ತಮಿಳು ಸಿನಿಮಾ ಪ್ರೇಮಿಗಳ ಕಾಲಿವುಡ್ ಸೂಪರ್ ಸ್ಟಾರ್ ದಳಪತಿ ವಿಜಯ್ ಮನೆಗೆ ಬಾಂಬ್ ಇಡಲಾಗಿದೆ ಎಂದು ಭಾನುವಾರ ಮಧ್ಯರಾತ್ರಿ ಚೆನ್ನೈ ಪೊಲೀಸ್ ಕಂಟ್ರೋಲ್ ರೂಂಗೆ ಕರೆಯೊಂದು ಬಂದಿರುವುದಾಗಿ ವರದಿ ತಿಳಿಸಿದೆ.ಚೆನ್ನೈನ ಸಾಲಿಗ್ರಾಮಂನಲ್ಲಿರುವ ನಟ ವಿಜಯ್ ಅವರ ಮನೆಗೆ ಬಾಂಬ್ ಇಡಲಾಗಿದೆ ಎಂದು ಪೊಲೀಸ್ ಕಂಟ್ರೋಲ್ ರೂಂಗೆ ಅನಾಮಿಕ ವ್ಯಕ್ತಿಯೊಬ್ಬ ಕರೆ ಮಾಡಿದ್ದ. ಕೊನೆಗೂ ಆ ಕರೆಯನ್ನು ಪತ್ತೆಹಚ್ಚಿದ್ದು, ಮಾನಸಿಕ ಅಸ್ವಸ್ಥ ವ್ಯಕ್ತಿಯೊಬ್ಬ ಈ ಕರೆ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಮಾನಸಿಕ […]

ಆಕಾಶ್ ಚೋಪ್ರಾ ಪ್ರಕಟಿಸಿದ ಸಾರ್ವಕಾಲಿಕ ಶ್ರೇಷ್ಠ ಡೆಲ್ಲಿ ಐಪಿಎಲ್ ತಂಡಕ್ಕೆ ವೀರೇಂದ್ರ ಸೆಹವಾಗ್ ನಾಯಕರಾಗಿದ್ದಾರೆ. ಡೆಲ್ಲಿ ಪರ ಆಡಿದ ವೇಳೆ ಸೆಹವಾಗ್ ೧೬೦.೩ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಇವರ ಜತೆಗಾರನಾಗಿ ಕಾಣಿಸಿಕೊಂಡವರು ಗೌತಮ್ ಗಂಭೀರ್. ಚೋಪ್ರಾ ಪ್ರಕಟಿಸಿದ ಡೆಲ್ಲಿ ತಂಡದಲ್ಲಿ ಕೆವಿನ್ ಪೀಟರ್‌ಸನ್ ಸ್ಥಾನ ಸಂಪಾದಿಸಿಲ್ಲ. ವನ್‌ಡೌನ್‌ನಲ್ಲಿ ಎಬಿ ಡಿ ವಿಲಿಯರ್ ಕಾಣಿಸಿಕೊಂಡಿದ್ದಾರೆ. ಹಾಲಿ ನಾಯಕ ಅಯ್ಯರ್, ಕೀಪರ್ ಪಂತ್ ಈ ತಂಡದಲ್ಲಿದ್ದಾರೆ. ವೀರೇಂದ್ರ ಸೆಹವಾಗ್, ಗೌತಮ್ ಗಂಭೀರ್, ಎಬಿ […]

