ʼಪಪ್ಪಾಯʼದಿಂದ ಏನೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಗೊತ್ತಾ..?

 

ಪಪ್ಪಾಯ ಹಣ್ಣುಗಳನ್ನು ಕೆಲವರು ಇಷ್ಟಪಡುವುದಿಲ್ಲ. ಆದರೆ, ಒಮ್ಮೆ ಪಪ್ಪಾಯಿ ರುಚಿ ಹಿಡಿಸಿದ್ರೆ ಚಪ್ಪರಿಸಿ ತಿನ್ನುತ್ತಾರೆ. ಸಾಮಾನ್ಯವಾಗಿ ಈ ಹಣ್ಣುಗಳನ್ನು ಉಷ್ಣವಲಯದ ಹವಾಮಾನದಲ್ಲಿ ಬೆಳೆಯಲಾಗುತ್ತದೆ. ಪಪ್ಪಾಯವನ್ನು ಸೇವಿಸುವುದರಿಂದ ಬಾಯಿಗೆ ರುಚಿಯಾಗಿರುವುದು ಮಾತ್ರವಲ್ಲದೆ ವಿವಿಧ ರೀತಿಯ ಆರೋಗ್ಯ ಪ್ರಯೋಜನಗಳು ಇವೆ.ಪಪ್ಪಾಯ ಹಣ್ಣಿನಲ್ಲಿ ವಿಟಮಿನ್ ಸಿ ಹಾಗೂ ಎ ಹೇರಳವಾಗಿದೆ. ಫೈಬರ್ ಅಂಶವೂ ಇದರಲ್ಲಿದೆ. ಹೃದ್ರೋಗ, ಕ್ಯಾನ್ಸರ್ ಬರದಂತೆ ತಡೆಯುತ್ತದೆ. ಜೀರ್ಣಕ್ರಿಯೆಗೆ ಸಹಕಾರಿ, ಮಧುಮೇಹ ಇರುವವರಲ್ಲಿ ರಕ್ತದಲ್ಲಿನ ಗ್ಲೂಕೋಸ್ ನಿಯಂತ್ರಣವನ್ನು ಸುಧಾರಿಸುವುದು, ರಕ್ತದೊತ್ತಡವನ್ನು ಕಡಿಮೆ ಮಾಡುವಲ್ಲಿ ಕೂಡ ಸಹಕಾರಿಯಾಗಿದೆ.ಪಪ್ಪಾಯಿಯ ನಿಯಮಿತ ಸೇವನೆಯ ಕೆಲವು ಆರೋಗ್ಯ ಪ್ರಯೋಜನಗಳು ಇಲ್ಲಿವೆ.

  1. ರೋಗ ನಿರೋಧಕ ಶಕ್ತಿ ಹೆಚ್ಚಳ :ಪಪ್ಪಾಯ ಹಣ್ಣಿನಲ್ಲಿ ವಿಟಮಿನ್ ಸಿ ಸಮೃದ್ಧವಾಗಿದ್ದು, ಇವು ರೋಗಗಳು ಮತ್ತು ಸೋಂಕಿನ ವಿರುದ್ಧ ಹೋರಾಡಲು ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಅಷ್ಟೇ ಅಲ್ಲದೆ, ವಿಟಮಿನ್ ಎ, ಬಿ ಮತ್ತು ಕೆ ಕೂಡ ಸಮೃದ್ಧವಾಗಿದೆ. ಮತ್ತು ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಪೆನ್ಸಿಲ್ವೇನಿಯಾ ಸ್ಟೇಟ್ ಯೂನಿವರ್ಸಿಟಿ ನಡೆಸಿದ ಅಧ್ಯಯನದಲ್ಲಿ, ಹಣ್ಣಿನಲ್ಲಿರುವ ಲೈಕೋಪೀನ್ ಮತ್ತು ವಿಟಮಿನ್ ಸಿ ಹೃದ್ರೋಗವನ್ನು ತಡೆಯಲು ಸಹಕಾರಿಯಾಗಿದೆ ಎಂಬುದು ತಿಳಿದು ಬಂದಿದೆ.
  2. ಕ್ಯಾನ್ಸರ್ ವಿರೋಧಿ ಗುಣಲಕ್ಷಣಗಳು :ಪಪ್ಪಾಯಿಯಲ್ಲಿರುವ ಲೈಕೋಪೀನ್ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ. ಪಪ್ಪಾಯಿಯು ಸ್ತನ ಕ್ಯಾನ್ಸರ್ ಕೋಶಗಳಲ್ಲಿ ಕ್ಯಾನ್ಸರ್ ವಿರೋಧಿ ಚಟುವಟಿಕೆಗಳನ್ನು ತೋರಿಸಿದೆ ಎಂಬುದನ್ನು ಅಧ್ಯಯನದಲ್ಲಿ ವಿಜ್ಞಾನಿಗಳು ಕಂಡುಕೊಂಡಿದ್ದಾರೆ.
  3. ಆಂಟಿಆಕ್ಸಿಡೆಂಟ್ :ಪಪ್ಪಾಯಿಯು ಕ್ಯಾರೊಟಿನಾಯ್ಡ್ ಗಳನ್ನು ಹೊಂದಿದ್ದು, ವಯಸ್ಕರಲ್ಲಿ ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುತ್ತದೆ. ಆಕ್ಸಿಡೇಟಿವ್ ಒತ್ತಡವು ದೀರ್ಘಕಾಲದ ಉರಿಯೂತಕ್ಕೆ ಕಾರಣವಾಗಬಹುದು. ಇದು ಪ್ರತಿರಕ್ಷಣಾ ವ್ಯವಸ್ಥೆಯನ್ನು ಹಾನಿಗೊಳಿಸುತ್ತದೆ. ಹೀಗಾಗಿ ಪಪ್ಪಾಯವು ಇದಕ್ಕೆ ರಾಮಬಾಣವೆಂದು ಪರಿಗಣಿಸಲ್ಪಟ್ಟಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ನಾಲ್ಕು ಎಸೆತದಲ್ಲಿ ನಾಲ್ಕು ವಿಕೆಟ್ ಕಿತ್ತು ಭರ್ಜರಿ ದಾಖಲೆ ಬರೆದ ಜೇಸನ್ ಹೋಲ್ಡರ್

Mon Jan 31 , 2022
ಬಾರ್ಬಡೋಸ್: ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಜಯ ಸಾಧಿಸಿದೆ. ವೇಗಿ ಜೇಸನ್ ಹೋಲ್ಡರ್ ನಾಲ್ಕು ಎಸೆತದಲ್ಲಿ ನಾಲ್ಕು ವಿಕೆಟ್ ಕಿತ್ತು ದಾಖಲೆ ಬರೆದರುಮೊದಲು ಬ್ಯಾಟಿಂಗ್ ನಡೆಸಿದ ವಿಂಡೀಸ್ 4 ವಿಕೆಟ್ ನಷ್ಟಕ್ಕೆ 179 ರನ್ ಗಳಿಸಿದರೆ, ಇಂಗ್ಲೆಂಡ್ ತಂಡವು 162 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು.ಈ ಮೂಲಕ 17 ರನ್ ಗಳ ಅಂತರದ ಜಯ ಸಾಧಿಸಿತು.ವಿಂಡೀಸ್ ಪರ ಕೈರನ್ ಪೊಲಾರ್ಡ್ 41 ರನ್, […]

Advertisement

Wordpress Social Share Plugin powered by Ultimatelysocial