ಮುಂಬೈ : ದೇಶಾದ್ಯಂತ ಮಾರಕ ಕೊರೊನಾ ಸೋಂಕು ತಲ್ಲಣ ಸೃಷ್ಟಿಸಿದ್ದು, ಜನತೆ ಆತಂಕಗೊಂಡಿದ್ದಾರೆ. ದೇಶದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ ೨೩ ಸಾವಿರ ಗಡಿದಾಟಿದೆ. ಸೋಂಕಿತರ ಸಂಖ್ಯೆಯಲ್ಲಿ ದೇಶದಲ್ಲೇ ಪ್ರಥಮ ಸ್ಥಾನದಲ್ಲಿರುವ ಮಹಾರಾಷ್ಟ್ರದಲ್ಲಿ ೨೪ ಗಂಟೆಯಲ್ಲಿ ೭೭೮ ಮಂದಿಯಲ್ಲಿ ಮಾರಕ ಸೋಂಕು ದೃಢಪಟ್ಟಿದ್ದು, ಇನ್ನಷ್ಟು ಭೀತಿ ಎದುರಾಗಿದೆ. ಮಹಾರಾಷ್ಟ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದ್ದು, ಕಳೆದ ೨೪ ಗಂಟೆಯಲ್ಲಿ ೭೭೮ ಮಂದಿಯಲ್ಲಿ ಮಾರಕ ಸೋಂಕು ಪಾಸಿಟಿವ್ ಬಂದಿದೆ. ಇನ್ನು ೧೪ ಮಂದಿ ಕಿಲ್ಲರ್ […]

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸೋಂಕಿನ ರೋಗಿಗಳಿಗೆ ಪ್ಲಾಸ್ಮಾ ಥೆರಪಿಗೆ ಕೇಂದ್ರ ಸರ್ಕಾರದಿಂದ ಅನುಮತಿ ಸಿಕ್ಕಿದ್ದು, ನಾಳೆ ಮೊದಲ ರೋಗಿಗೆ ಪ್ಲಾಸ್ಮಾ ಥೆರಪಿ ನಡೆಸಲಾಗುತ್ತದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಸ್ಪಷ್ಟಪಡಿಸಿದ್ದಾರೆ. ಈ ಕುರಿತಂತೆ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ಕೆ.ಸುಧಾಕರ್, ಕೇಂದ್ರ ರ‍್ಕಾರದಿಂದ ರಾಜ್ಯದಲ್ಲಿ ಪ್ಲಾಸ್ಮಾ ಥೆರಪಿಗೆ ಅನುಮತಿ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನಾಳೆ ಮೊದಲ ರೋಗಿಗೆ ಬೆಂಗಳೂರಿನ ಮೆಡಿಕಲ್ ಕಾಲೇಜಿನಲ್ಲಿ ಪ್ಲಾಸ್ಮಾ ಥೆರಪಿ ನಡೆಯಲಿದೆ ಎಂದು […]

ಕನ್ನಡ ಸಿನಿಮಾಗಳ ಮೇರು ನಟ,ಕನ್ನಡ ಅಭಿಮಾನಿಗಳ ಆರಾಧ್ಯ ದೈವ,ನಟ ಸೌರ್ವಭೌಮ ದಿವಂಗತ ನಟ  ಡಾ.ರಾಜ್ ಕುಮಾರ್ ಅವರ 92ನೇ ಹುಟ್ಟು ಹಬ್ಬ ಇಂದು.. ಪ್ರತೀ ವರ್ಷ ಕಂಠೀರವ ಸ್ಟುಡಿಯೋದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸುತ್ತಿದ್ದರು.ಆದರೆ ಕರೋನ ಲಾಕ್ ಡೌನ್ ಹಿನ್ನೆಲೆ ಕಡಿಮೆ ಪ್ರಮಾಣದಲ್ಲಿ ಅಭಿಮಾನಿಗಳು ಈ ಬಾರಿ ಸೇರಿದ್ರು..ಕುಟುಂಬಸ್ಥರೆಲ್ಲರೂ ಸೇರಿ ಜನ್ಮ ದಿನವನ್ನು ಆಚರಿಸುತ್ತಿದ್ರು..ಈ ಬಾರಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿನ ತಂದೆ ರಾಜ್ ಕುಮಾರ್ […]

