70ನೇ ವಯಸ್ಸಲ್ಲಿ ಮಗುವನ್ನು ಹೆತ್ತಳು ಈ ತಾಯಿ! – ಮಗು ಹೇಗಿದೆ ಗೋತ್ತಾ..?

ಮುದ್ದು ಕಂದನ ಕಂಡು ಕುಣಿದುಕುಪ್ಪಳಿಸಿದ ದಂಪತಿ

ಗಾಂಧಿನಗರ (ಗುಜರಾತ್‌): ಕೆಲ ತಿಂಗಳ ಹಿಂದಷ್ಟೇ ಪಂಜಾಬ್‌ನ 70 ವರ್ಷದ ಆಸುಪಾಸಿನ ಮಹಿಳೆಯೊಬ್ಬರು ಮಗುವನ್ನು ಹೆತ್ತು ಭಾರಿ ಸುದ್ದಿಮಾಡಿದ್ದರು. ಇದೀಗ ಅದೇ ವಯಸ್ಸಿನ ಇನ್ನೋರ್ವ ಮಹಿಳೆ ಮೊದಲ ಕಂದನನ್ನು ಪಡೆದಿದ್ದಾರೆ. ಮುದ್ದು ಕಂದನನ್ನು ನೋಡಿ ಈ ದಂಪತಿ ಕುಣಿದು ಕುಪ್ಪಳಿಸಿದ್ದಾರೆ.

ಗುಜರಾತ್‍ನ ಕಛ್‍ನ ಜೀವುಬೆನ್ ವಾಲಾಭಾಯಿ ರಬರಿ ಅವರು ಮಗುವನ್ನು ಹೆತ್ತವರು. ರಾಪರ್ ತಾಲ್ಲೂಕಿನ ಮೋರಾ ಗ್ರಾಮದ ನಿವಾಸಿಯಾಗಿರುವ ಈ ದಂಪತಿಗೆ ಮದುವೆಯಾಗಿ 45ನೇ ವಯಸ್ಸಿಗೆ ಈ ಮಗು ಜನಿಸಿದೆ. ಜೀವುಬೆನ್‌ ಅವರಿಗೆ ತಮ್ಮ ವಯಸ್ಸಿನ ಬಗ್ಗೆ ಸರಿಯಾದ ಆಧಾರವಿಲ್ಲವಂತೆ. ಅದಕ್ಕೆ ಅವರು ಹೇಳುವುದು ಏನೆಂದರೆ, ‘ನಾನು ಸುಮಾರು 65 ರಿಂದ 70 ಬೇಸಿಗೆಕಾಲವನ್ನು ನೋಡಿದ್ದೇನೆ. ವಯಸ್ಸಿನ ಬಗ್ಗೆ ಹೆಚ್ಚಿನ ಆಧಾರವಿಲ್ಲ. ಮಗುವನ್ನು ಪಡೆಯಲು ತುಂಬಾ ಪ್ರಯತ್ನಿಸಿ ಈಗ ಯಶಸ್ವಿಯಾಗಿದ್ದೇವೆ’ ಎಂದಿದ್ದಾರೆ.

