ಪಿ. ಬಿ. ದೇಸಾಯಿ ವಿದ್ವಾಂಸ ಮತ್ತು ಸಂಶೋಧಕರು.

ಪಿ. ಬಿ. ದೇಸಾಯಿ ರಾಯಚೂರು ಜಿಲ್ಲೆಯ ಕೊಪ್ಪಳ ಕೊಪ್ಪಳ ಜಿಲ್ಲೆಯ ಕಿನ್ನಾಳದಲ್ಲಿ 1910ರ ಡಿಸೆಂಬರ್ 24ರಂದು ಜನಿಸಿದರು. ತಂದೆ ಭೀಮರಾವ್. ತಾಯಿ ಭಾಗೀರಥಿ ಬಾಯಿ. ಪ್ರಾಥಮಿಕ ಶಿಕ್ಷಣ ಸೇಡಂನಲ್ಲಿ, ಸೆಕೆಂಡರಿ ಶಿಕ್ಷಣ ಗುಲಬರ್ಗಾದಲ್ಲಿ ನಡೆಯಿತು. ಮುಂಬಯಿ ವಿಶ್ವವಿದ್ಯಾಲಯದ ಎಂಟ್ರೆನ್ಸ್ ಪರೀಕ್ಷೆಯ ನಂತರ ಅನಾರೋಗ್ಯಕ್ಕೆ ತುತ್ತಾಗಿ ಆರು ವರ್ಷ ಕಾಲ ವಿದ್ಯಾಭ್ಯಾಸಕ್ಕೆ ಧಕ್ಕೆಯಾಯಿತು. 1935ರಲ್ಲಿ ಧಾರವಾಡದ ಕರ್ನಾಟಕ ಕಾಲೇಜಿನಿಂದ ಸಂಸ್ಕೃತ ಆನರ್ಸ್ ಪದವಿ, 1937ರಲ್ಲಿ ಸಂಸ್ಕೃತ ಹಾಗೂ ಕನ್ನಡದಲ್ಲಿ ಎಂ.ಎ. ಪದವಿ ಪಡೆದರು.
ಪಿ. ಬಿ. ದೇಸಾಯಿ ಊರಿನ ಸುತ್ತಮುತ್ತ ಇದ್ದ ಶಾಸನಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡಿದ್ದರು. ಅವರಿಗೆ ಕೇಂದ್ರ ಸರಕಾರದ ಪುರಾತತ್ತ್ವ ಇಲಾಖೆಯಲ್ಲಿ ಶಾಸನ ಸಹಾಯಕ ಸಂಶೋಧಕರ ಹುದ್ದೆ ದೊರೆಯಿತು. ಉದಕಮಂಡಲದಲ್ಲಿ ಶಾಸನ ಶಾಸ್ತ್ರವನ್ನು ಆಳವಾಗಿ ಅಭ್ಯಸಿಸಿ 17 ವರ್ಷ ಇಲಾಖೆಗಾಗಿ ದುಡಿದರು. ವಿಜಯನಗರದ ಆರನೆಯ ಶತಮಾನೋತ್ಸವ ಸಂದರ್ಭದಲ್ಲಿ ಇವರು ರಚಿಸಿದ ಗ್ರಂಥ ‘ವಿಜಯನಗರ ಸಾಮ್ರಾಜ್ಯ’. ದಕ್ಷಿಣ ಭಾರತದ ಶಾಸನ ಸಂಪುಟಗಳ ಪೈಕಿ 11ನೆಯ ಸಂಪುಟದ ಮೊದಲಭಾಗ ಮತ್ತು 15ನೆಯ ಸಂಪುಟವನ್ನು ಸಂಪಾದಿಸಿದರು. ಶಾಸನಗಳಿಗೆ ಸಂಬಂಧಿಸಿದಂತೆ ಇವರು ರಚಿಸಿದ ಗ್ರಂಥ ‘ಶಾಸನ ಪರಿಚಯ’. ಇದಕ್ಕೆ ಮೈಸೂರು ಸರಕಾರದ ಪುರಸ್ಕಾರ ಸಂದಿತು. ಹೈದರಾಬಾದ್ ಸರಕಾರಕ್ಕಾಗಿ ಸಂಪಾದಿಸಿದ ಗ್ರಂಥಗಳು ‘ಎ ಕಾರ್ಪಸ್ ಆಫ್ ಕನ್ನಡ ಇನ್‌ಸ್ಕ್ರಿಪ್‌ಷನ್ಸ್ ಇನ್ ಹೈದರಾಬಾದ್’ ಮತ್ತು ‘ಕನ್ನಡ ಇನ್‌ಸ್ಕ್ರಿಪ್‌ಷನ್ಸ್ ಆಫ್ ಆಂಧ್ರ ಪ್ರದೇಶ್ ಮತ್ತು ಸೆಲೆಕ್ಟೆಟೆಡ್ ಇನ್‌ಸ್ಕ್ರಿಪ್‌ಷನ್ಸ್ ಆಫ್ ಆಂಧ್ರ ಪ್ರದೇಶ್‌’ ಎಂಬ ಗ್ರಂಥಗಳು.
ಪಿ. ಬಿ. ದೇಸಾಯಿ 1957ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪ್ರಾಚೀನ ಭಾರತ ಇತಿಹಾಸ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ರೀಡರ್ ಆಗಿ ನೇಮಕಗೊಂಡು 1962ರಲ್ಲಿ ಅದರ ಮುಖ್ಯಸ್ಥರಾಗಿ, ನಿರ್ದೇಶಕರಾಗಿ ದುಡಿದರು. ಶಾಸನ ಶಾಸ್ತ್ರವನ್ನು ವೈಜ್ಞಾನಿಕವಾಗಿ ಬೋಧಿಸಲು ಶಾಸನ ಶಾಸ್ತ್ರದ ಡಿಪ್ಲೊಮ ತರಗತಿಗಳನ್ನು ಪ್ರಾರಂಭಿಸಿದರು. ‘ಜೈನಿಸಮ್ ಇನ್ ಸೌತ್ ಇಂಡಿಯಾ ಅಂಡ್ ಸಮ್ ಜೈನ್ ಎಪಿಗ್ರಾಫ್ಸ್’ ಎಂಬ ಮಹಾ ಪ್ರಬಂಧಕ್ಕೆ ಕರ್ನಾಟಕ ವಿಶ್ವವಿದ್ಯಾಲಯದಿಂದ 1961ರಲ್ಲಿ ಡಿ.ಲಿಟ್. ಪದವಿ ಸಂದಿತು. ಸಂಶೋಧನ ಸಂಸ್ಥೆಯ ನಿರ್ದೇಶಕರಾದ ನಂತರ ಪುರಾತತ್ವ ಗ್ರಂಥಾಲಯವನ್ನು ರೂಪಿಸಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

