ಒಮಿಕ್ರಾನ್’ ಭೀತಿ, ಬಿಬಿಎಂಪಿ ವ್ಯಾಪ್ತಿಯಲ್ಲಿ ಹೈಅಲರ್ಟ್..!

Omicron: ಒಮಿಕ್ರಾನ್' ಭೀತಿ, ಬಿಬಿಎಂಪಿ ವ್ಯಾಪ್ತಿಯಲ್ಲಿ ಹೈಅಲರ್ಟ್..!

ಬೆಂಗಳೂರು: ಡೆಡ್ಲಿ ಕೊರೊನಾ ವೈರಸ್ ದಿನದಿಂದ ದಿನಕ್ಕೆ ವೇಷ ಬದಲಿಸಿಕೊಂಡು ಮತ್ತಷ್ಟು ಪ್ರಬಲವಾಗುತ್ತಿದೆ. ಒಂದು ಕಡೆ ವೈರಸ್ ಕಂಟ್ರೋಲ್ ಮಾಡಲು ವ್ಯಾಕ್ಸಿನ್ ಕೊಟ್ಟಿದ್ದರೆ, ಮತ್ತೊಂದು ಕಡೆ ಕೊರೊನಾ ರೂಪಾಂತರಿಗಳು ಈ ವ್ಯಾಕ್ಸಿನ್ ಕೋಟೆಯನ್ನೇ ಛಿದ್ರಗೊಳಿಸುತ್ತಿವೆ.

ಅದರಲ್ಲೂ ಬಿಬಿಎಂಪಿ ವ್ಯಾಪ್ತಿಯಲ್ಲಿ ಒಮಿಕ್ರಾನ್ ಕೇಸ್ ಗಳು ಹೆಚ್ಚಾಗುತ್ತಿರುವುದು ತೀವ್ರ ಆತಂಕ ಮೂಡಿಸಿದೆ.

‘ಒಮಿಕ್ರಾನ್’ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ಬಿಬಿಎಂಪಿ  ಫುಲ್ ಅಲರ್ಟ್ ಆಗಿದೆ. ಕೇಂದ್ರ ಸರ್ಕಾರದ ವರದಿ ನೋಡಿ ಬಿಬಿಎಂಪಿ ಕಮಿಷನರ್ ಆಯಕ್ಟಿವ್ ಆಗಿದ್ದು, ಬಿಬಿಎಂಪಿ ಸಿಬ್ಬಂದಿ ಹಾಗೂ ವಲಯವಾರು ಅಧಿಕಾರಿಗಳಿಗೆ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಖಡಕ್ ಆದೇಶ ನೀಡಿದ್ದಾರೆ.

ಈಗಾಗಲೇ ‘ಒಮಿಕ್ರಾನ್’ ಬಗ್ಗೆ ಪ್ರತಿ ರಾಜ್ಯಕ್ಕೂ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ. ದೇಶದಲ್ಲಿ ಒಮಿಕ್ರಾನ್ ಹೆಚ್ಚಾಗುವ ಮುನ್ಸೂಚನೆ ಪ್ರತಿಯೊಂದು ರಾಜ್ಯಕ್ಕೂ ಕೇಂದ್ರ ಸರ್ಕಾರದಿಂದ ಸಿಕ್ಕಿದೆ. ಹೀಗಾಗಿ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಹಾಗಾದರೆ ಆ ಕ್ರಮಗಳು ಯಾವುವು ಅನ್ನೋ ಮಾಹಿತಿ ಮುಂದೆ ಇದೆ.

ಬಿಬಿಎಂಪಿ ಫುಲ್ ಅಲರ್ಟ್..!
1. ಬಿಬಿಎಂಪಿ ವ್ಯಾಪ್ತಿಯಲ್ಲಿ ಬೆಡ್ ಗಳ ಸಂಖ್ಯೆ ಹೆಚ್ಚಿಸಬೇಕು. ಅಗತ್ಯವಿದ್ದರೆ ಖಾಸಗಿ ಅಸ್ಪತ್ರೆಗಳ ಬೆಡ್ ಕಾಯ್ದಿರಿಸಲು ಸೂಚನೆ.

2. ಆಕ್ಸಿಜನ್ ಸಿಲಿಂಡರ್ ಸ್ಟಾಕ್ ಮಾಡಲು ಆದೇಶ, ಆಕ್ಸಿಜನ್ ವಿಚಾರದಲ್ಲಿ 2ನೇ ಅಲೆಯ ಪರಿಸ್ಥಿತಿ ಮರುಕಳಿಸದಂತೆ ಸಂದೇಶ.

