ನೀವು ಅರ್ಥ ಆಗಿಲ್ಲ ಸರ್ ಇನ್ನು ಯಾರ್ಗು..!!

ನಮ್ಮ ಜನರನ್ನ ಈ ರಾಜಕಾರಣಿಗಳು ದಡ್ಡರನ್ನಾಗಿ ಮಾಡಿ ಜನರ ಮೇಲೆ ಸವಾರಿ ಮಾಡ್ತಿದ್ದಾರೆ.. ನಮ್ಮ ಜನರಿಗೆ ಅದು ರೂಢಿಯಾಗಿದೆ.. ಯಾರೂ ಏನೂ ಮಾಡೋಕ್ಕಾಗಲ್ಲ..!! ನಮ್ಮ ಜನಾನು ಅದಕ್ಕೆ ಹೊಂದಿಕೊಂಡಿದ್ದಾರೆ..!!
ಮಾಡುವ ಕೆಲಸವನ್ನು ಸರಿಯಾಗಿ ಮಾಡದೇ ನಮ್ಮ ಟ್ಯಾಕ್ಸ್ ದುಡ್ಡಲ್ಲಿ ಮಜಾ ಮಾಡ್ತಿದಾರೆ, ಸಾಮಾನ್ಯ ಪ್ರಜೆ ಸರಿಯಾಗಿ ದುಡಿದರೆ ಸಂಸಾರ ಮಾಡಿಕೊಂಡು ಒಂದು ಮನೆ ಮಾಡ್ಕೊಳ್ಳೋಕು ಕಷ್ಟ ಪಡ್ತಾರೆ, ಆದರೆ ಈ ರಾಜಕಾರಣಿಗಳು ಒಮ್ಮೆ ಯಾವದಾದರೂ ಸ್ಥಾನ ಸಿಕ್ರೆ ಸಾಕು, ಹತ್ತು ಜನರೇಷನ್ ಗೆ ಆಗುವಷ್ಟು ಹಣ ಆಸ್ತಿ ಮಾಡ್ಕೋತಾರೆ, ಆದರೆ ನಮ್ಮಂತ ಸಾಮಾನ್ಯ ಜನ ದುಡಿದ ಹಣವನ್ನು ಈ ಸ್ಕೂಲ್ ಫೀಸ್, ಹಾಸ್ಪಿಟಲ್, ದಿನೇ ದಿನೇ ಜಾಸ್ತಿ ಯಾಗುತ್ತಿರುವ ಪೆಟ್ರೋಲ್ ರೇಟ್, ದಿನಸಿ ಸಾಮಗ್ರಿ ಇವುಗಳಿಗೆ ಸಾಕಾಗಲ್ಲ, ಈ ಕಾಸ್ಟ್ಲಿ ದುನಿಯಾದಲ್ಲಿ ಜೀವನ ಸಾಗಿಸೋದೆ ಒಂದು ದೊಡ್ಡ ಸವಾಲಾಗಿದೆ..
ಈ ಸಮಾಜದಲ್ಲಿ ನಡೆಯುತ್ತಿರುವ ಅನ್ಯಾಯ, ಅಕ್ರಮ ದಂಧೆಗಳು, ಭ್ರಷ್ಟಾಚಾರ, ಮೋಸ, ವಂಚನೆ ಈ ಕಣ್ಣಿಂದ ಇನ್ನೂ ಎಷ್ಟು ದಿವಸ ನೋಡಬೇಕೋ ಗೊತ್ತಿಲ್ಲಾ.. ನಾವು ಬದಲಾಗುವವರೆಗೂ ಈ ಸಮಾಜ ಬದಲಾಗಲ್ಲ, e ಸಮಾಜ ಆದಷ್ಟು ಬೇಗ ಬದಲಾಗದಿದ್ದರೆ, ನಾವು ದುಡಿದು ತುಂಬುವ ಟ್ಯಾಕ್ಸ್ ಹಣದಲ್ಲೇ ಇವರು ತಿನ್ನುತ್ತಾರೆ, ಮುಂದೆ ನಮ್ಮ ಮಕ್ಕಳು, ಮೊಮ್ಮಕ್ಕಳು ಹೀಗೆ ಇವರ ಮಕ್ಕಳ, ಮೊಮ್ಮಕ್ಕಳ ಸೇವೆ ಮಾಡೋದರಲ್ಲೇ ಜೀವನ ಕಳೀತಾರೆ…
“”ಬೇಗ ಬದಲಾಗಿ, ಬೇಗ ಬದಲಾಯಿಸಿ””…
ಸಧ್ಯದ ಪರಿಸ್ಥಿತಿ ಹೆಂಗಿದೆ ಅಂದ್ರೆ ;-
1) ಈ ಶ್ರೀಮಂತರಿಗೆ ಅದನ್ನು ಕೇಳುವ ಅವಶ್ಯಕತೆಯಿಲ್ಲ ಅನ್ಕೊಂಡು, ಅವರಿಗೂ ಅದಕ್ಕೂ ಸಂಬಂಧ ಇಲ್ಲಾ ಅನ್ನೋತರ ಇದಾರೆ.. ಸಾಕಷ್ಟು ಹಣ ಇರತ್ತೆ, ಆಳುಗಳ ಮೇಲೆ ಎಲ್ಲಾ ಕೆಲಸ ಮಾಡಿಸಿಕೊಂಡು ಆಫೀಸ್ ನಲ್ಲಿ ರಾಜನ ತರಹ ಇರ್ತಾರೆ..
2) ಈ ಮಧ್ಯಮವರ್ಗದವರಿಗೆ ಸಮಯವೇ ಇರಲ್ಲ,,
ಯಾಕಂದ್ರೆ ; ಅವರಿಗೆ ಈ ಸಂಸಾರ, ಮಕ್ಕಳು, ಉದ್ಯೋಗ ಇವುಗಳ ಜಂಜಾಟದಲ್ಲಿ ಸಮಾಜದ ಆಗು ಹೋಗುಗಳ ಬಗ್ಗೆ ಅರಿವು ಇಲ್ಲದಂತೆ ದುಡಿಯಬೇಕಾಗತ್ತೆ, ದುಡಿಯದಿದ್ದರೆ ಎಲ್ಲವೂ ಬಂದ್ ಆಗತ್ತೆ.. ಸ್ಕೂಲ್ ಫೀಸ್, ಆಸ್ಪತ್ರೆ, ಕರೆಂಟ್ ಬಿಲ್, ಟಿವಿ ಬಿಲ್, ಫೋನ್ ರಿಚಾರ್ಜ್, ತರಕಾರಿ, ಮನೆ ಸಾಮಾನು, ಬೈಕ್ ಪೆಟ್ರೋಲ್, ಬಟ್ಟೆ, ಹೀಗೆ ನೂರಾರು ತೊಂದರೆಗಳು…
3) ಇನ್ನು ಬಡವರಿಗೆ ಇದನ್ನು ಕೇಳಲು ಶಕ್ತಿ ಇರಲ್ಲ,,
ನಮಗೆ ಯಾಕ್ ಬೇಕು ಬಿಡು, ನಾವಾಯ್ತು ನಮ್ಮ ಕೆಲಸವಾಯ್ತು ಅಂತ ಇರ್ತಾರೆ…
4) ಇನ್ನು ನಮ್ಮ ಯುವಕರು ಯುವತಿಯರು ಫೇಸ್ಬುಕ್, ವಾಟ್ಸಪ್, ರೀಲ್ಸ್, ಇನ್ಸ್ಟಾಗ್ರಾಮ್, ಬಾರ್, ಪಬ್, ಮೋಜು, ಮಾಸ್ತಿ ಅನ್ಕೊಂಡು ಅಪ್ಪ ಅಮ್ಮನ ದುಡ್ಡಲ್ಲಿ ಮಜಾ ಮಾಡ್ತಿರ್ತಾರೆ…
ಇಷ್ಟೇ ಸಮಾಜ…!!

