ನೋ-ಕಾಸ್ಟ್‌ ಇಎಂಐ ಆಯ್ಕೆ ಎಂದರೇನು?

ನೋ-ಕಾಸ್ಟ್‌ ಇಎಂಐ ಅಥವಾ ವೆಚ್ಚವಿಲ್ಲದ ಇಎಂಐಗಳು ಸಾಲ ಪಡೆಯುವ ಆಯ್ಕೆಗಳಾಗಿದ್ದು, ನಿಮಗೆ ಖರೀದಿ ಮೇಲೆ ಯಾವುದೇ ಬಡ್ಡಿಯಿಲ್ಲದೆ ವಿವಿಧ ಕಂತುಗಳಲ್ಲಿ ಹಣ ಮರುಪಾವತಿಗೆ ಅವಕಾಶ ಕಲ್ಪಿಸುತ್ತದೆ. ಮೇಲ್ನೋಟಕ್ಕೆ ಇದು ಆಕರ್ಷಕವಾಗಿ ಕಂಡುಬಂದರೂ ಅದಕ್ಕೆ ಹೆಚ್ಚಿನ ಹಣ ಪಾವತಿಯನ್ನು ಮಾಡಬೇಕಾಗುತ್ತದೆ.

ಈ ವೆಚ್ಚವು ಸಾಮಾನ್ಯವಾಗಿ ನೀವು ಖರೀದಿಸುವ ವಸ್ತುಗಳು ಅಥವಾ ಸೇವೆಗಳ ಮೇಲೆ ಪಡೆದುಕೊಂಡಿರುವ ರಿಯಾಯಿತಿಗೆ ಹೊಂದಿಕೊಂಡಿರುತ್ತದೆ.

ಇನ್ನು ದೊಡ್ಡ ಖರೀದಿಗಳನ್ನು ಮಾಡುವಾಗ, ಕ್ರೆಡಿಟ್‌ ಕಾರ್ಡ್‌ಗಳು ಉಪಯುಕ್ತವಾಗಬಹುದು. ಹಲವು ಮಾದರಿಯ ಕ್ರೆಡಿಟ್‌ ಕಾರ್ಡ್‌ಗಳು ನೀಡುವ ಇಎಂಐ ಆಯ್ಕೆಗಳೊಂದಿಗೆ ನೀವು ಸುಲಭವಾಗಿ ದುಬಾರಿ ವಸ್ತುಗಳನ್ನು ಖರೀದಿಸಬಹುದಾಗಿದೆ. ಹಲವಾರು ಬ್ಯಾಂಕ್‌ಗಳು ಯಾವುದೇ ವೆಚ್ಚ ಅಥವಾ ಶುಲ್ಕವಿಲ್ಲದ ಇಎಂಐಗಳೊಂದಿಗೆ ಕ್ರೆಡಿಟ್‌ ಕಾರ್ಡ್‌ಗಳನ್ನು ಒದಗಿಸುತ್ತವೆ. ಡೌನ್‌ಪೇಮೆಂಟ್‌, ಪ್ರೊಸೆಸಿಂಗ್‌ ಚಾರ್ಜ್‌ ಇತ್ಯಾದಿಗಳ ಬಗ್ಗೆ ಚಿಂತಿಸದೆ ಬಳಕೆದಾರರು ನೋ ಕಾಸ್ಟ್‌ ಇಎಂಐ ಕ್ರೆಡಿಟ್‌ಗಳನ್ನು ಬಳಸಿಕೊಂಡು ಎಲೆಕ್ಟ್ರಾನಿಕ್ಸ್‌ ವಸ್ತುಗಳನ್ನು ಖರೀದಿಸಬಹುದು.

ನೋ-ಕಾಸ್ಟ್‌ ಇಎಂಐ ಆಯ್ಕೆ ಎಂದರೇನು?

ನೀವು ರೆಫ್ರಿಜರೇಟರ್‌, ಟಿವಿ ಅಥವಾ ವಾಷಿಂಗ್‌ ಮೆಷಿನ್‌ ಖರೀದಿಸುವಾಗ ಅದರ ಪೂರ್ಣ ಬೆಲೆಯನ್ನು ಮುಂಗಡವಾಗಿ ಪಾವತಿಸಲು ಬಯಸದಿದ್ದರೆ ಆಗ ನೋ-ಕಾಸ್ಟ್‌ ಇಎಂಐ ಸ್ಕೀಮ್‌ ಅತ್ಯುತ್ತಮ ಪರ್ಯಾಯ ಆಯ್ಕೆಯಾಗಿರುತ್ತದೆ. ಗ್ರಾಹಕರಿಗೆ ಈ ರೀತಿಯ ಉಚಿತ ಇಎಂಐಗಳನ್ನು ಒದಗಿಸಲು ಮಾರಾಟಗಾರರು ಬ್ಯಾಂಕ್‌ಗಳು ಹಾಗೂ ಇತರೆ ಹಣಕಾಸು ಸಂಸ್ಥೆಗಳ ಜತೆಗೆ ಸಂಯೋಜನೆ ಮಾಡಿಕೊಂಡಿರುತ್ತವೆ. ನೋ-ಕಾಸ್ಟ್‌ ಇಎಂಐ ಪಟ್ಟಿಯಲ್ಲಿ ಆಕ್ಸಿಸ್ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಯೆಸ್ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್ ಇದೆ.