3. ಮುಚ್ಚಿರುವ ಕೊವೀಡ್ ಕೇರ್ ಸೆಂಟರ್ (Covid Care Center) ಗಳನ್ನು ಮತ್ತೆ ತೆರೆಯಲು ಸೂಚನೆ.

4. ಆಸ್ಪತ್ರೆಗಳು, ಐಸಿಯು ಬೆಡ್, ಆಯಂಬುಲೆನ್ಸ್, ಆಕ್ಸಿಜನ್ ಸಿಲಿಂಡರ್ ಗಳು, ಆರೈಕೆ ಕೇಂದ್ರಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ಆದೇಶ.

5. ಬಿಬಿಎಂಪಿ ವ್ಯಾಪ್ತಿಯ ಪ್ರತಿಯೊಂದು ವಲಯದಲ್ಲಿ 10ಕ್ಕೂ ಹೆಚ್ಚು ಆಯಂಬುಲೆನ್ಸ್ ವ್ಯವಸ್ಥೆ ಮಾಡಲು ಸೂಚನೆ. ಈ ಹಿಂದೆ ಆಯಂಬುಲೆನ್ಸ್ ಕೊರತೆಯಿಂದ ರೋಗಿಗಳು ನರಳಾಡಿದ್ದರು.

6. ಸೋಂಕು ಕಂಡುಬಂದರೆ ತಕ್ಷಣ ಸೋಂಕಿತನ ಮನೆ ಸೀಲ್ ಡೌನ್. ಅಕ್ಕಪಕ್ಕದ 100 ಮೀಟರ್ ಜಾಗದಲ್ಲಿ ಜನರ ಓಡಾಟ ನಿಷಿದ್ಧ.

7. 3ಕ್ಕಿಂತ ಹೆಚ್ಚು ‘ಒಮಿಕ್ರಾನ್’ (Omicron) ಕೇಸ್ ಒಂದೇ ಮನೆ ಅಥವಾ ಒಂದೇ ಅಪಾರ್ಟ್ಮೆಂಟ್ ನಲ್ಲಿ ಕಾಣಿಸಿಕೊಂಡರೆ ಆ ರಸ್ತೆಗೆ ರಸ್ತೆಯೇ ಬಂದ್.

8. ಸಿಬ್ಬಂದಿ ಕೊರತೆ ಎದುರಾದರೆ ಆಶಾ ಕಾರ್ಯಕರ್ತೆಯರು ಹಾಗೂ ಸ್ಟಾಫ್ ನರ್ಸಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಿಸಲು ಸೂಚನೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಚಳಿಗಾಲದಲ್ಲಿ ಅನಾರೋಗ್ಯದಿಂದ ದೂರ ಇರಲು ತಪ್ಪದೆ ಇವುಗಳನ್ನು ಸೇವಿಸಿ

Wed Dec 22 , 2021
ಚಳಿಗಾಲದಲ್ಲಿ ನಾವು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಚಳಿಗಾಲದಲ್ಲಿ ಕಡಿಮೆ ನೀರು ಕುಡಿಯುವುದರಿಂದ ನಿರ್ಜಲೀಕರಣ ಸಮಸ್ಯೆ ಕಾಡುತ್ತದೆ. ಇದರಿಂದ ಕಾಯಿಲೆ ಬೀಳಬೇಕಾಗುತ್ತದೆ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯಿರಿ, ನಂತರ ಇವುಗಳನ್ನು ಸೇವಿಸಿದರೆ ಆರೋಗ್ಯವಾಗಿರಬಹುದು.ಚಳಿಗಾಲದಲ್ಲಿ ಖಾಲಿಹೊಟ್ಟೆಯಲ್ಲಿ ಪಪ್ಪಾಯವನ್ನು ತಿನ್ನಿ. ಇದು ಕರುಳಿನ ಆರೋಗ್ಯಕ್ಕೆ ಒಳ್ಳೆಯದು. ಹೊಟ್ಟೆಯ ಸಮಸ್ಯೆಯನ್ನು ಹೋಗಲಾಡಿಸುತ್ತದೆ. ಇದು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಹೃದಯ ಸಂಬಂಧಿ ಕಾಯಿಲೆಗಳು ಬರದಂತೆ ತಡೆಯುತ್ತದೆ. ಚಳಿಗಾಲದಲ್ಲಿ ನೆನೆಸಿದ ಬಾದಾಮಿಯನ್ನು ಖಾಲಿ […]

Advertisement

Wordpress Social Share Plugin powered by Ultimatelysocial