ಆಂಧ್ರಪ್ರದೇಶದ ವಿಶಾಖಪಟ್ಟಣಂನಲ ಕೆಮಿಕಲ್ ಫ್ಯಾಕ್ಟರಿಯಲ್ಲಿ ವಿಷಾನಿಲ ಸೋರಿಕೆಯಾದ ಪರಿಣಾಮ 10  ಜನ ಸಾವನ್ನಪ್ಪಿದ್ದಾರೆ. 300ಕ್ಕೂ ಹೆಚ್ಚು ಜನರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ. ಈ ಕುರಿತು  ಟ್ವೀಟ್ ಮಾಡಿರುವ ಅವರು, ದುರಂತದಲ್ಲಿ ಮೃತಪಟ್ಟವರಿಗೆ ಸಂತಾಪ ಸೂಚಿಸಿದ್ದಾರೆ.   ವಿಶಾಖಪಟ್ಟಣಂ ಅನಿಲ ದುರಂತ ಅತ್ಯಂತ ದುರದೃಷ್ಟಕರ. ಈ ದುರಂತದಲ್ಲಿ ಜೀವ ಕಳೆದುಕೊಂಡವರಿಗೆ ನನ್ನ ಸಂತಾಪಗಳು. ಇಂತಹ ಘಟನೆಗಳು ಮರುಕಳಿಸಿದಂತೆ ಎಚ್ಚರವಹಿಸಬೇಕು. ಈ ಘಟನೆಯಿಂದ ಸಂಕಟಕ್ಕೆ ಒಳಗಾದವರು ಬೇಗ ಚೇತರಿಸಿಕೊಳ್ಳಲಿ […]

ಕಾಂಗ್ರೆಸ್​ ವಲಸೆ ಕಾರ್ಮಿಕರ ವಿಚಾರದಲ್ಲಿ ರಾಜಕೀಯ ಮಾಡುತ್ತಿದೆ. ನಾವು ವಲಸೆ ಕಾರ್ಮಿಕರನ್ನು ತಮ್ಮ ರಾಜ್ಯಗಳಿಗೆ ಕಳಿಸಲು ಅಲ್ಲಿನ ಸರ್ಕಾರಗಳಿಂದ ಅನುಮತಿ ಬೇಕು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್​ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದೆ, ನಾವ್ಯಾರು ವಲಸೆ ಕಾರ್ಮಿಕರನ್ನು ಇಲ್ಲೇ ಬಲವಂತವಾಗಿ ಇಟ್ಟುಕೊಂಡಿಲ್ಲ. ಆದರೀಗ ಕೆಲವು ರಾಜ್ಯಗಳಿಂದ ಇದಕ್ಕೆ ಅನುಮತಿ ಸಿಕ್ಕಿಲ್ಲ. ಹಾಗಾಗಿ ನಾವು ಆಯಾ ರಾಜ್ಯಗಳ ವಲಸೆ ಕಾರ್ಮಿಕರನ್ನು ಕಳಿಸಲು […]

ನೆರೆಯ ರಾಜ್ಯ ಆಂಧ್ರಪ್ರದೇಶದ ವೈಜಾಗ್ ನಲ್ಲಿ ಸಂಭವಿಸಿರುವ ಭೀಕರ ವಿಷಾನಿಲ ಸೋರಿಕೆ ಹಿನ್ನೆಲೆ ರಾಜ್ಯದಲ್ಲೂ ಕೈಗಾರಿಕೆ ಆರಂಭಿಸುವ ಮುನ್ನ ಸುರಕ್ಷತಾ ಕ್ರಮಗಳನ್ನು ಖಾತರಿ ಪಡಿಸುವಂತೆ ಕೈಗಾರಿಕಾ ಘಟಕಗಳ ವ್ಯವಸ್ಥಾಪಕರಿಗೆ ಸಿಎಂ ಯಡಿಯೂರಪ್ಪ ಸೂಚನೆ ನೀಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ‘ವಿಶಾಖಪಟ್ಟಣದ ವಿಷಾನಿಲ ಸೋರಿಕೆಯ ದುರಂತ ಘಟನೆ ದುರದೃಷ್ಟಕರ . ಇಂತಹ ಘಟನೆ ಎಲ್ಲಿಯೂ ಮರುಕಳಿಸಬಾರದು.       ಈ ಹಿನ್ನೆಲೆ, ಎರಡು ತಿಂಗಳ ನಂತರ ತಮ್ಮ […]

