ಭದ್ರತೆಯ ವೆಚ್ಚವನ್ನು ಅಂಬಾನಿಯವರಿಗೆ ವಸೂಲು ಮಾಡುವಂತೆ ಆದೇಶ!

ಭದ್ರತೆಯ ವೆಚ್ಚವನ್ನು ಅಂಬಾನಿಯವರಿಗೆ ವಸೂಲು ಮಾಡುವಂತೆ ಆದೇಶ ವ ದೆಹಲಿ – ಮುಕೇಶ ಅಂಬಾನಿಯವರಿಗೆ ಕೇವಲ ಮಹಾರಾಷ್ಟ್ರ ಅಥವಾ ಭಾರತದಲ್ಲಿಯಷ್ಟೇ ಅಲ್ಲದೇ ಜಗತ್ತಿನಾದ್ಯಂತ ಅತ್ಯುನ್ನತ ದರ್ಜೆಯ ಅಂದರೆ ‘ಝಡ್ ಪ್ಲಸ್’ ಭದ್ರತೆ ಒದಗಿಸಬೇಕು, ಎಂದು ಸರ್ವೋಚ್ಚ ನ್ಯಾಯಾಲಯವು ತ್ರಿಪುರಾ ಉಚ್ಚ ನ್ಯಾಯಾಲಯದ ಒಂದು ಆದೇಶಕ್ಕೆ ಆವಾಹನೆ ನೀಡಿರುವ ಅರ್ಜಿಯ ಕುರಿತು ಆಲಿಕೆಯ ಸಮಯದಲ್ಲಿ ಹೇಳಿತು.

ಮುಂಬಯಿ ಮತ್ತು ಮಹಾರಾಷ್ಟ್ರದಲ್ಲಿಯೂ ಭದ್ರತೆ ಪೂರೈಸುವ ಜವಾಬ್ದಾರಿಯನ್ನು ರಾಜ್ಯ ಸರಕಾರದ್ದಾಗಿದ್ದರೆ, ಭಾರತಾದ್ಯಂತ ಮತ್ತು ಜಗತ್ತಿನಲ್ಲಿ ಎಲ್ಲೆಲ್ಲಿ ಅವರು ಹೋಗುವರೋ, ಆ ಎಲ್ಲ ಸ್ಥಳಗಳಲ್ಲಿ ಈ ಭದ್ರತೆಯನ್ನು ಪೂರೈಸುವ ಜವಾಬ್ದಾರಿ ಕೇಂದ್ರ ಗೃಹಸಚಿವಾಲಯದ್ದಾಗಿದೆ. ಕೇವಲ ಮುಂಬಯಿಗೆ ಸೀಮಿತಗೊಳಿಸಿ ಭದ್ರತೆ ಒದಗಿಸುವ ಜವಾಬ್ದಾರಿ ಕಡಿಮೆ ವೆಚ್ಚದ್ದಾಗಿದ್ದರೂ, ಜಗತ್ತಿನಾದ್ಯಂತ ಅತ್ಯುನ್ನತ ದರ್ಜೆಯ ಭದ್ರತೆ ಪೂರೈಸುವ ವೆಚ್ಚ ದೊಡ್ಡದಾಗಿದೆ. ಈ ವೆಚ್ಚವನ್ನು ಅಂಬಾನಿ ಕುಟುಂಬದವರು ಭರಿಸುವುದು ಎಂದೂ ಸಹ ನ್ಯಾಯಾಲಯವು ಆದೇಶದಲ್ಲಿ ನಮೂದಿಸಿದೆ.

