ನುಗ್ಗೆ ಕಾಯಿ ಸಾಂಬಾರ್.

 

ಕುಕ್ಕರ್‌ಗೆ ಒಂದಿಷ್ಟು ನೀರು, ತೊಗರಿಬೇಳೆ, ಅರಿಶಿಣ, ಎಣ್ಣೆ ಹಾಕಿ ೩ ವಿಷಲ್ ಕೂಗಿಸಿ. ಇಂಗು, ಸಾಂಬಾರ್ ಪುಡಿ, ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಬಾಣಲಿಗೆ ಎಣ್ಣೆ ಹಾಕಿ. ಕಾದ ನಂತರ ಸಾಸಿವೆ, ಒಣಮೆಣಸಿನಕಾಯಿ, ಬೆಳುಳ್ಳಿ, ಕರಿಬೇವು, ಈರುಳ್ಳಿ ಹಾಕಿ ಹುರಿಯಿರಿ. ಇದಕ್ಕೆ ದಪ್ಪಗೆ ಹೆಚ್ಚಿಕೊಂಡ ದಪ್ಪ ಮೆಣಸಿನಕಾಯಿ, ನುಗ್ಗೆಕಾಯಿ, ಬದನೇಕಾಯಿ ಹಾಕಿ ಬೇಯಿಸಿಕೊಳ್ಳಿ. ನಂತರ ತೊಗರಿಬೇಳೆ ಇರುವ ಕುಕ್ಕರ್‌ಗೆ ಹಾಕಿ ಚೆನ್ನಾಗಿ ಕೈಯಾಡಿಸಿ. ನಂತರ ರುಬ್ಬಿಕೊಂಡ ಮಸಾಲಾ, ಹುಣಸೇರಸ, ಉಪ್ಪು, ಬೆಲ್ಲ, ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ೩ ವಿಶಲ್ ಕೂಗಿಸಿದರೆ ನುಗ್ಗೆ ಕಾಯಿ ಸಾಂಬಾರ್ ರೆಡಿ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಒತ್ತು ಶಾವಿಗೆ ಮಾಡುವ ವಿಧಾನ.

Wed Mar 1 , 2023
    ಕರಿ ಎಳ್ಳು, ಬಿಳಿ ಎಳ್ಳು, ಹುರಿಗಡಲೆಯನ್ನು ಪುಡಿ ಮಾಡಿ ಕೊಳ್ಳಿ. ತೆಂಗಿನ ತುರಿ, ಬೆಲ್ಲ, ಏಲಕ್ಕಿ ಪುಡಿ, ಅಗತ್ಯವಿರುವಷ್ಟು ನೀರು ಹಾಕಿ ರುಬ್ಬಿ ಕೊಳ್ಳಿ. ಈ ಮಿಶ್ರಣಕ್ಕೆ ಕುಸುಬಲು ಅಕ್ಕಿ, ನೀರು, ಉಪ್ಪು ಸೇರಿಸಿ ಮತ್ತೆ ರುಬ್ಬಿ. ರುಬ್ಬಿದ ಹಿಟ್ಟನ್ನು ತೆಗೆದು ಇಡ್ಲಿ ಪ್ಲೇಟ್‌ಗೆ ಹಾಕಿ ಕುಕ್ಕರಿನಲ್ಲಿಟ್ಟು ಇಡ್ಲಿಯಂತೆ ಬೇಯಿಸಿ. ಬೆಂದ ಮೇಲೆ ತೆಗೆದು ಒತ್ತು ಶಾವಿಗೆಯ ಒರಳಿಗೆ ಹಾಕಿ. ಪ್ಲೇಟ್‌ನ ಮೇಲೆ ಒತ್ತಿರಿ. ಶಾವಿಗೆಯ ಮೇಲೆ […]

Advertisement

Wordpress Social Share Plugin powered by Ultimatelysocial