ಲಾಕ್‌ಡೌನ್ ಹಿನ್ನಲೆ ಕೆಲವು ಉದ್ಯಮಗಳು ಸ್ಥಗೀತಗೊಂಡಿದ್ದು, ಲಾಕ್‌ಡೌನ್ ಸಡಿಲಿಕೆ ನಂತರ ಕೇಂದ್ರ ಸರ್ಕಾರದ ಮಾರ್ಗಸೂಚಿ ಅನ್ವಯ, ಕೆಂಪು ವಲಯದಲ್ಲಿರುವ ನಿರ್ಬಂಧಿತ ಪ್ರದೇಶ ಬಿಟ್ಟು ಉಳಿದ ಕಡೆಗಳಲ್ಲಿ ಗಾರ್ಮೆಂಟ್ಸ್ ಆರಂಭಿಸಲು ರಾಜ್ಯ ಸರ್ಕಾರ ಅನುಮತಿ ನೀಡಿದೆ. ಅಧಿಕೃತವಾಗಿ ಆಮದು ರಫ್ತು ಕೋಡ್ ಹೊಂದಿರುವ ಮತ್ತು ಉಡುಪು ರಫ್ತು ಉತ್ತೇಜನ ಮಂಡಳಿಯಲ್ಲಿ ನೊಂದಣಿಯಾಗಿರುವ ಘಟಕಗಳನ್ನು ಕಾರ್ಯಾರಂಭಿಸಬಹುದು.

ಸದ್ಯದ ಮಟ್ಟಿಗೆ ಕನ್ನಡದ ಬಹುಬೇಡಿಕೆಯ ನಟಿ ಡಿಂಪಲ್ ಕ್ವೀನ್ ರಚಿತಾ ರಾಮ್. ೨೦೦೭ರಲ್ಲಿ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಅರಸಿ ಸೀರಿಯಲ್ ಮೂಲಕ ಕಿರುತೆರೆಗೆ ಕಾಲಿಟ್ಟ ಇವರು ಇವತ್ತಿಗೆ ಕನ್ನಡದ ಭರವಸಸೆಯ ಹಾಗು ಬೇಡಿಕೆಯ ನಟಿಯೂ ಹೌದು. ಕನ್ನಡದ ಬಹುತೇಕ ಎಲ್ಲಾ ನಟರ ಜೊತೆಯೂ ಅಭಿನಯಿಸಿರುವ ರಚಿತಾ ರಾಮ್ ಬುಲ್ ಬುಲ್ ಸಿನಿಮಾದ ನಂತರ ಹಿಂತಿರುಗಿ ನೋಡಿದ್ದು ಇಲ್ಲ.೨೦೧೯ರಲ್ಲಿ ರಚಿತಾರಾಮ್ ಅವರ ಅಭಿನಯದ ೮ ಸಿನಿಮಾಗಳು ಬಿಡುಗಡೆಯಾಗಿದ್ದು ಬಹುತೇಕ ಎಲ್ಲಾ ಸಿನಿಮಾಗಳು […]

ಕೊರೊನಾ ಲಾಕ್ ಡೌನ್ ಕಾರಣದಿಂದ ಸಂಕಷ್ಟ ಅನುಭವಿಸಿರುವ ಶ್ರಮಿಕ ವರ್ಗಕ್ಕೆ ಸರಕಾರ ಘೋಷಿಸಿರುವ 1610 ಕೋಟಿ ರೂ. ಪ್ಯಾಕೇಜ್ ದೋಖಾ ಪ್ರಾಜೆಕ್ಟ್ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ನೆರೆ ಹಾವಳಿಯಲ್ಲಿ ಮನೆ ಕಳೆದುಕೊಂಡವರಿಗೆ ಐದು ಲಕ್ಷ ಕೊಡುತ್ತೇವೆ ಎಂದರು. ಆದರೆ ಎಷ್ಟು ಜನರಿಗೆ ಎಷ್ಟು ಹಣ ನೀಡಿದ್ದಾರೆ ಎಂದು ಪ್ರಶ್ನಿಸಿದರು. ನೆರೆ ಪರಿಹಾರದಲ್ಲೂ ಜನರಿಗೆ ಮೋಸವಾಗಿದೆ. ಅದೇ ಈಗಲೂ […]

