ನೀರ್ನಳ್ಳಿ ರಾಮಕೃಷ್ಣ ಕನ್ನಡ ಚಿತ್ರರಂಗದ ಸುಂದರ ಪ್ರತಿಭಾವಂತ ನಟ.

 

 

ನೀರ್ನಳ್ಳಿ ರಾಮಕೃಷ್ಣ ಕನ್ನಡ ಚಿತ್ರರಂಗದ ಸುಂದರ ಪ್ರತಿಭಾವಂತ ನಟ. ಸೌಂದರ್ಯ, ಪ್ರತಿಭೆ ಎರಡೂ ಇದ್ದು ಮೇರುನಟರಾಗಬಹುದಾದ ಅದೃಷ್ಟ ಅವರಿಗೆ ಯಾಕೋ ಒಲಿಯಲಿಲ್ಲ. ಇಂದು ರಾಮಕೃಷ್ಣ ಹುಟ್ಟಿದ ದಿನ.
ರಾಮಕೃಷ್ಣ ಅವರು 1954ರ ವರ್ಷದಲ್ಲಿ ಜನಿಸಿದರು. ಅವರದ್ದು ಮಲೆನಾಡಿನ ಸಿರಸಿ ಸಮೀಪದ ಪುಟ್ಟ ಊರು. ಕೃಷಿಕರ ಹಾಗೂ ಕಲಾವಿದರ ನೆಲೆವೀಡು. ಈ ಊರಿನ ರಾಮಕೃಷ್ಣ, ಇಡೀ ರಾಜ್ಯಕ್ಕೆ ನೀರ್ನಳ್ಳಿ ರಾಮಕೃಷ್ಣ ಎಂದೇ ಪರಿಚಿತರು.
ರಾಮಕೃಷ್ಣರು ಪ್ರಾಥಮಿಕ ಶಾಲೆಗೆ ಹೋಗುವಾಗಲೇ ಹೊಸ್ತೋಟ ಮಂಜುನಾಥ ಭಾಗವತರಲ್ಲಿ ಯಕ್ಷಗಾನ ಕಲಿತರು. ಗದಾಯುದ್ಧದ ಭೀಮನಾಗಿ, ದುರ್ಯೋದನನ ತೊಡೆ ಮುರಿದಿದ್ದರು. ಮೀಸೆ ಮೂಡುವ ಮುನ್ನವೇ ನಾಟಕ ಆಡುವ ಖಯಾಲಿ ಅವರಲ್ಲಿ ಬೆಳೆದಿತ್ತು. ಇವರಿಗೆ ಮಾಪಾರಿ, ಎಸ್‌.ಜಿ. ಪ್ರಾಥಃಕಾಲರು ಬಣ್ಣ ಹಚ್ಚಿಸಿದರು. ಗುಬ್ಬಿ ವೀರಣ್ಣ ಕಂಪನಿಯ ನಾಟಕ ಬಂದಾಗ ಅದರಲ್ಲಿದ್ದ ಕಲಾವಿದರನ್ನು ಪರಿಚಯ ಮಾಡಿಕೊಂಡರು. ಎಸ್ಸೆಸ್ಸೆಲ್ಸಿ ಮುಗಿಸು, ಪಿಯುಸಿ ಮುಗಿಸು, ಬಿಎ ಮುಗಿಸಿ ಬಾ ಎಂದು ವೀರಣ್ಣನವರ ಹಿರೇ ಮಗಳು ಸುವರ್ಣಮ್ಮ ಹೇಳುತ್ತಿದ್ದರು. ಅವರಿಗೆ ರಾಮಕೃಷ್ಣ ಅವರನ್ನು ಕಂಡರೆ ಅಕ್ಕರೆ, “ಇವನು ನನ್ನ ಸಾಕು ಮಗ” ಎಂದು ಆಗಾಗ ಹೇಳುತ್ತಿದ್ದರಂತೆ. ರಾಮಕೃಷ್ಣ ಅವರು ತಮ್ಮ ಊರಿನ ಮೊದಲ ಬಿ.ಎ. ಪದವೀಧರ ಎನಿಸಿದರು.
ಮುಂದೆ ಸುವರ್ಣಮ್ಮನವರೇ ರಾಮಕೃಷ್ಣರನ್ನು ಡಾ. ರಾಜಕುಮಾರ್‌ ಅವರಿಗೂ ಪರಿಚಯ ಮಾಡಿಕೊಟ್ಟರು. ಅಣ್ಣಾವ್ರು ರಾಮಕೃಷ್ಣರಿಂದ ಬಬ್ರುವಾಹನ ಚಿತ್ರದಲ್ಲಿ ಕೃಷ್ಣನ ಪಾತ್ರ ಮಾಡಿಸಿದರು. ಬಬ್ರುವಾಹನ ಚಿತ್ರದಲ್ಲಿ ಇವರಿಗೆ ಸಿಕ್ಕಿದ್ದು 5 ಸಾವಿರ ರೂಪಾಯಿ. ನಂತರ ಅವರು ಮಾಡಿದ್ದು ಸುಮಾರು 200 ಚಿತ್ರ. ಪುಟ್ಟಣ್ಣ ಕಣಗಾಲರ ನಿರ್ದೇಶನದ ಪಡುವಾರಳ್ಳಿ ಪಾಂಡವರು, ಅಮೃತ ಘಳಿಗೆ, ರಂಗನಾಯಕಿ, ಮಾನಸ ಸರೋವರ ಅಂತಹ ಚಿತ್ರಗಳಲ್ಲಿ ಅಭಿನಯಿಸಿದರು. ಕೆ. ಬಾಲಚಂದರ್ ನಿರ್ದೇಶನದಲ್ಲಿ ತಮಿಳು ಚಿತ್ರದ ನಾಯಕನಾಗಿದ್ದರು. ಅವರದೇ ನಿರ್ದೇಶನದ ‘ಬೆಂಕಿಯಲ್ಲಿ ಅರಳಿದ ಹೂ’ ಚಿತ್ರದಲ್ಲೂ ಮನಸೆಳೆಯುವ ಅಭಿನಯ ನೀಡಿದ್ದರು. ನಾಗಾಭರಣರ ಪ್ರಾಯ ಪ್ರಾಯ ಪ್ರಾಯ ಅವರ ಮತ್ತೊಂದು ಚಿತ್ರ. ಅಂದಿನ ಯುಗದ ‘ಒಂದೇಗುರಿ’ ಅಂತಹ ಚಿತ್ರಗಳಿಂದ ಇತ್ತೀಚಿನ ಯುಗದ ಸುದೀಪ್ ಅವರ ‘ಬಚ್ಚನ್’ ಅಂತಹ ಅನೇಕ ಚಿತ್ರಗಳಲ್ಲಿ ಇಂದೂ ಅವರು ಆಗಾಗ ಪಾತ್ರ ಮಾಡುತ್ತಾ ಬಂದಿದ್ದಾರೆ.
ರಾಮಕೃಷ್ಣ ಇತ್ತೀಚಿನ ವರ್ಷಗಳಲ್ಲಿ ಸಿರಸಿಯ ನೀರ್ನಳ್ಳಿಯಲ್ಲಿ ಕೃಷಿಕರಾಗಿದ್ದಾರೆ. ತಮ್ಮ ಊರಿನ ಮೂಲ ಕೃಷಿಯಾದ ಅಡಿಕೆ ಬೆಳೆ ಬೆಳೆಯುವಲ್ಲಿ ತೊಡಗಿಕೊಂಡಿರುವ ರಾಮಕೃಷ್ಣ, ಶೂಟಿಂಗ್ ಇದ್ದಾಗ ಮಾತ್ರ ಬೆಂಗಳೂರಿನ ಕಡೆ ಬರುತ್ತಾರೆ. ನಾಲ್ಕೈದು ದಿನ ನಿಯತ್ತಾಗಿ ನಟಿಸಿ, ತಮ್ಮ ಸಂಭಾವನೆ ಪಡೆದು ಮತ್ತೆ ಸಿರಸಿ ಕಡೆ ಹೊರಡುತ್ತಾರೆ. ಹಳ್ಳಿಯಲ್ಲಿ ಕೃಷಿ ಮಾಡಿಕೊಂಡು ಆರಾಮದಿಂದ ಶುಭ್ರ ವಾತಾವರಣದಲ್ಲಿದ್ದಾರೆ. ಜೊತೆಗೆ ತಮ್ಮೂರಿನ ಕಡೆಯ ಹುಡುಗರಿಗಾಗಿ ಬೆಂಗಳೂರಿನ ಗಂಗೇನಹಳ್ಳಿಯಲ್ಲಿ ಹಾಸ್ಟೆಲ್ ಒಂದನ್ನು ಕಟ್ಟಿದ್ದಾರೆ. ಬಡ ಹುಡುಗರು ಅಲ್ಲಿ ಇದ್ದು ವಿದ್ಯಾಭ್ಯಾಸ ಮಾಡಲಿ ಎನ್ನುವ ವಿಶಾಲ ಹೃದಯಿ ಅವರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ವೆಂಕಟೇಶ್ವರನ್ ದಕ್ಷಿಣಾಮೂರ್ತಿ ಮಹಾನ್ ಸಂಗೀತ ವಿದ್ವಾಂಸರು.

