ಒಂದೆಡೆ ಭರ್ಜರಿ ವ್ಯಾಪಾರ, ಮತ್ತೊಂದೆಡೆ ದೇವಾನುದೇವತೆಗಳ ಆರ್ಭಟ,ವೇದಿಕೆಯಲ್ಲಿ ಬಗೆ ಬಗೆಯ ವೇಷ ತೊಟ್ಟು ಗಮನ ಸೆಳೆದ ಪುಟಾಣಿಗಳು ಚಿಣ್ಣರ ಕೈಯ್ಯಿಂದ ಪಾನಿಪೂರಿ ಸವಿದ ಡಿಸಿ, ಎಸ್ಪಿ, ಸಿಇಒ ಕಿತ್ತಳೆ ಹಣ್ಣು ಖರೀದಿಸಿದ ಶಾಸಕರ ರಂಜನ್‌. ಎಲ್ಲೆಲ್ಲೂ ಮಕ್ಕಳದ್ದೇ ಸಂಭ್ರಮ… ಮಕ್ಕಳ ಸಂತೆ, ಅಂಗಡಿ ಮಳಿಗೆಗಳನ್ನು ಕುತೂಹಲದಿಂದ ವೀಕ್ಷಿಸಿದ ಸಾರ್ವಜನಿಕರು. ಇವು, ರೋಟರಿ ಮಿಸ್ಟಿಹಿಲ್ಸ್‌ ವತಿಯಿಂದ ಮಡಿಕೇರಿ ದಸರಾ ಸಮಿತಿ ಸಹಯೋಗದಲ್ಲಿ ನಗರದ ಗಾಂಧಿ ಮೈದಾನದಲ್ಲಿ ಬುಧವಾರ ನಡೆದ 7ನೇ ವರ್ಷದ […]

ಕನ್ನಡಿಗ ಮಯಾಂಕ್ ಅಗರ್‌ವಾಲ್ ದ್ವಿಶತಕ ಸಿಡಿಸಿ ಸಂಭ್ರಮಿಸಿದ್ದಾರೆ. ಇದರ ಜತೆಗೆ ಚೊಚ್ಚಲ ಟೆಸ್ಟ್ ಶತಕವನ್ನು ದ್ವಿಶತಕವನ್ನಾಗಿ ಪರಿವರ್ತಿಸಿದ ಭಾರತದ ನಾಲ್ಕನೇ ಬ್ಯಾಟ್ಸ್‌ಮನ್ ಎನ್ನುವ ಗೌರವಕ್ಕೆ ಪಾತ್ರರಾಗಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ. ಕನ್ನಡಿಗ ಮಯಾಂಕ್ ಅಗರ್ ವಾಲ್ ತಮ್ಮ ಚೊಚ್ಚಲ ಶತಕವನ್ನು ದ್ವಿಶತಕವನ್ನಾಗಿ ಪರಿವರ್ತಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಮಯಾಂಕ್ ಅಗರ್‌ವಾಲ್ 358 ಎಸೆತಗಳಲ್ಲಿ ದ್ವಿಶತಕ ಪೂರೈಸಿದ್ದಾರೆ. ಅವರ ಮನಮೋಹಕ ಇನಿಂಗ್ಸ್’ನಲ್ಲಿ 22 ಬೌಂಡರಿ […]

ಟ್ಯಾಟೂ ಪ್ರಿಯ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ಅಭಿಮಾನಿಯೊಬ್ಬನನ್ನ ಅಪ್ಪಿಕೊಳ್ಳುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅರೇ ಅದರಲ್ಲೇನು ವಿಶೇಷ ಅಂತಿರಾ, ಈ ಸ್ಟೋರಿ ಓದಿ, ನಿಮಗೆ ತಿಳಿಯುತ್ತೆ. ಭಾರತ ಕ್ರಿಕೆಟ್‌ ತಂಡದ ನಾಯ​ಕ ವಿರಾಟ್‌ ಕೊಹ್ಲಿ ಯಾವುದೇ ಮೈದಾ​ನ​ದಲ್ಲಿ ಆಡು​ತ್ತಿ​ದ್ದರೂ ಅಭಿ​ಮಾ​ನಿ​ಗಳನ್ನು ಸೆಳೆ​ಯು​ತ್ತಾರೆ. ವಿಶೇಷ ಅಭಿ​ಮಾ​ನಿ​ಯನ್ನು ಮೊದಲ ಟೆಸ್ಟ್‌ ಆರಂಭಕ್ಕೂ ಮುನ್ನ ಸುದ್ದಿ​ಗೋಷ್ಠಿಯಲ್ಲಿ ವಿರಾಟ್‌ ಕೊಹ್ಲಿ ಭೇಟಿ​ಯಾ​ಗಿದ್ದು, ತಾವಾ​ಗಿಯೇ ಅಭಿ​ಮಾ​ನಿ​ಯನ್ನು ಅಪ್ಪಿ​ಕೊಂಡರು.

