ಪಂಚರತ್ನ ರಥಯಾತ್ರೆ ಯಶಸ್ಸು ಕಂಡು ಸಿ.ಪಿ.ವೈ ಹತಾಶರಾಗಿದ್ದಾರೆ.

 

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಯವರನ್ನು 50 ಸಾವಿರಕ್ಕೂ ಹೆಚ್ಚಿನ ಅಂತರದ ಮತಗಳನ್ನು ನೀಡಿ ಆಶೀರ್ವಾದ ಮಾಡುತ್ತಾರೆ. ಕಳೆದ ವಾರ ಕ್ಷೇತ್ರದಲ್ಲಿ ನಡೆದ ಪಂಚರತ್ನ ರಥಯಾತ್ರೆಗೆ ಸೇರಿದ್ದ ಜನಸ್ತೋಮವೇ ಇದಕ್ಕೆ ಸಾಕ್ಷಿಯಾಗಿದೆ.ಇದನ್ನು ಗಮನಿಸಿದ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಹತಾಶರಾಗಿದ್ದಾರೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ರಾಮನಗರದಲ್ಲಿ ವ್ಯಂಗ್ಯವಾಡಿದರು. ‌‌ರಾಮನಗರ ವಿಧಾನಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯಾಗಿ ಘೋಷಣೆಯದ ನಂತರದಲ್ಲಿ ಕ್ಷೇತ್ರದ ಪ್ರವಾಸ ಕೈಗೊಂಡಿರುವ ನಿಖಿಲ್ ಕುಮಾರಸ್ವಾಮಿ, ಜಿಲ್ಲಾ ಕ್ರೀಡಾಂಗಣದಲ್ಲಿ ಕರಾಟೆ ವಿದ್ಯಾರ್ಥಿಗಳಿಗೆ ಮ್ಯಾಟ್ ವಿತರಣೆ ಮಾಡಿದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಬೊಂಬೆನಗರಿ ಚನ್ನಪಟ್ಟಣದಲ್ಲಿ ಸಮಾವೇಶಕ್ಕಿಂತ ಹೆಚ್ಚಿನ ಸಂಖ್ಯೆ ಜನರು ಭಾಗವಹಿಸಿ ಪಂಚರತ್ನ ರಥಯಾತ್ರೆಗೆ ಬೆಂಬಲ ಸೂಚಿಸಿದ್ದನ್ನು ಗಮನಿಸಿರುವ ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್ ಹತಾಶತಾಗಿದ್ದಾರೆ. ಸಿ.ಪಿ. ಯೋಗೆಶ್ವರ್ ಅವರು ತುಂಬಾ ನೋವಿನಲ್ಲಿ ಇದ್ದಾರೆ. ಜೆಡಿಎಸ್ ಪಕ್ಷಕ್ಕೆ ಹಾಗೂ ಕುಮಾರಣ್ಣನವರಿಗೆ ಇರುವ ಜನ ಬೆಂಬಲ ನೋಡಿ ಅವರಿಗೆ ತಡೆದುಕೊಳ್ಳಲು ಅಗುತ್ತಿಲ್ಲ. ಅವರ ಮಾತುಗಳಲ್ಲಿ ಸ್ಪಷ್ಟವಾಗಿ ಅರ್ಥವಾಗುತ್ತಾ ಇದೆ. ಕುಮಾರಣ್ಣ ಕ್ಷೇತ್ರದ ಶಾಸಕರಾದ ನಂತರ ಸಾಕಷ್ಟು ಅಭಿವೃದ್ಧಿ ಕೆಲಸಗಳು ಆಗಿವೆ. ಸಿ.ಪಿ. ಯೋಗೇಶ್ವರ್‌18 ವರ್ಷ ಆಡಳಿತ ನಡೆಸಿದರೂ ಯಾವುದೇ ಅಭಿವೃದ್ಧಿಯಾಗಿಲ್ಲ. ಚನ್ನಪಟ್ಟಣದ 130ಕ್ಕೂ ಹೆಚ್ಚು ಕೆರೆಕಟ್ಟೆಗಳು ತುಂಬಿದ್ದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರ ಕಾಲದಲ್ಲಿ. ಹಾಗಾಗಿ ಚನ್ನಪಟ್ಟಣದ ಜನ ಮತ್ತೊಮ್ಮೆ ಕುಮಾರಣ್ಣರನ್ನು ಕೈ ಹಿಡಿಯುತ್ತಾರೆ ಎನ್ನುವ ನಂಬಿಕೆ ಇದೆ ಎಂದು ನಿಖಿಲ್ ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de….

Please follow and like us:

Leave a Reply

Your email address will not be published. Required fields are marked *

Next Post

ರಸ್ತೆ ಬದಿಯಲ್ಲಿ ಬೈಬಲ್ ಹಂಚುತ್ತಿದ್ದವರನ್ನ ತರಾಟೆಗೆ ತೆಗೆದುಕೊಂಡ ಸಾರ್ವಜನಿಕರು

Sun Dec 25 , 2022
      ಬೈಬಲ್ ಹಂಚುತ್ತಿದ್ದಾರೆಂದು ಜನರು ಆಕ್ರೋಶ ಹೊರಹಾಕಿದ್ದು, ರಸ್ತೆ ಬದಿಯಲ್ಲಿ ಬೈಬಲ್ ಹಂಚುತ್ತಿ ದ್ದವರನ್ನು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡಿದ್ದಾರೆ.ಈ ಬಗ್ಗೆ ಮಲ್ಲೇಶ್ವರಂ ಬಳಿ ರಸ್ತೆ ಬದಿ ನಿಂತು ಬೈಬಲ್ ಹಂಚುತ್ತಿದ್ದ ಇಬ್ಬರು ಮಹಿಳೆಯರು ಹಾಗೂ ಪುರುಷರು ಕಂಡು ಸ್ಥಳಕ್ಕೆ ಆಗಮಿಸಿದ ಸ್ಥಳೀಯರು ತರಾಟೆಗೆ ತೆಗೆದುಕೊಂಡಿದ್ದಾರೆ.ಮಕ್ಕಳಿಗೆ ಮಹಿಳೆಯರಿಗೆ ಬೈಬಲ್ ಹಂಚುತ್ತಿದ್ದಾರೆಂದು ಆರೋಪ ಮಾಡಲಾಗಿದ್ದು, ಸ್ಥಳೀಯರು ವಾಹನದಲ್ಲಿದ್ದ ನೂರಾರು ಬೈಬಲ್ ಪುಸ್ತಕಗಳನ್ನ ಹರಿದು ಹಾಕಿ‌ ನೆಲಕ್ಕೆಸೆದಿದ್ದಾರೆ. ಈ ಮೂಲಕ ಮತಾಂತರಕ್ಕಾಗಿ […]

Advertisement

Wordpress Social Share Plugin powered by Ultimatelysocial