NGO ಮೂಲಕ ಸಹಾಯಕ್ಕೆ ಮುಂದಾದ ಶ್ವೇತಾ ಆರ್ ಪ್ರಸಾದ್.

ಶ್ರೀರಸ್ತು ಶುಭಮಸ್ತು’ ಧಾರಾವಾಹಿ ಮೂಲಕ ಕಿರುತೆರೆಗೆ ಕಾಲಿಟ್ಟ ಶ್ವೇತಾ ಆರ್ ಪ್ರಸಾದ್ ಅವರು ‘ರಾಧಾ ರಮಣ’ ಸೀರಿಯಲ್ ಮೂಲಕ ದೊಡ್ಡ ಅಭಿಮಾನಿ ಬಳಗವನ್ನು ಸಂಪಾದನೆ ಮಾಡಿಕೊಂಡಿದ್ದಾರೆ. ನಟನೆ, ಡ್ಯಾನ್ಸ್ ರಿಯಾಲಿಟಿ ಶೋದಲ್ಲಿ ಭಾಗಿಯಾಗಿದ್ದ ಶ್ವೇತಾ ಅವರು ಆಗಾಗ ಸಾಮಾಜಿಕ ಕೆಲಸ ಮಾಡಿಯೂ ಗುರುತಿಸಿಕೊಂಡಿದ್ದರು. ಟ್ರಾವೆಲ್ ಮಾಡುವ ಶ್ವೇತಾ ಅವರು ಈಗ ಎನ್‌ಜಿಒ ಮೂಲಕ ಸಾಮಾಜಿಕ ಕೆಲಸವನ್ನು ಮುಂದುವರೆಸುವ ಆಲೋಚನೆ ಹೊಂದಿದ್ದಾರೆ.”ಇದು ನನಗೆ ತುಂಬ ವಿಶೇಷ ದಿನ. ಎನ್‌ಜಿಒ ಮೂಲಕ ನಾನು ಎಲ್ಲ ಕೆಲಸಗಳನ್ನು ಮಾಡೋಣ ಅಂದುಕೊಂಡಿದ್ದೆ. ಅದರಂತೆಯೇ ನನ್ನ ತಂದೆಯ ಹೆಸರಿನಲ್ಲಿ ( ಪ್ರಸಾದ್ ಫೌಂಡೇಶನ್‌ ) ಡಾಕ್ಯುಮೆಂಟ್‌ ಕೆಲಸ ಮುಗಿದಿದೆ. ಅನ್ನದಾನ ಎಂದು ದೇವಸ್ಥಾನಕ್ಕೆ ದಾನ ನೀಡನು, ಹಸಿದವರಿಗೆ ಊಟ ನೀಡು, ಎಲ್ಲರನ್ನು ನಗಿಸುತ್ತಿರು ಎಂದು ನನ್ನ ಸುತ್ತ ಇರುವವರಿಗೆಲ್ಲ ಹೇಳುತ್ತಿದ್ದರು. ಅದೇ ನಿಜವಾದ ಖುಷಿ” ಎಂದು ಶ್ವೇತಾ ಆರ್ ಪ್ರಸಾದ್ ಅವರು ಸೋಶಿಯಲ್ ಮೀಡಿಯಾ ಪೋಸ್ಟ್ ಹಾಕಿದ್ದರು.ಅಂದಹಾಗೆ ಇತ್ತೀಚೆಗೆ ಸಂಕ್ರಾಂತಿ ಸಂಭ್ರಮದ ದಿನ ಮನೆಯಲ್ಲಿ ವಿಶೇಷ ಪೂಜೆ, ಹೋಮವನ್ನು ಮಾಡಿರುವ ಶ್ವೇತಾ ಆರ್ ಪ್ರಸಾದ್ ಅವರು ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋಗಳನ್ನು ಹಂಚಿಕೊಂಡಿದ್ದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ತತ್‌ಕ್ಷಣ ಚುನಾವಣೆ ನಡೆದರೆ ಮೋದಿಯೇ ಪಿಎಂ: "ಇಂಡಿಯಾ ಟುಡೇ' "ಸಿ-ವೋಟರ್‌' ಅಭಿಮತ.

Fri Jan 27 , 2023
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರ ತತ್‌ಕ್ಷಣ ಚುನಾವಣೆ ನಡೆದರೆ ಅಧಿಕಾರ ಉಳಿಸಿಕೊಳ್ಳಲಿದೆ. ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿ ಯಾಗಲಿದ್ದಾರೆ. “ಇಂಡಿಯಾ ಟುಡೇ’ ಮತ್ತು “ಸಿ-ವೋಟರ್‌’ ನಡೆಸಿದ ಸಮೀಕ್ಷೆಯಲ್ಲಿ ಈ ಅಂಶ ವ್ಯಕ್ತವಾಗಿದೆ. 543 ಕ್ಷೇತ್ರಗಳ ಪೈಕಿ ಎನ್‌ಡಿಎಗೆ 298, ಯುಪಿಎಗೆ 153, ಇತರರಿಗೆ 92 ಕ್ಷೇತ್ರಗಳಲ್ಲಿ ಜಯ ಸಿಗಲಿದೆ. ಉತ್ತಮ ಅಭಿಪ್ರಾಯ: ಮೋದಿ ನೇತೃತ್ವದ ಸರಕಾರದ ಬಗ್ಗೆ ಜನರು ಇನ್ನೂ ಉತ್ತಮ ಅಭಿಪ್ರಾಯ ಹೊಂದಿದ್ದಾರೆ. ಶೇ.67 ಮಂದಿ […]

Advertisement

Wordpress Social Share Plugin powered by Ultimatelysocial