ಬಚ್ಚಲಿನಲ್ಲಿ ಹಾವು..ಅಡುಗೆ ಕೋಣೆಯಲ್ಲೂ ಹಾವು..,!

ಬಿರುಬೇಸಿಗೆಯಲ್ಲಿ ಮನೆಯಲ್ಲಿ ಎಲ್ಲಂದರಲ್ಲಿ ಹಾವುಗಳು ಅಡಗಿ ಹೆಡಿಬಿಚ್ಚಿ ಬುಸುಗುಡುವ ದೃಷ್ಯ ಶಿವಮೊಗ್ಗ ನಗರದಲ್ಲಿ ಸಾಮಾನ್ಯವಾಗಿದೆ. ಬಾತ್ ರೂಂ ನಲ್ಲಿ ಟಾಯ್ಲೆಟ್ ರೂಂ ನಲ್ಲಿ ಕಾಣಿಸಿಕೊಂಡಿದ್ದ ನಾಗರಹಾವುಗಳು..ಈಗ ಅಡುಗೆ ಕೋಣೆ ಬಚ್ಚಲಿನಲ್ಲೂ ದರ್ಶನ ನೀಡುತ್ತಿವೆ. ಶಿವಮೊಗ್ಗ ಹೊರಹೊಲಯದ ದೇವಕಾತಿಕೊಪ್ಪದ ಲೋಕೇಶ್ ಎಂಬುವರ ಮನೆಯಲ್ಲಿ ನಾಲ್ಕುವರೆ ಅಡಿ ಉದ್ದದ ನಾಗರ ಹಾವು ಬಚ್ಚಲ ಕೋಣೆಯಲ್ಲಿ ಕಾಣಿಸಿಕೊಂಡಿದೆ. ಮನೆಯಲ್ಲಿದ್ದವರು ಮುಖ ತೊಳಯಲು ಹೋದಾಗ ನಾಗರಹಾವು ಬುಸುಗುಟ್ಟಿದೆ. ತಕ್ಷಣ ಲೋಕೇಶ್ ಸ್ನೇಕ್ ಕಿರಣ್ ಬಂದು ಹಾವನ್ನು ಸುರಕ್ಷಿತವಾಗಿ ಹಿಡಿದಿದ್ದಾರೆ.
ನಗರದ ಗೋಪಾಳಗೌಡ ಬಡಾವಣೆಯ ಚಾಲುಕ್ಯ ನಗರದಲ್ಲಿ ಮನೆಯ ಅಡುಗೆ ಕೋಣೆಯಲ್ಲಿ ಮೂುರವರೆ ಅಡಿ ಉದ್ದದ ನಾಗರಹಾವು ಕಾಣಿಸಿಕೊಂಡಿದೆ.ಮಂಜುನಾಥ್ ಎಂಬುವರು ಬೆಳಗಿನ ಜಾವ ನೀರು ಕುಡಿಯಲು ಅಡುಗೆ ಮನೆಗೆ ಹೋದಾಗ ಪಾತ್ರೆ ಇಡುವ ಟ್ರೇ ನಲ್ಲಿ ನಾಗರಹಾವು ಎಡೆ ಎತ್ತಿ ಬುಸುಗುಟ್ಟಿದೆ. ಕಳೆದ ಎರಡು ದಿನಗಳಿಂದ ಮನೆ ಸುತ್ತಮುತ್ತ ಓಡಾಡಿಕೊಂಡಿದ್ದ ನಾಗರಹಾವನ್ನು ಮನೆಯವರು ಹಾಗೆಯೇ ಓಡಿಸಿದ್ದರು. ಆದರೆ ಇಂದು ಮುಂಜಾನೆ ಮರದ ಕೊಂಬೆಯ ಮೂಲಕ ಅಡುಗೆ ಕೋಣೆಯನ್ನು ನಾಗರ ಹಾವು ಪ್ರವೇಶಿಸಿದೆ. ಸ್ನೇಕ್ ಕಿರಣ್ ಹಾವು ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಸಾರ್ವತ್ರಿಕ ಆರೋಗ್ಯ ರಕ್ಷಣೆಗೆ ಆಯುಷ್ಮಾನ್: ಆಯುಷ್ಮಾನ್ ಭಾರತ ದಿನ ಇಂದು

Sat Apr 30 , 2022
  ಬೆಂಗಳೂರು:ಎರಡು ವರ್ಷಗಳಿಂದ ಜನರನ್ನು ಕಾಡುತ್ತಿರುವ ಕೋವಿಡ್ ಸಾಂಕ್ರಾಮಿಕ ಸಂದರ್ಭದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಅತ್ಯಂತ ಮಹತ್ವದ್ದಾಗಿದೆ. ಸಾರ್ವತ್ರಿಕ ಆರೋಗ್ಯ ರಕ್ಷಣೆ ಗುರಿಯೊಂದಿಗೆ ದೇಶವು ಇಂದು (ಏ.30) ಆಯುಷ್ಮಾನ್ ಭಾರತ ದಿನವನ್ನು ಆಚರಿಸುತ್ತಿದೆ. ಪ್ರಮುಖವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಕಡಿಮೆ ವೆಚ್ಚದ ಆರೋಗ್ಯ ರಕ್ಷಣೆಯ ಅರಿವು ಮೂಡಿಸಲು ಈ ದಿನವನ್ನು ಗೊತ್ತುಪಡಿಸಲಾಗಿದೆ. ಆರೋಗ್ಯ ಮತ್ತು ಯೋಗಕ್ಷೇಮ ಉತ್ತೇಜಿಸಲು ಬಡವರು ಮತ್ತು ಸೌಲಭ್ಯವಂಚಿತರಿಗೆ ಆರೋಗ್ಯ ವಿಮಾ ರಕ್ಷಣೆ ಖಚಿತಪಡಿಸಿಕೊಳ್ಳಲು, ಆಯುಷ್ಮಾನ್ ಭಾರತ ಆರೋಗ್ಯ ಯೋಜನೆಯ […]

Advertisement

Wordpress Social Share Plugin powered by Ultimatelysocial