ವಿಶ್ವೇಶ್ವರ ಹೆಗಡೆ ಕಾಗೇರಿ ಅಪರೂಪದ ವ್ಯಕ್ತಿ.

ತ್ತರ ಕನ್ನಡ: ದೇಶದ ಬಗ್ಗೆ ಅಭಿಮಾನ, ದೇಶಪ್ರೇಮ, ನಾಡಿನ ನೆಲ, ಜಲ, ಭಾಷೆಗಳ ಬಗ್ಗೆ ಗಟ್ಟಿ ನಿಲುವು ಉಳ್ಳವರು, ಬಡಜನರ, ತುಳಿತಕ್ಕೊಳಗಾದವರ ಹಿತರಕ್ಷಣೆಗೆ ತುಡಿಯುವ ವಿಶ್ವೇಶ್ವರ ಹೆಗಡೆ ಕಾಗೇರಿಯವರು  ಮಾನವತಾವಾದಿಯಾಗಿದ್ದಾರೆ.

ಜೀವನೋತ್ಸಾಹವಿರುವ ಅವರು ಅಪರೂಪದ ವ್ಯಕ್ತಿಯಾಗಿದ್ದು, ಅವರ ಅಗಾಧ ಅನುಭವದ ಮಾರ್ಗದರ್ಶನದಲ್ಲಿ ರಾಜ್ಯ ಅಭಿವೃದ್ಧಿ ಕಾಣಬಹುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಶಿರಸಿ ತಾಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಕಾರ್ಯಕ್ರಮ ಹಾಗೂ ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.

ಸಂಘಟನೆಯೇ ಕಾಗೇರಿಯವರ ಗಾಡ್ ಫಾದರ್
ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಹಗಲಿರುಳು ಕೆಲಸ ಮಾಡುವ ಕಾರ್ಯಕರ್ತನಾಗಿ, ಸಂಘಟನಾ ಚತುರನಾಗಿ ಸಾರ್ವಜನಿಕ ಜೀವನಕ್ಕೆ ಬಂದಿದ್ದು, ಪ್ರತಿಯೊಬ್ಬರ ಮನದಲ್ಲಿ ಸ್ಥಾನ ಗಳಿಸಿದ್ದಾರೆ. ವ್ಯಕ್ತಿಗತ ಯಾವುದೇ ಗಾಡ್ ಫಾದರ್ ಇಲ್ಲದ ಅವರಿಗೆ ಸಂಘಟನೆಯೇ ಗಾಡ್ ಫಾದರ್ ಆಗಿದೆ. ಯಾವುದೇ ರೀತಿಯ ರಾಜಿಮಾಡಿಕೊಳ್ಳದೇ ಜೀವನದಲ್ಲಿ ಏಳು ಬೀಳುಗಳನ್ನು ಕಂಡುಕೊಂಡ ಕಾಗೇರಿ, ಯಾವುದೇ ಆಸೆ ಆಮಿಷಗಳಿಗೆ ಬಲಿಯಾದವರಲ್ಲ. ಗಟ್ಟಿ ನಿಲುವಿನ, ಜನಹಿತ ಸಲುವಾಗಿ ಸಹಕಾರವನ್ನು ನೀಡುವಂಥವರು. ಸ್ಥಿತಪ್ರಜ್ಞೆಯ ವ್ಯಕ್ತಿಯಾದವರು ಎಂದೂ ತಪ್ಪು ಮಾಡುವುದಿಲ್ಲ. 6 ಬಾರಿ ಶಾಸಕರಾಗಿದ್ದು, 7ನೇ ಬಾರಿಯೂ ಗೆಲ್ಲುವ ವಿಶ್ವಾಸವಿದೆ ಎಂದು ತಿಳಿಸಿದರು.