ಅಮ್ಮ ಎಂದರೆ ಪದಗಳಲ್ಲಿ ವರ್ಣಿಸಲಾಗದ ಪ್ರೀತಿಯ ಗಣಿ, ಅಮ್ಮ ಅಂದ್ರೆ ಆಕಾಶ, ಆಕೆಯ ಪ್ರೀತಿಯ ಮುಂದೆ ಮತ್ತೆಲ್ಲವೂ ನಗಣ್ಯ. ಪ್ರೀತಿ ವ್ಯಕ್ತಿಯ ಹಿಂದೆ ಅಮ್ಮ ಅನ್ನೋ ಪ್ರೇರಕ ಶಕ್ತಿ ಇದ್ದೇ ಇರುತ್ತೆ. ಇದೀಗ ಬಾಲಿವುಡ್ ತಾರೆಯರು ತಮ್ಮ ಅಮ್ಮನ ಪ್ರೀತಿಯ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊAಡು ಶುಭಾಶಯ ಹೇಳಿದ್ದಾರೆ. ಅಮ್ಮಂದಿರ ದಿನಾಚರಣೆ ಪ್ರಯುಕ್ತ ಸೋನಮ್ ಕಪೂರ್, ಅನನ್ಯಾ ಪಾಂಡೆ, ಕಂಗನಾ ರಾವತ್, ಇಶಾನ್ ಖಟ್ಟರ್, ಸಾರಾ ಅಲಿ ಖಾನ್, ಆಯುಷ್ಮಾನ್ […]

ಸೆಕ್ಸಿಲುಕ್, ಮಾದಕ ಮೈಮಾಟ ಅಂದ್ರೆ ನೆನಪಾಗೋದೆ ಬಬ್ಲಿ ಬ್ಯೂಟಿ ನಮಿತಾ. ಇಂದು ಕಾಲಿವುಡ್, ಸ್ಯಾಂಡಲ್‍ವುಡ್ ನಟಿ ನಮಿತಾ ಹುಟ್ಟಿದ ದಿನ. ಗುಜರಾತ್ ರಾಜ್ಯದ ಸುರತ್ ನಲ್ಲಿ ಜನಿಸಿದ ನಮಿತಾ ೨೦೦೨ರಲ್ಲಿ ತೆಲುಗಿನ ‘ಸ್ವತಂ’ ಚಿತ್ರದ ಮೂಲಕ ಬಣ್ಣದ ಬದುಕಿಗೆ ಕಾಲಿಟ್ಟರು. ರವಿಚಂದ್ರನ್ ಅಭಿನಯದ ನೀಲಕಂಠದಲ್ಲಿ ಅಭಿನಯಿಸುವ ಮೂಲಕ ಸ್ಯಾಂಡಲ್‍ವುಡ್‍ಗೆ ಎಂಟ್ರಿ ಕೊಟ್ಟ ಬಳಿಕ ರ‍್ಶನ್ ಜೊತೆಗೆ ಇಂದ್ರ ಚಿತ್ರದಲ್ಲೂ ಅಭಿನಯಿಸಿದ್ದಾರೆ. ಹೂ, ನಮಿತಾ ಐ ಲವ್ ಯೂ, ಬೆಂಕಿ ಬಿರುಗಾಳಿಯಲ್ಲೂ […]

