”ಓಮಿಕ್ರಾನ್” ತಡೆಗೆ ಸರ್ಕಾರದಿಂದ ಹೊಸ ಗೈಡ್ ಲೈನ್ಸ್ ಬಿಡುಗಡೆ..! ರಾಜ್ಯದಲ್ಲಿ ಏನಿರುತ್ತೆ, ಏನಿರಲ್ಲ..?

''ಓಮಿಕ್ರಾನ್'' ತಡೆಗೆ ಸರ್ಕಾರದಿಂದ ಹೊಸ ಗೈಡ್ ಲೈನ್ಸ್ ಬಿಡುಗಡೆ..! ರಾಜ್ಯದಲ್ಲಿ ಏನಿರುತ್ತೆ, ಏನಿರಲ್ಲ..?
ಬೆಂಗಳೂರು ಓಮಿಕ್ರಾನ್​ ನಿಯಂತ್ರಣಕ್ಕೆ ಸರ್ಕಾರ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಮಂಗಳವಾರದಿಂದಲೇ ರಾಜ್ಯದಲ್ಲಿ ನ್ಯೂ ಇಯರ್ ಕರ್ಫ್ಯೂ ಜಾರಿಯಾಗಲಿದ್ದು, 10 ದಿನಗಳ ಕಾಲ ರಾಜ್ಯದಲ್ಲಿ ರಾತ್ರಿ 10ಗಂಟೆಯಿಂದ ಬೆಳಗ್ಗೆ 5 ರ ವರೆಗೆ ನೈಟ್​​ ಕರ್ಫ್ಯೂ ಇರುತ್ತದೆ.

ಸರ್ಕಾರದ ಹೊಸ ಮಾರ್ಗಸೂಚಿಯಲ್ಲಿ ಹಲವು ಕಠಿಣ ನಿಯಮಗಳನ್ನ ಜಾರಿ ಮಾಡಲಾಗಿದ್ದು, 4 ದಿನ ರೆಸ್ಟೋರೆಂಟ್, ಹೋಟೆಲ್​ ಸೇರಿದಂತೆ ಕ್ಲಬ್​, ಪಬ್​ಗಳಲ್ಲೂ ಶೇ.50ರಷ್ಟು ಸೀಟಿಂಗ್​ಗೆ ಅನುಮತಿ ನೀಡಲಾಗಿದೆ.

ಡಿ.30 ರಿಂದ ಜ.2ರ ವರೆಗೆ ಶೇ.50ರಷ್ಟು ನಿರ್ಬಂಧ ಇರಲಿದ್ದು, ಎಲ್ಲಾ ಸಿಬ್ಬಂದಿಗಳಿಗೆ ಡಬಲ್​ ಡೋಸ್ ವ್ಯಾಕ್ಸಿನ್ ಕಡ್ಡಾಯ ಮಾಡಲಾ ಗಿದೆ. ಪಬ್​, ಕ್ಲಬ್​, ಹೋಟೆಲ್​ಗೆ ಬರುವವರಿಗೂ ಡಬಲ್​ ವ್ಯಾಕ್ಸಿನ್ ಪಡೆದಿರಬೇಕಾಗಿರುತ್ತದೆ. ಇನ್ನೂ ಮದುವೆ, ಸಭೆ, ಸಮ್ಮೇಳನಗಳಿಗೆ ನಿರ್ಬಂಧ ಹಾಕಲಾಗಿದ್ದು, 300 ಮಂದಿಗೆ ಮಾತ್ರ ಸರ್ಕಾರ ಅವಕಾಶ ನೀಡಿದೆ. ಗಡಿಭಾಗಗಳಲ್ಲಿ ತೀವ್ರ ಕಟ್ಟೆಚ್ಚರವಹಿಸುವಂತೆ ಸೂಚನೆ ನೀಡಲಾಗಿದ್ದು,