ಉತ್ತರ ಕರ್ನಾಟಕದ ನೆರೆ ಪರಿಹಾರಕ್ಕೆ ಕೇಂದ್ರ ಸರ್ಕಾರ ಒಂದು ಪೈಸೆ ಹಣ ಬಿಡುಗಡೆ ಮಾಡಿಲ್ಲ ಎಂಬ ಆಕ್ರೋಶ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಕರ್ನಾಟಕ ಬಿಜೆಪಿ ಸಂಸದರ ವಿರುದ್ಧ ಆಕ್ರೋಶಗಳು ವ್ಯಕ್ತವಾಗುತ್ತಿವೆ. ನೆರೆ ಪರಿಹಾರ ವಿಚಾರವಾಗಿ ಇತ್ತೀಚೆಗೆ ಬಿಜೆಪಿ ನಾಯಕರ ವಿರುದ್ಧವೇ ತಿರುಗಿಬಿದ್ದಿದ್ದ ಬಿಜೆಪಿ ಶಾಸಕ ಯತ್ನಾಳ್​ ಮತ್ತೆ ಕೇಂದ್ರದ ವಿರುದ್ಧ ಕಿಡಿಕಾರಿದ್ದು, ಚಿಂತಕ ಚಕ್ರವರ್ತಿ ಸೂಲಿಬೆಲೆ ಪರ ಬ್ಮಾಟಿಂಗ್ ಮಾಡಿದ್ದಾರೆ. ಹಾಗಾದ್ರೆ ರಾಜ್ಯದ ಸ್ವಪಕ್ಷದ ಸಂಸದರನ್ನ ತರಾಟೆಗೆ ತೆಗೆದುಕೊಂಡ ವೈಖರಿ […]

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಮಂಡಿಸಿರುವ ಬಜೆಟ್‌ನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸೆಸ್‌ ಏರಿಕೆ ಮಾಡಲಾಗಿದೆ. ಇದರ ಪರಿಣಾಮದಿಂದ ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆಯಾಗಲಿದೆ. ಹೊಸದಿಲ್ಲಿ: ಕೇಂದ್ರ ಸರಕಾರ ಮಂಡಿಸಿರುವ ಬಜೆಟ್‌ನಲ್ಲಿ ಪೆಟ್ರೋಲ್‌, ಡೀಸೆಲ್ ಮೇಲಿನ ಸೆಸ್‌ ಏರಿಕೆ ಮಾಡಿರುವ ಹಿನ್ನೆಲೆಯಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ದರ ಮತ್ತೆ ಹೆಚ್ಚಳವಾಗುವ ಸಾಧ್ಯತೆ ನಿಚ್ಚಳವಾಗಿದೆ. ಪೆಟ್ರೋಲ್‌ ಪ್ರತಿ ಲೀಟರ್‌ಗೆ 2.5 ರೂ ಹಾಗೂ ಡೀಸೆಲ್‌ ಪ್ರತಿ ಲೀಟರ್‌ 2.3 ರೂ. ಏರಿಕೆಯಾಗುವ […]

ದೇಶ ಆರ್ಥಿಕ ಹಿಂಜರಿತದಲ್ಲಿದೆ, ಹೀಗಾಗಿ ಹಬ್ಬದ ಸೀಸನ್‌ನಲ್ಲಿ ಶಾಪಿಂಗ್ ಕಥೆ ಏನಾಗಬಹುದು ಅನ್ನೋ ಭೀತಿಯಲ್ಲಿದ್ದ ಉದ್ಯಮ ವರ್ಗಕ್ಕೆ ಸಿಹಿ ಸುದ್ದಿ ಸಿಕ್ಕಿದೆ. ಈ ಬಾರಿಯ ನವರಾತ್ರಿ ಶಾಪಿಂಗ್ ದೇಶಾದ್ಯಂತ ಭರ್ಜರಿಯಾಗಿ ಸಾಗಿದೆ. ಎಕನಾಮಿಕ್‌ ಟೈಮ್ಸ್‌ ಬೆಂಗಳೂರು : ಆರ್ಥಿಕ ಬೆಳವಣಿಗೆಯ ಮಂದಗತಿಯ ಹೊರತಾಗಿಯೂ, ಈ ವರ್ಷದ ಹಬ್ಬಗಳ ಋುತುವಿನ ಮೊದಲ ವಾರದಲ್ಲೇ ಶಾಪಿಂಗ್‌ ನಿರೀಕ್ಷೆಗೂ ಮೀರಿ ಭರ್ಜರಿ ಆರಂಭ ಪಡೆದಿದೆ. ಹೀಗಾಗಿ ಬೃಹತ್‌ ರಿಟೇಲ್‌ ಸರಣಿಗಳು, ಇ-ಕಾಮರ್ಸ್‌ ಕಂಪನಿ, ಮಾಲ್‌ಗಳು ನಿರಾಳವಾಗಿವೆ.

