ತನಿಖೆ ನೆಪದಲ್ಲಿ ಪೊಲೀಸರಿಂದ ಸುಲಿಗೆ.

ರಾಜ್ಯದಲ್ಲಿ ಚಿನ್ನದ ವ್ಯಾಪಾರಿಗಳು ಮತ್ತು ಪಾನ್ ಬ್ರೋಕರ್‌ಗಳನ್ನು ಪೊಲೀಸರು ತನಿಖೆ ನೆಪದಲ್ಲಿ ಸುಲಿಗೆ ಮಾಡುತ್ತಿದ್ದಾರೆ. ರಕ್ಷಕರೇ ಭಕ್ಷಕರಂತೆ ವರ್ತಿಸುತ್ತಿದ್ದಾರೆ ಎಂದು ಜೆಡಿಎಸ್ ಸದಸ್ಯ ಟಿ.ಎ. ಶರವಣ ಆರೋಪಿಸಿದರು.ಗಮನ ಸೆಳೆಯುವ ಸೂಚನೆ ಮಂಡಿಸಿ ಮಾತನಾಡಿದ ಅವರು, ರಾಮನಗರ ಜಿಲ್ಲೆಯ ಹಲಗೂರು, ಬೆಂಗಳೂರು ನಗರದ ಹಲಸೂರು ಗೇಟ್, ಸಿಲ್ವರ್ ಜ್ಯೂಬಲಿ ಪಾರ್ಕ್, ರಾಮಮೂರ್ತಿ ನಗರ, ನಂದಿನಿ ಬಡಾವಣೆ ಸೇರಿದಂತೆ ರಾಜ್ಯದ ಹಲವು ಪೊಲೀಸ್ ಠಾಣೆಗಳಲ್ಲಿನ ಅಧಿಕಾರಿಗಳು ಮತ್ತು ಸಿಬ್ಬಂದಿ ಚಿನ್ನಾಭರಣ ವ್ಯಾಪಾರಿಗಳನ್ನು ಬೆದರಿಸಿ ಸುಲಿಗೆ ಮಾಡುವುದನ್ನೇ ದಂದೆ ಮಾಡಿಕೊಂಡಿದ್ದಾರೆ. ಒಂದು ಕಳ್ಳತನ ಪ್ರಕರಣ ಮುಂದಿಟ್ಟುಕೊಂಡು ರಾಜ್ಯದ ತುಂಬಾ ವಸೂಲಿ ಮಾಡುತ್ತಾರೆ. ಈ ಹಣ ಎಲ್ಲಿಗೆ ಹೋಗುತ್ತಿದೆ ಎಂದು ಪ್ರಶ್ನಿಸಿದರು.ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದ ಚಿನ್ನಾಭರಣವನ್ನು ವ್ಯಾಪಾರಿಗಳು ಖರೀದಿಸಿದ್ದರೆ, ಪಾನ್ ಬ್ರೋಕರ್‌ಗಳು ಅಡಮಾನ ಇರಿಸಿಕೊಂಡಿದ್ದರೆ ಅದನ್ನು ವಶಕ್ಕೆ ಪಡೆಯಲು ನಿರ್ದಿಷ್ಠ ಪ್ರಕ್ರಿಯೆ ನಡೆಸಬೇಕು. ಸುಪ್ರೀಂಕೋರ್ಟ್ ಆದೇಶವೂ ಇದನ್ನು ಸ್ಪಷ್ಟವಾಗಿ ಹೇಳಿದೆ. ಆದರೆ, ಪೊಲೀಸರು ಯಾವುದನ್ನೂ ಪಾಲಿಸುತ್ತಿಲ್ಲ. ಅವರಿಗೆ ಗುಂಡಾಗಿರಿಗೆ ಪರವಾನಗಿ ನೀಡುವುದು ಉತ್ತಮ ಎಂದರು. ನಾನು ರಾಜ್ಯದ ಚಿನ್ನಾಭರಣ ವ್ಯಾಪಾರಿಗಳ ಸಂಘದ ಅಧ್ಯಕ್ಷನೂ ಹೌದು. ವಶಕಪಡಿಸಿಕೊಂಡ ಚಿನ್ನಾಭರಣದಲ್ಲಿ ಅರ್ಧದಷ್ಟನ್ನು ಪೊಲೀಸರು ಕಬಳಿಸುತ್ತಾರೆ. ತಾಮ್ರ ಮಿಶ್ರಣ ಮಾಡಿ ವಾರಸುದಾರರಿಗೆ ನೀಡಲಾಗುತ್ತಿದೆ. ಅಮಾಯಕರಿಗೆ ಕಿರುಕುಳ ನೀಡುವುದು ನಿಲ್ಲಬೇಕು. ತನಿಖೆಗೆ ಅಗತ್ಯವಿದ್ದರೆ ನಿಯಮಾನುಸಾರ ನೋಟಿಸ್ ನೀಡಿ, ಕರೆಸಿಕೊಳ್ಳಬೇಕು ಎಂದು ಆಗ್ರಹಿಸಿದರು.ಸುತ್ತೋಲೆ ಮೂಲಕ ಸೂಚನೆ. ಉತ್ತರ ನೀಡಿದ ಗೃಹ ಸಚಿವ ಅರಗ ಜ್ಞಾನೇಂದ್ರ, ಪೊಲೀಸರಲ್ಲಿ ಎಲ್ಲವೂ ಸರಿ ಇದೆ ಎಂದು ನಾನು ಹೇಳುವುದಿಲ್ಲ. ಹೆಚ್ಚಿನವರು ಪ್ರಾಮಾಣಿಕರಿದ್ದಾರೆ. ತಪ್ಪುಗಳೂ ಆಗಬಹುದು. ಆದರೆ, ಕೆಲವು ಚಿನ್ನಾಭರಣ ವರ್ತಕರು ತನಿಖೆಗೆ ಸಹಕಾರ ನೀಡುವುದಿಲ್ಲ. ಅಂತಹ ಸಂದರ್ಭದಲ್ಲಿ ಕ್ರಮ ಕೈಗೊಳ್ಳುವುದು ಅನಿವಾರ್ಯ ಆಗುತ್ತದೆ ಎಂದರು. ತಕ್ಷಣವೆ ಎಲ್ಲ ಪೊಲೀಸ್ ಠಾಣೆಗಳಿಗೆ ಸುತ್ತೋಲೆ ಹೊರಡಿಸಲಾಗುವುದು. ಚಿನ್ನಾಭರಣ ಕಳ್ಳತನಕ್ಕೆ ಸಂಬಂಧಿಸಿದ ಪ್ರಕರಣಗಳ ತನಿಖೆಯಲ್ಲಿ ಅನುಸರಿಸಬೇಕಾದ ಕ್ರಮಗಳ ಕುರಿತು ನಿಯಮ ಪಾಲಿಸುವಂತೆ ಸೂಚಿಸಲಾಗುವುದು ಎಂದು ಅರಗ ಜ್ಞಾನೇಂದ್ರ ಭರವಸೆ ನೀಡಿದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಯುವಕ ಯುವತಿ ಕಿಡ್ನಾಪ್ ಕೇಸ್ ಗೆ ಟ್ವಿಸ್ಟ್.

