‘ವಿಕ್ರಾಂತ್ ರೋಣ’ ಚಿತ್ರಮುಂದೂಡಿಕೆ;

ಕಿಚ್ಚ ಸುದೀಪ್ ನಟನೆಯ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ‘ವಿಕ್ರಾಂತ್ ರೋಣ’ ಬಿಡುಗಡೆಯನ್ನು ಮುಂದೂಡಲಾಗಿದೆ. ಈ ಬಗ್ಗೆ ಅಧಿಕೃತ ಮಾಹಿತಿಯನ್ನು ಚಿತ್ರತಂಡ ಸಾಮಾಜಿಕ ಜಾಲತಾಣದ ಮೂಲಕ ಪ್ರಕಟಿಸಿದೆ.

‘ವಿಕ್ರಾಂತ್ ರೋಣ’ ಸಿನಿಮಾವು ಕನ್ನಡ ಸೇರಿ ಐದು ಭಾಷೆಗಳಲ್ಲಿ ಫೆಬ್ರವರಿ ತಿಂಗಳ 24 ನೇ ತಾರೀಖಿನಂದು ಬಿಡುಗಡೆ ಆಗುವುದಕ್ಕಿತ್ತು.

ಬಿಡುಗಡೆ ದಿನಾಂಕವನ್ನು ಕೆಲ ತಿಂಗಳ ಮುಂಚೆಯೇ ಚಿತ್ರತಂಡ ಪ್ರಕಟಿಸಿತ್ತು. ಆದರೆ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣದಿಂದ ಸಿನಿಮಾದ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ.

”ನಮ್ಮ ಕನಸನ್ನು ಫೆಬ್ರವರಿ 24ರಂದು ನಿಮ್ಮ ಮುಂದೆ ತರಲು ನಾವು ಉತ್ಸುಕರಾಗಿದ್ದೆವು. ಪ್ರಸ್ತುತ ಕೋವಿಡ್ ಪರಿಸ್ಥಿತಿ ಹಾಗೂ ಅದಕ್ಕೆ ಸಂಬಂಧಿಸಿದ ನಿಯಮಾವಳಿಗಳು ಇರುವ ಕಾರಣ ಪ್ರಪಂಚದಾದ್ಯಂತ ನಮ್ಮ ಸಿನಿಮಾವನ್ನು ತಲುಪಿಸಲಾಗುವುದಿಲ್ಲ.

ನಿಮ್ಮ ಪ್ರೀತಿ ಮತ್ತು ತಾಳ್ಮೆಗೆ ನಾವು ಆಭಾರಿ. ಅದಕ್ಕೆ ಪ್ರತಿಯಾಗಿ ನೀವು ಮನಸಾರೆ ಸ್ವೀಕರಿಸುವಂಥಹಾ ಸಿನಿಮಾವನ್ನು ನಿಮ್ಮ ಮುಂದೆ ತರುತ್ತೇವೆಂಬ ಭರವಸೆ ನಮಗೆ ಇದೆ. ಭಾರತದ ಮೊದಲ ಅಡ್ವೇಂಚರ್ ಹೀರೋ ಅನ್ನು ಪ್ರಪಂಚಕ್ಕೆ ಪರಿಚಯಿಸುವ ಹೊಸ ದಿನಾಂಕವನ್ನು ಶೀಘ್ರವೇ ಪ್ರಕಟಿಸುತ್ತೇವೆ” ಎಂದಿದೆ ಚಿತ್ರತಂಡ.

ಕೆಲ ದಿನದ ಹಿಂದೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ‘ವಿಕ್ರಾಂತ್ ರೋಣ’ ಸಿನಿಮಾ ನಿರ್ಮಾಪಕ ಕೆ ಮಂಜು, ‘ಒಟಿಟಿಯಿಂದ ಭಾರಿ ದೊಡ್ಡ ಆಫರ್ ಬಂದಿದೆ ಆದರೆ ನಾವು ಚಿತ್ರಮಂದಿರದಲ್ಲಿಯೇ ಸಿನಿಮಾ ಬಿಡುಗಡೆ ಮಾಡುತ್ತೇವೆ. ಅದರಲ್ಲಿಯೂ ಹೇಳಿದ ದಿನಾಂಕದಂದೇ ಬಿಡುಗಡೆ ಮಾಡಲು ಯತ್ನಿಸುತ್ತೇವೆ” ಎಂದಿದ್ದರು. ಆದರೆ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಲೇ ಸಾಗುತ್ತಿರುವ ಕಾರಣದಿಂದ ಬಿಡುಗಡೆಯನ್ನು ಮುಂದೂಡಲಾಗಿದೆ.

ಕಳೆದ ಡಿಸೆಂಬರ್‌ ತಿಂಗಳಿನಿಂದಲೂ ಬಿಡುಗಡೆಗೆ ತಯಾರಾಗಿದ್ದ ಹಲವು ಸಿನಿಮಾಗಳು ದಿನಾಂಕವನ್ನು ಮುಂದಕ್ಕೆ ಹಾಕಿಕೊಂಡಿವೆ. ‘ಆರ್‌ಆರ್‌ಆರ್’ನಿಂದ ಆರಂಭಿಸಿ ತೆಲುಗಿನ ಹಲವು ಸಿನಿಮಾಗಳು. ಕನ್ನಡದ ‘ಗಜಾನನ ಆಂಡ್ ಗ್ಯಾಂಗ್’ ಸೇರಿದಂತೆ ಪ್ರಜ್ವಲ್ ದೇವರಾಜ್‌ರ ಒಂದು ಸಿನಿಮಾ ಹಾಗೂ ಇನ್ನೂ ಕೆಲವು ಸಿನಿಮಾಗಳ ಬಿಡುಗಡೆ ದಿನಾಂಕ ಮುಂದೂಡಲಾಗಿದೆ.