ಕೇಂದ್ರಸರ್ಕಾರ ಅಧೀನದ ದೂರಸಂಪರ್ಕ ಸಂಸ್ಥೆಗಳಾದ ಬಿಎಸ್‌ಎನ್‌ಎಲ್ ಮತ್ತು ಎಂಟಿಎನ್‌ಎಲ್ ಅನ್ನು ವಿಲೀನಗೊಳಿಸುವ ಪ್ರಕ್ರಿಯೆ ಇನ್ನಷ್ಟು ವಿಳಂಬವಾಗಲಿದೆ. ತಕ್ಷಣಕ್ಕೆ ಈ ವಿಲೀನ ಕಾರ್ಯಸಾಧುವಲ್ಲ ಎಂದು ಸರ್ಕಾರವೇ ನೇಮಿಸಿದ ಡೆಲಾಯ್ಟ್ ಆ್ಯಂಡ್ ಎಲ್‌ಎಲ್‌ಪಿ ಸೆಲ್ಸ್ ಸಂಸ್ಥೆ ಸಲಹೆ ನೀಡಿದ್ದೇ ಇದಕ್ಕೆ ಕಾರಣ. ಸದ್ಯ ಬಿಎಸ್ ಎನ್‌ಎಲ್, ದೆಹಲಿ ಮತ್ತು ಮುಂಬೈ ಹೊರತುಪಡಿಸಿ, ದೇಶದ ಉಳಿದೆಲ್ಲೆಡೆ ತನ್ನ ಸೇವೆ ಹೊಂದಿದೆ. ಎಂಟಿಎನ್‌ಎಲ್ ದೆಹಲಿ-ಮುಂಬೈನಲ್ಲಿ ಮಾತ್ರ ಕಾರ್ಯಾಚರಿಸುತ್ತಿದೆ. ಈ ಎರಡು ಸಂಸ್ಥೆಗಳನ್ನು ವಿಲೀನ ಮಾಡುವುದಕ್ಕೆ ಮುನ್ನ […]

ರಾಜ್ಯದಲ್ಲಿ ಮಹಾಮಾರಿ ಕೋವಿಡ್ ೧೯ ಪ್ರಕರಣಗಳ ಸ್ಫೋಟ ತೀವ್ರವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಎಚ್ಚೆತ್ತಿಕೊಂಡು ಪ್ರತಿ ಭಾನುವಾರ ಲಾಕ್‌ಡೌನ್ ಘೋಷಣೆ ಮಾಡಿದ್ದು, ನಗರದಾದ್ಯಂತ ಲಾಕ್‌ಡೌನ್‌ಗೆ ಉತ್ತಮ ಬೆಂಬಲ ವ್ಯಕ್ತವಾಗಿತ್ತು. ಹಾಗಾಗಿ ಲಾಕ್‌ಡೌನ್‌ಗೆ ಉತ್ತಮ ಸ್ಪಂದನೆ ವ್ಯಕ್ತವಾದ ಹಿನ್ನೆಲೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಬೆಂಗಳೂರು ಜನತೆಗೆ ಧನ್ಯವಾದ ಅರ್ಪಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ “ನೀವೆಲ್ಲಾ ೩೬ ಗಂಟೆಗಳ ಲಾಕ್‌ಡೌನ್‌ಗೆ ಉತ್ತಮ ಪ್ರತಿಕ್ರಿಯೆ ನೀಡಿದ್ದೀರ. ನಿಮಗೆಲ್ಲಾ ಹೃತ್ಪೂರ್ವಕ ಧನ್ಯವಾದಗಳು. […]

ರಕ್ಷಿತ್ ಶೆಟ್ಟಿ ಅಭಿನಯದ ಬಹು ನಿರೀಕ್ಷಿತ  “೭೭೭ ಚಾರ್ಲಿ’ ಸಾಹಸ ಪ್ರಧಾನ ಕಾಮಿಡಿ ಚಿತ್ರವನ್ನು ಕಿರಣ್ ರಾಜ್ ನಿರ್ದೇಶಿಸುತ್ತಿದ್ದು, ಸಿನಿಮಾದಲ್ಲಿ “ಒಂದು ಮೊಟ್ಟೆಯ ಕಥೆ’ ರಾಜ್​ ಬಿ ಶೆಟ್ಟಿ ಕೂಡ ವಿಶೇಷ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಹೌದು! ಭಾನುವಾರ ರಾಜ್ ಬಿ ಶೆಟ್ಟಿ ಹುಟ್ಟುಹಬ್ಬದ ಪ್ರಯುಕ್ತ “೭೭೭ ಚಾರ್ಲಿ’ ಚಿತ್ರತಂಡ ಯ್ಯೂಟೂಬ್​ನಲ್ಲಿ ವಿಶೇಷವಾದ ವಿಡಿಯೊವೊಂದನ್ನು ಬಿಡುಗಡೆ ಮಾಡುವ ಮೂಲಕ ಗಿಫ್ಟ್ ನೀಡಿದೆ. ಅಲ್ಲದೇ ಚಿತ್ರದಲ್ಲಿ ರಾಜ್ ಬಿ ಶೆಟ್ಟಿ, ಡಾ ಅಶ್ವಿನ್​ […]

