ದೇಶದಲ್ಲಿ ಕೊರೊನಾ ಜಿಹಾದ್ ನಡೆಯುತ್ತಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಆರೋಪ ಮಾಡಿದ್ದಾರೆ. ಇಂದು ಉಡುಪಿಯಲ್ಲಿ ಮಾತನಾಡಿದ ಅವರು, ಕರೋನಾ ಸೋಂಕಿತ ವ್ಯಕ್ತಿ ವೈದ್ಯರನ್ನು ತಬ್ಬಿಕೊಳ್ಳುತ್ತಾನೆ. ನರ್ಸ್ ಗಳಿಗೆ ರೋಗ ಹಬ್ಬಿಸುವ ಬೆದರಿಕೆ ಹಾಕತ್ತಾನೆ. ಇದು ಭಯೋತ್ಪಾದನೆ ಮುಂದುವರಿದ ಭಾಗವಾಗಿದೆ. ಕ್ವಾರಂಟೈನ್ ಜಿಹಾದಿಗಳಿಗೆ ಜೀವಾವಧಿ ಶಿಕ್ಷೆ ನೀಡಬೇಕು. ಇಂತಹವರನ್ನು ದೇಶದ್ರೋಹಿಗಳೆಂದು ಘೋಷಿಸಬೇಕು ಅವರಿಗೆ ಕಠಿಣ ಕಾನೂನು ಜಾರಿಗೊಳಿಸಬೇಕು ಎಂದರು. ಇನ್ನೂ ಕೇರಳ ಕೊರೊನಾ ರೆಡ್ ಜೋನ್ ಕುರಿತು ಮಾತನಾಡಿದ ಅವರು, […]

ಬೆಂಗಳೂರಿನಲ್ಲಿ 144 ನಿಷೇಧಾಜ್ಞೆ ಜಾರಿಯಲ್ಲಿದ್ದು , ಗುಂಪು ಸೇರುವುದನ್ನು ನಿಷೇಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಮನೆಯಿಂದ ಯಾರೂ ಹೊರಗೆ ಬರಬಾರದು. ಈಗಾಗಲೇ ಹೀಗಾಗಿ ಮನೆಯ ಮುಂದೆ, ಬಾಲ್ಕನಿಯಲ್ಲೇ ಸಾಮಾಜಿಕ ಅಂತರ ಕಾಯ್ದುಕೊಂಡು ದೀಪ ಬೆಳಗಿಸಿ. ಮನೆಯಿಂದ ಯಾರೂ ಹೊರಗೆ ಬರಬೇಡಿ. ಸಾರ್ವಜನಿಕ ಸ್ಥಳಗಳಲ್ಲಿ ಗುಂಪು ಸೇರಿ ದೀಪ ಬೆಳಗಿಸುವುದು ನಾಲ್ಕಕ್ಕಿಂತ ಹೆಚ್ಚು ಜನ ಸೇರುವುದು, ಪಟಾಕಿ ಹಚ್ಚುವುದು ಮಾಡಬಾರದು.ಯಾವುದೇ ವ್ಯಕ್ತಿ […]

ದೆಹಲಿಯ ನಿಜಾಮುದ್ದೀನ್ ಪ್ರಾರ್ಥನೆಯಲ್ಲಿ ಭಾಗಿಯಾಗಿದ್ದವರು ಸಹಕಾರ ನೀಡಲ್ಲ ಅಂದ್ರೆ ಇವರ ಮನಸ್ಥಿತಿ ಏನೆಂದು ಅರ್ಥ ಮಾಡಿಕೊಳ್ಳಬೇಕಾಗಿದೆ. ಎಂದು ಬಿಜೆಪಿ ಶಾಸಕ ಸೋಮಸೇಖರ್ ರೆಡ್ಡಿ ಆರೋಪ ಮಾಡಿದ್ದಾರೆ. ಬಳ್ಳಾರಿಯಲ್ಲಿ ಮಾತನಾಡಿದ ಅವರು, ಇದರಿಂದ ತಮಿಳುನಾಡು, ಆಂಧ್ರದಲ್ಲಿ ಕೊರೊನಾ ಹೆಚ್ಚಾಗಿದೆ. ಆದರೆ ಎಲ್ಲರೂ ಉಗ್ರರ ಮನಸ್ಥಿತಿಯವರು ಎಂದು ಹೇಳಲ್ಲ. ಬಳ್ಳಾರಿ ಸೇರಿ ಕೆಲವು ಕಡೆ ಜನರು ಸ್ಪಂದನೆ ನೀಡುತ್ತಿದ್ದಾರೆ. ಎಲ್ಲರೂ ಚಿಕಿತ್ಸೆಗೆ ಸ್ಪಂದಿಸಿದರೆ ಸೋಂಕಿತರು ಹೆಚ್ಚಾಗುತ್ತಿರಲಿಲ್ಲ ಯಾರು ಏನೇ ಮಾಡಿದರೂ ಭಗವಂತ ನಮ್ಮನ್ನ […]

