ಮಹಾಮಾರಿ ಕರೋನ ದಿಂದ ರಾಜ್ಯದಾದ್ಯಂತ ಲಾಕ್ ಡೌನ್ ಆಗಿ ಎಲ್ಲರಿಗೂ ಒಂದೊಂದು ಸಮಸ್ಯೆ ಇದ್ದರೆ ಕೆಲವರಿಗೆ ಮಾತ್ರ ಒಂದು ಹೊತ್ತಿನ ತುತ್ತು ಊಟಕ್ಕೂ ಸಂಕಷ್ಟ ಎದುರಾಗಿದೆ. ಇಂತಹ ಪರಿಸ್ಥಿತಿ ನಡುವೆಯೂ ಕನ್ನಡ ಚಿತ್ರ ರಂಗದ ಕೆಲವು ನಟರು ಹಾಗೂ ಅವರ ಅಭಿಮಾನಿಗಳಿಂದ ಸಹಾಯ ಮಾಡುತ್ತಿದ್ದು, ಅದೇ ರೀತಿ ಗಣಿನಾಡು ಬಳ್ಳಾರಿಯಲ್ಲಿ ಕೂಡ ಬಡ ಜನರ ಊಟದ ಸೇವೆಗಾಗಿ ಸತತ ೨೫ ದಿನಗಳಿಂದ ಪೊಗರು ಚಿತ್ರ ನಟ ಧ್ರುವ ಸರ್ಜಾ ಅವರ […]

ಪ್ರತಿಯೊಬ್ಬ ಮನುಷ್ಯನ ಸಾಧನೆ ಹಾಗೂ ಯಶಸ್ಸನ್ನು ಕೆದಕಿದರೆ ಅದರ ಹಿಂದೆ ಕಷ್ಟಗಳ ಕೂಪವೇ ತೆರೆದುಕೊಳ್ಳತ್ತದೆ. ಇಂದು ಕ್ರಿಕೆಟ್ ಜಗತ್ತಿನ ದೊರೆಯಾಗಿ ರಾರಾಜಿಸುತ್ತಿರುವ ಟೀಂ ಇಂಡಿಯಾ ನಾಯಕ ಹಾಗೂ ಅಗ್ರಮಾನ್ಯ ಬ್ಯಾಟ್ಸ್​​ಮನ್ ವಿರಾಟ್​ ಕೊಹ್ಲಿ ಕೂಡ ಅಂದು ಹಲವು ಕಷ್ಟಗಳನ್ನ ಎದುರಿಸಿಯೇ ಬಂದರು ಅನ್ನೋದು ತುಂಬಾ ಜನಕ್ಕೆ ಗೊತ್ತಿಲ್ಲ. ತಾವು ಇತರರಿಗಿಂತ ಚೆನ್ನಾಗಿಯೇ ಆಡಿದ್ದರೂ ತಂಡಕ್ಕೆ ಆಯ್ಕೆಯಾಗದಿದ್ದಕ್ಕೆ ಕೊಹ್ಲಿ ರಾತ್ರಿಯಿಡೀ ಅತ್ತಿದ್ದರಂತೆ. ಈ ಕುರಿತು ಸ್ವತಃ ಟೀಮ್ ಇಂಡಿಯಾ ಕ್ಯಾಪ್ಟನ್ ಅಂದಿನ […]

ಕರ್ನಾಟಕದಲ್ಲಿ ಕೊರೊನಾ ವೈರಸ್ ಭೀತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇಂದು ಒಂದೇ ದಿನ 7 ಜನರಿಗೆ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದೆ. ಈ ಮೂಲಕ ಸೋಂಕಿತರ ಸಂಖ್ಯೆ 425 ಕ್ಕೆ ಏರಿಕೆಯಾಗಿದೆ. ಈ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ನಿಂದ ತಿಳಿದು ಬಂದಿದೆ, ಕಲಬುರಗಿಯಲ್ಲಿ ಇಂದು 4 ತಿಂಗಳ ಮಗು ಸೇರಿದಂತೆ ಹೊಸದಾಗಿ 5 ಜನರಿಗೆ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ. ಕಲಬುರಗಿಯ ಐದು ಜನರಿಗೆ […]

