ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿರುವ ಧಾರವಾಡದ ಐಐಟಿಯಲ್ಲಿ ಕಳ್ಳತನ.

ಧಾರವಾಡ, ಜನವರಿ, 20: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಉದ್ಘಾಟನೆ ಮಾಡಬೇಕಾಗಿರುವ ಧಾರವಾಡ ಐಐಟಿ ಕೇಂದ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ಕಳ್ಳತನವೊಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಧಾರವಾಡ ತಾಲೂಕಿನ ಚಿಕ್ಕಮಲ್ಲಿಗವಾಡ ಹದ್ದಿನಲ್ಲಿ ಬರುವ ಐಐಟಿ ಕಟ್ಟಡದ ಕಾಮಗಾರಿ ಈಗಾಗಲೇ ಮುಗಿಯುವ ಹಂತದಲ್ಲಿದೆ.

ಯುವಜನೋತ್ಸವಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಹುಬ್ಬಳ್ಳಿಗೆ ಬಂದಾಗಲೇ ಇದರ ಉದ್ಘಾಟನೆ ಆಗಬೇಕಿತ್ತು. ಆದರೆ, ಕೆಲ ಕಾಮಗಾರಿ ಬಾಕಿ ಇದ್ದುದ್ದರಿಂದ ಇದರ ಉದ್ಘಾಟನೆ ಇದೀಗ ಫೆಬ್ರವರಿ ತಿಂಗಳಿಗೆ ಮುಂದೂಡಲ್ಪಟ್ಟಿದೆ.

ಜನವರಿ 15ರಂದು ಕಳ್ಳತನ

ಈ ಕಟ್ಟಡದ ವಿವಿಧ ಸಾಮಗ್ರಿಗಳನ್ನು ಜನವರಿ 15ರಂದು ಕಳ್ಳರು ಕಳ್ಳತನ ಮಾಡಿದ್ದರು. ಕಟ್ಟಡದ ಆವರಣದಲ್ಲಿ ಇಡಲಾಗಿದ್ದ ಪೈಪ್‌ಗಳು, ಕೇಬಲ್‌ಗಳು ಸೇರಿದಂತೆ ಒಟ್ಟು 2,10,405 ಮೌಲ್ಯದ ಕಟ್ಟಡ ಸಾಮಗ್ರಿಗಳನ್ನು ಕಳ್ಳರು ಹೊತ್ತೊಯ್ದಿದ್ದರು. ಈ ಸಂಬಂಧ ಅದೇ ದಿನ ಧಾರವಾಡ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಐವರು ಆರೋಪಿಗಳ ಬಂಧನ

ಪ್ರಕರಣ ದಾಖಲಿಸಿಕೊಂಡ ಗ್ರಾಮೀಣ ಠಾಣೆ ಪೊಲೀಸರು, ಐದು ಜನ ಆರೋಪಿಗಳನ್ನು ಬಂಧಿಸಿ, ಸಾಮಗ್ರಿಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರನ್ನು ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದ ಅಲ್ತಾಫ್ ಶೇಖಸನದಿ, ಮಹ್ಮದ್‌ ಯಾಸೀನ್ ಖತೀಬ್ ಇಸ್ಮಾಯಿಲ್ ಗಿಡ್ನವರ ಹಾಗೂ ಹಾಶಂಪೀರ್ ಶೇಖಸನದಿ, ಇನಾಂಹೊಂಗಲದ ಇಮ್ರಾನ್ ರಸೂಲನವರ ಎಂದು ಗುರುತಿಸಲಾಗಿದೆ. ಸದ್ಯ ಈ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮುಂದುವರೆಸಿದ್ದಾರೆ.

ಬಿಜೆಪಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

ಕಂದಾಯ ಗ್ರಾಮ, ಅರಣ್ಯ ಇಲಾಖೆಯ ಕಾನೂನು ತಿದ್ದುಪಡಿ ಮಾಡಿದ್ದು ನಾವು. ತಾಂಡ, ಹಟ್ಟಿ, ದೊಡ್ಡಿಗಳನ್ನು ಕಂದಾಯ ಗ್ರಾಮಗಳನ್ನಾಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದವರೂ ನಾವು. ಈಗ ಚುನಾವಣಾ ಇರುವ ಹಿನ್ನೆಲೆ ಪ್ರಧಾನಿ ಮೋದಿಯವರನ್ನು ಕರೆಸಿ ನಾವೇ ಮಾಡಿದವರು ಅಂತಾ ಪ್ರಚಾರ ತೆಗೆದುಕೊಳ್ಳುತ್ತಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಇತ್ತೀಚೆಗಷ್ಟೇ ಹುಬ್ಬಳ್ಳಿಯಲ್ಲಿ ವಾಗ್ದಾಳಿ ನಡೆಸಿದ್ದರು. ಹಾಗೆಯೇ ನನ್ನ ಕಂಡರೆ ಮೋದಿಗೆ ಭಯ ಎಂದು ವ್ಯಂಗ್ಯವಾಡಿದ್ದರು.

ನಗರದ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಅಡುಗೆ ಮಾಡಿದವರು ನಾವು, ಊಟ ಮಾಡುವವರು ಬಿಜೆಪಿಯವರು. ಸೇವಲಾಲ್‌ ಜಯಂತಿ, ಲಂಬಾಣಿ ಅಭಿವೃದ್ಧಿ ನಿಗಮ ಆ‌ರಂಭಿಸಿದ್ದು ನಾವು. ಸೇವಾಲಾಲ್‌ ಹುಟ್ಟಿದ ಸ್ಥಳವನ್ನು ಅಭಿವೃದ್ಧಿಪಡಿಸಿದವರು ನಾವು. ನೂರಾರು ಕೋಟಿ ಅನುದಾನ ನೀಡಿದ್ದೆವೆ. ಲಂಬಾಣಿ ಅಭಿವೃದ್ಧಿಗಾಗಿ ಬಿಜೆಪಿ ಸರ್ಕಾರ ಮೂರು ವರ್ಷದಲ್ಲಿ ಕೇವಲ ಮೂವತ್ತು ಕೋಟಿ ಕೊಟ್ಟಿದ್ದಾರೆ. ಹಕ್ಕು ಪತ್ರವನ್ನು ನಾವು ಸಿದ್ದಪಡಿಸಿದ್ದೆವೆ, ಅವರು ಈಗ ವಿತರಣೆ ಮಾಡುತ್ತಿದ್ದಾರೆ ಎಂದಿದ್ದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕಲಬೆರಕೆ ಹಾಲು ಮಾರಾಟ.

Fri Jan 20 , 2023
ಮುಜಾಫರ್‌ನಗರ: ಕಲಬೆರಕೆ ಹಾಲು ಮಾರಾಟ ಮಾಡಿದ ಆರೋಪದಲ್ಲಿ ದೂರು ದಾಖಲಾಗಿ 32 ವರ್ಷಗಳ ಬಳಿಕ ವ್ಯಕ್ತಿಗೆ 6 ತಿಂಗಳು ಜೈಲು ಶಿಕ್ಷೆಯಾಗಿರುವ ಪ್ರಕರಣ ಉತ್ತರಪ್ರದೇಶದ ಮುಜಾಫರ್‌ನಗರದಿಂದ ವರದಿಯಾಗಿದೆ. ಅಲ್ಲದೆ, ಅಪರಾಧಿ, ಹಾಲು ಮಾರಾಟಗಾರ ಹರ್ಬೀರ್ ಸಿಂಗ್ ಅವರಿಗೆ ಹೆಚ್ಚುವರಿ ಮುಖ್ಯ ನ್ಯಾಯಮೂರ್ತಿ ಪ್ರಶಾಂತ್ ಕುಮಾರ್ ₹5,000 ದಂಡವನ್ನೂ ವಿಧಿಸಿದ್ದಾರೆ. ಕಲಬೆರಕೆ ಹಾಲು ಮಾರಾಟ ಮಾಡಿದ್ದ ಪ್ರಕರಣದಲ್ಲಿ ಹರ್ಬೀರ್ ಸಿಂಗ್ ದೋಷಿ ಎಂದು ಸಾಬೀತಾಗಿದೆ ಎಂದು ಪೊಲೀಸ್ ಅಧಿಕಾರಿ ರಾಮವತರ್ ಸಿಂಗ್ ಹೇಳಿದ್ದಾರೆ. […]

Advertisement

Wordpress Social Share Plugin powered by Ultimatelysocial