‘ಮಗುವಿಗೆ ಜನ್ಮ ನೀಡಲೇಬೇಕು ಎಂದು ದಂಪತಿ ಹೇಳಿಕೊಂಡಾಗ ಮೊದಲು ನಾವು ನಿರಾಕರಿಸಿದೆವು. ಈ ವಯಸ್ಸಿನಲ್ಲಿ ಗರ್ಭಧಾರಣೆ ತುಂಬಾ ಅಪಾಯ ಎಂದೂ ಹೇಳಿದ್ದೆವು. ಆದರೆ ಅವರು ಮಗು ಬೇಕೆಂದು ಪಟ್ಟು ಹಿಡಿದರು. ಅದಕ್ಕೆ ನಾವು ಮಣಿಯಲೇಬೇಕಾಯಿತು ಎಂದಿದ್ದಾರೆ ಸ್ತ್ರೀರೋಗ ತಜ್ಞ ಡಾ. ನರೇಶ್ ಭಾನುಶಾಲಿ. ನಾವು ಮೊದಲು ಔಷಧಿಗಳನ್ನು ನೀಡಿ ಈ ಮೂಲಕ ಋತುಚಕ್ರವನ್ನು ನಿಯಮಿತವಾಗಿ ಆಗುವಂತೆ ಮಾಡಿದ್ದೇವೆ. ಎರಡು ವಾರಗಳ ನಂತರ ಸೋನೋಗ್ರಫಿ ಮಾಡಿದಾಗ ಭ್ರೂಣ ಬೆಳೆಯುತ್ತಿರುವುದು ಕಂಡಿತು. ಮಗುವಿನ ಹೃದಯ ಬಡಿತ ಕೂಡ ಶುರುವಾಯ್ತು. ಮಗುವಿನ ಬೆಳವಣಿಗೆಯಲ್ಲಿ ಯಾವುದೇ ದೋಷ ಕಾಣಲಿಲ್ಲ, ಆದ್ದರಿಂದ ಗರ್ಭಧಾರಣೆಯೊಂದಿಗೆ ಮುಂದುವರೆಸಿದೆವು. ಈಗ ಮಗು ಹಾಗೂ ತಾಯಿ ಸಂಪೂರ್ಣವಾಗಿ ಆರೋಗ್ಯವಾಗಿದ್ದಾರೆ. ಇದು ದೊಡ್ಡ ಸವಾಲಿನ ಕೆಲಸವಾಗಿತ್ತು. ನಮ್ಮ ಸರ್ವಿಸ್‌ನಲ್ಲಿ ಇಂಥ ಶಸ್ತ್ರಚಿಕಿತ್ಸೆ ಮಾಡಿದ್ದು ಇದೇ ಮೊದಲು ಎಂದು ಅವರು ತಿಳಿಸಿದರು.

ತಾಜಾ ಸುದ್ಧಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ :

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಆರ್ಯನ್‌ ಖಾನ್‌ ಭೇಟಿ ಮಾಡಲು ಬಂದ :‌ ಶಾರುಖ್‌ ಖಾನ್

Thu Oct 21 , 2021
ಡ್ರಗ್ಸ್‌ ಪ್ರಕರಣದಲ್ಲಿ ಎನ್‌ ಸಿ ಬಿ ಬಲೆಗೆ ಅಕ್ಟೋಬರ್‌ 8 ರಂದ ಆರ್ಯನ್‌ ಖಾನ್‌ ಬಿಂದಿದ್ರೂ ಇಂದು ಪುತ್ರನನ್ನ ನೋಡಲು ನಟ ಶಾರಖ್‌ ಖಾನ್‌ ಮುಂಬೈನ ಅರ್ಥರ್ ರಸ್ತೆಯ ಜೈಲ್ಲಿಗೆ ಇಂದು ಭೇಟಿ ನೀಡಿದರು.. ಕಳೆದ ನಿನ್ನೆಯಷ್ಟೇ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್    ಸೇರಿದಂತೆ ಮೂವರು ಸಲ್ಲಿಸಿದ್ದಂತ ಜಾಮೀನು ಅರ್ಜಿಯನ್ನು ಮುಂಬೈನ ಎನ್ ಡಿ ಪಿಎಸ್ ವಿಶೇಷ ಕೋರ್ಟ್ ವಜಾಗೊಳಿಸಿತ್ತು. ಡ್ರಗ್ಸ್‌ ಪ್ರಕರಣದಲ್ಲಿ ಎನ್ ಸಿಬಿಯಿಂದ ಬಂಧನಕ್ಕೆ […]

Advertisement

Wordpress Social Share Plugin powered by Ultimatelysocial