ಲೋಕಾಯುಕ್ತ ಸಂಸ್ಥೆಯ ಭದ್ರತೆಗೆ ನಿಯೋಜನೆಗೊಂಡಿದ್ದ ಕೆಎಸ್‌ಆರ್‌ಪಿಯ ಇಬ್ಬರು ಕಾನ್‌ಸ್ಟೆಬಲ್‌ಗಳಿಗೆ ಸೋಂಕು ದೃಢವಾಗಿದೆ. ಈ ಹಿನ್ನಲೆ ಲೋಕಾಯುಕ್ತ ಸಂಸ್ಥೆಯನ್ನು ೩ದಿನ ಸೀಲ್‌ಡೌನ್ ಮಾಡಲಾಗಿದೆ. ಪಶ್ಚಿಮ ವಿಭಾಗದ ಎಸಿಪಿ ಮತ್ತು ಇನ್‌ಸ್ಪೆಕ್ಟರ್‌ವೊಬ್ಬರಿಗೆ ಸೋಂಕು ಕಾಣಿಸಿಕೊಂಡಿದೆ. ಪೊಲೀಸ್ ಕಾನ್‌ಸ್ಟೆಬಲ್‌ಗೆ ಕೋವಿಡ್ ೧೯ ಕಾಣಿಸಿಕೊಂಡಿದ್ದು, ಈ ಕಾನ್‌ಸ್ಟೆಬಲ್ ಲೋಕಾಯುಕ್ತ ಸಂಸ್ಥೆಗೂ ಬಂದಿದ್ದರು.ಹೀಗಾಗಿ ಇಬ್ಬರಿಗೆ ಸೋಂಕು ತಗುಲಿದ್ದು, ಅವರ ಪ್ರಾಥಮಿಕ ಸಂಪರ್ಕದಲ್ಲಿದ್ದ ೩೦ ಮಂದಿಯನ್ನು ಕ್ವಾರಂಟೈನ್‌ಗೆ ಒಳಪಡುವಂತೆ ಸೂಚಿಸಲಾಗಿದೆ. ಪಶ್ಚಿಮ ವಿಭಾಗದ ಎಸಿಪಿ ಹಾಗೂ ಇನ್‌ಸ್ಪೆಕ್ಟರ್ ಈಗಾಗಲೇ […]

ಔರಾದ ತಾಲೂಕಿನ ಜಂಬಗಿ ಗ್ರಾಮದ ಭವಾನಿ ಡಾಬಾ ಹತ್ತಿರ ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ. 4.40ಲಕ್ಷ ರೂ ಮೌಲ್ಯದ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಗಾಂಜಾ ಸಾಗಿಸುತ್ತಿದ್ದವರಲ್ಲಿ ಇನ್ನಿಬ್ಬರು ಪರಾರಿಯಾಗಿದ್ದಾರೆ. ಬೈಕ್ ಗಳಲ್ಲಿ ಗಾಂಜಾ ಸಾಗಿಸುತ್ತಿರುವ ಖಚಿತ ಮಾಹಿತಿ ಪಡೆದು ಡಿವೈಎಸ್ ಪಿ.ಡಾ ದೇವರಾಜ್ ನೇತೃತ್ವದ ತಂಡ ದಾಳಿ ನಡೆಸಿದೆ. ಇದರಲ್ಲಿ ಶಿವಾಜಿ ರಾಥೋಡ್  ಎಂಬಾತನನ್ನು ಬಂಧಿಸಿದ್ದು, ಪ್ರಕಾಶ್ ,ರಂಗಲಾಲ್ ಎಂಬುವವರು  ಪರಾರಿಯಾಗಿದ್ದಾರೆ. ಪೊಲೀಸರು ಆರೋಪಿಗಳಿಗೆ ಬಲೆ ಬೀಸಿದ್ದಾರೆ. […]

ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದು. ವೆನ್ಲಾಕ್ ಆಸ್ಪತ್ರೆಯ ಲ್ಯಾಬ್ ಸಿಬ್ಬಂದಿಯೋರ್ವರಲ್ಲಿ ಸೋಂಕು ದೃಢ ಪಟ್ಟಿದೆ.ಕಳೆದ ಎರಡು ದಿನಗಳ ಹಿಂದೆ ಇಲ್ಲಿನ ಕೋವಿಡ್ ವಿಭಾಗದ ಮುಖ್ಯಸ್ಥರಲ್ಲಿ ಸೋಂಕು ದೃಢಪಟ್ಟಿದ್ದು ಇಂದು ಸಿಬ್ಬಂದಿಯೊಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದೀಗ ಸೋಂಕಿನ ವಿರುದ್ಧ ಹೊರಾಡುತ್ತಿರುವ ಕೊರೊನಾ ವಾರಿಯರ್ಸ್ಗಳಲ್ಲಿ ಪ್ರಕರಣ ದೃಢವಾಗುತ್ತಿರುವ ಹಿನ್ನಲೆ ಸಾರ್ವಜನಿಕರಲ್ಲಿ ಆತಂಕ ಮನೆಮಾಡಿದೆ.

ಬೆAಗಳೂರಿನಲ್ಲಿ ದಿನದಿಂದ ದಿನಕ್ಕೆ ಕೊರೊನಾ ಹೆಚ್ಚಳವಾಗುತ್ತಾದೆ ಆದರೆ ಈಗ ಪರಪ್ಪನ ಅಗ್ರಹಾರ ಜೈಲಿನೊಳಗೂ ಕಾಲಾಟ್ಟಿದೆ. ಕಾರಾಗೃಹದಲ್ಲಿರುವ ೨೬ ಕೈದಿಗಳಿಗೆ ಸೋಂಕು ದೃಢವಾಗಿದೆ. ಇದರಲ್ಲಿ ೨೦ ವಿಚಾರಣಾಧೀನ ಕೈದಿಗಳಾಗಿದ್ದರೆ. ಉಳಿದ ೬ ಜನ ಕಾರಾಗೃಹದ ಸಿಬ್ಬಂದಿಯಾಗಿದ್ದಾರೆ.ಸದ್ಯಕ್ಕೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ಜನ ಕೈದಿಗಳಿದ್ದಾರೆ.ಕೈದಿಗಳಿಗೆÀ ಕೊರೊನಾ ದೃಢವಾಗಿರುವ ಹಿನ್ನಲೆ ಕೈದಿಗಳನ್ನು ಥಣಿಸಂದ್ರ ಬಳಿ ಇರುವ ಹಜ್ ಭವನದಲ್ಲಿ ಇರಿಸಲಾಗಿದೆ. ಜೊತೆಗೆ ಕಾರಾಗೃಹದ ಇತರೆ ಕೈದಿ ಹಾಗೂ ಸಿಬ್ಬಂದಿ ಈ […]

ಉತ್ತರ ಮ್ಯಾನ್ಮಾರ್‌ನ ಜೇಡ್ ಗಣಿಯೊಂದರಲ್ಲಿ ಭೂಕುಸಿತ ಉಂಟಾಗಿದೆ. ಭೂ ಕುಸಿತದಿಂದಾಗಿ ಸುಮಾರು 50 ಮಂದಿ ಮೃತಪಟ್ಟಿದ್ದಾರೆ ಎಂದು ದೇಶದ ಅಗ್ನಿಶಾಮಕ ಸೇವಾ ಇಲಾಖೆ ಮತ್ತು ಮಾಹಿತಿ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಚಿನ್ ರಾಜ್ಯದ ಜೇಡ್ ಪಕಾಂತ್ ಪ್ರದೇಶದಲ್ಲಿ ಗಣಿಗಾರರು ಕಲ್ಲುಗಳನ್ನು ಸಂಗ್ರಹಿಸುತ್ತಿದ್ದರು. ಭಾರೀ ಮಳೆಯಿಂದಾಗಿ ಈ ದುರಂತ ಸಂಭವಿಸಿದೆ.  ಒಟ್ಟು 50 ಮೃತ ದೇಹಗಳನ್ನು ಹೊರ ತೆಗೆಯಲಾಗಿದ್ದು, ನಾವು ಇನ್ನೂ ರಕ್ಷಣಾ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿದ್ದೇವೆ ಎಂದು ತಿಳಿಸಿದ್ದಾರೆ. ಈ ಪ್ರದೇಶದಲ್ಲಿ […]

