ಯಾರ ಹಂಗಿಲ್ಲದ ಪೂರ್ಣ ಸರಕಾರ ನೀಡಿದರೆ ಸಮಗ್ರ ನೀರಾವರಿ ಜನತಾ ಜಲಧಾರೆ ಮಹಾ ಸಂಕಲ್ಪ ಸಮಾವೇಶ ಹೆಚ್.ಡಿ.ಕುಮಾರಸ್ವಾಮಿ

ಬೆಂಗಳೂರು : ಮೈತ್ರಿ ಸರ್ಕಾರದ ಸಹವಾಸ ಬೇಡ ಬದಲಾಗಿ ಸ್ವತಂತ್ರ ಸರ್ಕಾರ ತರಲು ಸಂಕಲ್ಪ ಮಾಡೋಣ ಎಂದು ಮಾಜಿ ಮುಖ್ಯಮಂತ್ರಿ ಹೆಚ್ .ಡಿ.ಕುಮಾರಸ್ವಾಮಿ ಕರೆ ನೀಡಿದ್ದಾರೆ.

ನೆಲಮಂಗಲ ಸಮೀಪ ಇಂದು ಹಮ್ಮಿಕೊಂಡಿದ್ದ ಜನತಾ ಜಲಧಾರೆ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಜೂನ್, ಜುಲೈ ತಿಂಗಳಲ್ಲಿ ಮತ್ತೊಂದು ಸುತ್ತಿನ ರಥಯಾತ್ರೆ ನಡೆಸುತ್ತೇನೆ ಎಂದು ಘೋಷಿಸಿದರು.
ಹಳ್ಳಿ, ಹಳ್ಳಿಗಳಲ್ಲಿ ರಥಯಾತ್ರೆ ನಡೆಸುತ್ತೇವೆ. ನಾನೇ ಜನರ ಮುಂದೆ ಬರುತ್ತೇನೆ ಎಂದರು.

ನಮ್ಮ ಪಕ್ಷದಿಂದಲೇ ಬೆಳೆದು ಹೋದವರು ಜೆಡಿಎಸ್ ಮುಗಿದೇ ಹೋಯಿತು ಎಂದಿದ್ದರು. ಆದರೆ ಜನತಾ ಜಲಧಾರೆ ಸಮಾವೇಶ ಅವರಿಗೆ ಉತ್ತರ ಕೊಟ್ಟಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

90 ವರ್ಷ ವಯಸ್ಸಿನಲ್ಲೂ ನಾಡಿನ ಜನರಿಗಾಗಿ ದೇವೇಗೌಡರು ಹೋರಾಟ ಮಾಡುತ್ತಿದ್ದಾರೆ. ರಾಜಕೀಯದ ಬೆಳವಣಿಗೆಗಳ ಪರಿಣಾಮವಾಗಿ ನಾನು ಎರಡು ಬಾರಿ ರಾಜ್ಯದ ಮುಖ್ಯಮಂತ್ರಿ ಆದೆ. ಆದರೆ ಯಾವುದೇ ಕಾರ್ಯಕ್ರಮ ಕೊಡಲು ಸ್ವತಂತ್ರ ಅಧಿಕಾರ ಇರಲಿಲ್ಲ. ರೈತರ ಸಾಲ ಮನ್ನಾ ಮಾಡಲು ಮುಂದಾದಾಗ ನೋವು ಅನುಭವಿದ್ದು ನನಗೆ ಮಾತ್ರ ಗೊತ್ತು ಎಂದರು.

ಯಾವ ಟೀಕೆಗಳಿಗೂ ಹೆದರಬೇಕಿಲ್ಲ. ಹೃದಯದಿಂದ ಜನರ ಕೆಲಸ ಮಾಡಿ ಎಂದು ಸಂಸದ ಪ್ರಜ್ವಲ್ ರೇವಣ್ಣ, ನಿಖಿಲ್ ಕುಮಾರಸ್ವಾಮಿ ಹಾಗೂ ಸೂರಜ್ ರೇವಣ್ಣಗೆ ಸಲಹೆ ನೀಡಿದರು‌ ಎಂದರು.

ಜೆಡಿಎಸ್ ನಲ್ಲಿ ಟಿಕೆಟ್ ಸಿಗಬೇಕಾದರೆ ಹಣ ಕೊಡಬೇಕು ಎಂದು ಒಬ್ಬರು ಆರೋಪ ಮಾಡಿದರು. ಆದರೆ ಅನ್ನದಾನಿ ಬಡವರಾದರೂ ಟಿಕೆಟ್ ಕೊಟ್ಟು ಚುನಾವಣಾ ಖರ್ಚನ್ನು ಪಕ್ಷ ಭರಿಸಿದೆ. ದೇವರು ನೋಡ್ತಾನೆ ಎಂಬ ಕನಿಷ್ಠ ತಿಳುವಳಿಕೆ ಬೇಕು ಎಂದರು.

