‘ಬಾಲಿವುಡ್‌ ಡೇ’ ಸೆಲೆಬ್ರೆಟ್ ಮಾಡಿದ ಪಾಕಿಸ್ತಾನದ ವಿದ್ಯಾರ್ಥಿಗಳು:

ಪಾಕಿಸ್ತಾನದ ಲಾಹೋರ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಗುಂಪೊಂದು ತಮ್ಮದೇ ಶೈಲಿಯಲ್ಲಿ ‘ಬಾಲಿವುಡ್ ಡೇ’ ಸೆಲೆಬ್ರೆಟ್ ಮಾಡಿದೆ. ಈ ಸಂಭ್ರಮದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ, ಮೊದಲು ಈ ವಿಡಿಯೋವನ್ನು ಟಿಕ್‌ಟಾನ್‌ನಲ್ಲಿ ಪೋಸ್ಟ್ ಮಾಡಲಾಗಿತ್ತು.ಆ ಬಳಿಕ ಇನ್‌ಸ್ಟಾಗ್ರಾಂನಲ್ಲಿಅನ್ನೋ ಖಾತೆಯಿಂದ ಪೋಸ್ಟ್ ಮಾಡಲಾಗಿತ್ತು. ಈ ವಿಡಿಯೋ ಶಾರುಖ್ ಖಾನ್ ‘ದೇವದಾಸ್’ ಸಿನಿಮಾದಿಂದ ಹಿಡಿದು ಪರೇಶ್‌ ರಾವಲ್ ನಟಿಸಿದ ‘ಹೇರಾ ಪೇರಿ’ ಸಿನಿಮಾ ಬಾಬುರಾಮ್ ಪಾತ್ರದವರೆಗೂ ಬಾಲಿವುಡ್ ಕೆಲವು ಪಾತ್ರಗಳ ಡೈಲಾಗ್‌ ಅನ್ನು ಮಿಮಿಕ್ರಿ ಮಾಡಲಾಗಿದೆ.ಇದು ಪಾಕಿಸ್ತಾನ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದ ವಿಡಿಯೋ ಆಗಿದೆ. ಇದರಲ್ಲಿ ಒಬ್ಬ ಯುವತಿ ಬಾಲಿವುಡ್‌ನ ‘ಮೇ ಹೂ ನಾ’ ಸಿನಿಮಾದಲ್ಲಿ ಸುಶ್ಮಿತಾ ಸೇನ್ ಧರಿಸಿದಂತೆ ಸೀರೆಯುಟ್ಟು ಕಂಡ್ರೆ, ಇನ್ನೊಬ್ಬ ವಿದ್ಯಾರ್ಥಿ ಕ್ಯಾಪ್ ಕೊಟ್ಟು ಸಲ್ಮಾನ್ ಖಾನ್ ಅಭಿನಯದ ದಬಾಂಗ್ ಸಿನಿಮಾ ಡೈಲಾಗ್‌ ಅನ್ನು ಮಿಮಿಕ್ರಿ ಮಾಡಿದ್ದಾರೆ. ಹಾಗೆಯೇ ‘ಮೊಹಬ್ಬತ್ತೇನ್’ ಸಿನಿಮಾದ ರಾಜ್ ಮಲ್ಹೋತ್ರ ಹಾಗೂ ಅಜಯ್ ದೇವಗನ್ ಅಭಿನಯದ ‘ಸಿಂಗಂ’ ಸಿನಿಮಾದ ಬಾಜಿರಾವ್ ಸಿಂಗಂ ಪಾತ್ರವನ್ನೂ ತೋರಿಸಲಾಗಿದೆ.ಇದೇ ವಿಡಿಯೋ ಸೋಶಿಯಲ್ ಮೀಡಿಯಾ ವೈರಲ್ ಆಗಿದೆ.ಈ ವಿಡಿಯೋದಲ್ಲಿ ಪಾಕಿಸ್ತಾನದ ಯುವತಿಯೊಬ್ಬರು ಬಾಲಿವುಡ್ ‘ಸ್ಟುಡೆಂಟ್ ಆಫ್ ದಿ ಇಯರ್’ ಸಿನಿಮಾದ ಶಾನಯ ಸಿಂಘಾನಿಯ(ಆಲಿಯಾ ಭಟ್) ಅವತಾರವೆತ್ತಿದ್ದಾರೆ. ಹಾಗೇ ” ಕೈಯಲ್ಲಿ ಪೊಂ ಪೊಂ ಹಿಡಿದುಕೊಂಡು ಹುಡುಗರಿಗಾಗಿ ಕೂಗುವುದನ್ನು ನನ್ನ ಸ್ಟೈಲ್ ಅಲ್ಲ” ಎಂದು ಡೈಲಾಗ್ ಬಿಟ್ಟಿದ್ದಾರೆ. ಅದೇ ಮತ್ತೊಬ್ಬ ಯುವತಿ 2012ರಲ್ಲಿ ತೆರೆಕಂಡ ‘ಬರ್ಫಿ’ ಸಿನಿಮಾದ ನಟಿ ಪ್ರಿಯಾಂಕಾ ಚೋಪ್ರಾರಂತೆ ಡ್ರೆಸ್ ಮಾಡಿಕೊಂಡು ಮಿಂಚಿದ್ದಾರೆ.ಈ ವಿಡಿಯೋ ಐದು ದಿನಗಳ ಹಿಂದೆ ಪೋಸ್ಟ್ ಮಾಡಲಾಗಿದೆ. ಅಲ್ಲಿಂದ ಈ ವಿಡಿಯೋ ಹಲವು ಸೋಶಿಯಲ್ ಮೀಡಿಯಾ ವೇದಿಕೆಗಳಲ್ಲಿ ಕಂಡಿದೆ. ಈ ವಿಡಿಯೋ ಸಾಕಷ್ಟು ಲೈಕ್ಸ್ ಹಾಘೂ ಕಮೆಂಟ್ಸ್ ಕೂಡ ಸಿಕ್ಕಿದೆ. ಈ ವಿಡಿಯೋಗೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ಕೆಲವರು ” ಪಾಕಿಸ್ತಾನದಲ್ಲಿ ಭಾರತದ ಸಂಸ್ಕೃತಿಯ ಸಂಭ್ರಮ” ಎಂದು ಕೆಮೆಂಟ್ ಮಾಡಿದ್ದರೆ, ಮತ್ತೆ ಕೆಲವರು ವಿದ್ಯಾರ್ಥಿಗಳ ಪರ ನಿಂತಿದ್ದು, ಬಾಲಿವುಡ್‌ ಮೇಲಿನ ಪ್ರೀತಿಯನ್ನು ಪ್ರಶಂಸೆ ಮಾಡಿದ್ದಾರೆ.ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹಲ್‌ಚಲ್ ಎಬ್ಬಿಸಲು ಆರಂಭ ಆದಲ್ಲಿಂದ ಟೀಕೆಗಳ ಸುರಿಮಳೆಯೇ ಕೇಳಿಬರುತ್ತಿದೆ.ಪಾಕಿಸ್ತಾನದಲ್ಲಿಯೇ ಈ ವಿದ್ಯಾರ್ಥಿಗಳ ವಿರುದ್ಧ ಟೀಕೆಗಳು ವ್ಯಕ್ತವಾಗಿವೆ. ಅಲ್ಲದೆ ಪಾಕಿಸ್ತಾನದ ಸಿನಿಮಾಗಳನ್ನು ನೋಡಿದೇ ಇರೋದಕ್ಕೆ ತರಾಟೆಗೆ ತೆಗೆದುಕೊಳ್ಳಲಾಗಿದೆ. ” ಬಾಲಿವುಡ್ ಡೇ ಸೆಲೆಬ್ರೆಟ್ ಮಾಡುವುದು ಸಮಸ್ಯೆಯಲ್ಲ. ಆದರೆ, ಇದು ಸಮಸ್ಯೆಯ ಸಂಕೇತ. ನಮ್ಮ ಮನರಂಜನೆಗೆ ನಾವು ಯಾರು ಭಾರತದ ಕಡೆ ಮುಖ ಮಾಡಬೇಕು. ನಮ್ಮ ಚಿತ್ರರಂಗದಲ್ಲಿ ಏನು ಸಮಸ್ಯೆಯಾಗಿದೆ? ಯಾರಾದರೂ ಲಾಲಿವುಡ್‌ ಸಿನಿಮಾಗಳನ್ನು ನೋಡಿದ್ದೀರಾ?” ಎಂದು ವಿದ್ಯಾರ್ಥಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

