ಕ್ರಿಕೆಟಿಗನಾಗಿ, ಹಾಸ್ಯಗಾರನಾಗಿ, ರಾಜಕಾರಣಿಯಾಗಿರೋ ಸಿಧುಗೆ ಜೈಲಿನಲ್ಲೀಗ ಹೊಸ ಹುದ್ದೆ!

ಲುಧಿಯಾನಾ ​(ಪಂಜಾಬ್​): ಖ್ಯಾತ ಕ್ರಿಕೆಟಿಗನಾಗಿ, ಹಾಸ್ಯಗಾರನಾಗಿ ಹಾಗೂ ರಾಜಕಾರಣಿಯಾಗಿ ಗುರುತಿಸಿಕೊಂಡಿರುವ ಪಂಜಾಬ್ ಪ್ರದೇಶ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಈಗ ಜೈಲುಪಾಲಾಗಿದ್ದು, ಇಲ್ಲಿ ಹೊಸ ಹುದ್ದೆ ಸಿಕ್ಕಿದೆ.

34 ವರ್ಷದ ಹಿಂದಿನ ರಸ್ತೆ ಅಪಘಾತ ಪ್ರಕರಣದಲ್ಲಿ ಸಿಧುಗೆ ಸುಪ್ರೀಂಕೋರ್ಟ್ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದೆ. 1988ರಲ್ಲಿ ನಡೆದ ರಸ್ತೆ ಗಲಾಟೆ ಪ್ರಕರಣದಲ್ಲಿ ನವಜೋತ್​ ಸಿಂಗ್​ ಸಿಧು ಅಪರಾಧಿ ಎಂದು ಪರಿಗಣಿಸಿ ಜೈಲು ಶಿಕ್ಷೆ ವಿಧಿಸಿದೆ. ರಸ್ತೆ ಬದಿ ಪಾರ್ಕಿಂಗ್​ ವಿಚಾರದಲ್ಲಿ ಗುರ್ನಾಮ್​ ಸಿಂಗ್​ ಎಂಬುವವನಿಗೆ ಸಿಧು ಥಳಿಸಿದ್ದರು. ತೀವ್ರ ಹಲ್ಲೆಗೊಳಗಾದ ಈತ ಮೃತಪಟ್ಟಿದ್ದ. ಈ ಘಟನೆಯಲ್ಲೀಗ ಒಂದು ವರ್ಷ ಜೈಲುಶಿಕ್ಷೆಯಾಗಿದೆ.

ಅಪರಾಧಿಗಳಿಗೆ ಜೈಲಿನಲ್ಲಿ ಅವರ ಶಿಕ್ಷೆಯ ಪ್ರಮಾಣ ಹಾಗೂ ಅರ್ಹತೆ ಆಧಾರದ ಮೇಲೆ ಕೆಲಸ ನೀಡಲಾಗುತ್ತದೆ. ಇದೀಗ ಸಿಧುಗೆ ಜೈಲಿನ ಕಡತಗಳ ಖಾತೆಯನ್ನು ನೋಡಿಕೊಳ್ಳುವ ಗುಮಾಸ್ತನ ಕಾರ್ಯ ನೀಡಲಾಗಿದೆ. ಅವರ ಕೆಲಸಕ್ಕೆ ಸಂಬಂಧಿಸಿದ ಎಲ್ಲ ಫೈಲ್‌ಗಳನ್ನು ಅವರ ಬ್ಯಾರಕ್‌ಗೆ ಕಳುಹಿಸಲಾಗುತ್ತದೆ. ಒಂದು ದಿನದಲ್ಲಿ ಎಷ್ಟು ಕೆಲಸ ಮಾಡಬಲ್ಲರು ಎಂಬುದರ ಮೇಲೆ ಕಡತಗಳ ರವಾನೆ ಅವಲಂಬಿತವಾಗಿರುತ್ತದೆ.

ಮೊದಲ ಮೂರು ತಿಂಗಳವರೆಗೆ ಅವರನ್ನು ಟ್ರೈನಿಯಾಗಿ ಉಳಿಸಿಕೊಳ್ಳಲಾಗುತ್ತದೆ. ಅದರಲ್ಲಿ ಅವರಿಗೆ ವೇತನ ಸಿಗುವುದಿಲ್ಲ. ಈ ಮೊದಲು ಅವರಿಗೆ ಜೈಲಿನೊಳಗೆ ಕಾರ್ಖಾನೆ ಅಥವಾ ಪೀಠೋಪಕರಣಗಳ ಕೆಲಸವನ್ನು ನೀಡುವ ನಿರೀಕ್ಷೆ ಇದೆ. ಆದರೆ, ಅರ್ಹತೆ ಮತ್ತು ಶಿಕ್ಷಣದ ಜೊತೆಗೆ ಅವರ ಸುರಕ್ಷತೆಯ ಕಾರಣ ಈ ಕೆಲಸದಿಂದ ದೂರ ಇಡಲಾಗಿದೆ ಎಂದು ಮೂಲಗಳು ಹೇಳಿವೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಂಧಿಸಲು ಪಾಕಿಸ್ತಾನ ಸರಕಾರ ನಿರ್ಧಾರ

Wed May 25 , 2022
ಇಸ್ಲಾಮಾಬಾದ್: ಪಾಕಿಸ್ತಾನದ ಸಂಸತ್ತಿನಲ್ಲಿ ಅವಿಶ್ವಾಸ ಗೊತ್ತುವಳಿಯಲ್ಲಿ ಸೋಲುಂಡ ಬಳಿಕ ಮಾಜಿ ಪ್ರಧಾನಿ ಇಮ್ರಾನ್ ಖಾನ್, ನೂತನ ಸರಕಾರದ ವಿರುದ್ಧ ಸಿಡಿದೆದ್ದಿದ್ದಾರೆ. ನೂತನ ಪ್ರಧಾನಿ ಶಹಬಾಜ್ ಷರೀಫ್ ನೇತೃತ್ವದ ಸರಕಾರವನ್ನು ಇಂಪೋರ್ಟೆಡ್ ಸರಕಾರ ಎಂದು ಜರಿಯುತ್ತಿರುವ ಇಮ್ರಾನ್ ಖಾನ್, ತನ್ನ ಸೋಲಿಗೆ ಅಮೆರಿಕದ ಕೈವಾಡವೇ ಕಾರಣ ಎಂದು ಆರೋಪಿಸಿದ್ದಾರೆ. ಈ ಮಧ್ಯೆ ಸರಕಾರದ ವಿರುದ್ಧ ಪ್ರತಿಭಟನೆ ಆರಂಭಿಸಿರುವ ಇಮ್ರಾನ್ ಖಾನ್, ಲಾಂಗ್ ಮಾರ್ಚ್ ಪ್ರಾರಂಭ ಮಾಡಿದ್ದಾರೆ. ಈ ರಾಲಿಯಲ್ಲಿ ಭಾಗವಹಿಸಲು ಪೇಶಾವರದಿಂದ […]

Advertisement

Wordpress Social Share Plugin powered by Ultimatelysocial