ವಿಶಾಖ ಪಟ್ಟಣ : ವಿಶಾಖ ಪಟ್ಟಣಂನ ಗೋಪಾಲಪಟ್ಟಣದ ನಾಯ್ಡು ತೋಟಾ ಸಮೀಪದಲ್ಲಿನ ಆರ್ ಆರ್ ವೆಂಕಟಪುರಂನಲ್ಲಿರುವ ಎಲ್ ಜಿ ಪಾಲಿಮರ್ಸ್ ಇಂಡಸ್ಟ್ರೀಯಲ್ಲಿ ಇಂದು ಮುಂಜಾನೆ ಸುಮಾರು ೩ ಗಂಟೆಗೆ ವಿಷಾನಿಲ ಸೋರಿಕೆಯಾದ ಪರಿಣಾಮ, ೧೩ ಜನರು ಸಾವನ್ನಪ್ಪಿದ್ದರು. ೩೦೦ಕ್ಕೆ ಹೆಚ್ಚು ಜನರು ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ್ದರು. ಇದೀಗ ಆಂಧ್ರಪ್ರದೇಶ ಸರ್ಕಾರ ಮೃತರಿಗೆ ೧ ಕೋಟಿ, ತೀವ್ರವಾಗಿ ಅಸ್ವಸ್ಥಗೊಂಡವರಿಗೆ ೧೦ ಲಕ್ಷ ಪರಿಹಾರವನ್ನು ಘೋಷಣೆ ಮಾಡಿದೆ. ಈ ಕುರಿತಂತೆ ಸುದ್ದಿಗೋಷ್ಠಿ ಉದ್ದೇಶಿಸಿ […]

ಬ್ಯಾಂಕಾಕ್ : ಕೊರೊನಾ ಸೋಂಕು ಕಾರಣದಿಂದಾಗಿ ಥೈಲ್ಯಾಂಡ್‌ನಲ್ಲಿ ಭಾರೀ ನಿರುದ್ಯೋಗ ಸಮಸ್ಯೆ ಉದ್ಭವಿಸಿದೆ. ಮನುಷ್ಯರಿಗಷ್ಟೇ ಅಲ್ಲ, ಆನೆಗಳಿಗೂ ಈ ಕೊರೊನಾ ಬಿಸಿ ತಟ್ಟಿದೆ ಅಂರೆ ತಪ್ಪಾಗಲಾರದು. ತಮ್ಮ ಹಸಿವನ್ನು ನೀಗಿಸಿಕೊಳ್ಳಲು ಪ್ರವಾಸಿಗರನ್ನು ಅವಲಂಭಿಸಿರುವ ಆನೆಗಳು ಈಗ ಹಸಿವಿನಿಂದ ತೊಂದರೆಗೊಳಗಾಗಿವೆ. ಈ ಹಿನ್ನೆಲೆ ಅವುಗಳನ್ನು ಮತ್ತೇ ತಮ್ಮ ನೈಸರ್ಗಿಕ ವಾಸಸ್ಥಳಗಳಿಗೆ ಕಳುಹಿಸಲಾಗುತ್ತಿದೆ. ೧೦೦ಕ್ಕೂ ಹೆಚ್ಚು ಪ್ರಾಣಿಗಳನ್ನು ೧೫೦ ಕಿ.ಮೀ(೯೫ ಮೈಲಿ) ದೂರದ ತಮ್ಮ ಮೂಲ ಸ್ಥಳಗಳಿಗೆ ಕಳುಹಿಸಲಾಗುತ್ತಿದೆ. ಉತ್ತರ ಪ್ರಾಂತ್ಯದ ಚಿಯಾಂಗ್ […]