'ಸಲಾರ್' ಶೂಟಿಂಗ್ ಮುಗಿಸುತ್ತಾರಂತೆ ಪ್ರಶಾಂತ್ ನೀಲ್!

Sat Feb 25 , 2023
ಅದ್ಯಾವುದೇ ಸಿನಿಮಾ ಬರಲಿ, ಟಾಲಿವುಡ್ ಮಂದಿ ಕಣ್ಣು ‘ಸಲಾರ್’ ಮೇಲಿದೆ. ಪ್ರಶಾಂತ್ ನೀಲ್ ಹಾಗೂ ಪ್ರಭಾಸ್ ಕಾಂಬಿನೇಷನ್‌ನಲ್ಲಿ ರೆಡಿಯಾಗಿರೋ ಈ ಸಿನಿಮಾದ ಮೇಲೆ ಇಡೀ ದೇಶದ ಕಣ್ಣಿದೆ. ಒಂದ್ಕಡೆ ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್. ಇನ್ನೊಂದು ಕಡೆ ಪ್ಯಾನ್ ಇಂಡಿಯಾ ಡೈರೆಕ್ಟರ್.ಇಬ್ಬರ ಕಾಂಬಿನೇಷನ್‌ನಲ್ಲಿ ಸಿನಿಮಾ ನೋಡುವುದಕ್ಕೆ ಸಿನಿಪ್ರಿಯರಂತೂ ತುದಿಗಾಲಲ್ಲಿ ನಿಂತಿದ್ದಾರೆ. ಸದ್ಯ ಟಾಲಿವುಡ್‌ನಲ್ಲಿ ಇದೇ ಸಿನಿಮಾದ ವಿಚಾರವಾಗಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ.ಪ್ರಭಾಸ್‌ ‘ಸಲಾರ್’ ಸಿನಿಮಾದ ಶೂಟಿಂಗ್ ಅನ್ನು ಆದಷ್ಟು ಬೇಗ ಮುಗಿಸಬೇಕು ಅಂತ […]

Advertisement

Wordpress Social Share Plugin powered by Ultimatelysocial