‘ನ್ಯಾನೋ ನಾರಾಯಣಪ್ಪ’ ಚಿತ್ರಕ್ಕೆ ಸೆನ್ಸಾರ್ ನಲ್ಲಿ ‘ಯು’ ಸರ್ಟಿಫಿಕೇಟ್ – ಫೆಬ್ರವರಿಯಲ್ಲಿ ತೆರೆಗೆ ಬರಲಿದೆ ಸಿನಿಮಾ.

‘ಕೆಮಿಸ್ಟ್ರಿ ಆಫ್ ಕರಿಯಪ್ಪ’, ‘ಕ್ರಿಟಿಕಲ್ ಕೀರ್ತನೆಗಳು’ ಸಿನಿಮಾ ಮೂಲಕ ಚಂದನವನದಲ್ಲಿ ಭರವಸೆ ಮೂಡಿಸಿರುವ ನಿರ್ದೇಶಕ ಕುಮಾರ್. ಇವರ ನಿರ್ದೇಶನದಲ್ಲಿ ಮೂಡಿ ಬಂದಿರುವ ಮತ್ತೊಂದು ಸಿನಿಮಾ ‘ನ್ಯಾನೋ ನಾರಾಯಣಪ್ಪ’. ಕೆಜಿಎಫ್ ತಾತಾ ಎಂದೇ ಖ್ಯಾತಿ ಗಳಿಸಿದ ಕೃಷ್ಣಾಜಿ ರಾವ್ ಲೀಡ್ ರೋಲ್ ನಲ್ಲಿ ನಟಿಸಿರುವ ಈ ಚಿತ್ರದ ಟ್ರೇಲರ್ ಉತ್ತಮ ರೆಸ್ಪಾನ್ಸ್ ಪಡೆದುಕೊಂಡಿದ್ದು, ಸಿನಿಮಾ ಪ್ರೇಕ್ಷಕರೆದುರು ಬರಲು ಸಜ್ಜಾಗಿದೆ.ಬಿಡುಗಡೆಗೆ ಸಕಲ ರೀತಿಯಲ್ಲೂ ಸಜ್ಜಾಗಿರುವ ‘ನ್ಯಾನೋ ನಾರಾಯಣಪ್ಪ’ ಚಿತ್ರಕ್ಕೆ ಬೇಸರದ ಸಂಗತಿಯೊಂದು ಕಾಡ್ತಿದೆ. ಸಂಪೂರ್ಣ ಚಿತ್ರದ ಜೀವಾಳವೇ ಆಗಿದ್ದ ಕೆಜಿಎಫ್ ತಾತಾ ಖ್ಯಾತಿಯ ಕೃಷ್ಣಾಜಿ ರಾವ್ ಇತ್ತೀಚೆಗೆ ವಯೋ ಸಹಜ ಕಾಯಿಲೆಯಿಂದ ಮರಣ ಹೊಂದಿದ್ರು. ಸಿನಿಮಾ ಬಿಡುಗಡೆ ಸಮಯದಲ್ಲಿ ಅವರಿಲ್ಲ ಎಂಬ ನೋವು ಇಡೀ ಚಿತ್ರತಂಡವನ್ನು ಕಾಡ್ತಿದೆ. ಕೆಜಿಎಫ್ ನಂತರ ಮುಖ್ಯ ಪಾತ್ರಧಾರಿಯಾಗಿ ನಟಿಸಿದ ಸಿನಿಮಾ ‘ನ್ಯಾನೋ ನಾರಾಯಣಪ್ಪ’. ತುಂಬಾ ಲವಲವಿಕೆಯಿಂದ ಈ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿದ್ರು. ಚಿತ್ರದಲ್ಲಿ ಅವರ ನಟನೆ ತುಂಬಾ ಅದ್ಭುತವಾಗಿ ಮೂಡಿ ಬಂದಿದೆ. ಪ್ರತಿಬಾರಿ ಕರೆ ಮಾಡಿದಾಗಲು ಸಿನಿಮಾ ಯಾವಾಗ ಬಿಡುಗಡೆಯಾಗುತ್ತೆ ಎಂದು ಕೇಳುತ್ತಿದ್ರು ಆದ್ರೆ ಇಂದು ಅವರು ನಮ್ಮೊಂದಿಗಿಲ್ಲ ಎಂದು ನಿರ್ದೇಶಕ ಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ.ಸೆನ್ಸಾರ್ ನಲ್ಲಿ ‘ಯು’ ಸರ್ಟಿಫಿಕೇಟ್ ಪಡೆದುಕೊಂಡಿರುವ ‘ನ್ಯಾನೋ ನಾರಾಯಣಪ್ಪ’ ಚಿತ್ರ ಫೆಬ್ರವರಿಯಲ್ಲಿ ಬಿಡುಗಡೆಯಾಗಲಿದೆ. ನಿರ್ದೇಶಕ ಕುಮಾರ್ ಸಿನಿಮಾ ಅಂದ್ರೆ ಅಲ್ಲಿ ಕಾಮಿಡಿಗೆ ಮೊದಲ ಆದ್ಯತೆ ಇರುತ್ತೆ ಇಲ್ಲೂ ಕೂಡ ಅದೇ ಸೂತ್ರವನ್ನು ಫಾಲೋ ಮಾಡಿದ್ದು ಅದರೊಂದಿಗೆ ಒಂದಿಷ್ಟು ಭಾವನಾತ್ಮಕ ಅಂಶಗಳು ಈ ಚಿತ್ರದಲ್ಲಿದೆ. ಕಾಕ್ರೋಚ್ ಸುಧಿ, ಗಿರೀಶ್ ಶಿವಣ್ಣ, ಪ್ರಶಾಂತ್ ಸಿದ್ದಿ, ಅಕ್ಷತ ಕುಕ್ಕಿ, ಅಪೂರ್ವ ಒಳಗೊಂಡ ತಾರಾಬಳಗ ಸಿನಿಮಾದಲ್ಲಿದೆ.ನಿರ್ದೇಶನದ ಜೊತೆಗೆ ನಿರ್ಮಾಣ ಜವಾಬ್ದಾರಿಯನ್ನು ನಿರ್ದೇಶಕ ಕುಮಾರ್ ನಿರ್ವಹಿಸಿದ್ದು, ಶಿವಶಂಕರ ಛಾಯಾಗ್ರಾಹಣ, ಆಕಾಶ್ ಪರ್ವ ಸಂಗೀತ, ದೀಪು ಮತ್ತು ಸಿದ್ದಾರ್ಥ್ ನಾಯಕ ಸಂಕಲನ ಚಿತ್ರಕ್ಕಿದೆ. ಫೆಬ್ರವರಿಯಲ್ಲಿ ಪ್ರೇಕ್ಷಕರನ್ನು ರಂಜಿಸಲು ಸಿನಿಮಾ ಚಿತ್ರಮಂದಿರದ ಅಂಗಳಕ್ಕೆ ಬರಲಿದ್ದು ಸದ್ಯದಲ್ಲೇ ರಿಲೀಸ್ ಡೇಟ್ ಅನೌನ್ಸ್ ಮಾಡಲಿದೆ ಚಿತ್ರತಂಡ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