ಕೊರೋನಾ ಸೋಂಕು ವಿರುದ್ಧ ಭಾರತೀಯರು ಒಗ್ಗಟ್ಟು ಪ್ರದರ್ಶಿಸಲು ಇಂದು ರಾತ್ರಿ 9 ಗಂಟೆಗೆ 9 ನಿಮಿಷ ವಿದ್ಯುತ್ ದ್ದೀಪಗಳನ್ನು ಆರಿಸಿ ಹಣತೆ, ದೀಪ ಹಚ್ಚಿ ಎಂದು ಪ್ರಧಾನಿ ಮೋದಿ ಕರೆ ನೀಡಿದ್ದರು. ಅದಕ್ಕೆ ಕ್ಷಣಗಣನೆ ಆರಂಭವಾಗಿದ್ದು 9pm9minute ಎಂದು ಮೋದಿ ಅವರು ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಮೂಲಕ ಮತ್ತೊಮ್ಮೆ ಎಚ್ಚರಿಸಿದ್ದಾರೆ.   ವರದಿ: ಪೊಲಿಟಿಕಲ್ ಬ್ಯೂರೊ ಸ್ಪೀಡ್ ನ್ಯೂಸ್ ಕನ್ನಡ

ರಾಯಚೂರು ಜಿಲ್ಲೆಯ ಸಿಂಧನೂರು ಪಟ್ಟಣಕ್ಕೆ ಇಂದು ಆರೋಗ್ಯ ಸಚಿವ ಶ್ರೀರಾಮುಲು ಭೇಟಿ ನೀಡಿ ಕೊರೊನಾ ತಡೆಗೆ ಕೈಗೊಳ್ಳಲಾಗಿರುವ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದರು. ಈ ವೇಳೆ, ಸಾರ್ವಜನಿಕರಿಗೆ ಮಾಸ್ಕ್ ವಿತರಿಸಲಾಯಿತು. ಈ ಸಂದರ್ಭ ಆರೋಗ್ಯ ಸಚಿವರು ಸಾಮಾಜಿಕ ಅಂತರದ ನಿಯಮವನ್ನು ಗಾಳಿಗೆ ತೂರಿದರು. ತಾವು ಮಾಸ್ಕ್ ಧರಿಸದೇ, ಸ್ಯಾನಿಟೈಸರ್ ಬಳಸದೇ ಸಾರ್ವಜನಿಕರಿಗೆ ಮಾಸ್ಕ್ ವಿತರಿಸಿದರು. ಈ ಕುರಿತಂತೆ ಸಾರ್ವಜನಿಕ ವಲಯದಲ್ಲಿ ಸಚಿವರೇ ನಿಯಮ ಉಲ್ಲಂಘಿಸಿದ ಬಗ್ಗೆ ಚರ್ಚೆಗೆ ಗ್ರಾಸವಾಗಿದೆ. ರಾಜ್ಯ […]

ಜನತೆಯು ಜಾತಿ, ಮತ ಧರ್ಮವನ್ನು ಬದಿಗಿಟ್ಟು ಕೋವಿಡ್-19 ವೈರಸ್ ವಿರುದ್ಧ ಒಗ್ಗಟ್ಟಿನಿಂದ ಹೋರಾಡಬೇಕೆಂದು ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ಮೋಹನ್ ರೆಡ್ಡಿ,ಹೇಳಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಕರೆಯಂತೆ ರವಿವಾರ ರಾತ್ರಿ 9 ಗಂಟೆಗೆ ದೀಪವನ್ನು ಬೆಳಗಿಸಬೇಕು. ನಮ್ಮ ರಾಜ್ಯದ ಕೆಲವು ಜನರು ದೆಹಲಿಯಲ್ಲಿ ಧಾರ್ಮಿಕ ಸಮಾವೇಶಕ್ಕೆ ತೆರಳಿದ್ದರು. ಆ ಸಮಾವೇಶದಲ್ಲಿ ವಿದೇಶ ರಾಷ್ಟ್ರದಿಂದಲೂ ಸದಸ್ಯರು ಬಂದಿದ್ದರು. ಕೆಲವರು ವೈರಸ್ ಸೋಂಕಿಗೆ ಒಳಗಾಗಿದ್ದು, ಅಲ್ಲಿಂದ ವೈರಸ್ ಹರಡಿದೆ. ಆದರೆ, ವೈರಸ್ ಹರಡುವಿಕೆಗೆ ಒಂದು […]