Tue Feb 21 , 2023
ಯುವಕ ಯುವತಿ ಕಿಡ್ನಾಪ್ ಕೇಸ್ ಗೆ ಟ್ವಿಸ್ಟ್. ಸುಲಿಗೆಕೋರರ ಗ್ಯಾಂಗ್ ನಿಂದ ಕಿಡ್ನಾಪ್. ಕಿಡ್ನಾಪರ್ಸ್ ಗೆ ಸಾಥ್ ಕೊಟ್ಟಿದ್ದೆ ಯುವತಿ. ಆರೋಪಿಗಳಿಗೆ ಹೊಟೇಲ್ ಲೋಕೇಷನ್ ಕಳುಹಿಸಿದ್ದ ಯುವತಿ. ಯುವತಿ ಲೋಕೇಷನ್ ಕಳುಹಿಸಿದ ಸ್ಥಳಕ್ಕೆ ಬಂದು ಕಾರು ಅಪಘಾತದ ನಾಟಕ. ಬೈಕ್ ಗೆ ಕಾರು ಡಿಕ್ಕಿ ಹೊಡೆದಿದೆ ಎಂದು ಸೀನ್ ಕ್ರಿಯೆಟ್ ಮಾಡಿದ ಗ್ಯಾಂಗ್. ನಂತರ ಯುವತಿ ಸಮೇತ ಇಬ್ಬರು ಯುವಕರ ಕಿಡ್ನಾಪ್. ಮಾರ್ಗಮಧ್ಯೆ ಕಾರಿನಿಂದ ಜಿಗಿದು ಪಾರಾಗಿದ್ದ ಮಂಜುನಾಥ್. ಕಿಡ್ನಾಪ್ […]

Advertisement

Wordpress Social Share Plugin powered by Ultimatelysocial