ಪಿಂಕ್ ಬಾಲ್ ಫೈಟ್‌ನಲ್ಲಿ ಭಾರತದ ಸ್ಟಾರ್ ಪ್ಲೇಯರ್ ಔಟ್! ಟೀಂ ಇಂಡಿಯಾದ ಸಂಭಾವ್ಯ ತಂಡ ಹೀಗಿದೆ

ಶ್ರೀಲಂಕಾ (Sri lanka) ವಿರುದ್ಧದ ಮೊದಲ ಟೆಸ್ಟ್ (Test) ಪಂದ್ಯದಲ್ಲಿ ಇನ್ನಿಂಗ್ಸ್ ಜೊತೆ 222 ರನ್​ಗಳ ಭರ್ಜರಿಗೆಲುವನ್ನು ದಾಖಲಿಸಿರುವ ಭಾರತ ತಂಡ (Team India) ನಾಳೆ (ಮಾರ್ಚ 12) ನಡೆಯಲಿರುವ ಎರಡನೇ ಟೆಸ್ಟ್ ಪಂದ್ಯಕ್ಕೆ ಭರದ ಸಿದ್ಧತೆಯಲ್ಲಿ ತೊಡಗಿಕೊಂಡಿದೆ.
ಈಗಾಗಲೇ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 1-0 ಅಂತರದಿಂದ ಮುನ್ನಡೆ ಸಾಧಿಸಿದೆ. ಎರಡನೇ ಟೆಸ್ಟ್ ಪಂದ್ಯವನ್ನು ಗೆಲ್ಲುವ ಮೂಲಕ ಸರಣಿಯನ್ನು ಗೆದ್ದು ಶ್ರೀಲಂಕಾ ತಂಡವನ್ನು ವೈಟ್​ ವಾಶ್ ಮಾಡಲು ಟೀಂ ಇಂಡಿಯಾ ತಯಾರಿ ನಡೆಸುತ್ತಿದೆ. ನಾಳೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದ್ದು, ಈ ಟೆಸ್ಟ್ ಪಂದ್ಯ ಪಿಂಕ್ ಬಾಲ್ ಟೆಸ್ಟ್ ಆಗಿರಲಿದೆ. ಅಲ್ಲದೇ ಇದು ಭಾರತದಲ್ಲಿ ನಡೆಯುತ್ತಿರುವ ಎರಡನೇ ಡೇ ಎಂಡ್ ನೈಟ್ (Day and Night) ಪಂದ್ಯವಾಗಿರಲಿದೆ.

ಶೇ.100ರಷ್ಟು ಪ್ರೇಕ್ಷಕರಿಗೆ ಅವಕಾಶ:

ಬೆಂಗಳೂರಿನಲ್ಲಿ ನಡೆಯುತ್ತಿರುವ ಭಾರತ ಮತ್ತು ಶ್ರೀಲಂಕಾ ನಡುವಿನ ಎರಡನೇ ಟೆಸ್ಟ್ ಪಂದ್ಯ ವೀಕ್ಷಿಸಲು ಶೇ.100ರಷ್ಟು ಪ್ರೇಕ್ಷಕರಿಗೆ ಅವಕಾಶ ನೀಡಲಾಗಿದೆ. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಮೊದಲಿಗೆ ಕೇವಲ ಶೇ. 50ರಷ್ಟು ಜನರಿಗೆ ಮಾತ್ರ ಅವಕಾಶ ಕಲ್ಪಿಸುವುದಾಗಿ ತಿಳಿಸಿತ್ತು. ಆದರೆ ನಂತರದಲ್ಲಿ ತನ್ನ ನಿಲುವನ್ನು ಬದಲಿಸಿದ ಕೆಎಸ್​ಸಿಎ 100ರಷ್ಟು ಪ್ರೇಕ್ಷಕರಿಗೆ ಅನುಮತಿ ನೀಡಿದೆ. ಇನ್ನು, ಟಿಕೆಟ್​ಗಳು ಇಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 7 ಗಂಟೆ ವರೆಗೆ ಮಾರಾಟ ಮಾಡುವುದಾಗಿ ತಿಳಿಸಿದೆ. ಪಂದ್ಯವು ಮಾರ್ಚ್ 12ರಿಂದ ಮಾರ್ಚ್ 16ರ ವರೆಗೆ ನಡೆಯಲಿದೆ.

