ನೆಹರು ಉಪನಾಮ ಬಳಕೆ ಹೇಳಿಕೆ ಪ್ರಧಾನಿ ವಿರುದ್ದ ಕೈ ತಿರುಗೇಟು.

ಮಾಜಿ ಪ್ರಧಾನಿ ಜಹಾವರ್ ಲಾಲ್ ನೆಹರು ಅವರ ಉಪನಾಮವನ್ನು ಗಾಂಧಿ ಕುಟುಂಬ ಯಾಕೆ ಬಳಸುತ್ತಿಲ್ಲ ಎನ್ನುವ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ ಕಾಂಗ್ರೆಸ್ ತಿರುಗೇಟು ನೀಡಿದೆ.ಪ್ರಧಾನಿ ಸೇರಿ ಬಿಜೆಪಿ ನಾಯಕರು ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಪುತ್ರ ರೆಹಾನ್ ಅವರ ಹೆಸರನ್ನು ರೆಹಾನ್ ರಾಜೀವ್ ಗಾಂಧಿ ಎಂದು ಏಕೆ ಕರೆಯುತ್ತಾರೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲ ತೀಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.ಭಾರತದಲ್ಲಿ ಯಾರು ತಮ್ಮ ತಾಯಿಯ ಅಜ್ಜನ ಉಪನಾಮವನ್ನು ಬಳಸುತ್ತಾರೆ ಎಂದು ಪ್ರಶ್ನಿಸಿರುವ ಅವರು “ಇಂತಹ ಜವಾಬ್ದಾರಿಯುತ ಸ್ಥಾನದಲ್ಲಿ ಕುಳಿತವರಿಗೆ ಭಾರತದ ಸಂಸ್ಕೃತಿ ಗೊತ್ತಿಲ್ಲ ಅಥವಾ ಅರ್ಥವಾಗುವುದಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.ದೇಶದ ಯಾವುದೇ ವ್ಯಕ್ತಿಯನ್ನು ಕೇಳಿ ತಾಯಿಯ ಅಜ್ಜನ ಉಪನಾಮವನ್ನು ಬಳಸುತ್ತಾರೆ” ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಹೇಳಿದ್ದಾರೆ.ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಮಗನನ್ನು ಉಲ್ಲೇಖಿಸಿ ಬಿಜೆಪಿಯ ಅಮಿತ್ ಮಾಳವಿಯಾ ಅವರು (ರೆಹಾನ್) ತಮ್ಮ ಹೆಸರನ್ನು ರೆಹಾನ್ ರಾಜೀವ್ ಗಾಂಧಿ ಎನ್ನುವ ಹೇಳಿಕೆ ಪ್ರತಿಕ್ರಿಯಿಸಿದ ಅವರು “ಪ್ರಿಯಾಂಕಾ ವಾದ್ರಾ ಅವರ ಮಗ ರೆಹಾನ್ ತನ್ನ ಹೆಸರನ್ನು ರೆಹಾನ್ ರಾಜೀವ್ ಗಾಂಧಿ ಎಂದು ಬರೆಯಬಹುದಾದರೆ ಅವರ ತಾಯಿಯ ಅಜ್ಜನ ಪರಂಪರೆಯನ್ನು ಕಸಿದುಕೊಳ್ಳುವ ಪ್ರಯತ್ನದಲ್ಲಿ ಕುಟುಂಬದ ಯಾರೂ ನೆಹರೂ ಉಪನಾಮವನ್ನು ಏಕೆ ಬಳಸುವುದಿಲ್ಲ ಎಂದು ಪ್ರಶ್ನಿಸಿದ್ದಾರೆ.ಆಂಧ್ರಪ್ರದೇಶದ ಬಿಜೆಪಿ ನಾಯಕ ವಿಷ್ಣಿ ವರ್ಧನ್ ರೆಡ್ಡಿ ಕಾಂಗ್ರೆಸ್ಸಿಗರು ಗಾಂಧಿ ಕುಟುಂಬ ತಮ್ಮ ತಂದೆಯ ಉಪನಾಮವನ್ನು ಬಳಸುತ್ತಿದ್ದಾರೆ ಎಂದು ಕೂಗುತ್ತಿದ್ದಾರೆ ಆದರೆ ಇತಿಹಾಸವನ್ನು ಪರಿಶೀಲಿಸಿದರೆ ಅದು ಗಾಂಧಿಯೇ ಹೊರತು ಗಾಂಧಿಯಲ್ಲ. ಹಾಗೆಯೇ ಪ್ರಿಯಾಂಕಾಗಂಧಿ ಅವರ ಮಗ ತನ್ನ ತಾಯಿಯ ಅಜ್ಜನ ಹೆಸರನ್ನು ಏಕೆ ಬಳಸುತ್ತಿದ್ದಾನೆ ರೆಹಾನ್ ರಾಜೀವ್ ಗಾಂಧಿಯಾದರು ಎಂದು ಪ್ರಶ್ನಿಸಿದ್ದಾರೆ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರವೀಂದ್ರನ್ ಮತ್ತು ಮಹಾಲಕ್ಷ್ಮಿ ಕಳೆದ ವರ್ಷ ಸೆಪ್ಟೆಂಬರ್​ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

Sun Feb 12 , 2023
ರವೀಂದರ ತಮಿಳು ಚಿತ್ರರಂಗದ ಪ್ರಸಿದ್ಧ ನಿರ್ಮಾಪಕರಾಗಿದ್ದಾರೆ. ಶಂತನು ಅಭಿನಯದ ಡ್ರಮ್ ಸ್ಟಿಕ್ ಚಿಪ್ಸ್ ಸೇರಿದಂತೆ ಅನೇಕ ಚಿತ್ರಗಳನ್ನು ನಿರ್ಮಿಸಿದ್ದಾರೆ. ಜೊತೆಗೆ ಕೆಲವು ಸಿನಿಮಾಗಳ ಡಿಸ್ಟ್ರಿಬ್ಯೂಟರ್ ಆಗಿಯೂ ಕೆಲಸ ಮಾಡಿದ್ದಾರೆ. ಮಹಾಲಕ್ಷ್ಮಿ ಕೂಡ ಕಿರುತೆರೆಯಲ್ಲಿ ನಿರೂಪಕಿಯಾಗಿ ಕೆಲಸ ಮಾಡಿದ್ದಾರೆ. ಜೊತೆ ಕೆಲ ಸೀರಿಯಲ್​ಗಳಲ್ಲಿ ನಟಿಸಿ ಜನಪ್ರಿಯತೆ ಪಡೆದಿದ್ದು, ಇಬ್ಬರು ಮದುವೆ ಆದಾಗಿನಿಂದಲೂ ಸಖತ್ ಸುದ್ದಿಯಲ್ಲಿ ಇದ್ದಾರೆ. ಇದೀಗ ನಿರ್ಮಾಪಕ ರವೀಂದರ ಚಂದ್ರಶೇಖರ್ ಪತಿ ಜೊತೆಗಿನ ಫೋಟೋವನ್ನು ಶೇರ್ ಮಾಡಿದ್ದು, ನೀವೂ ಮೋಡ […]

Advertisement

Wordpress Social Share Plugin powered by Ultimatelysocial