ಕಲಬೆರಕೆ ಹಾಲು ಮಾರಾಟ.

ಮುಜಾಫರ್‌ನಗರ: ಕಲಬೆರಕೆ ಹಾಲು ಮಾರಾಟ ಮಾಡಿದ ಆರೋಪದಲ್ಲಿ ದೂರು ದಾಖಲಾಗಿ 32 ವರ್ಷಗಳ ಬಳಿಕ ವ್ಯಕ್ತಿಗೆ 6 ತಿಂಗಳು ಜೈಲು ಶಿಕ್ಷೆಯಾಗಿರುವ ಪ್ರಕರಣ ಉತ್ತರಪ್ರದೇಶದ ಮುಜಾಫರ್‌ನಗರದಿಂದ ವರದಿಯಾಗಿದೆ.

ಅಲ್ಲದೆ, ಅಪರಾಧಿ, ಹಾಲು ಮಾರಾಟಗಾರ ಹರ್ಬೀರ್ ಸಿಂಗ್ ಅವರಿಗೆ ಹೆಚ್ಚುವರಿ ಮುಖ್ಯ ನ್ಯಾಯಮೂರ್ತಿ ಪ್ರಶಾಂತ್ ಕುಮಾರ್ ₹5,000 ದಂಡವನ್ನೂ ವಿಧಿಸಿದ್ದಾರೆ.

ಕಲಬೆರಕೆ ಹಾಲು ಮಾರಾಟ ಮಾಡಿದ್ದ ಪ್ರಕರಣದಲ್ಲಿ ಹರ್ಬೀರ್ ಸಿಂಗ್ ದೋಷಿ ಎಂದು ಸಾಬೀತಾಗಿದೆ ಎಂದು ಪೊಲೀಸ್ ಅಧಿಕಾರಿ ರಾಮವತರ್ ಸಿಂಗ್ ಹೇಳಿದ್ದಾರೆ. ಆತ ಮಾರಾಟ ಮಾಡಿದ ಹಾಲಿನ ಮಾದರಿಯನ್ನು ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಿದಾಗ ಕಲಬೆರಕೆ ದೃಢಪಟ್ಟಿದೆ ಎಂದು ಅವರು ಹೇಳಿದ್ದಾರೆ.

ಏಪ್ರಿಲ್ 21, 1990ರಂದು ಹರ್ಬೀರ್ ಸಿಂಗ್ ವಿರುದ್ಧ ಫುಡ್ ಇನ್ಸ್‌ಪೆಕ್ಟರ್ ಸುರೇಶ್ ಚಾಂದ್ ಪ್ರಕರಣ ದಾಖಲಿಸಿದ್ದರು ಎಂದು ರಾಮವತರ್ ಸಿಂಗ್ ಹೇಳಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಾಂಪ್ರದಾಯಿಕ ಗುಜರಾತಿ ಹಿಂದೂ ಕುಟುಂಬ ಸಂಪ್ರದಾಯದಂತೆ ಅನಂತ್ ಅಂಬಾನಿ- ರಾಧಿಕಾ ನಿಶ್ಚಿತಾರ್ಥ.

Fri Jan 20 , 2023
ಮುಂಬಯಿ: ರಾಧಿಕಾ ಮರ್ಚೆಂಟ್ ಮತ್ತು ಅನಂತ್ ಅಂಬಾನಿ ನಿಶ್ಚಿತಾರ್ಥ ಸಾಂಪ್ರದಾಯಿಕ ಕಾರ್ಯಕ್ರಮ ಜನವರಿ 19ರ ಗುರುವಾರ ಮುಂಬಯಿನಲ್ಲಿನ ಮುಕೇಶ್ ಅಂಬಾನಿ ನಿವಾಸ ಆಂಟಿಲಿಯಾದಲ್ಲಿ ನಡೆಯಿತು. ಕುಟುಂಬ, ಸ್ನೇಹಿತರ ಸಮ್ಮುಖದಲ್ಲಿ, ಸಂಪ್ರದಾಯಬದ್ಧವಾಗಿ ನಿಶ್ಚಿತಾರ್ಥ ಆಯಿತು. ಗುಜರಾತಿ ಹಿಂದೂ ಕುಟುಂಬಗಳಲ್ಲಿ ತಲೆಮಾರುಗಳಿಂದಲೂ ಅನುಸರಿಸಿಕೊಂಡು ಬರುತ್ತಿರುವ ಗೋಲ್ ಧನ ಮತ್ತು ಚುನರಿ ವಿಧಿಯಂತಹ ಸಂಪ್ರದಾಯಗಳನ್ನು ಅನುಸರಿಸಿ, ಗುರುವಾರದಂದು ಎರಡು ಕುಟುಂಬಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡವು. ಕುಟುಂಬದ ದೇವಾಲಯ ಮತ್ತು ಸಮಾರಂಭದ ಸ್ಥಳಗಳಲ್ಲಿ ಪದ್ಧತಿಗಳನ್ನು ಪಾಲಿಸಲಾಯಿತು. ಎರಡೂ […]

Advertisement

Wordpress Social Share Plugin powered by Ultimatelysocial