ಸಾಂಪ್ರದಾಯಿಕ ಗುಜರಾತಿ ಹಿಂದೂ ಕುಟುಂಬ ಸಂಪ್ರದಾಯದಂತೆ ಅನಂತ್ ಅಂಬಾನಿ- ರಾಧಿಕಾ ನಿಶ್ಚಿತಾರ್ಥ.

ಮುಂಬಯಿ: ರಾಧಿಕಾ ಮರ್ಚೆಂಟ್ ಮತ್ತು ಅನಂತ್ ಅಂಬಾನಿ ನಿಶ್ಚಿತಾರ್ಥ ಸಾಂಪ್ರದಾಯಿಕ ಕಾರ್ಯಕ್ರಮ ಜನವರಿ 19ರ ಗುರುವಾರ ಮುಂಬಯಿನಲ್ಲಿನ ಮುಕೇಶ್ ಅಂಬಾನಿ ನಿವಾಸ ಆಂಟಿಲಿಯಾದಲ್ಲಿ ನಡೆಯಿತು. ಕುಟುಂಬ, ಸ್ನೇಹಿತರ ಸಮ್ಮುಖದಲ್ಲಿ, ಸಂಪ್ರದಾಯಬದ್ಧವಾಗಿ ನಿಶ್ಚಿತಾರ್ಥ ಆಯಿತು.

ಗುಜರಾತಿ ಹಿಂದೂ ಕುಟುಂಬಗಳಲ್ಲಿ ತಲೆಮಾರುಗಳಿಂದಲೂ ಅನುಸರಿಸಿಕೊಂಡು ಬರುತ್ತಿರುವ ಗೋಲ್ ಧನ ಮತ್ತು ಚುನರಿ ವಿಧಿಯಂತಹ ಸಂಪ್ರದಾಯಗಳನ್ನು ಅನುಸರಿಸಿ, ಗುರುವಾರದಂದು ಎರಡು ಕುಟುಂಬಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡವು. ಕುಟುಂಬದ ದೇವಾಲಯ ಮತ್ತು ಸಮಾರಂಭದ ಸ್ಥಳಗಳಲ್ಲಿ ಪದ್ಧತಿಗಳನ್ನು ಪಾಲಿಸಲಾಯಿತು. ಎರಡೂ ಕುಟುಂಬಗಳು (ಅಂಬಾನಿ ಮತ್ತು ಮರ್ಚೆಂಟ್) ಉಡುಗೊರೆಗಳು ಮತ್ತು ಶುಭಾಶಯಗಳನ್ನು ವಿನಿಮಯ ಮಾಡಿಕೊಂಡವು. ಉತ್ಸಾಹದಿಂದ ಮನರಂಜನಾ ಕಾರ್ಯಕ್ರಮಗಳನ್ನು ನಡೆಸಲಾಯಿತು. ಅನಂತ್ ತಾಯಿ ನೀತಾ ಅಂಬಾನಿ ನೇತೃತ್ವದಲ್ಲಿ ಅಂಬಾನಿ ಕುಟುಂಬದ ಸದಸ್ಯರ ನೃತ್ಯ ಪ್ರದರ್ಶನ ನಡೆಯಿತು.

ಗುಜರಾತಿ ಸಂಪ್ರದಾಯದಲ್ಲಿ ಇದು ಮದುವೆಯ ಮುಂಚಿನ ಸಮಾರಂಭವಾಗಿದೆ. ಇದು ನಿಶ್ಚಿತಾರ್ಥವನ್ನು ಹೋಲುತ್ತದೆ. ಈ ಸಮಾರಂಭ ನಡೆಯುವ ವರನ ಸ್ಥಳದಲ್ಲಿ ಈ ವಸ್ತುಗಳನ್ನು ವಿತರಿಸಲಾಗುತ್ತದೆ. ವಧುವಿನ ಕುಟುಂಬವು ವರನ ನಿವಾಸಕ್ಕೆ ಉಡುಗೊರೆಗಳು ಮತ್ತು ಸಿಹಿತಿಂಡಿಗಳೊಂದಿಗೆ ಬರುತ್ತದೆ. ಮತ್ತು ಆ ನಂತರ ದಂಪತಿ ಆಗುವವರು ಉಂಗುರಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಉಂಗುರ ಬದಲಾಯಿಸಿಕೊಂಡ ನಂತರ ತಮ್ಮ ಹಿರಿಯರಿಂದ ಆಶೀರ್ವಾದ ಪಡೆಯುತ್ತಾರೆ.

ಸಂಜೆಯ ಕಾರ್ಯಕ್ರಮಗಳಿಗೆ ರಾಧಿಕಾ ಮತ್ತು ಅವರ ಕುಟುಂಬ ಸದಸ್ಯರನ್ನು ಆಹ್ವಾನಿಸಲು ಅನಂತ್ ಸಹೋದರಿ ಇಶಾ ನೇತೃತ್ವದಲ್ಲಿ ಅಂಬಾನಿ ಕುಟುಂಬದ ಸದಸ್ಯರು ಮರ್ಚೆಂಟ್ ನಿವಾಸಕ್ಕೆ ಹೋಗುವುದರೊಂದಿಗೆ ಸಂಜೆಯ ಸಂಭ್ರಮ ಪ್ರಾರಂಭವಾಯಿತು. ಮರ್ಚೆಂಟ್ ಕುಟುಂಬವನ್ನು ಅಂಬಾನಿ ಕುಟುಂಬವು ಅವರ ನಿವಾಸದಲ್ಲಿ ಆರತಿ ಮತ್ತು ಮಂತ್ರಗಳ ಪಠಣದ ಮಧ್ಯೆ ಆತ್ಮೀಯವಾಗಿ ಬರಮಾಡಿಕೊಂಡಿತು.