ಕೊರೊನಾದಿಂದ ಜೆಡಿಎಸ್ ನಾಯಕರು ಹೊರ ಬಂದಿಲ್ಲ ಅಂತಾ ಇದ್ರು. ಅದಕ್ಕೆ ಕಾರಣ ಕೊರೊನಾದಿಂದ ಆದಂತಹ ಸಾವಿರಾರು ಜನರ ಸಾವು. ನಿಮಗೆ ತೊಂದರೆ ಆಗಬಾರದು ಅಂತ ಕಾರ್ಯಕ್ರಮ ಹಾಕಿಕೊಂಡಿರಲಿಲ್ಲ. ಬಿಜೆಪಿ, ಕಾಂಗ್ರೆಸ್ ನಾಯಕರಷ್ಟು ಅವಸರ ನಮಗೆ ಇರಲಿಲ್ಲ. ಕಳೆದ ತಿಂಗಳಿಂದ ಜಲಧಾರೆ ಕಾರ್ಯಕ್ರಮ ಆರಂಭ ಆಯ್ತು. ಅಂದಿನಿಂದ ಇಂದಿನವರೆಗೆ ನಮಗೆ ಸಾಥ್ ಕೊಟ್ಟಿದ್ದೀರಾ. ಮೈಸೂರಿನಲ್ಲಿ ಒಂದು ಸ್ಥಾನ ಬರಲ್ಲ ಎಂದು ಇಲ್ಲೇ ಬೆಳೆದು ಹೋದವರೇ ಹೇಳಿದರು. ಆದರೆ ಇವತ್ತು ನೀವು ಜಲಧಾರೆ ಸಮಾವೇಶದ ಮೂಲಕ ತೋರಿಸಿದ್ದಿರಾ ಎಂದರು.

ನನ್ನ ಕೊನೆಯ ಉಸಿರು ಇರುವವರೆಗೂ ನಿಮಗಾಗಿ ಜೀವನ ಇಟ್ಟಿರುತ್ತೇನೆ. ನಾನು ಈ ಮಣ್ಣಿಗೆ ಹೋಗೋದ್ರೊಳಗೆ ನಿಮ್ಮ ಹೃದಯದಲ್ಲಿ ನನಗೆ ಕೊಡುವ ಸ್ಥಾನ ಒಂದೇ ಎಂದು ಹೇಳಿದರು.

ಕುಡಿಯುವ ನೀರಿನ ವಿಚಾರವಾಗಿ ದೇವೇಗೌಡರು ಸಂಸತ್ ನಲ್ಲಿ ಮಾತನಾಡಿದರೆ ಯಾರು ಬರೋದಿಲ್ಲ ಮಾತಾಡೋಕೆ ಎಂದ ಹೆಚ್ ಡಿಕೆ, ನಾನು ಎರಡು ಬಾರಿ ಸಿಎಂ ಆಗಿದ್ದೇನೆ.
ರಾಜಕೀಯದ ಬೆಳವಣಿಗೆಯಲ್ಲಿ ಸಿಎಂ ಆದೆ. ಅನೇಕ ಒತ್ತಡಗಳ ನಡುವೆ ಅಧಿಕಾರ ಮಾಡಿದೆ. ರೈತರ ಸಾಲ ಮನ್ನಾ ಮಾಡುವಾಗಲು ಎಷ್ಟು ಕಷ್ಟ ಪಟ್ಟಿದ್ದೇನೆ ನಮಗೆ ಗೊತ್ತು ಎಂದರು.

ಐದು ಲಕ್ಷ ಕೊರೊನಾದಿಂದ ಸಾವನ್ನಪ್ಪಿದ ಕುಟುಂಬಕ್ಕೆ ಐದು ಲಕ್ಷ ರೂ. ಕೊಡುತ್ತೇವೆ ಅಂದರು. ಆದರೆ, ಇನ್ನೂ ಈ ಸರ್ಕಾರ ಕೊಟ್ಟಿಲ್ಲ. ನಿತ್ಯ ಎಷ್ಟು ಕಷ್ಟ ಪಡ್ತಾ ಇದ್ದೀರಾ ಶಾಲೆ ಫೀಸ್ ಕಟ್ಟಲು, ಆಸ್ಪತ್ರೆಗಳಿಗೆ ಅಂತ ಗೊತ್ತಿದೆ. ನಿತ್ಯ ಸಾಕಷ್ಟು ಜನರನ್ನು ನೋಡ್ತಾ ಇದ್ದೀನಿ. ಪಂಚರತ್ನ ಯೋಜನೆ ಹುಡುಗಾಟಿಕೆಗೆ ಮಾಡಿದ್ದಲ್ಲ. ನಿಮ್ಮಗಳ ಕಷ್ಟಗಳನ್ನು ನೋಡಿಯೇ ಮಾಡಿರೋದು ಎಂದು ಹೇಳಿದರು.

