PAN-ಆಧಾರ್ ಲಿಂಕ್ ಮಾಡುವುದು ಹೀಗೆ?

=
ಪರ್ಮನೆಂಟ್ ಅಕೌಟ್ ನಂಬರ್ (PAN- Permanent Account Number) ಮತ್ತು ಆಧಾರ್ ಕಾರ್ಡ್ (Aadhaar Card) ಲಿಂಕ್ ಮಾಡಬೇಕೆಂದು ಸರ್ಕಾರ ಸೂಚನೆ ನೀಡಿ ಬಹಳ ಕಾಲ ಆಯಿತು. ಕೆಲವಾರು ಬಾರಿ ಡೆಡ್​ಲೈನ್ ಮುಂದೂಡಿಕೆ ಮಾಡಿದೆ. ಈಗ ಮಾರ್ಚ್ 31ಕ್ಕೆ ಕೊನೆಯ ಬಾರಿ ಗಡುವು ನಿಗದಿ ಮಾಡಿದೆ.

ಅಷ್ಟರೊಳಗೆ ನೀವು ಲಿಂಕ್ ಮಾಡದಿದ್ದರೆ ನಿಮ್ಮ ಪಾನ್ ನಂಬರ್ ಏಪ್ರಿಲ್ 1ರಿಂದ ನಿಷ್ಕ್ರಿಯವಾಗುತ್ತದೆ. ನಿಮ್ಮ ಬಳಿ ಪಾನ್ ಸಂಖ್ಯೆ ಇದ್ದರೂ ಇಲ್ಲದಂತಾಗುತ್ತದೆ. ನಿಮ್ಮ ವಿರುದ್ಧ ಕಾನೂನು ಕ್ರಮ ಜರುಗಿಸುವ ಪ್ರಮೇಯವೂ ಬರಬಹುದು. 10 ಸಾವಿರ ರೂ ದಂಡ ವಿಧಿಸುವ ಅವಕಾಶ ಬರಬಹುದು.

ಹೊಸ ಬ್ಯಾಂಕ್ ಖಾತೆಗಳನ್ನ ತೆರೆಯಲು ಪಾನ್ ನಂಬರ್ ಅಗತ್ಯ. ಇರುವ ಬ್ಯಾಂಕ್ ಅಕೌಂಟ್​ನಿಂದ 50 ಸಾವಿರ ರೂ ಗಿಂತ ಹೆಚ್ಚು ಹಣ ವಿತ್ ಡ್ರಾ ಮಾಡಲು ಪಾನ್ ನಂಬರ್ ನಮೂದಿಸುವುದು ಅಗತ್ಯ. ಪರ್ಮನೆಂಟ್ ಅಕೌಂಟ್ ನಂಬರ್ ಇಲ್ಲದಿದ್ದರೆ ನೀವು ಇವ್ಯಾವುದನ್ನೂ ಮಾಡಲು ಸಾಧ್ಯವಾಗುವುದಿಲ್ಲ.

ಪಾನ್-ಆಧಾರ್ ಲಿಂಕ್ ಮಾಡುವುದು ಹೀಗೆ:

* ಮೊದಲು ನೀವು ಇನ್ಕಮ್ ಟ್ಯಾಕ್ಸ್ ಇ-ಫೈಲಿಂಗ್ ಪೋರ್ಟಲ್ https://incometaxindiaefiling.gov.in ಓಪನ್ ಮಾಡಿ.

* ಇಲ್ಲಿ ನಿಮ್ಮ ಪಾನ್ ಸಂಖ್ಯೆಯನ್ನ ನಿಮ್ಮ ಯೂಸರ್ ಐಡಿ ಆಗಿ ನಮೂದಿಸಬೇಕು. ನಂತರ ಪಾಸ್​ವರ್ಡ್ ಹಾಕಿರಿ, ನಿಮ್ಮ ಜನ್ಮದಿನಾಂಕ ನಮೂದಿಸಿ.

* ಬಳಿಕ ನಿಮ್ಮ ಪಾನ್ ಸಂಖ್ಯೆಯನ್ನ ಆಧಾರ್ ಜೊತೆ ಲಿಂಕ್ ಮಾಡುವಂತೆ ಕೇಳಿ ಪಾಪ್ ಅಪ್ ವಿಂಡೋ ಓಪನ್ ಆಗುತ್ತದೆ.

