಖ್ಯಾತ ನಿಜವಾದ ವಿರೋಧಿ : ಜಮೀರ್ ಅಹ್ಮದ್ ಖಾನ್

Sun Oct 24 , 2021
ಸಿದ್ದರಾಮಯ್ಯ ಅವರನ್ನು ಅಲ್ಪಸಂಖ್ಯಾತ ವಿರೋಧಿ ಎಂದು ಟೀಕಿಸುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರೇ ಅಲ್ಪಸಂಖ್ಯಾತ ನಿಜವಾದ ವಿರೋಧಿ. ಅಲ್ಪಸಂಖ್ಯಾತರನ್ನು ರಾಜಕೀಯವಾಗಿ ಮುಗಿಸುವುದೇ ಅವರ ಗುರಿಯಾಗಿದೆ ಎಂದು ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸಿಂದಗಿ ವಿಧಾನಸಭೆ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಮಾತನಾಡಿದ ಅವರು, ಹೆಚ್.ಡಿ. ದೇವೇಗೌಡರು ಕೂಡ ಅಲ್ಪಸಂಖ್ಯಾತರ ವಿರೋಧಿಯಲ್ಲ. ಕುಮಾರಸ್ವಾಮಿ ಮಾತ್ರ ಅಲ್ಪಸಂಖ್ಯಾತರನ್ನು ರಾಜಕೀಯವಾಗಿ ಬಲಿಕೊಡುವ ಕೆಲಸ ಮಾಡುತ್ತಿದ್ದಾರೆ ಎಂದು ಕುಟುಕಿದರು. […]

Advertisement

Wordpress Social Share Plugin powered by Ultimatelysocial