ಶ್ರೀಕೃಷ್ಣನ ಆಶೀರ್ವಾದವನ್ನು ಪಡೆಯಲು ಮತ್ತು ಸಂಜೆಯ ಸಮಾರಂಭಗಳಿಗೆ ಅನಂತ್ ಮತ್ತು ರಾಧಿಕಾ ಅವರನ್ನು ಕುಟುಂಬಗಳು ಹಿಂಬಾಲಿಸಿ ದೇವಸ್ಥಾನಕ್ಕೆ ಹೋದವು. ಅಲ್ಲಿಂದ ಗಣೇಶ ಪೂಜೆಯೊಂದಿಗೆ ಕಾರ್ಯಕ್ರಮಗಳನ್ನು ಪ್ರಾರಂಭಿಸಲು, ಅದಾದ ಮೇಲೆ ಸಾಂಪ್ರದಾಯಿಕ ಲಗ್ನ ಪತ್ರಿಕೆ ಓದುವಿಕೆ ಅಥವಾ ಮುಂಬರುವ ಮದುವೆಗೆ ಆಹ್ವಾನಕ್ಕಾಗಿ ಸಮಾರಂಭದ ಸ್ಥಳಕ್ಕೆ ತೆರಳಿತು. ಗೋಲ್ ಧನ ಮತ್ತು ಚುನರಿ ವಿಧಿ ನಂತರ ಅನಂತ್ ಮತ್ತು ರಾಧಿಕಾ ಅವರ ಕುಟುಂಬಗಳ ಮಧ್ಯೆ ಆಶೀರ್ವಾದ ಮತ್ತು ಉಡುಗೊರೆಗಳನ್ನು ವಿನಿಮಯ ಮಾಡಿಕೊಂಡರು.

ನೀತಾ ಅಂಬಾನಿ ನೇತೃತ್ವದಲ್ಲಿ ಅಂಬಾನಿ ಕುಟುಂಬದ ಸದಸ್ಯರ ನೃತ್ಯ ಪ್ರದರ್ಶನ ಇತ್ತು. ಆ ನಂತರ ಇಶಾ ಅವರು ಉಂಗುರ ಬದಲಾಯಿಸಿಕೊಳ್ಳುವ ಸಮಾರಂಭದ ಪ್ರಾರಂಭವನ್ನು ಘೋಷಿಸಿದರು. ಇದಾದ ಮೇಲೆ ಅನಂತ್ ಹಾಗೂ ರಾಧಿಕಾ ಅವರು ಕುಟುಂಬ ಮತ್ತು ಸ್ನೇಹಿತರ ಮುಂದೆ ಉಂಗುರಗಳನ್ನು ಬದಲಾಯಿಸಿಕೊಂಡರು. ಭವಿಷ್ಯದ ವಿವಾಹ ಜೀವನಕ್ಕೆ ಆಶೀರ್ವಾದ ಪಡೆದದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹೋಟೆಲ್‌ನಲ್ಲಿ ಗ್ರಾಹಕರಿಗೆ 'ಎಂಜಲು ಹಾಕಿದ ಚಪಾತಿ ಸಪ್ಲೈ.

Fri Jan 20 , 2023
ದೆಹಲಿ : ಮೋಹನ್‌ ನಗರ- ವಜೀರಾಬಾದ್‌ ರಸ್ತೆಯಲ್ಲಿರುವ ಪಸೋಂಡಾ ಗ್ರಾಮ ಉಪಹಾರ ಗೃಹದಲ್ಲಿ ಚಪಾತಿ ಮಾಡುತ್ತಿದ್ದ ಮುನ್ನ ಹಿಟ್ಟಿಗೆ ಬಾಯಿಗೆ ಉಗುಳಿದ್ದಾನೆ ಎಂಬ ಕಾರಣಕ್ಕೆ ಬಂಧಿಸಿದ ಘಟನೆ ಬೆಳಕಿಗೆ ಬಂದಿದೆ. ಚಪಾತಿ ಹಿಟ್ಟಿದ ಉಗುಳಿದ ವ್ಯಕ್ತಿ ಕಿಶನ್‌ ಗಂಜ್‌ ಬಿಹಾರದ ನಾಸಿರುದ್ದೀನ್‌ ಎಂದು ಗುರುತಿಸಲಾಗಿದೆ. ಆತನ ವಿರುದ್ಧ ಪೊಲೀಸರು ಟೀಲಾ ಮೋರ್‌ ಪೊಲೀಸ್‌ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆ 269( ಜೀವಕ್ಕೆ ಅಪಾಯಕಾರಿ ಕಾಯಿಲೆಯ ಸೋಂಕನ್ನು ಹರಡುವ ನಿರ್ಲಕ್ಷ್ಯದ ಕ್ರಿಯೆ) […]

Advertisement

Wordpress Social Share Plugin powered by Ultimatelysocial