ಸುಂಕ ಇಳಿಕೆಯ ನಂತರ ಸ್ವಲ್ಪ ನಿರಾಳ ತಂದ ಪೆಟ್ರೋಲ್-ಡಿಸೇಲ್

(Petrol-Diesel Price) ಬೆಲೆ ಸದ್ಯ ಹೆಚ್ಚಿನ ಏರಿಕೆ ಕಾಣುತ್ತಿಲ್ಲ. ದಿಢೀರ್ ಒಂದೇ ದಿನದಲ್ಲಿ 10 ರೂ.ಗಳಷ್ಟು ಕಡಿಮೆಯಾದ ಇಂಧನ ಬೆಲೆ ಗ್ರಾಹಕರಿಗೆ ಸಮಾಧಾನ ತಂದಿತ್ತು. ಕೇಂದ್ರ ಸರ್ಕಾರದ ಎಕ್ಸೈಸ್ ಡ್ಯೂಟಿ ಕೈಬಿಟ್ಟಾಗಿನಿಂದ ದೇಶದ ವಾಹನ ಸವಾರರಲ್ಲಿ ಕೊಂಚ ನೆಮ್ಮದಿ ಮೂಡಿದೆ ಅಂತ ಹೇಳಬಹುದು.
ಅಬಕಾರಿ ಸುಂಕ ಕಡಿತಗೊಳಿಸಿದ ಬಳಿಕ ಮೇ 22 ಭಾನುವಾರದಿಂದ ಪೆಟ್ರೋಲ್ (Petrol) ಮತ್ತು ಡೀಸೆಲ್ (Diesel) ದರ ದೇಶಾದ್ಯಂತ ಭಾರೀ ಕುಸಿದಿದೆ. ನಿನ್ನೆಗೆ ಹೋಲಿಸಿದರೆ ಇಂದು ಸಹ ಯಥಾಸ್ಥಿತಿ ಕಾಯ್ದುಕೊಂಡಿರುವ ಇಂಧನ ಬೆಲೆ (Fuel Price) ರಾಜ್ಯದ ಇತರೆ ಜಿಲ್ಲೆಗಳಲ್ಲಿ ಅಲ್ಪ ಸ್ವಲ್ಪ ವ್ಯತ್ಯಾಸವಾಗಿದ್ದು ಕೆಲ ಪೈಸೆಗಳಷ್ಟು ಏರಿಳಿತ ಕಂಡಿದೆ.
ಅಂತಾರಾಷ್ಟ್ರ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ (Crude Oil) ಬೆಲೆ ಕಣ್ಣು ಮುಚ್ಚಾಲೆ ಆಟ ಆಡುತ್ತಿದ್ದು ಬಹುತೇಕವಾಗಿ ಏರಿದ ಬೆಲೆಯಲ್ಲೇ ಸಿಗುತ್ತಿದೆ. ಇದರ ಪರಿಣಾಮವಾಗಿ ದೇಶದಲ್ಲಿ ನಿತ್ಯವೂ ಒಂದಿಷ್ಟು ಪೈಸೆಗಳಷ್ಟು ಇಂಧನದ ಬೆಲೆಗಳಲ್ಲಿ ಏರಿಕೆಯಾಗುತ್ತಿದ್ದು ಶ್ರೀಸಾಮಾನ್ಯನ ಕೈಸುಡುವಂತಾಗಿದೆ. ಒಂದೆಡೆ ಜಗತ್ತಿನಾದ್ಯಂತ ಕಚ್ಚಾ ತೈಲದ ಬೆಲೆ ಗಗನಮುಖಿಯಾಗಿಯೇ ಇದ್ದು ಇಳಿಮುಖವಾಗುತ್ತಿಲ್ಲ. ಇನ್ನೊಂದೆಡೆ ರಷ್ಯಾ-ಉಕ್ರೇನ್ ಮಧ್ಯದ ಸಂಘರ್ಷ ಮುಕ್ತಾಯವಾಗುವ ಸೂಚನೆಯೂ ಕಾಣುತ್ತಿಲ್ಲ.
ರಾಜಧಾನಿ ಬೆಂಗಳೂರು ನಗರದಲ್ಲಿ ನಿನ್ನೆಗೆ ಹೋಲಿಸಿದರೆ ಇಂದು ಪೆಟ್ರೋಲ್ ಬೆಲೆಯಲ್ಲಿ ಹೆಚ್ಚಳವಾಗಿಲ್ಲ. ನಗರದಲ್ಲಿ ಇಂದಿನ ಪೆಟ್ರೋಲ್ ದರ ರೂ. 101.94 ಆಗಿದ್ದರೆ ಡೀಸೆಲ್ ದರ ರೂ. 87.89 ಆಗಿದೆ. ಮಹಾನಗರಗಳಾದ ಚೆನ್ನೈ, ಮುಂಬೈ, ಕೊಲ್ಕತ್ತಾಗಳಲ್ಲಿ ಇಂದಿನ ಪೆಟ್ರೋಲ್ ದರಗಳು ಕ್ರಮವಾಗಿ ರೂ.102.63, ರೂ. 111.35, ರೂ. 106.03 ಆಗಿದ್ದರೆ ಡೀಸೆಲ್ ದರಗಳು ಕ್ರಮವಾಗಿ ರೂ. 94.24, ರೂ. 97.28, ರೂ. 92.76 ಆಗಿವೆ. ಇನ್ನು ಉಳಿದಂತೆ ರಾಜಧಾನಿ ದೆಹಲಿಯಲ್ಲಿ ಇಂದಿನ ಪೆಟ್ರೋಲ್ ದರ ರೂ. 96.72 ಆಗಿದ್ದರೆ ಡೀಸೆಲ್ ದರ ರೂ. 89.62 ಆಗಿದೆ.
ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು
ಬಾಗಲಕೋಟೆ – ರೂ. 102.43 (0.03 ಪೈಸೆ ಏರಿಕೆ)
ಬೆಂಗಳೂರು – ರೂ. 101.94 (00)
ಬೆಂಗಳೂರು ಗ್ರಾಮಾಂತರ – ರೂ. 102.25 (0.25 ಪೈಸೆ ಏರಿಕೆ)
ಬೆಳಗಾವಿ – ರೂ. 102.62 (0.01 ಪೈಸೆ ಇಳಿಕೆ)