ಪ್ಲೇಯಿಂಗ್ ಇಲೆವೆನ್​ನಲ್ಲಿ ಬದಲಾವಣೆ ಖಚಿತ:

ನಾಳಿನ ಪಂದ್ಯದಲ್ಲಿ ಭಾರತ ತಂಡದ ಪ್ಲೇಯಿಂಗ್ ಇಲೆವೆನ್ ಹೇಗಿರಲಿದೆ ಎಂಬ ಕುತೂಹಲ ಎಲ್ಲರಲ್ಲಿಯೂ ಮನೆಮಾಡಿದೆ. ಈ ನಡುವೆ ಟೀಂ ಇಂಡಿಯಾದ ಕೋಚ್ ರಾಹುಲ್ ದ್ರಾವಿಡ್ ಪ್ಲೇಯಿಂಗ್ ಇಲೆವೆನ್​ನಲ್ಲಿ ಬದಲಾವಣೆ ಮಾಡುವುದು ಖಚಿತ ಎಂದು ಹೇಳಲಾಗುತ್ತಿದೆ. ಆದಾಗ್ಯೂ, ಆರಂಭಿಕರಾದ ರೋಹಿತ್ ಶರ್ಮಾ ಮತ್ತು ಮಯಾಂಕ್ ಅಗರ್ವಾಲ್ ನಂತರ, ಹನುಮ ವಿಹಾರಿ ಮೂರನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಲು ಸಜ್ಜಾಗಿದ್ದಾರೆ.

ಉಳಿದಂತೆ ನಾಲ್ಕು, ಐದು ಮತ್ತು ಆರು ಸ್ಥಾನಗಳಲ್ಲಿ ಕ್ರಮವಾಗಿ ಕೊಹ್ಲಿ, ಪಂತ್ ಮತ್ತು ಶ್ರೇಯಸ್ ಬ್ಯಾಟಿಂಗ್ ಮಾಡಲಿದ್ದಾರೆ. ಆ ಬಳಿಕ ರವೀಂದ್ರ ಜಡೇಜಾ ಏಳನೇ ಕ್ರಮಾಂಕದಲ್ಲಿ ಆಡುವ ಸಾಧ್ಯತೆಗಳಿವೆ. ಕಳೆದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಆಲ್​ ರೌಂಡರ್ ರವೀಂದ್ರ ಜಡೇಜಾ ಪಿಂಕ್ ಬಾಲ್​ ನಲ್ಲಿ ಮತ್ತೆ ಕಮಾಲ್ ಮಾಡಲಿದ್ದಾರಾ ಎಂಬ ನಿರೀಕ್ಷೆಯಲ್ಲಿ ಟೀಂ ಇಂಡಿಯಾ ಅಭಿಮಾನಿಗಳು ಕಾತುರರಾಗಿದ್ದಾರೆ.

ಅಕ್ಷರ್ ಪಟೇಲ್ ಕಣಕ್ಕಿಳಿಯುವ ಸಾಧ್ಯತೆ:

ಮೊದಲ ಟೆಸ್ಟ್ ಪಂದ್ಯದಲ್ಲಿ ಆಡಿರುವ ಜಯಂತ್ ಯಾದವ್ ಅವರನ್ನು ಎರಡನೇ ಪಂದ್ಯದಿಂದ ಕೈ ಬಿಡುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ. ಏಕೆಂದರೆ ಬ್ಯಾಟಿಂಗ್ ಹಾಗೂ ಬೌಲಿಂಗ್​ ಎರಡರಲ್ಲಿಯೂ ಹೇಳಿಕೊಳ್ಳುವ ಪ್ರದರ್ಶನ ನೀಡದ ಕಾರಣ ಈ ಪಂದ್ಯದಿಂದ ಅವರನ್ನು ಹೊರಗುಳಿಸುವ ಸಾಧ್ಯತೆಗಳಿವೆ. ಇನ್ನು, ಯಾದವ್ ಬದಲಿಗೆ ಅಕ್ಷರ್ ಪಟೇಲ್ ತಂಡಕ್ಕೆ ಮತ್ತೆ ಮರಳಲಿದ್ದಾರೆ ಎನ್ನಲಾಗುತ್ತಿದೆ.