ಕಾಂಗ್ರೆಸ್ ಶಾಸಕ ರೊಬ್ಬರಿಗೆ ಕೊರೊನಾ ಪಾಸಿಟಿವ್ ಪತ್ತೆ. ತುಮಕೂರು ಜಿಲ್ಲೆಯ ಕುಣಿಗಲ್ ಕ್ಷೇತ್ರದ ಕಾಂಗ್ರೆಸ್ ಶಾಸಕ ಡಾ.ರಂಗನಾಥ್ ರವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಅನಾರೋಗ್ಯದ ಹಿನ್ನಲೆಯಲ್ಲಿ ಗಂಟಲಿನ ದ್ರವವನ್ನು ಕೋವಿಡ್ ಪರೀಕ್ಷೆಗೆ ಕಳುಹಿಸಲಾಗಿತ್ತು. ಇಂದು ಪರೀಕ್ಷಾ ವರದಿ ಬಂದಿದೆ, ಕೊರೊನಾ ವೈರಸ್ ಇರುವುದು ದೃಢಪಟ್ಟಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾಂಗ್ರೆಸ್ ನ ದಿಗ್ಗಜ ನಾಯಕರಿಗೆ ಕೊರೊನಾ ಭೀತಿ ಶುರುವಾಗಿದೆ. ಮಲ್ಲಿಕಾರ್ಜುನ ಖರ್ಗೆ,ಸಿದ್ದರಾಮಯ್ಯ, ಜಿ.ಪರಮೇಶ್ವರ, ಡಿಕೆಶಿ ಸೇರಿದಂತ್ತೆ ಪ್ರತಿಯೊಬ್ಬ ಕಾಂಗ್ರೆಸ್ ನಾಯಕರಿಗೆ […]

ಕೊರೊನಾ ವೈರಸ್ ನಿಂದಾಗಿ ರಾಜ್ಯದ್ಯಾಂತ ಲಾಕ್ ಡೌನ್ ಹೇರಲಾಗಿತ್ತು, ಪ್ರವಾಸಿ ತಾಣಗಳನ್ನು ಕೂಡ ನೀಷಧಿಸಲಾಗಿತ್ತು, ಲಾಕ್ ಡೌನ್ ಸಡಿಲಿಕೆ ಗೊಳಿಸಿದ ಬಳಿಕ ಹಲವು ಪ್ರವಾಸಿ ತಾಣಗಳ ಪ್ರವೇಶಕ್ಕೆ ಅನುಮತಿ ನೀಡಲಾಗಿತ್ತು. ಆದರೆ ಪುರಾತತ್ವ ಇಲಾಖೆ ಅಡಿಯಲ್ಲಿ ಬರುವ ಪ್ರವಾಸಿ ಸ್ಥಳಗಳಿಗೆ ಪ್ರವೇಶಕ್ಕೆ ಅನುಮತಿ ನಿರಾಕರಿಸಲಾಗಿತ್ತು. ಆದರೆ ಇದೀಗ ಬಂದ್ ಆಗಿದ್ದ ವಿಶ್ವಪ್ರಸಿದ್ಧ ಹಂಪಿ ಇಂದಿನಿಂದ ತೆರೆಯಲಾಗಿದ್ದು, ಪ್ರವಾಸಿಗರರು ಭೇಟಿ ನೀಡುವುದ್ದಕ್ಕೆ ಅವಾಕಾಶ ನೀಡಲಾಗಿದೆ. ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಪುರಾತತ್ವ ಇಲಾಖೆಗೆ ಸೇರಿದ […]

 ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಕೊರೊನಾ ಮಹಾಮಾರಿಗೆ ಇಬ್ಬರು ಬಲಿಯಾಗಿದ್ದಾರೆ. ಮಂಗಳೂರಿನ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಮಂಗಳೂರು ಹೊರವಲಯದ ಸಂತೋಷ್ ನಗರ ನಿವಾಸಿ ಮತ್ತು ಉಳ್ಳಾಲ ನಿವಾಸಿ ಇಬ್ಬರಿಗೂ ಕೊರೊನಾ ವೈರಸ್ ಸೋಂಕು ಕಂಡುಬಂದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು,ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಬ್ಬರು ಕೊರೊನಾ ವೈರಸ್ ಗೆ ಬಲಿಯಾಗಿದ್ದಾರೆ.ಜಿಲ್ಲೆಯಲ್ಲಿ ಒಟ್ಟು 24 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ನಿನ್ನೆ ಒಂದೇ ದಿನ ಜಿಲ್ಲೆಯಲ್ಲಿ 147 ಮಂದಿಗೆ ಕೊರೊನಾ ಸೋಂಕು ಪತ್ತೆಯಾಗಿತ್ತು. […]

ದೇಶಾದ್ಯಂತ ಮಾರಕ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ದೇಶದಲ್ಲಿ ಒಂದು ದಿನದಲ್ಲಿ 24,248 ಮಂದಿಗೆ ಮಾರಕ ಸೋಂಕು ಪತ್ತೆಯಾಗಿದೆ, ಕಳೆದ 24 ಗಂಟೆಯಲ್ಲಿ  425 ಮಂದಿ ಬಲಿಯಾಗಿದ್ದಾರೆ. ದೇಶದಲ್ಲಿ ಈವರೆಗೆ ಮಹಾಮಾರಿ ಸೋಂಕಿಗೆ 19,693 ಸಾವನ್ನಪ್ಪಿದ್ದಾರೆ. ಇದೀಗ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 6,97,413ಕ್ಕೆ ಏರಿಕೆಯಾಗಿದೆ. ಈ ಪೈಕಿ 4,24,433 ಮಂದಿ ಸೋಂಕಿತರು ಸಂಪೂರ್ಣವಾಗಿ ಚಿಕಿತ್ಸೆ ಪಡೆದು ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. 2,53,287 ಮಂದಿ ಸೋಂಕಿತರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. […]

ಮಂಗಳೂರು ಗುರುಪುರದಲ್ಲಿ ನಿನ್ನೆ ಸಂಭವಿಸಿದ ಗುಡ್ಡ ಕುಸಿತ ಪ್ರಕರಣದಲ್ಲಿ ಸಾವನ್ನಪ್ಪಿದ ಇಬ್ಬರು ಮಕ್ಕಳ ಕುಟುಂಬಕ್ಕೆ ತಲಾ ಐದು ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಈ ಬಗ್ಗೆ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಪರಿಹಾರ ಮೊತ್ತವನ್ನು ಮೃತಪಟ್ಟ ಕುಟುಂಬಕ್ಕೆ ವಿತರಿಸಿದರು. ಘಟನೆಯಲ್ಲಿ ನಾಲ್ಕು ಮನೆಗಳಿಗೆ ಹಾನಿಯಾಗಿತ್ತು ಮತ್ತು 16 ವರ್ಷದ ಸಫ್ವಾನ್ ಮತ್ತು 10 […]

Advertisement

Wordpress Social Share Plugin powered by Ultimatelysocial