ಯೂಕ್ರೇನ್​ನಲ್ಲಿರುವ ಎಲ್ಲ ಭಾರತೀಯರನ್ನೂ ಸುರಕ್ಷಿತವಾಗಿ ದೇಶಕ್ಕೆ ವಾಪಸ್​ ಕರೆತರುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ!

ನವದೆಹಲಿ: ಯೂಕ್ರೇನ್​ನಲ್ಲಿರುವ ಎಲ್ಲ ಭಾರತೀಯರನ್ನೂ ಸುರಕ್ಷಿತವಾಗಿ ದೇಶಕ್ಕೆ ವಾಪಸ್​ ಕರೆತರುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸಚಿವರು ಮತ್ತು ಅಧಿಕಾರಿಗಳ ಉನ್ನತ ಮಟ್ಟದ ಸಭೆ ನಡೆದಿದ್ದು, ಕೇಂದ್ರದ ಕೆಲ ಸಚಿವರು ಯೂಕ್ರೇನ್​ನ ನೆರೆ ರಾಷ್ಟ್ರಗಳಿಗೆ ಕಳುಹಿಸಿ ಅಲ್ಲಿನ ಸರ್ಕಾರಗಳ ಸಹಕಾರದೊಂದಿಗೆ ಯುದ್ಧಪೀಡಿತ ಯೂಕ್ರೇನ್​ನಿಂದ ಭಾರತೀಯರನ್ನು ಸುರಕ್ಷಿತವಾಗಿ ಸ್ಥಳಾಂತರಿಸುವ ಕುರಿತು ನಿರ್ಧರಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.ಯೂಕ್ರೇನ್​ನಲ್ಲಿರುವ ಭಾರತೀಯರನ್ನು ಪೋಲೆಂಡ್​, ರೊಮೇನಿಯಾ, ಹಂಗೇರಿ, ಸ್ಲೋವಾಕಿಯಾ ಮೂಲಕ ಭಾರತಕ್ಕೆ ಕರೆಸಿಕೊಳ್ಳಲಾಗುತ್ತಿದೆ. ಆಪರೇಷನ್​ ಗಂಗಾ ಹೆಸರಿನ ಕಾರ್ಯಾಚರಣೆ ಮೂಲಕ ಯೂಕ್ರೇನ್​​ನಿಂದ ಭಾರತೀಯರನ್ನು ಸ್ಥಳಾಂತರಿಸುವ ಕೆಲಸ ನಡೆಯುತ್ತಿದೆ.ಇದೀಗ ಕೇಂದ್ರ ಸಚಿವರಾದ ಹರದೀಪ್​ ಸಿಂಗ್​ ಪುರಿ, ಜ್ಯೋತಿರಾದಿತ್ಯ ಸಿಂಧಿಯಾ, ಕಿರಣ್​ ರಿಜಿಜು, ವಿ.ಕೆ.ಸಿಂಗ್​ ತಂಡವನ್ನ ಯೂಕ್ರೇನ್​ನ ನೆರೆ ರಾಷ್ಟ್ರಗಳಿಗೆ ಕಳುಹಿಸಿ ಸಂಕಷ್ಟರಲ್ಲಿರುವ ಭಾರತೀಯರನ್ನ ಸುರಕ್ಷಿತವಾಗಿ ವಾಪಸ್​ ಕರೆತರುವ ಕೆಲಸಕ್ಕೆ ಭಾರತ ಯೋಚಿಸಿದೆ ಎಂದು ವರದಿಯಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಚೀನಾದ ಪಾತ್ರ ಬದಲಾಗುತ್ತಿದೆ!!

Mon Feb 28 , 2022
ಇತ್ತೀಚೆಗೆ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಕೊರಿಯನ್ ಯುದ್ಧದಲ್ಲಿ (1950-53) ಚೀನಾ ಯುಎಸ್ ಸಾಮ್ರಾಜ್ಯಶಾಹಿಯನ್ನು ಸೋಲಿಸಿತು, ಅವರು ಯುದ್ಧಕ್ಕೆ ಹೋದ ಏಕೈಕ ಸಂದರ್ಭವನ್ನು ಎತ್ತಿ ತೋರಿಸಿದರು. ವಾಸ್ತವವಾಗಿ, ಶೀತಲ ಸಮರದ ಸಮಯದಲ್ಲಿ, ಕೊರಿಯನ್ ಯುದ್ಧವು ಯುಎಸ್ ಮತ್ತು ಹಿಂದಿನ ಸೋವಿಯತ್ ಒಕ್ಕೂಟದ ನಡುವಿನ ಸಂಘರ್ಷದಲ್ಲಿ ನಿರ್ಣಾಯಕ ಕ್ಷಣವಾಗಿತ್ತು, ಆದರೂ ಮಾನವಶಕ್ತಿ ಮತ್ತು ತಂತ್ರವು ಅಗಾಧವಾಗಿ ಚೀನಿಯರದ್ದಾಗಿತ್ತು. ಮಿತ್ರರಾಷ್ಟ್ರಗಳು ಮತ್ತು ಹಿಂದಿನ ಸೋವಿಯತ್ ಒಕ್ಕೂಟದ ನಡುವಿನ ವಿಶ್ವ ಸಮರ II […]

Advertisement

Wordpress Social Share Plugin powered by Ultimatelysocial