ನವದೆಹಲಿ: ಇವತ್ತು ಬುದ್ಧ ಪೂರ್ಣಿಮಾ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕೊರೊನಾ ವಾರಿಯರ್ಸ್ ಉದ್ದೇಶಿಸಿ ಮಾತನಾಡಿದ್ದು, ದೇಶದ ಕಷ್ಟದ ಪರಿಸ್ಥಿತಿಯಲ್ಲಿದೆ. ಭಾರತ ಇಡೀ ವಿಶ್ವಕ್ಕೆ ತನ್ನ ಮಾರ್ಗ ತೋರಿಸಿದೆ. ಸಂಘಟಿತ ಪ್ರಯತ್ನದಿಂದ ಮಾನವಕುಲ ಉಳಿದಿದೆ ಎಂದರು. ದೇಶದ ಎಲ್ಲ ಜನತಗೆ ಬುದ್ಧ ಪೂರ್ಣಿಮಾದ ಶುಭಾಶಯಗಳು. ೨೦೧೫ ಮತ್ತು ೨೦೧೮ರಂದು ದೆಹಲಿಯಲ್ಲಿ ಹಾಗೂ ೨೦೧೭ರಲ್ಲಿ ಕೊಲೊಂಬೋದಲ್ಲಿ ನಿಮ್ಮ ಜೊತೆಯಲ್ಲಿದ್ದೆ. ಆದರೆ ಇಂದು ಬದಲಾದ ದಿನಗಳಲ್ಲಿ ನೇರವಾಗಿ ನಿಮ್ಮ ಜೊತೆ ಮಾತನಾಡಲು ಸಾಧ್ಯವಿಲ್ಲ. […]

ರಾಜ್ಯ ಸರ್ಕಾರ ಕಳಪೆ ಬಿತ್ತನೆ ಬೀಜ ಮಾರಾಟ ಮಾಡುವ ಮೂಲಕ ರೈತರನ್ನು ಏಮಾರಿಸುತ್ತಿದ್ದ ಆಂಧ್ರಪ್ರದೇಶ ಮೂಲದ ಮಾಫಿಯಾವನ್ನು ಬಯಲು ಮಾಡಿದೆ. ಅಲ್ಲದೆ, ಈ ಮಾಫಿಯಾ ವಿರುದ್ಧ 8 ಕ್ರಿಮಿನಲ್ ಮೊಕದ್ದಮೆಯನ್ನು ದಾಖಲು ಮಾಡಲಾಗಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, “ಆಂಧ್ರದಲ್ಲಿ ರಿಜೆಕ್ಟ್ ಆಗಿದ್ದ ಬೀಜಗಳನ್ನು ರಾಜ್ಯದಲ್ಲಿ ಮಾರಾಟ ಮಾಡಲಾಗುತ್ತಿತ್ತು. ಆಂಧ್ರಪ್ರದೇಶದ ಮೂಲದ ಕೆಲವರು ಈ ಮಾಫಿಯಾದಲ್ಲಿ ತೊಡಗಿದ್ದರು. ಈ ಎಲ್ಲರನ್ನೂ ವಶಕ್ಕೆ ಪಡೆಯಲಾಗಿದೆ.ಇವರಿಂದ […]

ನವದೆಹಲಿ: ಆಹಾರ ಪದಾರ್ಥ ಡೆಲಿವರಿ ಮಾಡುತ್ತಿದ್ದ ಝೊಮ್ಯಾಟೊ ಕಂಪನಿ ಲಾಕ್‌ಡೌನ್ ಹಿನ್ನೆಲೆ ದಿನಸಿ ಪದಾರ್ಥಗಳನ್ನೂ ಡೆಲಿವರಿ ಮಾಡುತ್ತಿದೆ. ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದು, ಮದ್ಯವನ್ನೂ ಡೆಲಿವರಿ ಮಾಡಲು ನಿರ್ಧರಿಸಿದೆ. ೪೦ ದಿನಗಳ ಲಾಕ್‌ಡೌನ್ ಬಳಿಕ ಇದೀಗ ಸಡಿಲಿಕೆ ನೀಡಲಾಗಿದ್ದು, ಬಾರ್‌ಗಳ ಮುಂದೆ ಮದ್ಯ ಪ್ರಿಯರು ಕ್ಯೂನಲ್ಲಿ ನಿಂತು ಮದ್ಯ ಖರೀದಿಸಬೇಕಿದೆ. ಅಲ್ಲದೆ ಈ ವೇಳೆ ಹೆಚ್ಚಿನ ಗಲಾಟೆಗಳು ನಡೆಯುತ್ತಿದ್ದು, ಸಾಮಾಜಿಕ ಅಂತರ ಕಾಪಾಡುವುದು ಸಾಹಸವಾಗಿದೆ. ಹೀಗಾಗಿ ಮದ್ಯಪ್ರಿಯರನ್ನು […]