ಆಗಲೇ ಅಧಿಕಾರ ಬಿಟ್ಟು ದೇವೇಗೌಡರು ಬಂದ್ರು. ಫಿನೀಕ್ಸ್ ನಂತೆ ಎದ್ದು ಬರ್ತೀನಿ ಅಂತ ದೇವೇಗೌಡರು ಹೇಳಿದ್ದರು ಅಂತ ಪೂಜ್ಯರು ಹೇಳಿದ್ರು. ಆ ಫಿನಿಕ್ಸ್ ಕುಮಾರಸ್ವಾಮಿ ಅಂದಿದ್ದರು. ಹೌದು ಧೂಳಿನ ಫಿನಿಕ್ಸ್ ನಂತೆ ಎದ್ದು ಬರ್ತೀವಿ. 2023 ಕ್ಕೆ ಜನರ ಸಂಕಷ್ಟಕ್ಕೆ ಪರಿಹಾರ ಜನತಾ ದಳ ಎಂದರು.

ಯಾರೂ ನಾಯಕರನ್ನು ಸೃಷ್ಟಿ ಮಾಡಲು ಸಾಧ್ಯವಿಲ್ಲ. ನಿಮ್ಮ‌ ದುಡಿಮೆಯೇ ನಾಯಕತ್ವ ರೂಪಿಸುತ್ತದೆ. ನಾನು ಈಗಾಗಲೇ ಎರಡು ಭಾರಿ ಸಿಎಂ ಆಗಿದ್ದೇನೆ. ರಾಜಕೀಯದ ಕೆಲ ಬೆಳವಣಿಗೆಯಿಂದ ಎರಡು ಭಾರಿ ಸಿಎಂ ಆದೆ. ಆದರೆ, ಸ್ವತಂತ್ರವಾದ‌ ಸರ್ಕಾರ ಇರಲಿಲ್ಲ. ಅನುಕಂಪ ಗಿಟ್ಟಿಸಿ ಅಧಿಕಾರ ಪಡೆಯಬೇಕೆಂಬ ಉದ್ದೇಶ ಇಲ್ಲ. ಪಂಚರತ್ನ ಕಾರ್ಯಕ್ರಮದ ಬಗ್ಗೆ ಹುಡುಗಾಟಿಕೆಯಿಂದ ಹೇಳುತ್ತಿಲ್ಲ. ನಾಡಿನ ಪರ ಹೋರಾಟ ಮಾಡುವ ಯಾರಾದರೂ ಇದ್ದರೆ ಅದು ದೇವೇಗೌಡರು ಮಾತ್ರ ಎಂದು ಹೇಳಿದರು.

2023 ಕ್ಕೆ ನಾಡಿನ ಜನತೆಗೆ ಜೆಡಿಎಸ್ ಪರಿಹಾರವಾಗಲಿದೆ. ನಮ್ಮ ಪಕ್ಷ ಅಧಿಕಾರಕ್ಕೆ ಬರಲಿದೆ. ಕುರುಬ ಸೇರಿದಂತೆ ಎಲ್ಲಾ ಹಿಂದುಳಿದ ವರ್ಗಗಳ ಬೆನ್ನಿಗೆ ನಿಲ್ಲುತ್ತೇನೆ. ಐದು ವರ್ಷಗಳಲ್ಲಿ ಕಾರ್ಯಕ್ರಮಗಳನ್ನ ಅನುಷ್ಠಾನಗೊಳಿಸದೆ ಇದ್ದರೆ ನಿಮ್ಮ ಮುಂದೆ ಬರುವುದಿಲ್ಲ ಎಂದು ನುಡಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಜೆಡಿಎಸ್ ಅಶ್ವಮೇಧ ಯಾಗ ಶುರುವಾಗಿದೆ ಎಂದ ಸಿ ಎಂ ಇಬ್ರಾಹಿಂ!

Sat May 14 , 2022
ಬೆಂಗಳೂರು: ಜನತಾ ಜಲಧಾರೆ ಸಮಾವೇಶದ ಮೂಲಕ ಅಶ್ವಮೇಧಯಾಗ ಶುರು ಮಾಡಿದ್ದೇವೆ. ಕುದುರೆ ಬಿಟ್ಟಿದ್ದೇವೆ. ಅರ್ಜುನನ ಹಾಗೆ ಕುಮಾರಸ್ವಾಮಿ, ಕೃಷ್ಣನಾಗೆ ದೇವೇಗೌಡರು ಇದ್ದಾರೆ. ರಥ ಓಡಿಸಲು ನಾನು ಇದ್ದೇನೆ ಎಂದು ಜೆಡಿಎಸ್‍ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ತಮ್ಮದೇ ಮಾತಿನ ಶೈಲಿಯಲ್ಲಿ ಹೇಳಿದ್ದಾರೆ. ನೆಲಮಂಗಲ ಸಮೀಪ ಇಂದು ಹಮ್ಮಿಕೊಂಡಿದ್ದ ಜನತಾ ಜಲಧಾರೆ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾವು ಮೇಕೆ ದಾಟಿಸೋದಿಲ್ಲ, ಸಿಂಹ ದಾಟಿಸುವವರು. ನಮ್ಮ ಹುಲಿ ಕುಮಾರಸ್ವಾಮಿ, ಹುಲಿಯನ್ನು ದಾಟಿಸುತ್ತೇವೆ […]

Advertisement

Wordpress Social Share Plugin powered by Ultimatelysocial