ಪಂಚಕುಲ (ಹರಿಯಾಣ): ಪ್ರಸಕ್ತ ಲೀಗ್‌ನಲ್ಲಿ ಅತ್ಯಂತ ಬಲಿಷ್ಠ ತಂಡವಾಗಿ ಹೊರಹೊಮ್ಮಿರುವ ದಬಾಂಗ್‌ ಡೆಲ್ಲಿ ತಂಡದ ಗರ್ವ ಮುಡಿಯುವಲ್ಲಿ ಯಶಸ್ವಿಯಾದ ಬೆಂಗಾಲ್‌ ವಾರಿಯರ್ಸ್‌ ತಂಡ ದಿಲ್ಲಿ ಪಡೆಗೆ 42-33 ಅಂಕಗಳಿಂದ ಸೋಲುಣಿಸಿದೆ. ಆದರೂ ಅಂಕಪಟ್ಟಿಯಲ್ಲಿ ದಬಾಂಗ್‌ ತಂಡ ಅಗ್ರಸ್ಥಾನದಲ್ಲೇ ವಿರಾಜಮಾನವಾಗಿದೆ. ಇಲ್ಲಿನ ತಾವು ದೇವೀಲಾಲ್‌ ಕ್ರೀಡಾ ಸಂಕೀಣದಲ್ಲಿ ಸೋಮವಾರ ನಡೆದ ಹೈ ವೋಲ್ಟೇಜ್‌ ಪಂದ್ಯದಲ್ಲಿ ಸಂಘಟಿತ ಪ್ರದರ್ಶನ ನೀಡಿದ ಬೆಂಗಾಲ್‌ ವಾರಿಯರ್ಸ್‌ ಗೆಲುವಿನ ಸಂಭ್ರಮ ಆಚರಿಸಿದರೆ, ದಬಾಂಗ್‌ ಡೆಲ್ಲಿ ತಂಡ ಲೀಗ್‌ನಲ್ಲಿ ತನ್ನ ಮೂರನೇ ಸೋಲಿನ ಕಹಿ […]

ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಮತ್ತಷ್ಟು ದಾಖಲೆಗಳನ್ನು ಪುಡಿಗಟ್ಟಲು ಟೀಮ್‌ ಇಂಡಿಯಾದ ನಾಯಕ ವಿರಾಟ್‌ ಕೊಹ್ಲಿ ಸಜ್ಜಾಗಿದ್ದಾರೆ. ವಿವಿಎಸ್‌ ಲಕ್ಷ್ಮಣ್‌, ಮೊಹಮ್ಮದ್‌ ಅಝರುದ್ದೀನ್‌ ಹಾಗೂ ಸೌರವ್‌ ಗಂಗೂಲಿಗೆ ಸಡ್ಡು ಹೊಡೆಯುವುದನ್ನು ಕೊಹ್ಲಿ ಎದುರು ನೋಡುತ್ತಿದ್ದಾರೆ. ಹೊಸದಿಲ್ಲಿ: ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ಬುಧವಾರ (ಅಕ್ಟೋಬರ್‌ 2) ಶುರುವಾಗಲಿರುವ 3 ಪಂದ್ಯಗಳ ಮೊದಲ ಹಣಾಹಣಿಗೆ ಟೀಮ್‌ ಇಂಡಿಯಾ ಸಜ್ಜಾಗಿದ್ದು, ಕ್ಯಾಪ್ಟನ್‌ ವಿರಾಟ್‌ ಕೊಹ್ಲಿ ಈ ಸರಣಿಯೊಂದಿಗೆ ವಿಶೇಷ ದಾಖಲೆಯನ್ನು ತಮ್ಮದಾಗಿಸಿಕೊಳ್ಳುವ ಕಡೆಗೆ ಎದುರು ನೋಡುತ್ತಿದ್ದಾರೆ. […]

ಸೂರತ್: ಹದಿನೈದರ ಹರೆಯದಲ್ಲೇ ಟೀಮ್‌ ಇಂಡಿಯಾಗೆ ಪದಾರ್ಪಣೆ ಮಾಡಿ ಭಾರತದ ಪರ ಆಡಿದ ಅತ್ಯಂತ ಕಿರಿಯ ವಯಸ್ಸಿನ ಆಗಾರ್ತಿ ಎಂಬ ದಾಖಲೆ ಬರೆದಿದ್ದ ಶೆಫಾಲಿ ವರ್ಮಾ ತಮ್ಮ ಮೊದಲ ಪಂದ್ಯದಲ್ಲಿ ಶೂನ್ಯಕ್ಕೆ ಔಟ್‌ ಆಗಿದ್ದರು. ಆದರೆ, ಮಂಗಳವಾರ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯ 4ನೇ ಟಿ20 ಪಂದ್ಯದಲ್ಲಿ ಕಣಕ್ಕಿಳಿದ ಶೆಫಾಲಿ ಮ್ಯಾಚ್‌ ವಿನ್ನಿಂಗ್‌ ಇನಿಂಗ್ಸ್‌ ಆಡಿದ್ದರು. ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಭಾರತ ಮಹಿಳಾ ಪಡೆ, 17 ಓವರ್‌ಗಳಲ್ಲಿ 4 ವಿಕೆಟ್‌ಗೆ […]

Advertisement

Wordpress Social Share Plugin powered by Ultimatelysocial