ಮಂಗಳೂರು : ಅಪ್ರಾಪ್ತ ವಯಸ್ಕ ಬಾಲಕಿಗೆ ಲೈಂಗಿಕ ಕಿರುಕುಳ: ಆಟೋ ಚಾಲಕ ಬಂಧನ.

ಮಂಗಳೂರು : ಅಪ್ರಾಪ್ತ ವಯಸ್ಕ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಆಟೋ ಚಾಲಕನೋರ್ವನನ್ನು ವಿಟ್ಲ ಪೊಲೀಸರು ಬಂಧಿಸಿದ ಘಟನೆ ನಡೆದಿದೆ.ಕಂಬ್ಲಬೆಟ್ಟು ನಿವಾಸಿ ಅಬ್ದುಲ್ ನಾಸಿರ್ ಬಂಧಿತ ಆರೋಪಿ ಪರಿಚಯದ ಅಪ್ರಾಪ್ತ ವಯಸ್ಕ ಬಾಲಕಿಯನ್ನು ತನ್ನ ಆಟೋದಲ್ಲಿ ಶಾಲೆಗೆ ಕರೆದೊಯ್ಯುತ್ತಿದ್ದ ಆಕೆಯ ಮನೆಗೆ ಆಗಾಗ ಬರುತ್ತಿದ್ದ ಮನೆಗೆ ಬಾರದಂತೆಯೂ ಆತನಿಗೆ ಎಚ್ಚರಿಕೆ ನೀಡಲಾಗಿತ್ತು ಎನ್ನಲಾಗಿದೆ.ಈ ವಿಚಾರದಲ್ಲಿ ಮನೆಯವರು ಆಕೆಯನ್ನು ಮತ್ತಷ್ಟು ವಿಚಾರಣೆ ನಡೆಸಿದಾಗ ಆತ ಆಕೆಗೆ ಲೈಂಗಿಕ ಕಿರುಕುಳ ನೀಡಿರುವುದು ಬೆಳಕಿಗೆ ಬಂದಿದೆ ಎಂದು ಬಾಲಕಿಯ ತಾಯಿ ವಿಟ್ಲ ಪೊಲೀಸರಿಗೆ ನೀಡಿದ ದೂರಿನಲ್ಲಿ ವಿವರಿಸಿದ್ದಾರೆ .ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

 

Please follow and like us:

Leave a Reply

Your email address will not be published. Required fields are marked *

Next Post

SARS-CoV-2 RNA ಕಣವು ಪ್ರತ್ಯೇಕ ಕೊಠಡಿಗಳ ಒಳಗೆ ಮತ್ತು ಹೊರಗೆ COVID ಅನ್ನು ಉಂಟುಮಾಡುತ್ತದೆ;

Tue Feb 1 , 2022
ಮನೆಗಳಲ್ಲಿನ ಪ್ರತ್ಯೇಕ ಕೊಠಡಿಗಳನ್ನು ಮೀರಿ ವಾಯುಗಾಮಿ ಪ್ರಸರಣವು ಇತರ ಮನೆ ನಿವಾಸಿಗಳಿಗೆ ಸೋಂಕಿನ ಅಪಾಯವನ್ನು ಉಂಟುಮಾಡಬಹುದು ಎಂದು ಇದು ಸೂಚಿಸುತ್ತದೆ. ಆನಲ್ಸ್ ಆಫ್ ದಿ ಅಮೇರಿಕನ್ ಥೊರಾಸಿಕ್ ಸೊಸೈಟಿಯ ಜರ್ನಲ್‌ನಲ್ಲಿ ಪ್ರಕಟವಾದ ಈ ಅಧ್ಯಯನವು ಮನೆಯ ಸದಸ್ಯರು ಸೋಂಕಿಗೆ ಒಳಗಾದಾಗ ಸಾಮಾನ್ಯ ದೈನಂದಿನ ಜೀವನ ಪರಿಸ್ಥಿತಿಗಳಲ್ಲಿ SARS-CoV-2 RNA ಯೊಂದಿಗೆ ಮನೆಯ ವಾಯು ಮಾಲಿನ್ಯದ ಮೊದಲ ವರದಿಯಾಗಿದೆ. ಕಿಕ್ಕಿರಿದ ಜೀವನ ಪರಿಸ್ಥಿತಿಗಳಲ್ಲಿ ವಾಯುಗಾಮಿ ಪ್ರಸರಣವು ಕಡಿಮೆ ಆದಾಯ ಹೊಂದಿರುವ ಜನರಲ್ಲಿ […]

Advertisement

Wordpress Social Share Plugin powered by Ultimatelysocial