ಮುಕೇಶ ಅಂಬಾನಿಯವರು, ಅವರ ಪತ್ನಿ ನೀತಾ ಅಂಬಾನಿ ಮತ್ತು ಅವರ ಮೂವರು ಮಕ್ಕಳಾದ ಆಕಾಶ, ಅನಂತ ಮತ್ತು ಇಶಾ ಇವರಿಗೆ ಬಂದಿರುವ ಬೆದರಿಕೆಯ ಪ್ರಕರಣದ ಮೂಲ ಕಾಗದ ಪತ್ರಗಳು ಮತ್ತು ದಾಖಲೆಗಳನ್ನು ಹಾಜರು ಪಡಿಸುವಂತೆ ತ್ರಿಪುರಾ ಉಚ್ಚ ನ್ಯಾಯಾಲಯವು ಇತ್ತೀಚೆಗಷ್ಟೇ ಕೇಂದ್ರ ಗೃಹಸಚಿವಾಲಯಕ್ಕೆ ಆದೇಶ ನೀಡಿತ್ತು. ಈ ಪ್ರಕರಣದಲ್ಲಿ ಕೇಂದ್ರದಿಂದ ವಿಶೇಷ ರಜಾ ಅವಧಿಯಲ್ಲಿ ದೂರು ದಾಖಲಿಸಲಾಗಿತ್ತು. ಅದಕ್ಕನುಗುಣವಾಗಿ ನ್ಯಾಯಾಲಯವು ತ್ರಿಪುರಾ ಉಚ್ಚ ನ್ಯಾಯಾಲಯ ಮತ್ತು ಸರ್ವೋಚ್ಚ ನ್ಯಾಯಾಲಯದ ಪ್ರಕರಣಗಳ ತೀರ್ಪು ನೀಡುತ್ತಾ, ಈ ವಿಷಯದಲ್ಲಿ ಅಂತಿಮ ಆದೇಶ ನೀಡಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಉಸಿರಾಟದ ಸೋಂಕಿನಿಂದ ಕಳೆದ 24 ಗಂಟೆಗಳಲ್ಲಿ ಏಳು ಮಕ್ಕಳು ಸಾವನ್ನಪ್ಪಿರುವ ಘಟನೆ ನಡೆದಿದೆ.

Thu Mar 2 , 2023
ಕೊಲ್ಕತ್ತಾ : ಪಶ್ಚಿಮ ಬಂಗಾಳದಲ್ಲಿ ಘೋರ ದುರಂತವೊಂದು ಸಂಭವಿಸಿದ್ದು, ಉಸಿರಾಟದ ಸೋಂಕಿನಿಂದ ಕಳೆದ 24 ಗಂಟೆಗಳಲ್ಲಿ ಏಳು ಮಕ್ಕಳು ಸಾವನ್ನಪ್ಪಿರುವ ಘಟನೆ ನಡೆದಿದೆ. ಪಶ್ಚಿಮ ಬಂಗಾಳದಲ್ಲಿ ಉಸಿರಾಟದ ಸೋಂಕಿನಿಂದ ಏಳು ಮಕ್ಕಳು ಸಾವನ್ನಪ್ಪಿದ್ದಾರೆ. ಹಿರಿಯ ಆರೋಗ್ಯ ಅಧಿಕಾರಿಯೊಬ್ಬರು ಈ ಮಾಹಿತಿಯನ್ನು ನೀಡಿದ್ದಾರೆ. ಆದಾಗ್ಯೂ, ವರ್ಷದ ಈ ಋತುವಿನಲ್ಲಿ ಇನ್ಫ್ಲುಯೆನ್ಸ ತರಹದ ಕಾಯಿಲೆಗಳು ಸಾಮಾನ್ಯವಾಗಿರುವುದರಿಂದ ಮತ್ತು ಪ್ರಾಣ ಕಳೆದುಕೊಂಡ ಮಕ್ಕಳು ಸಹ ಇತರ ಕಾಯಿಲೆಗಳಿಂದ ಬಳಲುತ್ತಿರುವುದರಿಂದ ‘ಭಯಪಡುವ ಅಗತ್ಯವಿಲ್ಲ’ ಎಂದು ಅವರು […]

Advertisement

Wordpress Social Share Plugin powered by Ultimatelysocial