ಕೊರೊನಾ ವೈರಸ್ ಹರಡುತ್ತಿದ್ದು ,ನಿಯಂತ್ರಣಕ್ಕಾಗಿ ಬಿಬಿಎಂಪಿ ಸಿಬ್ಬಂದಿ ಶ್ರಮಿಸುತ್ತಿದ್ದಾರೆ..ನಿಯಂತ್ರಣ ಹಾಗೂ ಮುಂಜಾಗೃತ ಕ್ರಮವಾಗಿ ಪ್ರತಿನಿತ್ಯ ಸೋಂಕು ನಿವಾರಕ  ಸಿಂಪಡಣೆಯನ್ನು ಬಿಬಿಎಂಪಿ ಸಿಬ್ಬಂದಿ ಮಾಡುತ್ತಿದ್ದಾರೆ..ಸ್ಪಚ್ವತಾ ಸಿಬ್ಬಂದಿ ಶೇಖರ್ ಬೆಂಗಳೂರಿನ ಟ್ರಿನಿಟಿ ಸರ್ಕಲ್ ಹಾಗೂ ಎಂ.ಜಿ ರೋಡ್ ಸುತ್ತಮುತ್ತ ಸೋಂಕು ನಿವಾರಕವನ್ನು ಪ್ರತಿನಿತ್ಯ ಸಿಂಪಡಿಸುತ್ತಿದ್ರು..ಇದನ್ನು ಗಮನಿಸಿದ ಹಲಸೂರು ಸಂಚಾರಿ ಪೊಲೀಸ್ ಇನ್ಸ್ ಪೆಕ್ಟರ್ ವಿಜಯ್ ಹಡಗಲಿ ಹಾಗೂ ಸಿಬ್ಬಂದಿ ಬಿಬಿಎಂಪಿ ಸಿಬ್ಬಂದಿ ಶೇಖರ್ ಕಾರ್ಯ ವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ..ಹಾಗೇ ಜೀವದ ಹಗ್ಗು ತೊರೆದು […]

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆ ಕಂಡಿದೆ..ಪ್ರತಿನಿತ್ಯ ಕೊರೊನಾ ವೈರಸ್ ಜನರಿಂದ ಜನರಿಗೆ ಹರಡುತ್ತಲೇ ಇದೆ..ಇಂದು ವಿಶೇಷ ಅಂದ್ರೆ ಬೆಂಗಳೂರು ನಗರದಲ್ಲೇ 11 ಹೊಸ ಕೊರೊನಾ ಸೋಂಕು ಹರಡಿರೋದು ಧೃಡಪಟ್ಟಿದೆ..ಇನ್ನು ಕೊರೊನಾ ವೈರಸ್ ಸೋಂಕು ರಾಜ್ಯದಲ್ಲಿ 463 ಕ್ಕೆ ಏರಿಕೆ ಕಂಡಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರೋ ಹೆಲ್ತ್ ಬುಲಿಟನ್ ನಲ್ಲಿ ಸೋಂಕು ಧೃಡಪಟ್ಟಿರೋ ಬಗ್ಗೆ ತಿಳಿಸಿದ್ದಾರೆ..ಇಂದು 18 ಹೊಸ ಕೊರೊನಾ ಪ್ರಕರಣಗಳು […]

ಬೆಂಗಳೂರು: ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಎಲ್ಲಾ ಮೆಡಿಕಲ್ ಶಾಪ್‌ಗಳು ಹಾಗೂ ಆಸ್ಪತ್ರೆಯ ಮೆಡಿಕಲ್ಸ್ನಲ್ಲಿ ಜ್ವರ, ನೆಗಡಿ ಹಾಗೂ ಕೆಮ್ಮಿಗೆ ಔಷಧಿ ಪಡೆಯುವವರ ವಿವರ ಪಡೆಯಬೇಕು ಎಂದು ಆದೇಶಿಸಲಾಗಿದೆ. ಈ ಸಂಬಂಧ ಇಂದು ಹೊಸ ಅಧಿಸೂಚನೆ ಜಾರಿ ಮಾಡಲಾಗಿದೆ ಎಂದು ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ. ಪ್ಯಾರಾಸಿಟಮಲ್, ಸಿರಪ್ ಹಾಗೂ ನೆಗಡಿ ಮಾತ್ರೆಗಳನ್ನು ಪಡೆದವರ ವಿವರ ಪಡೆಯಬೇಕು. ಎಲ್ಲರನ್ನ ಪತ್ತೆ ಮಾಡಲು ಅಡ್ರೆಸ್, ಫೋನ್ ನಂಬರ್ ಮತ್ತು ಲ್ಯಾಂಡ್ ಮಾರ್ಕ್ […]

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಕಾರ್ಮಿಕರಿಗೆ ಕೆಲಸ ಇಲ್ಲ. ಕೆಲವು ಕಾರ್ಮಿಕರು ಊರುಗಳಿಗೆ ತೆರಳಲಾಗದೇ ಇದ್ದಲ್ಲಿಯೇ ಉಳಿದುಕೊಂಡಿದ್ದಾರೆ ಅಂತವರಿಗೆ  ಮನೆ ಮಾಲೀಕರು ರೆಂಟ್ ಕೇಳುವಂತಿಲ್ಲ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ದೆಹಲಿನಲ್ಲಿ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ಕಾರ್ಮಿಕರು ಮತ್ತು ವಿದ್ಯಾರ್ಥಿಗಳಿಂದ ಒಂದು ತಿಂಗಳು ಬಾಡಿಗೆ ವಸೂಲು ಮಾಡಬಾರದು. ‘ಜಿಲ್ಲಾ ಮ್ಯಾಜಿಸ್ಟ್ರೇಟ್‌ಗಳು ಈ ವಿಷಯದ ಬಗ್ಗೆ ಜಾಗೃತಿ ಅಭಿಯಾನವನ್ನು ಕೈಗೊಳ್ಳಬೇಕು,  ವಿಶೇಷವಾಗಿ ಕಾರ್ಮಿಕರು, ವಲಸೆ ಕಾರ್ಮಿಕರು ಮತ್ತು ವಿದ್ಯಾರ್ಥಿಗಳು ಹೆಚ್ಚಿನ […]

