“ಕೆರೆಯ ನೀರನ್ನು ಕೆರೆಗೆ ಚೆಲ್ಲಿ’ ಎಂಬ ಮಾತನ್ನು ಪಾಕಿಸ್ತಾನ ಸರ್ಕಾರವು ಅಕ್ಷರಶಃ ಪಾಲಿಸಿದೆ!

ಸ್ಲಾಮಾಬಾದ್‌:“ಕೆರೆಯ ನೀರನ್ನು ಕೆರೆಗೆ ಚೆಲ್ಲಿ’ ಎಂಬ ಮಾತನ್ನು ಪಾಕಿಸ್ತಾನ ಸರ್ಕಾರವು ಅಕ್ಷರಶಃ ಪಾಲಿಸಿದೆ!

ಹೌದು, 2022ರಲ್ಲಿ ತೀವ್ರ ಪ್ರವಾಹ ಎದುರಾದಾಗ ತನಗೆ ಟರ್ಕಿ ದೇಶವು ಕಳುಹಿಸಿಕೊಟ್ಟಿದ್ದ ಪರಿಹಾರ ಸಾಮಗ್ರಿಗಳನ್ನೇ ಪಾಕಿಸ್ತಾನವು ಈಗ ರೀಪ್ಯಾಕ್‌ ಮಾಡಿ ಅದೇ ದೇಶಕ್ಕೆ ಭೂಕಂಪ ಪರಿಹಾರವಾಗಿ ಕಳುಹಿಸಿಕೊಟ್ಟಿದೆ.

ಈ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಮುಜುಗರ ಅನುಭವಿಸಿದೆ.

ಪಾಕ್‌ ಪ್ರಧಾನಿ ಶೆಹಬಾಜ್‌ ಷರೀಫ್ ಅವರು ಭೂಕಂಪ ಪೀಡಿತ ಟರ್ಕಿಗೆ ಪ್ರವಾಸ ಕೈಗೊಂಡಿರುವಾಗಲೇ ಈ ಎಡವಟ್ಟು ನಡೆದಿದೆ.

ತಮಾಷೆಯೆಂದರೆ, ಟರ್ಕಿ ಸರ್ಕಾರವೇ ಕಳುಹಿಸಿಕೊಟ್ಟ ಪರಿಹಾರ ಸಾಮಗ್ರಿಗಳನ್ನು ನಮ್ಮ ಸರ್ಕಾರ ಟರ್ಕಿಗೇ ಕಳುಹಿಸಿದೆ ಎಂದು ಪಾಕ್‌ ಪತ್ರಕರ್ತ ಶಾಹಿದ್‌ ಮಸೂದ್‌ ಬಹಿರಂಗಪಡಿಸಿದ್ದಾರೆ.

ಹಣದುಬ್ಬರ ಶೇ.38.42ಕ್ಕೆ ಏರಿಕೆ:
ಆರ್ಥಿಕವಾಗಿ ಸಂಕಷ್ಟದಲ್ಲಿ ಇರುವ ಪಾಕಿಸ್ತಾನದ ಹಣದುಬ್ಬರ ಶೇ.38.42ಕ್ಕೆ ಏರಿಕೆಯಾಗಿದೆ. ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್)ಯಿಂದ ಆರ್ಥಿಕ ನೆರವು ಪಡೆಯುವ ಬಗ್ಗೆ ಮಾತುಕತೆಗಳು ಪ್ರಗತಿಯಲ್ಲಿ ಇರುವಂತೆಯೇ ಈ ಬೆಳವಣಿಗೆಯಾಗಿದೆ. ತೈಲೋತ್ಪನ್ನಗಳು, ಅನಿಲದ ಬೆಲೆಯನ್ನು ಐಎಂಎಫ್ ನಿರ್ದೇಶನದ ಅನ್ವಯ ಭಾರೀ ಪ್ರಮಾಣದಲ್ಲಿ ಏರಿಕೆ ಮಾಡಲಾಗಿತ್ತು.

ಪಾಕಿಸ್ತಾನದ ಸಾಂಖ್ಯಿಕ ಇಲಾಖೆ ಶನಿವಾರ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ ಒಂದು ವರ್ಷಕ್ಕೆ ಹೋಲಿಕೆ ಮಾಡಿದರೆ ಹಣದುಬ್ಬರ ಪ್ರಮಾಣ ಶೇ.38.42ಕ್ಕೆ ಏರಿಕೆಯಾಗಿದೆ. ಕಳೆದ ವಾರ 34 ವಸ್ತುಗಳ ದರದಲ್ಲಿ ಏರಿಕೆಯಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪ್ರೀತಿಗೆ ಯಾವುದೇ ಗಡಿಗಳಿಲ್ಲ.

Sun Feb 19 , 2023
ಪ್ರೀತಿಗೆ ಯಾವುದೇ ಗಡಿಗಳಿಲ್ಲ. ಇದು 24 ವರ್ಷದ ಈ ಹುಡುಗಿಯ ವಿಷಯದಲ್ಲಿ ನಿಜವಾಗಿದೆ. ಈ ಹುಡುಗಿ ತನ್ನ ಅಪ್ಪನ ವಯಸ್ಸಿನ ವ್ಯಕ್ತಿಯ ಜೊತೆಗೆ ಮದುವೆಯಾಗಲು ತನ್ನ ಗೆಳೆಯನೊಂದಿಗಿನ ಮದುವೆಯನ್ನು ರದ್ದುಗೊಳಿಸಿ ಸುದ್ದಿಯಾಗಿದ್ದಾಳೆ. ಅಮೆರಿಕದ ಉತ್ತರ ಕೆರೊಲಿನಾದ 24 ವರ್ಷದ ಅಮಂಡಾ ಕ್ಯಾನನ್ ಎಂಬಾಕೆ ಕಾಲೇಜಿನಿಂದಲೂ ಹುಡುಗನೊಬ್ಬನನ್ನು ಪ್ರೀತಿಸುತ್ತಿದ್ದಳು. ನಂತರ 2017 ರಲ್ಲಿ ಏಸ್ ಎಂಬ 54 ವರ್ಷದ ವ್ಯಕ್ತಿಯನ್ನು ಭೇಟಿಯಾದಳು. ಅತ್ತ ಏಸ್​ ಡಿವೋರ್ಸ್​ ಪಡೆದಿದ್ದ. ಇದಾದ ಮೇಲೆ ಮತ್ತೆ […]

Advertisement

Wordpress Social Share Plugin powered by Ultimatelysocial