ಅದರಲ್ಲಿಯೂ ಅಕ್ಷರ್ ಪಟೇಲ್ ಪಿಂಕ್ ಬೌಲ್​ ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದು, ಇವರು ಈವರೆಗೆ ಆಡಿರುವ 5 ಟೆಸ್ಟ್ ಗಳಿಂದ ಬರೋಬ್ಬರಿ 36 ವಿಕೆಟ್​ ಗಳನ್ನು ಕಬಳಿಸಿದ್ದಾರೆ. ಅಲ್ಲದೇ ಕಳೆದ ವರ್ಷ ನಡೆದಿದ್ದ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ 70 ರನ್​ಗೆ 11 ವಿಕೆಟ್ ಪಡೆದು ಪಂದ್ಯಶ್ರೇಷ್ಠರಾಗಿದ್ದರು. ಹೀಗಾಗಿ ಬೆಂಗಳೂರಿನಲ್ಲಿ ನಡೆಯಲಿರುವ ಪಂದ್ಯದಲ್ಲಿ ಅಕ್ಷರ್ ಕಣಕ್ಕಿಳಿಯುವ ಸಾಧ್ಯತೆಗಳು ಹೆಚ್ಚಿವೆ.

ಭಾರತದ ಸಂಭಾವ್ಯ ತಂಡ:

ರೋಹಿತ್ ಶರ್ಮಾ (ನಾಯಕ), ಮಯಾಂಕ್ ಅಗರ್ವಾಲ್, ಹನುಮಾ ವಿಹಾರಿ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಆರ್. ಅಶ್ವಿನ್, ಅಕ್ಷರ್ ಪಟೇಲ್, ಮೊಹಮ್ಮದ್ ಸಿರಾಜ್, ಜಸ್​ಪ್ರೀತ್ ಬುಮ್ರಾ.ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪಂಜಾಬ್ ನಲ್ಲಿ ಎಷ್ಟು ಸೀಟು ಗೆದ್ದಿದ್ದೀರಿ?: ಬಿಜೆಪಿಗೆ ಸಿದ್ದರಾಮಯ್ಯ ಪ್ರಶ್ನೆ

Fri Mar 11 , 2022
ಬೆಂಗಳೂರು : ಪಂಜಾಬ್ ನಲ್ಲಿ ನೀವು ಎಷ್ಟು ಸೀಟು ಗೆದ್ದಿದ್ದೀರಿ ? ಎರಡೇ….! ಹೀಗೆಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಬಿಜೆಪಿ ನಾಯಕರ ವಿರುದ್ಧ ವ್ಯಂಗ್ಯವಾಡಿದ್ದಾರೆ. ಮಾಜಿ ಸಿಎಂ‌ ಯಡಿಯೂರಪ್ಪ ಅವರ ಮಾತಿಗೆ ತಿರುಗೇಟು ನೀಡಿದ ಅವರು, ಯಾವ ರಾಜ್ಯದಲ್ಲಿ ನೀವು ಅಧಿಕಾರದಲ್ಲಿದ್ದಿರೋ, ಅಲ್ಲಿ ಗೆದ್ದಿದ್ದೀರಿ.  ಪಂಜಾಬಿನಲ್ಲಿ ನಮ್ಮ ತಪ್ಪಿನಿಂದ ಅಧಿಕಾರಕ್ಕೆ ಕಳೆದುಕೊಂಡಿದ್ದೇವೆ. ಆದರೆ ರಾಜ್ಯದ ಸ್ಥಿತಿ ಬೇರೆಯೇ ಇದೆ ಎಂದರು. ಇಲ್ಲಿನ ಜನ ಬಿಜೆಪಿಯನ್ನು ಸೋಲಿಸಬೇಕೆಂದು ತೀರ್ಮಾನಿಸಿದ್ದಾರೆ. ನಾವು ಭ್ರಮೆಯಲ್ಲಿ ಇಲ್ಲ. […]

Advertisement

Wordpress Social Share Plugin powered by Ultimatelysocial