ಭಾರತದಲ್ಲಿ ಬಹುಬೇಗನೆ ಜನಪ್ರಿಯತೆ ಪಡೆದುಕೊಂಡಿರುವ ಆಪ್ ಗಳಲ್ಲಿ ಟಿಕ್ ಟಾಕ್ ಮುಂಚೂಣಿಯಲ್ಲಿದೆ. ಚೀನಾ ಮೂಲದ ಈ ಆಪ್ ಅನ್ನು ರಿಮೂವ್ ಮಾಡುವ ಅಭಿಯಾನ ಕೂಡ ನಡೆಸಲಾಗಿತ್ತು. ಇದೀಗ ಟಿಕ್ ಟಾಕ್ ಚೀನಾ ವಿರುದ್ಧದ ಪೋಸ್ಟ್ ಗಳಿಗೆ ಕೊಕ್ ನೀಡುತ್ತಿದೆಯಾ ಎಂಬ ಪ್ರಶ್ನೆ ಈಗ ಮೂಡಿದೆ. ಇದಕ್ಕೆ ಪುಷ್ಟಿ ನೀಡುವಂತೆ ಖ್ಯಾತ ಕಮೆಡಿಯನ್ ಸಲೋನಿ ಗೌರ್ ಟಿಕ್ ಟಾಕ್ ನಲ್ಲಿ ಹಾಕಿದ್ದ ಪೋಸ್ಟ್ ಒಂದನ್ನು ತೆಗೆದು ಹಾಕಲಾಗಿದೆ. ಈ ಕುರಿತು ಸಾಮಾಜಿಕ […]

ಕೊರೊನಾ ವೈರಸ್ ಸೋಂಕು ಹರಡುತ್ತಿರುವುದನ್ನು ನಿಯಂತ್ರಿಸಲು ದೇವಾಲಯಗಳು ಸ್ಥಗಿತಗೊಂಡಿದ್ದವು. ಆದರೆ ಇತ್ತೀಚಿಗಷ್ಟೇ ಕೇಂದ್ರವು ಲಾಕ್ ಡೌನ್ ಸಡಿಲಗೊಳಿಸಿ “ಅನ್ಲಾಕ್ 1.0” ಅನ್ನು ಘೋಷಿಸಿತು, ಹಾಗೇ ಲಾಕ್‌ಡೌನ್‌ನಿಂದ ಅದರ ಶ್ರೇಣೀಕೃತ ನಿರ್ಗಮನ ಯೋಜನೆ, ಮತ್ತು ಜೂನ್ 8 ರಿಂದ ದೇವಾಲಯಗಳು ಮತ್ತು ಇತರ ಧಾರ್ಮಿಕ ಪೂಜಾ ಸ್ಥಳಗಳನ್ನು ತೆರೆಯಲು ಅವಕಾಶ ಮಾಡಿಕೊಟ್ಟಿತು. ಈ ಹಿನ್ನೆಲೆಯಲ್ಲಿ ಭಾರತದ ಬಹುದೊಡ್ಡ ದೇವಾಲಯಗಳಲ್ಲಿ ಒಂದಾದ ಕೇರಳದ ಅಯ್ಯಪ್ಪ ಸ್ವಾಮಿ ದೇವಸ್ಥಾನ ಶಬರಿಮಲೆಯು ಜೂನ್ 9 ರಿಂದ ಕಾರ್ಯನಿರ್ವಹಿಸಲಿದೆ […]

ಬೆಳಗಾವಿ : ರಾಜ್ಯ ಸರ್ಕಾರವು ಜೂನ್ 8 ರಿಂದ ದೇವಾಲಯಗಳನ್ನು ತೆರೆಯಲು ಅನುಮತಿ ನೀಡಿದೆ. ಆದರೆ ಉತ್ತರ ಕರ್ನಾಟಕದ ಬೆಳಗಾವಿಯ ಸವದತ್ತಿ ಶ್ರೀ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನ ಸದ್ಯಕ್ಕೆ ತೆರೆಯಲಾಗುವುದಿಲ್ಲ ಎಂದು ದೇವಸ್ಥಾನದ ಸಿಇಒ ರವಿ ಕೋಟಾರಗಸ್ತಿ ಮಾಹಿತಿ ನೀಡಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಅವರು, ಜೂನ್ 30 ರವರೆಗೂ ಸಾರ್ವಜನಿಕರಿಗೆ ಯಲ್ಲಮ್ಮ ದೇವಸ್ಥಾನ ಪ್ರವೇಶಕ್ಕೆ ಅವಕಾಶವಿಲ್ಲ. ದೇವಸ್ಥಾನಕ್ಕೆ ಮಹಾರಾಷ್ಟ್ರ ಸೇರಿದಂತೆ ಅನ್ಯ ರಾಜ್ಯದ ಭಕ್ತರು ಹೆಚ್ಚಿನ […]

