ಆಕ್ಷನ್ ಪ್ರಿನ್ಸ್ ದೃವ ಸರ್ಜಾಗೂ ಕೊರೊನಾ ದೃಢ

ಸ್ಯಾಂಡಲ್​ವುಡ್​ನ ಆಕ್ಷನ್ ಪ್ರಿನ್ಸ್ ದೃವ ಸರ್ಜಾ ಅವರಿಗೂ ಕರೊನಾ ಪಾಸಿಟಿವ್​ ದೃಢಪಟ್ಟಿದೆ. ಹೌದು ಕರೊನಾ ಪರೀಕ್ಷೆಗೆ ಒಳಪಟ್ಟಿದ್ದ ದೃವ ಸರ್ಜಾ ಮತ್ತು ಅವರ ಪತ್ನಿ ಇಬ್ಬರಿಗೂ ಸೋಂಕು ಇರುವುದು ವರದಿಯಲ್ಲಿ ತಿಳಿದುಬಂದಿದೆ. ಸ್ವಲ್ಪ ಪ್ರಮಾಣದಲ್ಲಿ ಸೋಂಕಿನ ಗುಣಲಕ್ಷಣ ಕಂಡುಬಂದಿದೆ. ಈ ಬಗ್ಗೆ ಟ್ವಿಟರ್​ನಲ್ಲಿ ಮಾಹಿತಿ ಹಂಚಿಕೊಂಡಿರುವ ದೃವ ಸರ್ಜಾ, ನನ್ನ ಹೆಂಡತಿ ಮತ್ತು ನಾನು ಕೋವಿಡ್​19 ಪರೀಕ್ಷೆ ಮಾಡಿಸಿಕೊಂಡಿದ್ದೇವೆ. ವರದಿ ಪಾಸಿಟಿವ್​ ಬಂದಿದೆ. ಚಿಕಿತ್ಸೆ ಪಡೆಯಲು ಆಸ್ಪತ್ರೆ ದಾಖಲಾಗಿದ್ದೇವೆ. ನಾವು ಗುಣಮುಖರಾಗಿ ಬರುತ್ತೇವೆಂಬ  ವಿಶ್ವಾಸವಿದೆ ಎಂದು ಹೇಳಿಕೊಂಡಿದ್ದಾರೆ. ಹಾಗೆಯೇ ನಮ್ಮ ಸಂಪರ್ಕಕ್ಕೆ ಬಂದವರೆಲ್ಲರೂ ದಯವಿಟ್ಟು ಕೋವಿಡ್​ ಪರೀಕ್ಷೆ ಮಾಡಿಸಿಕೊಳ್ಳುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಅವರು ಕೋರಿದ್ದಾರೆ

 

 

Please follow and like us:

Leave a Reply

Your email address will not be published. Required fields are marked *

Next Post

೩ ದಿನಗಳಿಂದ ಧಾರವಾಡದಲ್ಲಿ ಮೌಲ್ಯಮಾಪನ ನಡೆದಿದೆ

Wed Jul 15 , 2020
ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವದರಿಂದ ಹುಬ್ಬಳ್ಳಿಯಲ್ಲಿ ಲಾಕ್ ಡೌನ್ ಜಾರಿಗೊಳಿಸಲಾಗಿದೆ. ಹೀಗಾಗಿ ಎಸ್ಎಸ್ಎಲ್ ಸಿ ಮೌಲ್ಯಮಾಪನಕ್ಕೆ ತೆರಳಬೇಕಿದ್ದ ಶಿಕ್ಷಕರು ಪರದಾಡುವಂತಾಗಿದೆ. ಕಳೆದ ಮೂರು ದಿನಗಳಿಂದ ಧಾರವಾಡದಲ್ಲಿ ಮೌಲ್ಯಮಾಪನ ನಡೆದಿದೆ. ಆದರೆ ಇಂದು ಧಾರವಾಡಕ್ಕೆ ತೆರಳುವ ಶಿಕ್ಷಕರಿಗೆ ಬಸ್ ಇಲ್ಲ. ಲಾಕ್ ಡೌನ್ ಹಿನ್ನೆಲೆಯಲ್ಲಿ ಜಿಲ್ಲಾಡಳಿತದಿಂದ ಬಸ್ ವ್ಯವಸ್ಥೆ ಮಾಡಬೇಕಿತ್ತು. ಹುಬ್ಬಳ್ಳಿಯ ೨೦೦ಕ್ಕೂ ಹೆಚ್ಚು ಶಿಕ್ಷಕರು ಧಾರವಾಡದ ಸೆಂರ‍್ಗೆ ತಲುಪಿಸುವ ವ್ಯವಸ್ಥೆ ಮಾಡಬೇಕಿತ್ತು. ಆದರೆ ಬಸ್ ಇಲ್ಲದೆ ಹುಬ್ಬಳ್ಳಿಯ ಹಳೆ […]

Advertisement

Wordpress Social Share Plugin powered by Ultimatelysocial