ಬೆಂಗಳೂರು: ರಾಜ್ಯಕ್ಕೆ ಮರಳಲಿಚ್ಚಿಸುವ ಕನ್ನಡಿಗರಿಗೆ ಸರ್ಕಾರದಿಂದ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಆಗ್ರಹಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಅನ್ಯಾಯವಾಗಿದೆ ಜನ ಸತ್ತ ಮೇಲೆ ಪರಿಹಾರ ಕೊಡುವುದು ಸಾಧನೆಯಲ್ಲ. ಇರುವಾಗಲೇ ಬದುಕು ಕಲ್ಪಿಸುವುದು ಸರ್ಕಾರದ ಕರ್ತವ್ಯ. ವಲಸೆ ಕಾರ್ಮಿಕರ ವಿಚಾರದಲ್ಲಿ ಮಾನವೀಯತೆಯಿಂದ ವರ್ತಿಸಿ ಲಾಕ್​ಡೌನ್ ಅವಧಿಯಲ್ಲಿ ದುಡಿಯುವ ಕೈಗಳಿಗೆ ಕೆಲಸ ಇಲ್ಲದೆ ಸರ್ಕಾರ ಅಥವಾ ದಾನಿಗಳು ನೀಡುವ ದವಸ, ಧಾನ್ಯಕ್ಕೆ ಕೈಯೊಡ್ಡಲು ಮನಸ್ಸು ಒಪ್ಪದೆ ಸಾವಿರಾರು ಸ್ವಾಭಿಮಾನಿ ಕಾರ್ಮಿಕರು ತಮ್ಮ ತಮ್ಮ […]

ಗ್ರೀನ್‌ ಜೋನ್‌ನಲ್ಲಿದ್ದ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗಕ್ಕೂ ಡೆಡ್ಲಿ ವೈರಸ್‌ ಕೊರೋನಾ ಕಾಲಿಟ್ಟಿದ್ದು, ಎಂಟು ಮಂದಿಗೆ ಕೊರೊನಾ ಸೊಂಕು ಧೃಡಪಟ್ಟಿದೆ ಎಂದು  ಸಚಿವ  ಕೆ ಎಸ್ ಈಶ್ವರಪ್ಪ  ಹೇಳಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಅವರು,  8 ಮಂದಿಗೆ ಕೊರೊನಾ ವೈರಸ್‌ ಇರುವುದು  ಧೃಡಪಟ್ಟಿದೆ. ಜಿಲ್ಲೆಯ ಶಿಕಾರಿಪುರ ಮೂಲದ 8 ಮಂದಿ ಹಾಗೂ  ತೀರ್ಥಹಳ್ಳಿಯ ಒಬ್ಬರು ತಬ್ಲಿಘಿಗಳು ಗುಜರಾತ್‍ನ ಅಹಮದಾಬಾದ್‍ನಿಂದ ಬೆಳಗಾವಿ ಗಡಿ ಮೂಲಕ ಶಿವಮೊಗ್ಗಕ್ಕೆ ವಾಪಸ್ ಬಂದಿದ್ದರು, ಇದೇ ವೇಳೆ ಅವರನ್ನು ಶಿವಮೊಗ್ಗದ […]

ಕೊರೊನಾ ತಡೆಯುವಲ್ಲಿ ನಮ್ಮ  ರಾಜ್ಯ 2ನೇ ಸ್ಥಾನದಲ್ಲಿದೆ. ಕೋವಿಡ್ ತಡೆಗೆ ಶ್ರಮಿಸುತ್ತಿರುವ ಸಚಿವರು ಜನಪ್ರತಿನಿಧಿಗಳು,ಸರ್ಕಾರದ ಅಧಿಕಾರಿಗಳು, ಸಿಬ್ಬಂದಿ ವರ್ಗ,ವೈದ್ಯರು,ನರ್ಸ್,ಸಿಬ್ಬಂದಿ ಆರೋಗ್ಯ ಕಾರ್ಯಕರ್ತರು,ಪೊಲೀಸರು, ಪೌರ ಕಾರ್ಮಿಕರು,ಚಾಲಕರು, ಆಶಾ ಅಂಗನವಾಡಿ ಕಾರ್ಯಕರ್ತೆಯರ  ಕೆಲಸದಿಂದ ಸೋಂಕು ಹರಡುವಿಕೆ ರಾಜ್ಯದಲ್ಲಿ ಹತೋಟಿಯಲ್ಲಿದೆ. ಇವರೆಲ್ಲ ತಮ್ಮ ಜೀವ ಪಣಕ್ಕಿಟ್ಟು ದುಡಿಯುತ್ತಿದ್ದಾರೆ ಎಂದು  ಕೊರೊನಾ ವಾರಿಯರ್ಸ್ ಗೆ ಸಿಎಂ  ಧನ್ಯವಾದ ಸಲ್ಲಿಸಿದ್ದಾರೆ.