Please follow and like us:

Leave a Reply

Your email address will not be published. Required fields are marked *

Next Post

ಭಾರತ ಟಿ20 ತಂಡಕ್ಕೆ ನೂತನ ನಾಯಕ, ಡಿಸೆಂಬರ್ 27ರಂದು ಅಧಿಕೃತ ಘೋಷಣೆ

Mon Dec 26 , 2022
ಬಿಸಿಸಿಐ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯಗೆ ಹೊಸ ವರ್ಷಕ್ಕೆ ಭರ್ಜರಿ ಉಡುಗೊರೆ ನೀಡಲಿದೆ. ಹಾರ್ದಿಕ್ ಪಾಂಡ್ಯ ಭಾರತ ಟಿ20 ತಂಡದ ನಾಯಕತ್ವ ವಹಿಸಿಕೊಳ್ಳಲು ಸಜ್ಜಾಗಿದ್ದು, ಡಿಸೆಂಬರ್ 27ರಂದು ಅಧಿಕೃತವಾಗಿ ಘೋಷಣೆ ಮಾಡಲಿದೆ.ವಜಾಗೊಂಡಿರುವ ಚೇತನ್ ಶರ್ಮಾ ನೇತೃತ್ವದ ಆಯ್ಕೆ ಸಮಿತಿ ಮಂಗಳವಾರ ಶ್ರೀಲಂಕಾ ವಿರುದ್ಧ ಟಿ20 ಮತ್ತು ಏಕದಿನ ಸರಣಿಗೆ ಭಾರತ ತಂಡವನ್ನು ಪ್ರಕಟಿಸಲು ಸಿದ್ಧವಾಗಿದೆ.ರೋಹಿತ್ ಶರ್ಮಾ ಟಿ20 ನಾಯಕತ್ವದಿಂದ ಕೆಳಗಿಳಿಯಲಿದ್ದು, ಹಾರ್ದಿಕ್ ಪಾಂಡ್ಯ ಟಿ20 ತಂಡದ ನಾಯಕನಾಗಲಿದ್ದಾರೆ. 2024ರ ವರೆಗೆ […]

Advertisement

Wordpress Social Share Plugin powered by Ultimatelysocial