ಕೊರೊನಾ ವಿರುದ್ಧ ಹೋರಾಡುತ್ತಿರುವವರಿಗೆ ಒಂದಲ್ಲಾ ಒಂದು ರೀತಿಯಲ್ಲಿ ಸಹಾಯ ಮಾಡುತ್ತಾ, ಅವರ ಕೆಲಸವನ್ನು ಹುರಿದುಂಬಿಸುತ್ತಾ ಬಂದಿರುವ ಗ್ಲೋಬಲ್ ಐಕಾನ್ ಪ್ರಿಯಾಂಕ ಚೋಪ್ರಾ ಈಗ ೧೦,೦೦೦ ಆರೋಗ್ಯ ಕಾರ್ಯಕರ್ತರಿಗೆ ಪಾದರಕ್ಷೆ ನೀಡುವ ಮೂಲಕ ಮತ್ತೆ ಅವರನ್ನು ಬೆಂಬಲಿಸುತ್ತಿದ್ದಾರೆ. ಹರಿಯಾಣ, ಕೇರಳ, ಮಹಾರಾಷ್ಟ್ರ ಮತ್ತು ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳ ಆರೋಗ್ಯ ಕಾರ್ಯಕರ್ತರಿಗೆ ಶೂಸ್‌ಗಳನ್ನ ದೇಣಿಗೆಯಾಗಿ ನೀಡಿದ್ದಾರೆ. ಒಟ್ಟು ೧೦,೦೦೦ ಜೋಡಿ ಪಾದರಕ್ಷೆಯನ್ನು ನೀಡಿದ್ದು, ಈ ಬಗ್ಗೆ ತಮ್ಮ ಟ್ವಿಟರ್‌ನಲ್ಲಿ ಶೇರ್ ಮಾಡಿದ್ದಾರೆ. […]

ಹೊಸದಿಲ್ಲಿ: ಒಂದು ಗುಂಪಿನ ‘ಅಪರಾಧ’ಕ್ಕೆ ಇಡೀ ಸಮುದಾಯವನ್ನು ಹೊಣೆಯಾಗಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಹೇಳಿದ್ದಾರೆ. ದೆಹಲಿಯಲ್ಲಿ ತಬ್ಲೀಗಿ ಜಮಾತ್  ವಿಚಾರವಾಗಿ ಮಾತನಾಡಿದ ಅವರು, ‘ಆ ಸಂಘಟನೆ ಏನೇ ಮಾಡಿರಬಹುದು, ಕ್ರಿಮಿನಲ್ ನಿರ್ಲಕ್ಷ್ಯ ಅಥವಾ ಅಪರಾಧ, ಹೆಚ್ಚಿನ ಮುಸ್ಲಿಮರು ಅದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ ಹಾಗೂ ಖಂಡಿಸಿದ್ದಾರೆ ಮತ್ತು ಕ್ರಮಕ್ಕೆ ಆಗ್ರಹಿಸಿದ್ದಾರೆ. ಒಂದು ಗುಂಪು ಮಾಡಿದ ತಪ್ಪಿಗೆ ಇಡೀ ಸಮುದಾಯವನ್ನು ದೂಷಿಸಲು ಸಾಧ್ಯವಿಲ್ಲ”. ಇಂತಹ […]

ನವದೆಹಲಿ : ಕಳೆದ 24 ಗಂಟೆಗಳಲ್ಲಿ 1,409 ಕೋವಿಡ್ -19 ಸಕಾರಾತ್ಮಕ ಪ್ರಕರಣಗಳು ವರದಿಯಾಗಿವೆ, ಎಂದು ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್ ಹೇಳಿದ್ದಾರೆ. ಒಂದೇ ದಿನದಲ್ಲಿ 1,409 ಹೊಸ ಪ್ರಕರಣಗಳು ವರದಿಯಾಗಿದ್ದು, ಭಾರತದಲ್ಲಿ ಒಟ್ಟು 21,393 ಪ್ರಕರಣಗಳು ದಾಖಲಾಗಿವೆ. ಅದರಲ್ಲಿ 16,454 ಸಕ್ರಿಯ ಪ್ರಕರಣಗಳಾಗಿವೆ. ಇದುವರೆಗೆ 4,257 ಜನ ಚೇತರಿಸಿಕೊಂಡಿದ್ದು, ಒಂದು ದಿನದಲ್ಲಿ 388 ಜನ ಚೇತರಿಸಿಕೊಂಡಿರುವುದು ವಿಶೇಷವಾಗಿದೆ ಎಂದು ಹೇಳಿದ್ದಾರೆ.  

Advertisement

Wordpress Social Share Plugin powered by Ultimatelysocial