ಬಳ್ಳಾರಿ – ರೂ. 103.57 (0.30 ಪೈಸೆ ಇಳಿಕೆ)
ಬೀದರ್ – ರೂ. 102.87 (0.43 ಪೈಸೆ ಏರಿಕೆ)
ವಿಜಯಪುರ – ರೂ. 101.86 (0.21 ಪೈಸೆ ಏರಿಕೆ)
ಚಾಮರಾಜನಗರ – ರೂ. 101.88 (0.51 ಪೈಸೆ ಇಳಿಕೆ)
ಚಿಕ್ಕಬಳ್ಳಾಪುರ – ರೂ. 102.00 (0.06 ಪೈಸೆ ಏರಿಕೆ)
ಚಿಕ್ಕಮಗಳೂರು – ರೂ. 103.23 (0.88 ಪೈಸೆ ಏರಿಕೆ)
ಚಿತ್ರದುರ್ಗ – ರೂ. 102.87 (0.21 ಪೈಸೆ ಇಳಿಕೆ)
ದಕ್ಷಿಣ ಕನ್ನಡ – ರೂ. 101.77 (0.63 ಪೈಸೆ ಏರಿಕೆ)
ದಾವಣಗೆರೆ – ರೂ. 103.95 (0.35 ಪೈಸೆ ಏರಿಕೆ)
ಧಾರವಾಡ – ರೂ. 101.77 (0.08 ಪೈಸೆ ಏರಿಕೆ)
ಗದಗ – ರೂ. 102.47 ( 0.12 ಪೈಸೆ ಏರಿಕೆ)
ಕಲಬುರಗಿ – ರೂ. 101.89 (0.35 ಪೈಸೆ ಇಳಿಕೆ)
ಹಾಸನ – ರೂ. 101.63 (00)
ಹಾವೇರಿ – ರೂ. 102.93 (0.38 ಪೈಸೆ ಏರಿಕೆ)
ಕೊಡಗು – ರೂ. 102.69 (00)
ಕೋಲಾರ – ರೂ. 101.87 (0.19 ಪೈಸೆ ಏರಿಕೆ)
ಕೊಪ್ಪಳ – ರೂ. 102.83 (0.30 ಪೈಸೆ ಇಳಿಕೆ)
ಮಂಡ್ಯ – ರೂ. 101.79 (0.07 ಪೈಸೆ ಇಳಿಕೆ)
ಮೈಸೂರು – ರೂ. 101.46 (14 ಪೈಸೆ ಇಳಿಕೆ)
ರಾಯಚೂರು – ರೂ. 101.76 (0.59 ಪೈಸೆ ಇಳಿಕೆ)
ರಾಮನಗರ – ರೂ. 102.28 (00)
ಶಿವಮೊಗ್ಗ – ರೂ. 103.61 (0.33 ಪೈಸೆ ಏರಿಕೆ)
ತುಮಕೂರು – ರೂ. 102.23 (0.41 ಪೈಸೆ ಇಳಿಕೆ)
ಉಡುಪಿ – 101.92(0.11 ಪೈಸೆ ಏರಿಕೆ)
ಉತ್ತರ ಕನ್ನಡ – ರೂ. 101.98 (0.81 ಪೈಸೆ ಇಳಿಕೆ)
ಯಾದಗಿರಿ – ರೂ. 102.39 (32 ಪೈಸೆ ಇಳಿಕೆ)ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು
ಬಾಗಲಕೋಟೆ – ರೂ. 88.36
ಬೆಂಗಳೂರು – ರೂ. 87.89
ಬೆಂಗಳೂರು ಗ್ರಾಮಾಂತರ – ರೂ. 88.17
ಬೆಳಗಾವಿ – ರೂ. 88.53
ಬಳ್ಳಾರಿ – ರೂ. 89.39
ಬೀದರ್ – ರೂ. 88.76
ವಿಜಯಪುರ – ರೂ. 87.85
ಚಾಮರಾಜನಗರ – ರೂ. 87.84
ಚಿಕ್ಕಬಳ್ಳಾಪುರ – ರೂ. 87.95
ಚಿಕ್ಕಮಗಳೂರು – ರೂ. 89.00
ಚಿತ್ರದುರ್ಗ – ರೂ. 88.63
ದಕ್ಷಿಣ ಕನ್ನಡ – ರೂ. 87.70
ದಾವಣಗೆರೆ – ರೂ. 89.61
ಧಾರವಾಡ – ರೂ. 87.76
ಗದಗ – ರೂ. 88.40
ಕಲಬುರಗಿ – ರೂ. 87.86
ಹಾಸನ – ರೂ. 87.52
ಹಾವೇರಿ – ರೂ. 88.81
ಕೊಡಗು – ರೂ. 88.54
ಕೋಲಾರ – ರೂ. 87.83
ಕೊಪ್ಪಳ – ರೂ. 88.72
ಮಂಡ್ಯ – ರೂ. 87.75
ಮೈಸೂರು – ರೂ. 87.45
ರಾಯಚೂರು – ರೂ. 87.76
ರಾಮನಗರ – ರೂ. 88.20
ಶಿವಮೊಗ್ಗ – ರೂ. 89.34
ತುಮಕೂರು – ರೂ. 88.05
ಉಡುಪಿ – ರೂ. 87.84
ಉತ್ತರ ಕನ್ನಡ – ರೂ. 87.95
ಯಾದಗಿರಿ – ರೂ. 88.32

