ಸ್ಯಾಂಟ್ರೋ ರವಿ ಕೇಸ್ ಸಿಐಡಿಗೆ ವರ್ಗಾವಣೆ.

ಸ್ಯಾಂಟ್ರೋ ರವಿ ಕೇಸ್ ತನಿಖೆ ನಡೆಸುತ್ತಿರುವ ಮೈಸೂರು ನಗರ ಪೊಲೀಸರಿಂದ ಈ ಪ್ರಕರಣವನ್ನ ಸಿಐಡಿಗೆ ವರ್ಗಾವಣೆ ಮಾಡುವಂತೆ ರಾಜ್ಯ ಸರ್ಕಾರ ಸೂಚನೆ ನೀಡಿದೆ.

ಸ್ಯಾಂಟ್ರೊ ರವಿ ವಿರುದ್ಧದ ದೂರುಗಳ ಬಗ್ಗೆ ತನಿಖೆ ನಡೆಸಲು ರಾಜ್ಯ ಸರ್ಕಾರದಿಂದ ಸಿಐಡಿ ಪೊಲೀಸರಿಗೆ ನಿರ್ದೇಶನ ನೀಡಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಮಾಹಿತಿ ನೀಡಿದ್ದಾರೆ.

ಡಿಜಿ & ಐಜಿಪಿ ಆದೇಶದಂತೆ ಇಂದು ಸಂಜೆ ಅಥವಾ ನಾಳೆ ಬೆಳಗ್ಗೆ ಅಷ್ಟರಲ್ಲಿ ಸಿಐಡಿಗೆ ಅಧಿಕೃತವಾಗಿ ಸ್ಯಾಂಟ್ರೊ ರವಿ ಪ್ರಕರಣ ವರ್ಗಾವಣೆ ಅಗಲಿದೆ. ಸ್ಯಾಂಟ್ರೋ ರವಿಯನ್ನು ಪೊಲೀಸ್ ಕಸ್ಟಡಿಗೆ ನೀಡದೆ, ಜನವರಿ 25ರವರೆಗೆ ನ್ಯಾಯಾಂಗ ಬಂಧನದಲ್ಲಿಡಬೇಕು ಎಂದು 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ನೀಡಿದೆ.

ಈ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡುವಂತೆ ಸರ್ಕಾರಿ ಪರ ವಕೀಲರು ಮನವಿ ಸಲ್ಲಿಸಿದ್ದರು. ಆದರೆ ಪ್ರಕರಣವನ್ನ ಸಿಐಡಿಗೆ ವರ್ಗಾಯಿಸುವುದು ಸರ್ಕಾರದ ಕೆಲಸ, ನಾವು ಈ ವಿಚಾರದಲ್ಲಿ ಮಧ್ಯಪ್ರವೇಶಿಸಲ್ಲ ಎಂದು ಕೋರ್ಟ್​​​​​ ಹೇಳಿತ್ತು. ಆದರೀಗ ಗೃಹ ಸಚಿವರು ಸಿಐಡಿಗೆ ಈ ಪ್ರಕರಣವನ್ನ ವಹಿಸುವುದಾಗಿ ಹೇಳಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವಿವಾಹಿತ ಮಹಿಳೆಗೆ ವ್ಯಕ್ತಿಯೊಬ್ಬ ಚಾಕು ಇರಿದಿರುವ ಘಟನೆ ನಡೆದಿದೆ.

Mon Jan 16 , 2023
ಬೆಂಗಳೂರು: ಇಲ್ಲಿನ ಆರ್.ಟಿ.ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮಠದಹಳ್ಳಿಯಲ್ಲಿ‌ ಅಕ್ರಮ ಸಂಬಂಧ ಮುಂದುವರಿಸುವುದು ಬೇಡ ಎಂದಿದ್ದ ವಿವಾಹಿತ ಮಹಿಳೆಗೆ ವ್ಯಕ್ತಿಯೊಬ್ಬ ಚಾಕು ಇರಿದಿರುವ ಘಟನೆ ನಡೆದಿದೆ. ಹಬೀಬಾ ತಾಜ್ (30) ಚಾಕು ಇರಿತಕ್ಕೆ ಒಳಗಾದ ಮಹಿಳೆ. ಹಬೀಬಾ ತಾಜ್‌ಳ ಪತಿ ತೀರಿಕೊಂಡಿದ್ದು, ಇಬ್ಬರು ಮಕ್ಕಳ ಜತೆಗೆ ವಾಸಮಾಡಿಕೊಂಡಿದ್ದರು. ಈ ವೇಳೆ ಆಟೋ ಚಾಲಕ ಶೇಕ್ ಮೆಹಬೂಬ್ (32) ಎಂಬಾತನೊಂದಿಗೆ ಸಂಪರ್ಕ ಬೆಳೆಸಿದ್ದಳು. ಶೇಕ್ ಮೆಹಬೂಬ್‌ಗೂ ಮದುವೆಯಾಗಿ ಮಕ್ಕಳಿದ್ದರೂ ಪರಸ್ತ್ರೀ ಸಹವಾಸ […]

Advertisement

Wordpress Social Share Plugin powered by Ultimatelysocial