ಕೆಲ ತಿಂಗಳ ಹಿಂದಷ್ಟೇ ಕ್ಲಾರ್ಕ್ ಪತ್ನಿ ಕೈಲಿ, ಕ್ಲಾರ್ಕ್ಗೆ ವಿಚ್ಛೇದನ ನೀಡಿದ್ರು. ಇದೀಗ ಫ್ಯಾಷನ್ ಡಿಸೈನರ್ ಹಾಗೂ ಮಾಡೆಲ್ ಆಗಿರುವ ಪಿಪ್ ಎಡ್ವರ್ಡ್ಸ್ ಅವರೊಂದಿಗೆ ಸಂಬಧ ಹೊಂದಿರುವುದಾಗಿ ಕ್ಲಾರ್ಕ್ ಹೇಳಿಕೊಂಡಿದ್ದಾರೆ.ಕೆಲ ದಿನಗಳಿಂದ ಈ ಜೋಡಿ ಜೊತೆ ಜೊತೆಯಾಗಿ ಓಡಾಡುತ್ತಿರುವ ಫೋಟೊಗಳು ಸೋಷಿಯಲ್ ಮೀಡಿಯಾಗಳಲ್ಲಿ ಸದ್ದು ಮಾಡಿತ್ತು. ಈ ಬಗ್ಗೆ ಕೊನೆಗೂ ಮೌನ ಮುರಿದಿರುವ ೩೯ ವರ್ಷದ ಮಾಜಿ ಬಲಗೈ ಬ್ಯಾಟ್ಸ್ಮನ್, ಪಿಪ್ ಎಡ್ವರ್ಡ್ಸ್ ತಮ್ಮ ನೂತನ ಗೆಳತಿ ಎಂಬುದನ್ನು ಖಾತ್ರಿ […]

ಸೋಂಕು ಕಾಣಿಸಿಕೊಂಡಾಗಿನಿAದ ಎಲ್ಲರಿಂದಲೂ ಒಂದೇ ಸಲಹೆ, ಎಚ್ಚರಿಕೆ ಮಾತು, ‘ಮುಖ ಮುಟ್ಟಿಕೊಳ್ಳಬೇಡ’. ಅದನ್ನು ನೆನಪಿಸಿಕೊಳ್ಳುವುದು ಕಷ್ಟದ ಕೆಲಸವಲ್ಲ. ಒಂದು ವಾಚ್ ಅನ್ನು ಕೈಗೆ ಕಟ್ಟಿಕೊಂಡರೆ ಮುಗಿಯಿತು. ನಿಮ್ಮ ಕೈ ಮುಖದ ಬಳಿ ಹೋದೊಡನೆ, ಸದ್ದು ಮಾಡಿ ಎಚ್ಚರಿಸುತ್ತದೆ. ಇಂಗ್ಲೆAಡ್‌ನ ಬ್ರಿಸ್ಟಾಲ್ ನಗರದ ೧೫ ವರ್ಷದ ಬಾಲಕ ಮ್ಯಾಕ್ಸ್ ಮೆಲಿಯಾ, ಬಹುದಿನಗಳ ಪರಿಶ್ರಮದ ಬಳಿಕ ಒಂದು ಸ್ಮಾರ್ಟ್ ಕೈಗಡಿಯಾರವನ್ನು ಅಭಿವೃದ್ಧಿಪಡಿಸಿದ್ದಾನೆ. ಆ ಗಡಿಯಾರ ಎಷ್ಟು ಸ್ಮಾರ್ಟ್ ಎಂದರೆ, ನೀವು ನಿಮಗೆ ಅರಿವಿಲ್ಲದೆಯೇ […]