* ಪಾಪ್ ಅಪ್ ಬರದಿದ್ದರೆ ಇಫೈಲಿಂಗ್ ಪೋರ್ಟಲ್​ನಲ್ಲಿ ಪ್ರೊಫೈಲ್ ಸೆಟಿಂಗ್ಸ್ ಒತ್ತಿದರೆ ಕಾಣಿಸುವ ಮೆನು ಬಾರ್​ನಲ್ಲಿವ Link Aadhaar ಅನ್ನು ಕ್ಲಿಕ್ ಮಾಡಿ.

* ಅದರಲ್ಲಿ ನಿಮ್ಮ ಪಾನ್ ಕಾರ್ಡ್​ನಲ್ಲಿ ನಮೂದಾಗಿರುವ ಜನ್ಮದಿನಾಂಕ, ಲಿಂಗ ಇತ್ಯಾದಿ ವಿವರಗಳು ಮೊದಲೇ ನಮೂದಾಗಿರುತ್ತವೆ.

: Senior Citizen Scheme: ಹಿರಿಯ ನಾಗರಿಕರಿಗೆ ಹಣ ಉಳಿತಾಯಕ್ಕೆ ಇಲ್ಲಿವೆ ಉತ್ತಮ ಆಯ್ಕೆ

* ಪಾನ್ ವಿವರಗಳು ಆಧಾರ್​ನಲ್ಲಿರುವ ವಿವರದೊಂದಿಗೆ ಹೊಂದಿಕೆ ಆಗುತ್ತಿದೆಯಾ ಖಚಿತಪಡಿಸಿಕೊಳ್ಳಿ. ತಾಳೆ ಆಗುತ್ತಿಲ್ಲವೆಂದರೆ ಎರಡರಲ್ಲಿ ಒಂದರಲ್ಲಿ ವಿವರವನ್ನು ಸೂಕ್ತವಾಗಿ ಬದಲಾಯಿಸಬೇಕು.

* ಈಗ ಎರಡೂ ಹೊಂದಿಕೆ ಆಗುತ್ತಿದ್ದಲ್ಲಿ Link Now ಬಟನ್ ಕ್ಲಿಕ್ ಮಾಡಿ. ಆಗ ನಿಮ್ಮ ಪಾನ್ ಸಂಖ್ಯೆ ಆಧಾರ್ ಜೊತೆ ಜೋಡಿತವಾಗಿರುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

omicron:ಒಮಿಕ್ರಾನ್ ವಿರುದ್ಧ​ ಲಸಿಕೆಯ ಪರಿಣಾಮಕಾರಿತ್ವವನ್ನು ಬೂಸ್ಟರ್​ ಡೋಸ್;

Thu Jan 6 , 2022
ಡೆಲ್ಟಾಗೆ ಹೋಲಿಸಿದರೆ ಒಮಿಕ್ರಾನ್‌ಗೆ ಬೂಸ್ಟರ್ ಡೋಸ್‌ಗಳ ಪರಿಣಾಮಕಾರಿತ್ವವು ಗಮನಾರ್ಹವಾಗಿ ಮತ್ತು ವೇಗವಾಗಿ ಕ್ಷೀಣಿಸುತ್ತದೆ. ಆದರೆ ರೋಗಲಕ್ಷಣದ ಪ್ರಕರಣವಾಗುವುದರ ವಿರುದ್ಧ ಅಂದರೆ ಆಸ್ಪತ್ರೆಗೆ ದಾಖಲಾಗುವುದರ ವಿರುದ್ಧ ಬೂಸ್ಟರ್​ ಡೋಸ್​ 88 ಪ್ರತಿಶತದಷ್ಟು ರಕ್ಷಣೆ ನೀಡುತ್ತದೆ ಎಂದು ಅಧ್ಯಯನಗಳು ತೋರಿಸಿವೆ. ಈ ಹಿಂದಿನ ಕೋವಿಡ್​ ರೂಪಾಂತರಿಗಳಿಗೆ ಈ ಮೊದಲು ನೀಡಿರುವ ಕೋವಿಡ್​ ಲಸಿಕೆಗಳು ಸರಿಹೋಗಬಹುದು. ಆದರೆ ಕೊರೊನಾ ವೈರಸ್​​ನ ಹೊಸ ರೂಪಾಂತರಿ ಒಮಿಕ್ರಾನ್​​ಗೆ ಬೂಸ್ಟರ್​ ಡೋಸ್​ ಅವಶ್ಯಕ ಎಂದು ಒಮಿಕ್ರಾನ್ ಪತ್ತೆಯಾದ ಆರಂಭದಿಂದಲೂ […]

Advertisement

Wordpress Social Share Plugin powered by Ultimatelysocial