ಉತ್ತರ ಕರ್ನಾಟಕದ ಜೀವನಾಡಿ ಆಲಮಟ್ಟಿ ಜಲಾಶಯಕ್ಕೆ ಒಳಹರಿವು ಆರಂಭಗೊAಡಿದೆ. ಮಹಾರಾಷ್ಟ್ರದಲ್ಲಿ ಹೆಚ್ಚು ಮಳೆಯಾಗಿರುವ ಕಾರಣ ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ಹೆಚ್ಚುವರಿ ನೀರು ಬಿಟ್ಟಿರುವ ಪರಿಣಾಮ ನೀರಿನ ಒಳಹರಿವು ಜೂನ್ ಮೊದಲ ವಾರದಲ್ಲೇ ಆರಂಭಗೊAಡಿದೆ. ಈಗಾಗಲೇ ೧೨.೭೬೧ ಕ್ಯೂಸೆಕ್ ನೀರು ಜಲಾಶಯಕ್ಕೆ ಹರಿದು ಬಂದಿದೆ. ಇದರ ಜತೆಗೆ ಹಿಪ್ಪರಗಿ ಜಲಾಶಯದಿಂದ ೧೦ ಸಾವಿರ ಕ್ಯೂಸೆಕ್ ನೀರು ಬಿಟ್ಟಿರುವ ಕಾರಣ ಒಳಹರಿವು ಮತ್ತಷ್ಟು ಹೆಚ್ಚಾಗಿದೆ. ಮಹಾರಾಷ್ಟ್ರದ ನೀರು ಕರ್ನಾಟಕಕ್ಕೆ ಬಂದು ಸೇರುವ […]

ಯಲಹಂಕದ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಕಂದಾಯ ಸಚಿವ  ಆರ್. ಅಶೋಕ,  ಕಂದಾಯ ಇಲಾಖೆ ವತಿಯಿಂದ ಬೆಂಗಳೂರಿನಲ್ಲಿಂದು ಏರ್ಪಡಿಸಿದ್ದ ನಗರ ಪ್ರದೇಶ ಪ್ರವಾಹ ನಿರ್ವಹಣೆ ಸನ್ನದ್ಧತೆ ಕಾರ್ಯಾಗಾರವನ್ನು ಉದ್ಘಾಟಿಸಿ, ಇತ್ತೀಚಿನ ವರ್ಷಗಳಲ್ಲಿ ಪ್ರಪಂಚದಾದ್ಯಂತ ನೈಸರ್ಗಿಕ ವಿಕೋಪಗಳು ಪದೇ ಪದೇ  ಸಂಭವಿಸುತ್ತಿದ್ದು, ಈ ನೈಸರ್ಗಿಕ ವಿಕೋಪಗಳಲ್ಲಿ ನಗರ ಪ್ರವಾಹವೂ ಒಂದು. ತೀವ್ರತರ ಭೂ ಬಳಕೆಯಿಂದಾಗಿ ಪ್ರಮುಖ ನಗರ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಪ್ರತಿ  ಮಳೆಗಾಲದಲ್ಲೂ ಮರುಕಳಿಸುತ್ತಿರುವುದನ್ನು […]

ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್, ಆನ್ ಲೈನ್ ಶಿಕ್ಷಣ ಇದೀಗ ಒಂದು ಗೀಳಾಗಿದೆ. ಮಕ್ಕಳ ಆನ್ ಲೈನ್ ಶಿಕ್ಷಣಕ್ಕೆ ವಿರೋಧವಿದೆ. ಹೀಗಿದ್ದೂ ಜೂನ್ 8ರ ಸೋಮವಾರ ಆನ್ ಲೈನ್ ಶಿಕ್ಷಣದ ಬಗ್ಗೆ ಸಭೆ ನಡೆಸಿ ಚರ್ಚೆ ಕೈಗೊಳ್ಳಲಾಗುತ್ತದೆ ಎಂಬುದಾಗಿ ತಿಳಿಸಿದ್ದಾರೆ. ಈ ಮೂಲಕ ಮಹತ್ವದ ನಿರ್ಧಾರ ಜೂನ್ 8ರಂದು ಆನ್ ಲೈನ್ ಶಿಕ್ಷಣದ ಬಗ್ಗೆ ಹೊರ ಬರಲಿದೆ. ರಾಜ್ಯದಲ್ಲಿ ಶಾಲೆಗಳು […]