ಕರೋನವೈರಸ್ ನಿರ್ಬಂಧದಿಂದಾಗಿ ನೇಪಾಳದಲ್ಲಿ ಸಿಲುಕಿರುವ ಚೀನಾದ ಪ್ರಜೆಗಳ ಗುಂಪು ಕಠ್ಮಂಡುವಿನಲ್ಲಿರುವ ಪ್ರಧಾನ ಮಂತ್ರಿ ಕಚೇರಿಯನ್ನು ತಲುಪುವ ಪ್ರಯತ್ನದಲ್ಲಿ ಪೊಲೀಸರೊಂದಿಗೆ ಘರ್ಷಣೆ ನಡೆಸಿತು. ಅವರಲ್ಲಿ 45 ಜನರನ್ನು ಬಂಧಿಸಲಾಗಿದೆ ಎಂದು ನೇಪಾಳ ಪೊಲೀಸರು ತಿಳಿಸಿದ್ದಾರೆ.  “ಪ್ರತಿಭಟನಾಕಾರರು ನಿಷೇಧಿತ ವಲಯಕ್ಕೆ ಪ್ರವೇಶಿಸಿದಾಗ ಘರ್ಷಣೆಯಲ್ಲಿ ಉಪ ಪೊಲೀಸ್ ವರಿಷ್ಠಾಧಿಕಾರಿ ಹರಿಬಹಾದೂರ್ ಬಾಸ್ನೆಟ್ ಸೇರಿದಂತೆ ನಾಲ್ವರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ” ಎಂದು ನೇಪಾಳ ಪೊಲೀಸ್ ವರಿಷ್ಠಾಧಿಕಾರಿ ಸೋಮಂದ್ರ ಸಿಂಗ್ ರಾಥೋಡ್ ದೂರವಾಣಿ ಮೂಲಕ ಎಎನ್‌ಐಗೆ ತಿಳಿಸಿದ್ದಾರೆ. […]

ಬಾಗಲಕೋಟೆಯಲ್ಲಿ ನಡೆದಿದ್ದ ಒಂದು ಮದುವೆ ಗದಗ ಮತ್ತು ಕೊಪ್ಪಳ ಜಿಲ್ಲೆಯಲ್ಲಿ ಕೊರೋನಾ ಹರಡುವ ಭೀತಿಗೆ ಕಾರಣವಾಗಿತ್ತು. ಏಕೆಂದರೆ ಈ ಮದುವೆಯಲ್ಲಿ ಪಾಲ್ಗೊಂಡಿದ್ದ ಕೆಲವರಲ್ಲಿ ಕೊರೋನಾ ಸೋಂಕು ಕಂಡುಬಂದಿತ್ತು. ಅಲ್ಲದೆ, ಇವರ ಟ್ರಾವೆಲ್‌ ಹಿಸ್ಟರಿಯನ್ನು ಕೆದಕಿದಾಗ  ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ನಿಲೋಗಲ್, ಹನುಮನಾಳದ ವರೆಗೆ ವಿಸ್ತರಿಸಿತ್ತು. ಈ ವಿಚಾರ ಸಾಮಾನ್ಯವಾಗಿ ಇಡೀ ಜಿಲ್ಲೆಯ ಜನರನ್ನು ಬೆಚ್ಚಿ ಬೀಳಿಸಿತ್ತು. ಹೀಗಾಗಿ ಕೊಪ್ಪಳ ಜಿಲ್ಲೆಯಲ್ಲಿ ನಿಲೊಗಲ್ ಗ್ರಾಮದ 18 ಜನರನ್ನು ಮೇ 7ರಂದು […]

Advertisement

Wordpress Social Share Plugin powered by Ultimatelysocial