ಬೆಂಗಳೂರು : ಲಾಕ್ ಡೌನ್ ನಿಂದಾಗಿ ಅಗತ್ಯ ವಸ್ತುಗಳು ಸಿಗದೇ ಕಷ್ಟದಲ್ಲಿರುವ ನಗರದ ಜನತೆಗೆ ,ಮಹಾನಗರ ಪಾಲಿಕೆ ಸಿಹಿಸುದ್ದಿ ನೀಡಿದ್ದು, ಅಗತ್ಯ ವಸ್ತುಗಳನ್ನು ಪೂರೈಸುವ ಸಹಾಯವಾಣಿಯನ್ನು ಆರಂಭಿಸಿದೆ. ಜನರು ಹೋಂ ಡೆಲಿವರಿ ಸಹಾಯವಾಣಿ ೦೮೦-೬೧೯೧೪೯೬೦ ಸಂಖ್ಯೆಗೆ ಕರೆ ಮಾಡಿದರೆ ದಿನಸಿ, ತರಕಾರಿ,ಔಷಧಿ ಮುಂತಾದ ಅಗತ್ಯ ವಸ್ತುಗಳನ್ನು ಮನೆಗೆ ತಲುಪಿಸಲಾಗುತ್ತದೆ. ಇದಕ್ಕೆ ಹೆಚ್ಚುವರಿಯಾಗಿ ೧೦ ರೂ. ಸೇವಾಶುಲ್ಕ ಪಡೆಯಲಾಗುತ್ತದೆ. ಖಾಸಗಿ ಏಜೆನ್ಸಿಯ ಸಹಯೋಗದಲ್ಲಿ ಅಗತ್ಯ ವಸ್ತುಗಳನ್ನು ನೀಡಲಾಗುತ್ತದೆ. ಇದಕ್ಕಾಗಿ ೫ ಸಾವಿರ […]

ಬೆಂಗಳೂರು : ಪಾದರಾಯನಪುರ ಗೂಂಡಾಗಿರಿ ಪ್ರಕರಣದಲ್ಲಿ ಪುಂಡರಿಗೆ ಸಪೋರ್ಟ್ ಮಾಡಿದ್ದ ಕಾಂಗ್ರೆಸ್ ಶಾಸಕ ಜಮೀರ್ ಅಹಮ್ಮದ್ ಗೆ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಪಾದರಾಯನಪುರ ಗೂಂಡಾಗಿರಿ ಪ್ರಕರಣದಲ್ಲಿ ಶಾಸಕ ಜಮೀರ್ ಅಹಮ್ಮದ್ ದಿನಕ್ಕೊಂದು ಹೇಳಿಕೆ ಕೊಡುತ್ತಿರುವ ಹಿನ್ನಲೆ ತಮ್ಮ ನಿವಾಸಕ್ಕೆ ಕರೆಸಿಕೊಂಡ ಸಿದ್ದರಾಮಯ್ಯ ಎಚ್ಚರಿಕೆಯಿಂದ ಮಾತನಾಡುವಂತೆ ತಿಳಿಸಿದ್ದಾರೆ. ದಿನಕ್ಕೊಂದು ಹೇಳಿಕೆ ನೀಡಬೇಡ. ಇದರಿಂದ ಪಕ್ಷಕ್ಕೆ ಡ್ಯಾಮೇಜ್ ಆಗುತ್ತದೆ. ಸುಮ್ಮನೆ ವಿವಾದ ಮಾಡಿಕೊಳ್ಳಬೇಡ. ತಪ್ಪು ನಡೆದಿದೆ, ಪೊಲೀಸರು ಅವರ […]