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಗೋವಾ ಪ್ರವಾಸದ ಜೊತೆ ಜೀವನದ ಪಯಣಕ್ಕೂ ಗುಡ್​ಬೈ..

Sat Jun 4 , 2022
  ಕಲಬುರಗಿಯ ಕಮಲಾಪುರ ಹೊರವಲಯದಲ್ಲಿ ಖಾಸಗಿ ಬಸ್ ಹಾಗೂ ಗೂಡ್ಸ್ ಲಾರಿ ನಡುವೆ ನಿನ್ನೆ ಭೀಕರ ಅಪಘಾತ ಸಂಭವಿಸಿದೆ. ಅಪಘಾತದ ಬಳಿಕ ಬಸ್ ಹೊತ್ತಿ ಉರಿದ ಪರಿಣಾಮ 7 ಜನರು ಸಜೀವ ದಹನವಾಗಿದ್ದಾರೆ. ಕಲಬುರಗಿ: ಅವರೆಲ್ಲ ವೀಕೆಂಡ್ ಎಂಜಾಯ್​ ಮಾಡಲು ಹೈದರಾಬಾದ್​ನಿಂದ ಗೋವಾಕ್ಕೆ ತೆರಳಿದ್ದರು. ಸಮುದ್ರ ದಡದಲ್ಲಿ ಮಜಾ ಮಾಡಿ, ಮರಳಿ ಬರುವಾಗ ವಿವಾಹ ವಾರ್ಷಿಕೋತ್ಸವ ಹಾಗೂ ಎರಡು ಮಕ್ಕಳ ಬರ್ತ್​ಡೇ ಕೂಡ ಆಚರಿಸಿದರು. ಇನ್ನೇನು ಖುಷಿ ಖುಷಿಯಿಂದ ಊರಿನತ್ತ […]

Advertisement

Wordpress Social Share Plugin powered by Ultimatelysocial