ಮಹಾರಾಷ್ಟ್ರ, ಕೇರಳ ಗಡಿಭಾಗಗಳಲ್ಲಿ ಕಟ್ಟೆಚ್ಚರ ವಹಿಸಲು ಸೂಚಿಸಲಾಗಿದೆ. ನೈಟ್ ಕರ್ಫ್ಯೂ ವೇಳೆ ಸರಕು, ಸಾಗಾಣೆ ವಾಹನಗಳ ಓಡಾ ಟಕ್ಕೆ ಯಾವುದೇ ನಿರ್ಬಂಧ ಹೇರಲಾಗಿಲ್ಲ. ಗೂಡ್ಸ್​ ವಾಹನ, ಖಾಲಿ ವಾಹನಗಳ ಸಂಚಾರಕ್ಕೆ ಅವಕಾಶವಿದ್ದು, ಇ-ಕಾಮರ್ಸ್​, ವಸ್ತುಗಳ ಹೋಮ್ ಡೆಲಿವರಿಗೆ ಪರ್ಮಿಷನ್​ ನೀಡಲಾಗಿದೆ. ಮೆಡಿಕಲ್​, ತುರ್ತು ಮತ್ತು ಅಗತ್ಯ ಸೇವೆಗಳು, ಕೈಗಾರಿಕೆಗಳು, ಕಂಪನಿಗಳ ರಾತ್ರಿ ಪಾಳಿಗೆ ಅವಕಾಶ ನೀಡಲಾಗಿದೆ.

ರಾತ್ರಿ ಪಾಳಿಗೆ ತೆರಳುವ ಕಾರ್ಮಿಕರಿಗೆ ID ಕಾರ್ಡ್​ ಕಡ್ಡಾಯ ಮಾಡಲಾಗಿದ್ದು, ಇತರೆ ವಾಣಿಜ್ಯ ಚಟುವಟಿಕೆಗಳಿಗೆ 10 ದಿನಗಳ ಕಾಲ ನಿ ರ್ಬಂಧ ಹಾಕಲಾಗಿದೆ. ಬಸ್​, ರೈಲು, ವಿಮಾನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದ್ದು, ಖಾಸಗಿ, ಸರ್ಕಾರಿ ಬಸ್​ಗಳ ಓಡಾಟಕ್ಕೆ ಯಾವುದೇ ನಿರ್ಬಂಧವಿಲ್ಲ. ವಿಮಾನ, ಬಸ್​ ನಿಲ್ದಾಣದಿಂದ ಟ್ಯಾಕ್ಸಿ ಸೇವೆಗೆ ಅನುಮತಿ ನೀಡಲಾಗಿದೆ. ರಿಸರ್ವೇಷನ್​ ಟಿಕೆಟ್ ತೋರಿಸಿ ಪ್ರಯಾಣಿಕರು ಓಡಾಡಬಹುದಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ತಲೆಹೊಟ್ಟು ನಿವಾರಣೆಗೆ ಬೆಂಡೆಕಾಯಿ ಮದ್ದು, ತೂಕ ಇಳಿಕೆಗೂ ಸೈ ಈ ತರಕಾರ

Mon Dec 27 , 2021
ನಮ್ಮ ಪ್ರಕೃತಿಯಲ್ಲಿ ಸಿಗುವ ಎಲ್ಲಾ ರೀತಿಯ ತರಕಾರಿ, ಸೊಪ್ಪು ಮತ್ತು ಹಣ್ಣುಗಳಿಂದ ಆರೋಗ್ಯಕ್ಕೆ ಅನೇಕ ಪ್ರಯೋಜನಗಳು ಲಭಿಸುತ್ತವೆ. ನಮ್ಮ ದೇಹ ಟ್ರಿಲಿಯನ್ ಸಂಖ್ಯೆಯ ಜೀವಕೋಶಗಳಿಂದ ನಿರ್ಮಾಣವಾಗಿದೆ. ಆ ಎಲ್ಲಾ ಜೀವಕೋಶಗಳಿಗೆ ಪ್ರತಿದಿನ ಪೌಷ್ಠಿಕಾಂಶ, ಖನಿಜಾಂಶ, ವಿಟಮಿನ್, ಮಿನರಲ್ಸ್, ಪೋಷಕಾಂಶಗಳ ಅಗತ್ಯವಿರುತ್ತದೆ.ಹೀಗಾಗಿ ಪ್ರಕೃತಿಯಲ್ಲಿ ದೊರೆಯುವ ಬಹುತೇಕ ತರಕಾರಿಗಳು ನಮ್ಮ ದೇಹಕ್ಕೆ ಸಹಕಾರಿ. ಇಂಥಹ ತರಕಾರಿಯಲ್ಲಿ ಬೆಂಡೆಕಾಯಿ ಸಹ ಒಂದು. ಇನ್ನು ಬೆಂಡೆಕಾಯಿ ಎಂದರೆ ಕೆಲವರಿಗೆ ಅಷ್ಟಕಷ್ಟೆ. ಆದರೆ ಈ ತರಕಾರಿಯಿಂದಾಗುವ ಪ್ರಯೋಜನಗಳು […]

Advertisement

Wordpress Social Share Plugin powered by Ultimatelysocial