ಕೋವಿಡ್-19 ಲಾಕ್‌ಡೌನ್‌ ಸಂದರ್ಭದಲ್ಲಿ ಇಡೀ ದೇಶವೇ ಸಮಸ್ಯೆಯಲ್ಲಿ ಮುಳುಗೇಳುತ್ತಿರುವಂತಹ ಹೊತ್ತಿನಲ್ಲಿ ಅತ್ತ ದೂರದ ನಿರ್ಜನ ಅರಣ್ಯ ಪ್ರದೇಶಗಳಲ್ಲಿ ವನ್ಯಜೀವಿಗಳ ಮಾರಣಹೋಮ ಎಗ್ಗಿಲ್ಲದಂತೆ ನಡೆದಿದೆ. ಲಾಕ್ ಡೌನ್ ಆರಂಭವಾಗುವ ಹಿಂದಿನ ಆರು ವಾರ ಫೆಬ್ರವರಿ.10 ರಿಂದ ಮಾರ್ಚ್.22 ಮತ್ತು ಲಾಕ್ ಡೌನ್ ಆರಂಭವಾದ ನಂತರ ಆರು ವಾರ ಮಾರ್ಚ್.23 ರಿಂದ ಮೇ.3 ರ ವರೆಗಿನ ಸಮಯದಲ್ಲಿ ವನ್ಯಜೀವಿಗಳ ಬಗ್ಗೆ ಅಧ್ಯಯನ ನಡೆಸಲಾಗಿದೆ. ಆ ಅಧ್ಯಯನದಲ್ಲಿ ಕಂಡುಬಂದಿರುವ ಅಂಕಿ-ಅಂಶಗಳ ಪ್ರಕಾರ, ಲಾಕ್‌ಡೌನ್‌ ಅವಧಿಯಲ್ಲಿ […]

ಮೈಸೂರು: ಮೈಸೂರಿನ ಅಗ್ರಹಾರದ ರಾಮಾನುಜ ರಸ್ತೆ ಮನೆಯೊಂದರ ಬಳಿ ಹಾರುವ ಅಪರೂಪದ ಹಾವೊಂದು ಕಾಣಿಸಿಕೊಂಡಿದೆ. ಎರಡು ದಿನಗಳ ಹಿಂದೆ ರಾಮಾನುಜ ರಸ್ತೆಯಲ್ಲಿರುವ ವೆಂಕಟರಮಣ ಎಂಬುವರ ಮನೆ ಬಳಿ ಈ ಅಪರೂಪದ ಹಾವು ಕಾಣಿಸಿಕೊಂಡಿದೆ. ಮರದಿಂದ ಹಾರಿ ನೆಲಕ್ಕೆ ಬಿದ್ದು ಮತ್ತೆ ನೆಲದಿಂದ ಹಾರಿ ಮನೆಯ ಬಾಗಿಲಿಗೆ ಹಾವು ಜೋತು ಹಾಕಿಕೊಂಡಿದೆ. ಹಾರುವ ಹಾವನ್ನು ಕಂಡು‌ ಮನೆ ಮಂದಿ ಚಕಿತರಾಗಿದ್ದರು. ಬಳಿಕ ಹಾವು ಮನೆಯ ಪಕ್ಕದಲ್ಲಿ ಗಿಡಗಳ ಬಳಿಗೆ ಹೋಗಿದೆ. ಸಹಜವಾಗಿ […]

ಹಾವುಗಳ ಪ್ರಧಾನ ಆಹಾರ ಎನಿಸಿಕೊಂಡಿದ್ದು ಕಪ್ಪೆ. ಆದರೆ ಕಪ್ಪೆಯೊಂದು ಹಾವಿನ ಮೇಲೆ ಕುಳಿತು ಸವಾರಿ ಮಾಡಿರುವ ವಿಡಿಯೋ ಇದೀಗ ವೈರಲ್ ಆಗಿದ್ದು ಸೋಜಿಗ ಎನಿಸಿದೆ. ಹಾವಿನ ವಿಡಿಯೋಗಳು ಮತ್ತು ಹಾವು – ಇತರ ಪ್ರಾಣಿಗಳ ನಡುವಿನ ಕಾಳಗದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ವಿಚಾರ. ಆದರೆ ಹಾವಿನ ಮೇಲೆ ಕಪ್ಪೆ ಕುಳಿತು ಸವಾರಿ ಮಾಡುವ ಅಪರೂಪದ ವಿಡಿಯೋ ನೆಟ್ಟಿಗರನ್ನು ರಂಜಿಸಿದೆ. ಭಾರತೀಯ ಅರಣ್ಯ ಸೇವೆ […]

ಬೆಂಗಳೂರಿನ ಎವಿಬಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ನರಸಿಪುರ ತಾಲೂಕಿನ ಮಲಿಯೂರು ಗ್ರಾಮದ ನಿವಾಸಿಗಳಾ ಮಹೇಶ್ ಮತ್ತು ಮಾದೇಶ್ ಬೈಕ್ ನಲ್ಲಿ ಊರಿಗೆ ತೆರಳುತ್ತಿದ್ದರು ಇದೇ ಸಮಯ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಬುಗತಗಹಳ್ಳಿ ಗ್ರಾಮದ ರೇಷ್ಮೆ ಮಾರುಕಟ್ಟೆ ಬಳಿ ಅಪರಿಚಿತ ವಾಹನವೊಂದು ಬೈಕಿಗೆ ಡಿಕ್ಕಿ ಹೊಡೆದಿರುವ ಪರಿಣಾಮ ಯುವಕರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ನಂತರ ವಾಹನ ಚಾಲಕ ವಾಹನದ ಸಮೇತ ಪರಾರಿಯಾಗಿದ್ದಾರೆ. ವಿಷಯ ತಿಳಿದ ನಂತರ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ […]

Advertisement

Wordpress Social Share Plugin powered by Ultimatelysocial