 

 

Please follow and like us:

Leave a Reply

Your email address will not be published. Required fields are marked *

Next Post

"ಶ್ರೀ ಪ್ರಸನ್ನ ವೆಂಕಟ ದಾಸರು" ಚಿತ್ರದ ಟೀಸರ್ ಹಾಗೂ ಹಾಡುಗಳು.

Tue Dec 27 , 2022
ಶ್ರೀ ಜಗನ್ನಾಥ ದಾಸರು ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ್ದ ಚಿತ್ರತಂಡ ಈಗ “ಶ್ರೀ ಪ್ರಸನ್ನ ವೆಂಕಟ ದಾಸರು” ಎಂಬ ದಾಸಪರಂಪರೆ ಮತ್ತೊಬ್ಬ ದಾಸರ ಜೀವನ ಚರಿತ್ರೆ ಕುರಿತಾದ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಇತ್ತೀಚೆಗೆ ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮ ತೀರ್ಥರು “ಶ್ರೀ ಪ್ರಸನ್ನ ವೆಂಕಟ ದಾಸರು” ಚಿತ್ರದ ಟೀಸರ್ ಹಾಗೂ ಹಾಡುಗಳನ್ನು ಬಿಡುಗಡೆ ಮಾಡಿದರು. ಆನಂತರ ಚಿತ್ರತಂಡದ ಚಿತ್ರದ ಬಗ್ಗೆ ಮಾತನಾಡಿದರು.ಈ ಹಿಂದೆ ಶ್ರೀ ಜಗನ್ನಾಥ ದಾಸರು ಚಿತ್ರವನ್ನು ನಿರ್ಮಿಸಿದ್ದ […]

Advertisement

Wordpress Social Share Plugin powered by Ultimatelysocial