ದೇಶಾದ್ಯಂತ ಕೊರೋನಾ ಹಬ್ಬಿಸುವ ದುಷ್ಕೃತ್ಯ ನಡೆದಿದ್ದು, ಇದರ ಹಿಂದೆ ಜೆಹಾದಿ ವಾಸನೆ ಕಂಡುಬರುತ್ತಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದರು. ಚಿಕ್ಕಮಗಳೂರನಲ್ಲಿ ಮಾತನಾಡಿದ ಅವರು, ದೆಹಲಿ ಸಮಾವೇಶದಲ್ಲಿ ಭಾಗ ವಹಿಸಿದ್ದವರನ್ನು ಪತ್ತೆ ಹಚ್ಚುವ ಕೆಲಸವನ್ನು ಪೊಲೀಸರು ಮಾಡುತ್ತಿದ್ದಾರೆ. ಬೆಂಗಳೂರಿನ ಸಾದಿಕ್ ನಗರದ ಕೋವಿಡ್ 19 ಪೀಡಿತರ ಮಾಹಿತಿ ಕಲೆ ಹಾಕಲು ಆಶಾ ಕಾರ್ಯಕರ್ತೆ ಹೋದ ಸಂದರ್ಭ ಅವರ ಮೇಲೆ ಹಲ್ಲೆ ನಡೆದಿರುವುದು ಒಂದು ಸಮುದಾಯ ಕೊರೊನಾ ತಡೆಗೆ ಸಹಕಾರ ನೀಡುತ್ತಿಲ್ಲ […]

ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನೆರೆದಿದ್ದ ಜನರಿಗೆ ಇಂದು ಭಾನುವಾರ ಅಚ್ಚರಿ ಕಾದಿತ್ತು. ಪ್ರಯಾಣಿಕರನ್ನು ಬರಮಾಡಿಕೊಳ್ಳಲು ವಿಮಾನ ನಿಲ್ದಾಣಕ್ಕೆ ಬಂದಿದ್ದವರಿಗೆ ನಿಜಕ್ಕೂ ಪರಮಾಶ್ಚರ್ಯ. ಇಂದು ಐಶ್ವರ್ಯಾ ರೈ ಬಚ್ಚನ್ ಹಾಗೂ ಪತಿ ಅಭಿಷೇಕ್ ಬಚ್ಚನ್ ಮಂಗಳೂರಿಗೆ ಆಗಮಿಸಿದ್ದರು. ಮಂಗಳೂರು ಮೂಲದವರಾಗಿರುವ ಐಶ್ವರ್ಯಾ ರೈ ತನ್ನ ಚಿಕ್ಕಪ್ಪನ ಶ್ರಾದ್ಧ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮಂಗಳೂರಿಗೆ ಆಗಮಿಸಿದ್ದಾರೆ.

ಬೆಳಗಾವಿ ಅತ್ಯಂತ ದೊಡ್ಡ ಜಿಲ್ಲೆಯಾಗಿದ್ದು, ಮೂರು ಜಿಲ್ಲೆಯಾಗುವಷ್ಟು ವಿಸ್ತಾರವಾಗಿದೆ ಎಂದು ನಮ್ಮ ಒತ್ತಾಯವಿದೆ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. ಬೆಳಗಾವಿಯಲ್ಲಿ ಮಾತನಾಡಿದ ಅವರು ಇದೇ ವೇಳೆ ರಮೇಶ್ ಜಾರಕಿಹೊಳಿ ಅಳಿಯ ಅಂಬಿರಾವ್ ಪಾಟೀಲ್ ವಿರುದ್ಧವೂ ವಾಗ್ದಾಳಿ ನಡೆಸಿದರು. ಅವರ ಪ್ರಾಬಲ್ಯ ಬಹಳ ಇದ್ದು, ಜನರಿಗೆ ಸುಖಾ ಸುಮ್ಮನೆ ತೊಂದರೆ ಕೊಡುತ್ತಿದ್ದಾರೆ. ಇದನ್ನು ನೋಡಿ ಸುಮ್ಮನೇ ಕುಳಿತುಕೊಳ್ಳಲು ಸಾಧ್ಯವಿಲ್ಲ ಎಂದು ಸತೀಶ್ ಜಾರಕಿಹೊಳಿ ಹೇಳಿದರು. ಗೋಕಾಕ್ ನಲ್ಲಿ ಕತ್ತೆಗೆ […]

Advertisement

Wordpress Social Share Plugin powered by Ultimatelysocial