ಮಹಿಳಾ ಟಿ20 ಕ್ರಿಕೆಟ್: ಯುವ ತಾರೆ ಶೆಫಾಲಿ ವರ್ಮಾ ಮಿಂಚು ಭಾರತಕ್ಕೆ ಭರ್ಜರಿ ಗೆಲುವು

ಸೂರತ್: ಹದಿನೈದರ ಹರೆಯದಲ್ಲೇ ಟೀಮ್‌ ಇಂಡಿಯಾಗೆ ಪದಾರ್ಪಣೆ ಮಾಡಿ ಭಾರತದ ಪರ ಆಡಿದ ಅತ್ಯಂತ ಕಿರಿಯ ವಯಸ್ಸಿನ ಆಗಾರ್ತಿ ಎಂಬ ದಾಖಲೆ ಬರೆದಿದ್ದ ಶೆಫಾಲಿ ವರ್ಮಾ ತಮ್ಮ ಮೊದಲ ಪಂದ್ಯದಲ್ಲಿ ಶೂನ್ಯಕ್ಕೆ ಔಟ್‌ ಆಗಿದ್ದರು. ಆದರೆ, ಮಂಗಳವಾರ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯ 4ನೇ ಟಿ20 ಪಂದ್ಯದಲ್ಲಿ ಕಣಕ್ಕಿಳಿದ ಶೆಫಾಲಿ ಮ್ಯಾಚ್‌ ವಿನ್ನಿಂಗ್‌ ಇನಿಂಗ್ಸ್‌ ಆಡಿದ್ದರು.

ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಭಾರತ ಮಹಿಳಾ ಪಡೆ, 17 ಓವರ್‌ಗಳಲ್ಲಿ 4 ವಿಕೆಟ್‌ಗೆ 140 ರನ್‌ಗಳ ಸವಾಲಿನ ಮೊತ್ತ ದಾಖಲಿಸಿತು. ಭರ್ಜರಿ ಬ್ಯಾಟಿಂಗ್‌ ಪ್ರದರ್ಶಿಸಿದ ಶೆಫಾಲಿ 33 ಎಸೆತಗಳಲ್ಲಿ 5 ಫೋರ್‌ ಮತ್ತು 2 ಸಿಕ್ಸರ್‌ ಒಳಗೊಂಡ 46 ರನ್‌ಗಳನ್ನು ಚೆಚ್ಚಿ ಅರ್ಧಶತಕದಿಂದ ವಂಚಿತರಾದರು.

Please follow and like us:

tmadmin

Leave a Reply

Your email address will not be published. Required fields are marked *

Next Post

ದ. ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕೊಹ್ಲಿ ಮಿಂಚಿದರೆ ಎಲೈಟ್ ಕ್ಲಬ್ ಸೇರೋದು ಗ್ಯಾರಂಟಿ!

Wed Oct 2 , 2019
ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಮತ್ತಷ್ಟು ದಾಖಲೆಗಳನ್ನು ಪುಡಿಗಟ್ಟಲು ಟೀಮ್‌ ಇಂಡಿಯಾದ ನಾಯಕ ವಿರಾಟ್‌ ಕೊಹ್ಲಿ ಸಜ್ಜಾಗಿದ್ದಾರೆ. ವಿವಿಎಸ್‌ ಲಕ್ಷ್ಮಣ್‌, ಮೊಹಮ್ಮದ್‌ ಅಝರುದ್ದೀನ್‌ ಹಾಗೂ ಸೌರವ್‌ ಗಂಗೂಲಿಗೆ ಸಡ್ಡು ಹೊಡೆಯುವುದನ್ನು ಕೊಹ್ಲಿ ಎದುರು ನೋಡುತ್ತಿದ್ದಾರೆ. ಹೊಸದಿಲ್ಲಿ: ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ಬುಧವಾರ (ಅಕ್ಟೋಬರ್‌ 2) ಶುರುವಾಗಲಿರುವ 3 ಪಂದ್ಯಗಳ ಮೊದಲ ಹಣಾಹಣಿಗೆ ಟೀಮ್‌ ಇಂಡಿಯಾ ಸಜ್ಜಾಗಿದ್ದು, ಕ್ಯಾಪ್ಟನ್‌ ವಿರಾಟ್‌ ಕೊಹ್ಲಿ ಈ ಸರಣಿಯೊಂದಿಗೆ ವಿಶೇಷ ದಾಖಲೆಯನ್ನು ತಮ್ಮದಾಗಿಸಿಕೊಳ್ಳುವ ಕಡೆಗೆ ಎದುರು ನೋಡುತ್ತಿದ್ದಾರೆ. […]

Advertisement

Wordpress Social Share Plugin powered by Ultimatelysocial