ವಾಷಿಂಗ್ಟನ್: ಕೊರೊನಾ ಸೊಂಕಿನಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಅಮೆರಿಕ, ಜಗತ್ತಿನಲ್ಲಿಯೇ ಅತ್ಯಧಿಕ ಕೋವಿಡ್-೧೯ ಪ್ರಕರಣಗಳನ್ನು ಹೊಂದಿದೆ. ಕಳೆದ ೨೪ ಗಂಟೆಗಳಲ್ಲಿ ಸೊಂಕಿನಿಂದ ೨,೭೦೦ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ. ಜಾನ್ಸ್ ಹಾಪ್‌ಕಿನ್ಸ್ ಯೂನಿವರ್ಸಿಟಿ ಮಾಹಿತಿ ಪ್ರಕಾರ ಒಂದೇ ದಿನದಲ್ಲಿ ೨,೭೫೧ ಮಂದಿ ಕೊರೊನಾ ವೈರಸ್ ಸೋಂಕಿಗೆ ಬಲಿಯಾಗಿದ್ದು, ೪೪,೮೫೪ ಜನ ಸಾವಿಗೀಡಾಗಿದ್ದಾರೆ. ಬಿಎನ್‌ಒ ನ್ಯೂಸ್ ವೆಬ್‌ಸೈಟ್ ಪ್ರಕಾರ, ಜಗತ್ತಿನಾದ್ಯಂತ ೨೪,೭೯,೪೯೮ ಪ್ರಕರಣಗಳು ದಾಖಲಾಗಿದ್ದು, ಸೊಂಕಿನಿಂದ ೧,೭೦,೩೨೨ ಮಂದಿ ಮೃತಪಟ್ಟಿದ್ದಾರೆ. ಹಾಗೂ ೬,೧೨,೬೮೧ ಜನ […]

ಆರೋಗ್ಯ ಸಿಬ್ಬಂದಿಗಳ ತಂಟೆಗೆ ಬಂದ್ರೇ  ಹುಷಾರ್. ಹಲ್ಲೆ, ದೌರ್ಜನ್ಯ ಮಾಡಿದ್ರೆ ಕೈ ಕಾಲ್ ಕಟ್. ಕೊರೊನಾ ವಾರಿಯರ್ಸ್ ತಂಟೆಗೆ ಬರಬೇಡಿ ಎಂದು ಮುದ್ದೇಬಿಹಾಳ ಶಾಸಕ ಎ.ಎಸ್.ಪಾಟೀಲ್  ನಡಹಳ್ಳಿ ಖಡಕ್ ಎಚ್ಚರಿಕೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ  ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಕೊರೊನಾ ವಾರಿಯರ್ಸ್ ಮೇಲೆ ಹಲ್ಲೆ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಹಲ್ಲೆ ಮಾಡಿದ್ರೆ ಅಂತವರ ಕೈ ಕಾಲು ಮುರಿಯಿರಿ ಎಂದು ಪೊಲೀಸ್ ಅಧಿಕಾರಿಗಳಿಗೆ ಖಡಕ್ ನಿರ್ದೇಶನ ನೀಡಿದ್ದಾರೆ.  

ನವದೆಹಲಿ : ಕರ್ತವ್ಯ ನಿರ್ವಹಣೆ ವೇಳೆ ವೈದ್ಯರಿಗೆ ಸೂಕ್ತ ಭದ್ರತೆ ನೀಡುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಮಾರಕ ಕೊರೊನಾ ವೈರಸ್ ದೇಶಾದ್ಯಂತ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ ವೈದ್ಯರು, ವೈದ್ಯಕೀಯ ಸಿಬ್ಬಂದಿ ಹಗಲಿರುಳು ತಮ್ಮ ಜೀವದ ಹಂಗು ತೊರೆದು ಶ್ರಮಿಸುತ್ತಿದ್ದಾರೆ. ಹೀಗಿದ್ದರೂ ದೇಶದ ವಿವಿಧೆಡೆ ಕರ್ತವ್ಯನಿರತ ವೈದ್ಯರ ಮೇಲೆ ಹಲ್ಲೆ, ದೌರ್ಜನ್ಯ ಘಟನೆಗಳು ವರದಿಯಾಗುತ್ತಲೇ ಇವೆ. ಹೀಗಾಗಿ ವೈದ್ಯರು ಸಾಂಕೇತಿಕ ಪ್ರತಿಭಟನೆಗೆ ಮುಂದಾಗಿದ್ದಾರೆ. ಈ ಬೆನ್ನಲ್ಲೇ ಇಂದು […]

