ನೀಲಿ ಚಿತ್ರಗಳ ಕ್ಲಿಪ್ ಮಾರುತ್ತಿದ್ದ ಮೊಬೈಲ್ ಅಂಗಡಿಗಳ ಮೇಲೆ ರೇಡ್

ನೀಲಿ ಚಿತ್ರಗಳ ಕ್ಲಿಪ್ ಮಾರುತ್ತಿದ್ದ ಮೊಬೈಲ್ ಅಂಗಡಿಗಳ ಮೇಲೆ ರೇಡ್

ನೀಲಿ ಚಿತ್ರಗಳ ಕ್ಲಿಪ್‌ಗಳನ್ನು ಡೌನ್ಲೋಡ್ ಮಾಡಿ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಗುಜರಾತ್‌ನ ಸೂರತ್‌ ನಗರದ ಕೋಸದ್ ಮತ್ತು ವಡೋದ್ ಪ್ರದೇಶಗಳಲ್ಲಿ ಮೊಬೈಲ್ ರಿಪೇರಿ ಅಂಗಡಿ ಇಟ್ಟುಕೊಂಡಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಇದೇ ವೇಳೆ ಪೊಲೀಸರು 65 ಕ್ಲಿಪ್‌ಗಳನ್ನು ವಶಕ್ಕೆ ಪಡೆದಿದ್ದಾರೆ.

ನೀಲಿ ಚಿತ್ರಗಳ ಕ್ಲಿಪ್‌ಗಳನ್ನು ಬಿತ್ತರಿಸುತ್ತಿದ್ದರು ಎಂಬ ಪಕ್ಕಾ ಮಾಹಿತಿ ಪಡೆದ ಪೊಲೀಸರು ಅಂಗಡಿಗಳ ಮೇಲೆ ರೇಡ್ ಮಾಡಿದ್ದಾರೆ.

ಭಾರತದಲ್ಲಿ ನೀಲಿ ಚಿತ್ರಗಳ ಮಾರಾಟ, ಪ್ರಕಟಣೆ ಹಾಗೂ ಉತ್ಪಾದನೆ ಅಪರಾಧವಾಗಿದ್ದು, ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 292, 293 ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆ 2000ದ ಸೆಕ್ಷನ್ 67ಬಿ ಅಡಿ ಕಟ್ಟುನಿಟ್ಟಿನ ನಿಷೇಧ ವಿಧಿಸಲಾಗಿದೆ. ಆದರೆ ಮಕ್ಕಳು ಭಾಗಿಯಾಗಿರದ ಹಾಗೂ ಅತ್ಯಾಚಾರವಲ್ಲದ ನೀಲಿ ಚಿತ್ರಗಳನ್ನು ಖಾಸಗಿಯಾಗಿ ವೀಕ್ಷಣೆ ಮಾಡುವುದಕ್ಕೆ ಅಡಚಣೆ ಇಲ್ಲ.

ಉತ್ತರಾಖಂಡ ಹೈಕೋರ್ಟ್ ಆದೇಶಾನುಸಾರ ನೀಲಿ ಚಿತ್ರಗಳನ್ನು ಬಿತ್ತರಿಸುವ 827 ಜಾಲತಾಣಗಳನ್ನು ನಿಷೇಧಿಸುವಂತೆ 2018ರಲ್ಲಿ ಭಾರತ ಸರ್ಕಾರ ಅಂತರ್ಜಾಲ ಸೇವಾದಾರರಿಗೆ ಆದೇಶಿಸಿತ್ತು.

ಅಂತರ್ಜಾಲದಲ್ಲಿ ನೀಲಿ ಚಿತ್ರದ ವಿಡಿಯೋ ವೀಕ್ಷಿಸಿದ್ಧ ಶಾಲೆಯೊಂದರ ನಾಲ್ಕು ಹುಡುಗರು ಹತ್ತನೇ ತರಗತಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದ ಬೆನ್ನಿಗೇ ಉತ್ತಾರಖಂಡ ಹೈಕೋರ್ಟ್ ಈ ತೀರ್ಪು ನೀಡಿತ್ತು.

Please follow and like us:

Leave a Reply

Your email address will not be published. Required fields are marked *

Next Post

ಆಯುಷ್ಮಾನ್ ಯೋಜನೆಯ ಸೌಲಭ್ಯ ಪಡೆದುಕೊಳ್ಳಲು ಸಲಹೆ

Fri Dec 17 , 2021
ಗುಡಿಬಂಡೆ: ಕೇಂದ್ರ ಸರ್ಕಾರ ಆರ್ಥಿಕವಾಗಿ ಹಿಂದುಳಿದವರಿಗಾಗಿ ಆಯುಷ್ಮಾನ್ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯ ಮೂಲಕ 5 ಲಕ್ಷದ ವರೆಗೂ ಉಚಿತವಾಗಿ ಚಿಕಿತ್ಸೆ ಪಡೆಯಬಹುದಾಗಿದ್ದು, ಈ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ನರಸಿಂಹಮೂರ್ತಿ ಸಲಹೆ ನೀಡಿದರು.ಪಟ್ಟಣದ ಮಾರುತಿ ಸರ್ಕಲ್ ಬಳಿಕ ಆರೋಗ್ಯ ಇಲಾಖೆ ಹಾಗೂ ಗೌತಮಬುದ್ದ ಕಲಾತಂಡದ ವತಿಯಿಂದ ಆಯುಷ್ಮಾನ್ ಭಾರತ ಯೋಜನೆಯ ಸೌಲಭ್ಯಗಳ ಕುರಿತು ಅರಿವು ಮೂಡಿಸುವ ಬೀದಿ ನಾಟಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ […]

Advertisement

Wordpress Social Share Plugin powered by Ultimatelysocial