ರಾಜ್ಯದಲ್ಲಿ ಮಹಾಮಾರಿ ಕೊರೊನಾ ವೈರಸ್ ತಲ್ಲಣ ಸೃಷ್ಟಿಸಿದ್ದು, ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ. ರಾಜ್ಯದಲ್ಲಿ ಇಂದು ಮತ್ತೆ 8 ಮಂದಿಯಲ್ಲಿ ಹೊಸದಾಗಿ ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕು ಪೀಡಿತರ ಸಂಖ್ಯೆ 701ಕ್ಕೆ ಏರಿಕೆಯಾಗಿದೆ. ಮಹಾಮಾರಿಗೆ ದಾವಣಗೆರೆಯಲ್ಲಿ ಮಹಿಳೆಯೊಬ್ಬರು ಬಲಿಯಾಗಿದ್ದು, ರಾಜ್ಯದಲ್ಲಿ ಕೊರೊನಾ ಸೋಂಕಿಗೆ ಬಲಿಯಾದವರ ಸಂಖ್ಯೆ 30ಕ್ಕೆ ಏರಿಕೆಯಾಗಿದೆ. ಇನ್ನು ಇಂದು ಪತ್ತೆಯಾಗಿರುವ ಹೊಸ ಕೊರೊನಾ ಪಾಸಿಟಿವ್ ಪ್ರಕರಣಗಳ ಪೈಕಿ ದಾವಣಗೆರೆಯಲ್ಲಿ 3, ಕಲಬುರಗಿಯಲ್ಲಿ 3, ಬೆಂಗಳೂರು ಹಾಗೂ […]

ಮಾರಣಾಂತಿಕ ಕೊರೋನಾ ವೈರಸ್‌ ವಿರುದ್ಧ ಹೋರಾಡುವ ಸಲುವಾಗಿ ಚರ್ಚಿಸಲು ಮಾಜಿ ಸಿಎಂ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಹಾಲಿ ಸಿಎಂ ಬಿ.ಎಸ್‌. ಯಡಿಯೂರಪ್ಪ ನಾಳೆ ಗೃಹ ಕಚೇರಿ ಕೃಷ್ಣಾದಲ್ಲಿ ಒಂದಾಗಲಿದ್ದಾರೆ ಎಂದು ತಿಳಿದುಬಂದಿದೆ. ಕೊರೊನಾ ಸಂಬಂಧಿಸಿದಂತೆ ಚರ್ಚಿಸಲು ಸಿಎಂ ಬಿಎಸ್‌ವೈ ಭೇಟಿಗೆ ಸಿದ್ದರಾಮಯ್ಯ ಅವರು ಅವಕಾಶ ಕೇಳಿ ಪತ್ರ ಬರೆದಿದ್ದರು. ಈ ಹಿನ್ನೆಲೆ ಇಂದು ಸಿಎಂ ಕಛೇರಿಯಿಂದ ಭೇಟಿಗೆ ಅನುಮತಿ ದೊರೆತಿದ್ದು, ನಾಳೆ ಬೆಳಗ್ಗೆ 11-30 ಕ್ಕೆ ಸಿಎಂ ಗೃಹ […]

Advertisement

Wordpress Social Share Plugin powered by Ultimatelysocial