ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧಿಸಿ ಗೆದ್ದರೂ ಕ್ಷೇತ್ರದ ಜನತೆಗೆ ಸಿಗುವ ವ್ಯಕ್ತಿ ಅಲ್ಲ.

ಕೋಲಾರ: ‘ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧಿಸಿ ಗೆದ್ದರೂ ಕ್ಷೇತ್ರದ ಜನತೆಗೆ ಸಿಗುವ ವ್ಯಕ್ತಿ ಅಲ್ಲ. ಅವರಿಂದ ಮತದಾರರು ಏನನ್ನೂ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಸ್ಥಳೀಯ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಕ್ಷೇತ್ರದ ಅಭಿವೃದ್ಧಿಗೆ ಸಹಕಾರ ನೀಡಿ’ ಎಂದು ಕೋಲಾರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಿಎಂಆರ್ ಶ್ರೀನಾಥ್ ಮನವಿ ಮಾಡಿದರು.

ನಗರದ ಮಹಾಲಕ್ಷ್ಮಿ ಬಡಾವಣೆಯಲ್ಲಿ ಜೆಡಿಎಸ್ ಪಕ್ಷದ ಕಾರ್ಯಕರ್ತರನ್ನು ಭೇಟಿಯಾಗಿ ಮಾತನಾಡಿದ ಅವರು, ‘ಸಿದ್ದರಾಮಯ್ಯ ಕೇವಲ ನಾಮಪತ್ರ ಸಲ್ಲಿಸಿ ಹೋದರೆ ಚುನಾವಣೆ ನಾವು ನಡೆಸುತ್ತೇವೆ ಎಂಬುದಾಗಿ ಕ್ಷೇತ್ರದ ಶಾಸಕ ಕೆ. ಶ್ರೀನಿವಾಸಗೌಡ ಸೇರಿದಂತೆ ಕಾಂಗ್ರೆಸ್‌ನ ಹಲವು ಮುಖಂಡರು ಮಾತನಾಡಿದ್ದಾರೆ’ ಎಂದು
ಹೇಳಿದರು.

‘ರಾಜ್ಯದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್‌ ಹಾಗೂ ಬಿಜೆಪಿ ಜಾತಿ ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡಿ ಜನಸಾಮಾನ್ಯರ ಬದುಕನ್ನು ನಾಶ ಮಾಡಿವೆ. ಇಂತಹ ಪಕ್ಷಗಳಿಗೆ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿ’ ಎಂದು ಕೋರಿದರು.

‘ರಾಜ್ಯದ ಸಮಗ್ರ ಅಭಿವೃದ್ಧಿಯ ಕಣ್ಣೋಟದಲ್ಲಿ ಪಂಚರತ್ನ ಯೋಜನೆ ಜಾರಿ ಮಾಡಿ ಶಿಕ್ಷಣ, ಆರೋಗ್ಯ, ವಸತಿ, ರೈತರ ಮಹಿಳೆಯರ ಅಭಿವೃದ್ಧಿಗೆ ಒತ್ತು ನೀಡುವ ಕೆಲಸವನ್ನು ಮಾಡಲು ಹೊರಟಿದ್ದೇವೆ’ ಎಂದು ಭರವಸೆ ನೀಡಿದರು.

‘ಕೋಲಾರ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರನ್ನು ಕಾಂಗ್ರೆಸ್ ಪಕ್ಷವು ವೋಟ್‌ ಬ್ಯಾಂಕ್ ಮಾಡಿಕೊಂಡು ಅವರ ರಕ್ಷಣೆಗೆ ನಿಲ್ಲುವಲ್ಲಿ ವಿಫಲವಾಗಿದೆ. ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಅಲ್ಪಸಂಖ್ಯಾತರಿಗೆ ಹಲವಾರು ಯೋಜನೆ ರೂಪಿಸಿದ್ದಾರೆ’ ಎಂದು ಹೇಳಿದರು.

ಮುಖಂಡರಾದ ಅಜ್ಗರ್, ಮಹಮದ್ ನಜೀರ್, ಉಮರ್ ಅಕ್ಬರ್, ಫೈಯಾಜ್ ಇದ್ದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಂಕ್ರಾಂತಿಗೆ ಲಕ್ಷುರಿ ಕಾರುಗಳ ಉಡುಗೊರೆ! ಉದ್ಯೋಗಿಗಳಿಗೆ ಬಂಪರ್​ ಬೋನಸ್​ ಕೊಟ್ಟ ಹೈದರಾಬಾದ್​ ಕಂಪನಿ.

Sun Jan 15 , 2023
ಹೈದರಾಬಾದ್​: ಹೆಚ್ಚಿನ ಕಂಪನಿ ಮಾಲೀಕರು ಕೆಲವು ಹಬ್ಬದ ಸಮಯದಲ್ಲಿ ಉದ್ಯೋಗಿಗಳಿಗೆ ಬೋನಸ್ ಘೋಷಿಸುತ್ತಾರೆ. ಇನ್ನು ಕೆಲವು ಸಂಸ್ಥೆಗಳು ಹಬ್ಬ ಹರಿದಿನಗಳಿಗೆ ಉಡುಗೊರೆ ನೀಡಿ ಉದ್ಯೋಗಿಗಳನ್ನು ಸಂತಸಪಡಿಸುತ್ತಾರೆ. ಈ ಮೂಲಕ ಲಾಭದಲ್ಲಿ ಉದ್ಯೋಗಿಗಳಿಗೂ ಪಾಲು ನೀಡಲಾಗುತ್ತದೆ. ಇದೀಗ ಸಂಕ್ರಾಂತಿ ಹಿನ್ನೆಲೆಯಲ್ಲಿ ಹೈದರಾಬಾದ್​ ಮೂಲದ ಕಂಪನಿಯೊಂದು ತಮ್ಮ ಉದ್ಯೋಗಿಗಳಿಗೆ ಕಾರನ್ನು ಉಡುಗೊರೆಯಾಗಿ ನೀಡುವ ಮೂಲಕ ಎಲ್ಲರ ಹುಬ್ಬೇರಿಸಿದೆ. ಈ ಮುಂಚಿನಿಂದಲೂ ಸೂರತ್‌ನಲ್ಲಿರುವ ವಜ್ರದ ವ್ಯಾಪಾರಿಗಳು ತಮ್ಮ ಉದ್ಯೋಗಿಗಳಿಗೆ ಐಷಾರಾಮಿ ಕಾರುಗಳನ್ನು ಉಡುಗೊರೆಯಾಗಿ ನೀಡುವ ಸಂಪ್ರದಾಯವನ್ನು […]

Advertisement

Wordpress Social Share Plugin powered by Ultimatelysocial