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

BIGGBOSS:ವಿಕ್ರಮ್ ಜೊತೆಗಿನ ಘರ್ಷಣೆಯಿಂದಾಗಿ 'ಬಿಗ್ ಬಾಸ್ ಅಲ್ಟಿಮೇಟ್' ನಿರೂಪಕರಾಗಿ ಹೊರಬಂದ,ಕಮಲ್ ಹಾಸನ್;

Mon Feb 21 , 2022
ದಿನಾಂಕದ ಸಮಸ್ಯೆಗಳನ್ನು ಉಲ್ಲೇಖಿಸಿ, ನಟ ಕಮಲ್ ಹಾಸನ್ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್ ಅಲ್ಟಿಮೇಟ್’ ನ ಉಳಿದ ಸಂಚಿಕೆಗಳನ್ನು ಹೋಸ್ಟ್ ಮಾಡುವುದರಿಂದ ತಮ್ಮನ್ನು ಕ್ಷಮಿಸಿದ್ದಾರೆ. ಕಮಲ್ ಹೇಳಿಕೆಯಲ್ಲಿ, “ಸಾಂಕ್ರಾಮಿಕ ಮತ್ತು ಪರಿಣಾಮವಾಗಿ ಸರ್ಕಾರವು ಸರಿಯಾಗಿ ಹೇರಿದ ಲಾಕ್‌ಡೌನ್‌ಗಳು ಮತ್ತು ನಿರ್ಬಂಧಗಳು ಅವ್ಯವಸ್ಥೆಯನ್ನು ಸೃಷ್ಟಿಸಿದೆ ಮತ್ತು ನಮ್ಮ ಮುಂಬರುವ ಚಿತ್ರ ‘ವಿಕ್ರಮ್’ ನಿರ್ಮಾಣ ಮತ್ತು ಪೋಸ್ಟ್ ಪ್ರೊಡಕ್ಷನ್ ಅನ್ನು ಮರುಹೊಂದಿಸಲು ನಮ್ಮನ್ನು ನಿರ್ಬಂಧಿಸಿದೆ. “ವಿಕ್ರಮ್’ನ ನಿರ್ಮಾಣದ ವೇಳಾಪಟ್ಟಿಯು ನನ್ನ ಹೃದಯಕ್ಕೆ […]

Advertisement

Wordpress Social Share Plugin powered by Ultimatelysocial