ಮೈಸೂರು : ಬೆಂಗಳೂರಿನ ಪಾದರಾಯನಪುರದಲ್ಲಿ ನಡೆದ ಹಲ್ಲೆ ಪ್ರಕರಣ ಖಂಡನೀಯ. ಘಟನೆ ಕುರಿತು ಬೇಜವಾಬ್ದಾರಿ ತೋರಿದ ಶಾಸಕ ಜಮೀರ್ ಅಹಮದ್ ರನ್ನು ಕಾಂಗ್ರೆಸ್ ಪಕ್ಷವೇ ಹೊರ ಹಾಕಬೇಕೆಂದು ಮಾಜಿ ಸಚಿವ ಹೆಚ್.ವಿಶ್ವನಾಥ್ ಆಗ್ರಹಿಸಿದ್ದಾರೆ. ಇಂದು ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಮೀರ್ ಹೇಳಿಕೆ ವಿಚಾರವಾಗಿ ಕಾಂಗ್ರೆಸ್ ನಾಯಕರಿಗೆ ಪ್ರಶ್ನೆ ಮಾಡಿದ ವಿಶ್ವನಾಥ್, ಜಮೀರ್ ಮಾತುಗಳು ಸಾಮಾನ್ಯ ಅಲ್ಪ ಸಂಖ್ಯಾತರ ಭವಿಷ್ಯಕ್ಕೆ ಮುಳುವಾಗಿದೆ. ಜಮೀರ್ ಅಹಮದ್ ಖಾನ್ ಅವರದ್ದು ಸಮಾಜಘಾತುಕ ನಡವಳಿಕೆ. […]

ಧಾರವಾಡ: ಕೊರೊನಾ ಕಂಟಕ ವಿಶ್ವದಾದ್ಯಂತ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದು, ಜನ ಗೃಹ ಬಂಧನದಲ್ಲಿದ್ದಾರೆ. ಇತ್ತ ಮದುವೆ ನಿಶ್ಚಯವಾಗಿ ಹಸೆಮಣೆ ಏರಬೇಕಿದ್ದ ಬಹುತೇಕ ಜೋಡಿಗಳು ಮದುವೆ ಮುಂದೂಡಿದ್ದರೆ, ಕೆಲವರು ಸರಳವಾಗಿ ವಿವಾಹವಾಗಿದ್ದಾರೆ. ಆದ್ರೆ ಧಾರವಾಡದಲ್ಲಿ ಡಿಫರೆಂಟ್ ಮದುವೆ ನಡೆದಿದೆ. ಲಾಕ್‌ಡೌನ್ ಪಾಲಿಸುವುದರೊಂದಿಗೆ ಈ ಜೋಡಿ ಆನ್‌ಲೈನ್‌ನಲ್ಲಿಯೇ ಸತಿ-ಪತಿ ಆಗಿದ್ದಾರೆ. ಧಾರವಾಡದ ಯುವಕ ಇಮ್ರಾನ್ -ಕೊಪ್ಪಳ ತಾಜಮಾ ಬೇಗಂ ಎಂಬುವರನ್ನು ವಿಡಿಯೋ ಕಾಲ್ ಮೂಲಕ ವರಿಸಿದ್ದಾರೆ. ಈ ಇಬ್ಬರ ಅಂತರ್ಜಾಲ ಮದುವೆಗೆ ಹಿರಿಯರು […]

Advertisement

Wordpress Social Share Plugin powered by Ultimatelysocial