ಆಧುನಿಕ ಭಗೀರಥ ಕಾಮೇಗೌಡರಿಗೆ ಈಗ ಕೇಂದ್ರ ಸರ್ಕಾರದ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ನೀಡಬೇಕೆಂಬ ಒತ್ತಾಯ ಕೇಳಿಬರುತ್ತಿದೆ. ಸಕ್ಕರೆ ನಾಡು ಮಂಡ್ಯದ ಈ ಇಳಿವಯಸ್ಸಿನ ಅಜ್ಜ ಈಗ ಸುದ್ದಿಯ ಕೇಂದ್ರಬಿಂದು. ಅದಕ್ಕೆ ಕಾರಣ ಮೊನ್ನೆ ಭಾನುವಾರ ಆಕಾಶವಾಣಿಯ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಇವರ ಹೆಸರು ಮತ್ತು ಸಾಧನೆಗಳನ್ನು ಪ್ರಸ್ತಾಪಿಸಿದ್ದು. ಇದಾದ ಬಳಿಕ ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ವಿಡಿಯೊ ಕರೆ ಮಾಡಿ […]

ಡಿ.ಕೆ.ಶಿವಕುಮಾರ್ ನನ್ನ ಮಿತ್ರ ಅಲ್ಲ. ಒಂದು ಪಕ್ಷದ ಅಧ್ಯಕ್ಷ ಅಷ್ಟೇ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದರು. ಅಫಜಲಪುರ ತಾಲೂಕಿನ ಸೊನ್ನ ಬ್ಯಾರೇಜ್ ವೀಕ್ಷಣೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷ ಬೇರೆ, ಅವರ ಪಕ್ಷ ಬೇರೆ. ಬರೀ ಟಿವಿಯಲ್ಲಿ ‘ಪ್ರತಿಜ್ಞಾ’ ಅಂತಾ ಅಧಿಕಾರ ಸ್ವೀಕರಿಸುತ್ತಿದ್ದಾರೆ. ಡಿಕೆಶಿ ಕಾರ್ಯಕ್ರಮಕ್ಕೆ ಮಹತ್ವ ಕೊಡಬೇಕಿಲ್ಲ ಎಂದರು. ಒಂದು ಮದುವೆ ಮಾಡಿಸಬೇಕಾದರೆ ಊಟ ಹಾಕಿಸುತ್ತೇವೆ. ನಮ್ಮವರು ಅಂತಾ ಎಲ್ಲರೂ ಊಟಕ್ಕೆ ಬರ್ತಾರಾ?. […]

ಸರ್ಕಾರ ಈಗ ಇಂಗು ತಿಂದ ಮಂಗನಂತಾಗಿದ್ದು, ಸೋಂಕಿತರ ಸಂಖ್ಯೆಯ ಗಣನೀಯ ಏರಿಕೆಯನ್ನು ತಡೆಯಲು ಪರದಾಡುತ್ತಿದೆ. ಆರಂಭಿಕ ಹಂತದಲ್ಲೇ ಕೋವಿಡ್-19 ನಿರ್ವಹಣೆಯಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಕೊರೋನಾ ಸೋಂಕು ಪೀಡಿತರು ಬೆಡ್ ಗಳಿಲ್ಲದೆ, ಚಿಕಿತ್ಸೆ ಇಲ್ಲದೆ ಮನೆಯಲ್ಲೇ ನರಳಿ ಸಾಯುತ್ತಿದ್ದಾರೆ. ಕಳೆದ ಮೂರು ತಿಂಗಳಿಂದ ಮುಖ್ಯಮಂತ್ರಿ ಸೇರಿದಂತೆ ಸಚಿವರು ಮಾತಿನ ಮಂಟಪ ಕಟ್ಟುವುದರಲ್ಲಿ ಕಾಲ ಕಳೆಯುತ್ತಿದ್ದಾರೆ ಎಂದು […]

Advertisement

Wordpress Social Share Plugin powered by Ultimatelysocial