‘ವಿಕ್ರಾಂತ್ ರೋಣ’ ಸಿನಿಮಾದಲ್ಲಿ ಭಿನ್ನ ರೀತಿಯ ಸೂಪರ್ ಹೀರೋ ಪಾತ್ರದಲ್ಲಿ ಸುದೀಪ್ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಸಿನಿಮಾವನ್ನು ‘ರಂಗಿತರಂಗ’ ಖ್ಯಾತಿಯ ಅನುಪ್ ಭಂಡಾರಿ ನಿರ್ದೇಶನ ಮಾಡಿದ್ದು, ಸುದೀಪ್ ಜೊತೆಗೆ ಜಾಕ್ವೆಲಿನ್ ಫರ್ನಾಂಡೀಸ್, ಶ್ರದ್ಧಾ ಶ್ರೀನಾಂತ್, ನೀತಾ ಅಶೋಕ್, ನಿರುಪ್ ಭಂಡಾರಿ ಇನ್ನೂ ಕೆಲವರು ನಟಿಸಿದ್ದಾರೆ.

ಸಿನಿಮಾಕ್ಕೆ ಭಾರಿ ಬಂಡವಾಳವನ್ನು ಹೂಡಲಾಗಿದ್ದು, ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಸಿನಿಮಾವನ್ನು ಬಿಡುಗಡೆ ಮಾಡಲು ಸಿದ್ಧತೆ ಮಾಡಲಾಗಿತ್ತು. ಮುಂಬೈ ಮಹಾನಗರಿಯಲ್ಲಿ ಸಿನಿಮಾದ ದೊಡ್ಡ-ದೊಡ್ಡ ಪೋಸ್ಟರ್‌ಗಳನ್ನು ಹಾಕಲಾಗಿತ್ತು. ಆದರೆ ಈಗ ಸಿನಿಮಾದ ಬಿಡುಗಡೆಯನ್ನು ಮುಂದಕ್ಕೆ ಹಾಕಿಕೊಳ್ಳಲಾಗಿದೆ.

ತೆಲುಗಿನ ‘ಆರ್‌ಆರ್‌ಆರ್’, ‘ರಾಧೆ-ಶ್ಯಾಮ್’, ಕನ್ನಡದ ‘ಕೆಜಿಎಫ್ 2’, ‘ಭೀಮ್ಲ ನಾಯಕ್’, ‘ಸರ್ಕಾರು ವಾರಿ ಪಾಟ’, ‘ಆಚಾರ್ಯ’ ಇನ್ನೂ ಹಲವು ಸಿನಿಮಾಗಳು ಸಹ ತಮ್ಮ ಬಿಡುಗಡೆ ದಿನಾಂಕವನ್ನು ಮುಂದಕ್ಕೆ ಹಾಕಿಕೊಂಡಿದ್ದು. ಮತ್ತೊಮ್ಮೆ ಸ್ಟಾರ್ ನಟರ ಸಿನಿಮಾಗಳ ನಡುವೆ ದೊಡ್ಡ ಪೈಪೋಟಿ ಏರ್ಪಡುವ ನಿರೀಕ್ಷೆ ಇದೆ. ‘ವಿಕ್ರಾಂತ್ ರೋಣ’ ಸಿನಿಮಾ ಯಾವ ಸಿನಿಮಾದೆದುರು ತೊಡೆ ತಟ್ಟಬೇಕಾಗುತ್ತದೆ ಎಂಬುದು ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪೇರಲ ಎಲೆಗಳು ಕೂದಲು ಉದುರುವುದನ್ನು ನಿಲ್ಲಿಸಬಹುದು... ಮತ್ತು ಅನೇಕ ಇತರ ಪ್ರಯೋಜನಗಳು

Thu Jan 27 , 2022
ಪೇರಲ ಸಸ್ಯದ ಎಳೆಯ ಎಲೆಗಳನ್ನು ಉಷ್ಣವಲಯದ ದೇಶಗಳಲ್ಲಿ ಸಾಂಪ್ರದಾಯಿಕ ಔಷಧದಲ್ಲಿ ಬಳಸಲಾಗುತ್ತದೆ. ಈ ಎಲೆಗಳು ವಿಟಮಿನ್ ಸಿ ನಂತಹ ಉತ್ಕರ್ಷಣ ನಿರೋಧಕಗಳು ಮತ್ತು ಕ್ವೆರ್ಸೆಟಿನ್ ನಂತಹ ಫ್ಲೇವನಾಯ್ಡ್‌ಗಳನ್ನು ಒಳಗೊಂಡಂತೆ ಹಲವಾರು ಪ್ರಯೋಜನಕಾರಿ ವಸ್ತುಗಳನ್ನು ಒಳಗೊಂಡಿರುತ್ತವೆ. ಪೇರಲ ಎಲೆಗಳನ್ನು ಬಿಸಿನೀರಿನಲ್ಲಿ ನೆನೆಸಿ ತಯಾರಿಸಿದ ಚಹಾವನ್ನು ಕುಡಿಯುವುದು ಅತಿಸಾರಕ್ಕೆ ಚಿಕಿತ್ಸೆ ನೀಡಲು, ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಮತ್ತು ಮಧುಮೇಹವನ್ನು ತಡೆಯಲು ಪ್ರಯೋಜನಕಾರಿಯಾಗಿದೆ.   ಕೂದಲು ಉದುರುವುದನ್ನು ನಿಲ್ಲಿಸಲು ಮತ್ತು ಕೂದಲಿನ ಬೆಳವಣಿಗೆಯನ್ನು […]

Advertisement

Wordpress Social Share Plugin powered by Ultimatelysocial