Sat Dec 24 , 2022
  ವೆಂಕಟೇಶ್ವರನ್ ದಕ್ಷಿಣಾಮೂರ್ತಿ ಮಹಾನ್ ಸಂಗೀತ ವಿದ್ವಾಂಸರು ಮತ್ತು ಚಲನಚಿತ್ರಗಳ ಸಂಗೀತ ಸಂಯೋಜಕರಾಗಿದ್ದರು. ಸ್ವಾಮಿ ಎಂದು ಪ್ರೀತಿಯಿಂದ ಕರೆಯಲ್ಪಡುತ್ತಿದ್ದ ಅವರು ಚಲನಚಿತ್ರಗಳಲ್ಲಿ ಅನೇಕ ಶಾಸ್ತ್ರೀಯ ಸಂಗೀತ ಹಿನ್ನೆಲೆಯ ಸುಶ್ರಾವ್ಯ ಗೀತೆಗಳನ್ನು ಮೂಡಿಸಿದರು. ವೆಂಕಟೇಶ್ವರನ್ ದಕ್ಷಿಣಾಮೂರ್ತಿ ಅಯ್ಯರ್ 1919ರ ಡಿಸೆಂಬರ್ 9ರಂದು ಕೇರಳದ ಅಲಪ್ಪುಳದ ಮುಲ್ಲಕ್ಕಲ್‌ ಎಂಬಲ್ಲಿ ಜನಿಸಿದರು. ತಾಯಿ ಪಾರ್ವತಿ ಅಮ್ಮಾಳ್. ತಂದೆ ಡಿ. ವೆಂಕಟೇಶ್ವರ ಅಯ್ಯರ್. ತಂದೆ ಬ್ಯಾಂಕ್ ಅಧಿಕಾರಿಯಾಗಿದ್ದರು. ದಕ್ಷಿಣಾಮೂರ್ತಿ ಅವರಲ್ಲಿ ಅವರ ತಾಯಿ ಸಂಗೀತ ಆಸಕ್ತಿಯನ್ನು […]

Advertisement

Wordpress Social Share Plugin powered by Ultimatelysocial