ಶಿಕ್ಷಣ ಕ್ಷೇತ್ರಕ್ಕೆ ಹೊಸ ದಿಕ್ಸೂಚಿ
ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸಚಿವರಾಗಿ, ಸಭಾಧ್ಯಕ್ಷರಾಗಿ ಕೆಲಸ ನಿರ್ವಹಿಸಿದ್ದಾರೆ. ವಿಷಯಾಧಾರಿತ ಚರ್ಚೆಗಳಲ್ಲಿ ಗಟ್ಟಿತನವನ್ನು ತೋರಿದರೂ, ಸ್ನೇಹಕ್ಕೆ ಎಂದೂ ಕೊರತೆ ಮಾಡಿಲ್ಲ. ಸ್ಥಾನದ ಬಗ್ಗೆ ಯಾವ ಮೋಹವೂ ಇಲ್ಲ. ತಮಗೆ ವಹಿಸಿದ ಯಾವುದೇ ಕರ್ತವ್ಯವನ್ನು ಪ್ರಾಮಾಣಿಕವಾಗಿ ಮಾಡುವ ಪ್ರವೃತ್ತಿ ಹಾಗೂ ಬದ್ಧತೆಯುವಳ್ಳವರು. ಬಸವರಾಜ ಹೊರಟ್ಟಿ ಹಾಗೂ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಶಿಕ್ಷಣ ಸಚಿವರಾಗಿ ಕರ್ತವ್ಯ ನಿರ್ವಹಿಸಿ, ಶಿಕ್ಷಣ ಕ್ಷೇತ್ರಕ್ಕೆ ಹೊಸ ದಿಕ್ಸೂಚಿಯನ್ನು ನೀಡಿದ್ದಾರೆ. ಅವರು ಕೇವಲ ಸಭಾಧ್ಯಕ್ಷರಾಗಿ ದುಡಿಯಬಹುದಾಗಿತ್ತು. ಆದರೆ, ಮೌಲ್ಯಾಧಾರಿತ ಪ್ರಜಾಪ್ರಭುತ್ವ ಉಳಿಸುವ ಕಾರ್ಯವನ್ನು ಮಾಡಿದರು. ಸಂವಿಧಾನದ ಆಶಯ, ಸಾಮಾಜಿಕ ನ್ಯಾಯ, ಹಕ್ಕುಬಾಧ್ಯತೆ ಗಳ ಬಗ್ಗೆ, ಸಂವಿಧಾನದ ಎಲ್ಲ ರಂಗಗಳ ಬಗ್ಗೆ ಕರ್ತವ್ಯ ಪ್ರಜ್ಞೆ ಮೂಡಿಸುವ ಚಿಂತನ ಮಂಥನ ಕಾರ್ಯಕ್ರಮವನ್ನು ಮಾಡಿದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಭಾಧ್ಯಕ್ಷರಾಗಿ ಹಲವು ದಾಖಲೆಯ ಕಾರ್ಯಕ್ರಮಗಳು
ಚುನಾವಣೆಯಲ್ಲಿ ಸುಧಾರಣೆ, ಪಾರದರ್ಶಕತೆ, ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಜನರು ಭಾಗವಹಿಸಬೇಕು, ಪ್ರಭಾವ ರಹಿತ ಚುನಾವಣೆ ನಡೆಸುವಂತಾಗಬೇಕು ಎಂಬ ನಿಟ್ಟಿನಲ್ಲಿ ಒಂದು ದೇಶ ಒಂದು ಚುನಾವಣೆಗೆ ಕಾಗೇರಿ ಒಲವು ತೋರಿದರು. ಪದೇ ಪದೇ ವಿವಿಧ ಸ್ತರಗಳಲ್ಲಿ ಚುನಾವಣೆಯಾಗುವುದರಿಂದ ವೆಚ್ಚಗಳು, ಪ್ರಗತಿ ಮೇಲೆ ವ್ಯತಿರಿಕ್ತ ಪರಿಣಾಮಗಳಾಗುತ್ತವೆ. ಜನಪ್ರತಿನಿಧಿಗಳು ಆತ್ಮಾವಲೋಕನ , ಜನಪ್ರತಿನಿಧಿಗಳ ಕರ್ತವ್ಯ, ಉತ್ತರದಾಯಿತ್ವ , ಜನರಿಗಾಗಿ ಇರುವ ನೀತಿಗಳ ಚರ್ಚೆ ನಡೆಸಿದರು. ಇಂತಹ ಹಲವು ದಾಖಲೆಯ ಕಾರ್ಯಕ್ರಮಗಳನ್ನು ಮಾಡಿದರು. ಸಭಾಧ್ಯಕ್ಷರಾಗಿ ಅತ್ಯಂತ ಕ್ರಿಯಾಶೀಲರಾಗಿ, ಶಾಸಕರಾಗಿ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದಾರೆ. ಶಿವರಾಂ ಹೆಬ್ಬಾರ್ ಸೇರಿದಂತೆ ಇಬ್ಬರ ಶ್ರಮದಿಂದ ಶಿರಸಿ ತಾಲೂಕು ಅಭಿವೃದ್ಧಿಯಾಗುತ್ತಿದೆ ಎಂದು ಹೇಳಿದರು.

ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಸಭಾಪತಿ ಬಸವರಾಜ ಹೊರಟ್ಟಿ, ಸಚಿವರಾದ ಶಿವರಾಮ್ ಹೆಬ್ಬಾರ್, ಸಿ.ಸಿ. ಪಾಟೀಲ್, ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಚಿವ ಆರ್. ವಿ. ದೇಶಪಾಂಡೆ ಶಾಸಕರು ಮತ್ತಿತರ ಗಣ್ಯರು ಹಾಜರಿದ್ದರು.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪಾದಗಳಲ್ಲಿ ಧೂಳು, ಕೊಳೆ ಕುಳಿತುಕೊಂಡು ಪಾದಗಳು ಒರಟಾಗಿ ಬಿರುಕು ಬಿಡುತ್ತದೆ.

Mon Jan 16 , 2023
ಪಾದಗಳಲ್ಲಿ ಧೂಳು, ಕೊಳೆ ಕುಳಿತುಕೊಂಡು ಪಾದಗಳು ಒರಟಾಗಿ ಬಿರುಕು ಬಿಡುತ್ತದೆ. ಇದರಿಂದ ನಿಮ್ಮ ಪಾದಗಳಲ್ಲಿ ನೋವು, ರಕ್ತ ಕಾಣಿಸಿಕೊಳ್ಳು ತ್ತದೆ. ಇದು ನಿಮ್ಮನ್ನ ಮುಜುಗರಕ್ಕೀಡಾಗುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ಪಾದಗಳನ್ನು ಇವುಗಳಿಂದ ಮಸಾಜ್ ಮಾಡಿ. *ಜೇನುತುಪ್ಪ: ಜೇನುತುಪ್ಪದಲ್ಲಿ ಆಂಟಿ ಬ್ಯಾಕ್ಟೀರಿಯಲ್ ಗುಣಗಳಿವೆ. ಇದು ಗಾಯಗಳನ್ನು ಶುದ್ಧೀಕರಿಸಲು ಮತ್ತು ಚರ್ಮವನ್ನು ತೇವಗೊಳಿಸಲು ಸಹಾಯ ಮಾಡುತ್ತದೆ. ಒಂದು ಬಕೆಟ್ ಬೆಚ್ಚಗಿನ ನೀರಿನಲ್ಲಿ 1 ಕಪ್ ಜೇನುತುಪ್ಪ ಮಿಕ್ಸ್ ಮಾಡಿ ಅದರಲ್ಲಿ ಪಾದಗಳನ್ನು ನೆನೆಸಿ ಸುಮಾರು […]

Advertisement

Wordpress Social Share Plugin powered by Ultimatelysocial