ಪ್ರಧಾನಿ ಮೋದಿ ಅವರು ಎಲ್ಲಾ ಧರ್ಮದ ಜನರನ್ನು ತಲುಪಲು ಒತ್ತು ನೀಡಿದ್ದಾರೆ.

ತಗಳನ್ನು ನಿರೀಕ್ಷಿಸದೆ ಮುಸ್ಲಿಮರು ಸೇರಿದಂತೆ ಅಲ್ಪಸಂಖ್ಯಾತರನ್ನು ತಲುಪುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿ ನಾಯಕರಿಗೆ ಮಂಗಳವಾರ ಸೂಚನೆ ನೀಡಿದ್ದಾರೆ. ನವದೆಹಲಿ: ಮತಗಳನ್ನು ನಿರೀಕ್ಷಿಸದೆ ಮುಸ್ಲಿಮರು ಸೇರಿದಂತೆ ಅಲ್ಪಸಂಖ್ಯಾತರನ್ನು ತಲುಪುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿ ನಾಯಕರಿಗೆ ಮಂಗಳವಾರ ಸೂಚನೆ ನೀಡಿದ್ದಾರೆ.
ದೆಹಲಿಯಲ್ಲಿ ನಡೆದ ಭಾರತೀಯ ಜನತಾ ಪಕ್ಷದ ಎರಡು ದಿನಗಳ ರಾಷ್ಟ್ರೀಯ ಕಾರ್ಯಕಾರಿಣಿ ಸಮಾರೋಪ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, 2024 ರ ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಗಡಿ ಪ್ರದೇಶಗಳು ಸೇರಿದಂತೆ ದೇಶಾದ್ಯಂತ ಪಕ್ಷವನ್ನು ಬಲಪಡಿಸುವ ಬಗ್ಗೆ ಗಮನಹರಿಸಬೇಕು ಎಂದು ಹೇಳಿದರು. ಇದನ್ನು ಓದಿ: ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ: ಎಲ್ಲಾ ರಾಜ್ಯಗಳು ಇವರಿಂದ ಕಲಿಯಿರಿ ಎಂದ ಪ್ರಧಾನಿ ಮೋದಿ!ಮೂಲಗಳ ಪ್ರಕಾರ, ಪ್ರಧಾನಿ ಮೋದಿ ಅವರು ಎಲ್ಲಾ ಧರ್ಮದ ಜನರನ್ನು ತಲುಪಲು ಒತ್ತು ನೀಡಿದ್ದಾರೆ. ವಿಶ್ವವಿದ್ಯಾನಿಲಯಗಳು ಮತ್ತು ಚರ್ಚ್ಗಳಿಗೆ ಭೇಟಿ ನೀಡುವಂತೆ ಪಕ್ಷದ ಸದಸ್ಯರಿಗೆ ಸೂಚಿಸಿದ್ದಾರೆ. “ಪ್ರತಿಯಾಗಿ ಮತಗಳನ್ನು ನಿರೀಕ್ಷಿಸದೆ ಪ್ರಜ್ಞಾವಂತ ಮುಸ್ಲಿಮರನ್ನು, ಬೋಹ್ರಾ ಸಮುದಾಯ, ಮುಸ್ಲಿಂ ವೃತ್ತಿಪರರು ಮತ್ತು ವಿದ್ಯಾವಂತ ಮುಸ್ಲಿಮರನ್ನು ಭೇಟಿಯಾಗುವಂತೆ ಪ್ರಧಾನಿ ಮೋದಿ ಬಿಜೆಪಿ ಕಾರ್ಯಕರ್ತರಿಗೆ ಕರೆ ನೀಡಿದರು” ಎಂದು ಮೂಲಗಳು ತಿಳಿಸಿವೆ. ಇದೇ ವೇಳೆ ಯಾವುದೇ ಸಮುದಾಯದ ವಿರುದ್ಧ ಅನಗತ್ಯ ಟೀಕೆಗಳನ್ನು ಮಾಡದಂತೆ ಬಿಜೆಪಿ ನಾಯಕರಿಗೆ ಮೋದಿ ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹಿಂದು ಧರ್ಮ ಅನ್ಯ ಧರ್ಮಕ್ಕೆ ಮತಾಂತರವಾಗಲು ಆಮಿಷ ವೊಡ್ಡಲಾಗುತ್ತಿದೆ.

Wed Jan 18 , 2023
ಹಿಂದು ಧರ್ಮಿಯರನ್ನು ಅನ್ಯ ಧರ್ಮಕ್ಕೆ ಮತಾಂತರವಾಗಲು ಆಮಿಷ ವೊಡ್ಡಲಾಗುತ್ತಿದೆ ಎನ್ನುವ ಗಂಭಿರ ಆರೊಪ ಕೆಳದಿ ಬಂದಿದೆ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ನಾರಾಯಣಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ.. ನಾರಾಯಣಪುರ ಗ್ರಾಮದ ಜಮಿನಿನೊಂದರಲ್ಲಿ ಹಿಂದು ಧರ್ಮದ ಮುಗ್ದ ಜನರನ್ನು ಗುಂಪುಗೂಡಿಸಿ ಅನ್ಯ ಧರ್ಮಕ್ಕೆ ಮತಾಂತರಗೊಳಿಸಲಾಗುತ್ತಿದೆ ಎನ್ನುವ ಆರೊಪ ಕೆಳಿಬಂದಿದ್ಧು ಈ ಹಿನ್ನೆಲೆಯಲ್ಲಿ ಹಿಂದು ಪರ ಸಂಘಟನೆಗಳ ಪದಾಧಿಕಾರಿಗಳು ಸ್ಥಳಕ್ಕೆ ಭೆಟಿ ನಿಡಿ ಸ್ಥಳಿಯರಿಂದ ಮಾಹಿತಿ ಪಡೆದುಕೊಂಡಿದ್ಧಾರೆ ಮತಾಂತರ ನಡೆಯುತ್ತಿರುವುದು ಸತ್ಯವಾದರೆ […]

Advertisement

Wordpress Social Share Plugin powered by Ultimatelysocial