ನೋ ಕಾಸ್ಟ್‌ ಇಎಂಐ ಹೇಗೆ ಕೆಲಸ ಮಾಡುತ್ತದೆ?

ಒಂದುವೇಳೆ ನೀವು ಯಾವುದೇ ವೆಚ್ಚವಿಲ್ಲದ ಇಎಂಐಗಳನ್ನು ಆಯ್ಕೆ ಮಾಡಿಕೊಂಡಿದ್ದರೆ ಖರೀದಿಸುವ ವಸ್ತುಗಳ ಮೇಲೆ ಡಿಸ್ಕೌಂಟ್‌ಗಳನ್ನು ಪಡೆಯದೆ ಪೂರ್ಣ ಬೆಲೆಯನ್ನು ಪಾವತಿಸಬೇಕಾಗುತ್ತದೆ. ಉದಾಹರಣೆ 12000 ರೂ. ಬೆಲೆಯ ವಸ್ತುವೊಂದನ್ನು ಖರೀದಿಸುವುದಾದರೆ 6 ತಿಂಗಳ ಇಎಂಐನಡಿ ಪ್ರತಿ ತಿಂಗಳು 2000ರೂ. ನಂತೆ ಹಣ ಪಾವತಿಸಬೇಕು. ಆಗ ಬಡ್ಡಿ ಹಾಗೂ ಪ್ರೊಸೆಸಿಂಗ್‌ ಶುಲ್ಕ ಸೇರಿದಂತೆ ಒಟ್ಟು ಶೂನ್ಯ ಪಾವತಿ ಸೌಲಭ್ಯ ದೊರೆಯುತ್ತದೆ. ಇದರಿಂದ ಆ ಗ್ರಾಹಕ ಖರೀದಿ ವಸ್ತುವಿಗೆ ಒಟ್ಟು 12,000 ಮಾತ್ರ ಪಾವತಿ ಮಾಡಿದರೆ ಸಾಕು.

ನೀವು ಯಾವಾಗ ನೋ-ಕಾಸ್ಟ್‌ ಇಎಂಐ ಆಯ್ಕೆ ಮಾಡಿಕೊಳ್ಳಬೇಕು?

ಯಾವ ಸಂದರ್ಭದಲ್ಲಿ ನಿಮಗೆ ತಕ್ಷಣಕ್ಕೆ ಖರೀದಿ ವಸ್ತುವಿನ ಪೂರ್ಣ ಬೆಲೆಯನ್ನು ಪಾವತಿಸಲು ಸಾಧ್ಯವಾಗುವುದಿಲ್ಲವೋ ಅಥವಾ ದುಬಾರಿ ವಸ್ತುಗಳನ್ನು ಖರೀದಿಸಲು ಮುಂದಾದಾಗ ನೋ-ಕಾಸ್ಟ್‌ ಇಎಂಐ ಸೌಲಭ್ಯ ಆಯ್ಕೆ ಮಾಡಿಕೊಳ್ಳಬಹುದು. ಅಲ್ಲದೆ, ಆನ್‌ಲೈನ್‌ನಲ್ಲಿ ಮಾರಾಟಗಾರರು ಡಿಸ್ಕೌಂಟ್‌ ಅಥವಾ ಕ್ಯಾಶ್‌ಬ್ಯಾಕ್‌ ಆಫರ್‌ಗಳನ್ನು ನೀಡುವ ಸಂದರ್ಭಗಳಲ್ಲಿ ನೋ-ಕಾಸ್ಟ್‌ ಇಎಂಐ ಆಯ್ಕೆ ಮೂಲಕ ನೀವು ವಸ್ತುಗಳನ್ನು ಖರೀದಿ ಮಾಡಬಹುದು.

ನೋ-ಕಾಸ್ಟ್‌ ಇಎಂಐ ಆಯ್ಕೆ ಅನುಕೂಲತೆ, ಅನಾನುಕೂಲತೆ

ಅನುಕೂಲತೆಗಳು: ಇದು ತಿಂಗಳ ಕಂತುಗಳ ಮೂಲಕ ವಸ್ತುಗಳನ್ನು ಖರೀದಿಸುವುದಕ್ಕೆ ಅವಕಾಶ ನೀಡುವ ಮೂಲಕ ಆರ್ಥಿಕವಾಗಿ ಜೀವನ ಸುಧಾರಣೆಗೆ ನೆರವಾಗುತ್ತದೆ. ಶೂನ್ಯಬಡ್ಡಿ ಇಎಂಐ ಸ್ಕೀಮ್‌ ಈಗ ಪೀಠೋಪಕರಣ, ಸೌಂದರ್ಯ ವರ್ಧಕ ವಸ್ತುಗಳ ಖರೀದಿ, ಪ್ರವಾಸ ಮತ್ತಿತರ ಸಂದರ್ಭಗಳ ಖರ್ಚುಗಳಿಗೂ ದೊರೆಯುತ್ತವೆ.

ಅನಾನುಕೂಲತೆಗಳು: ನೋ-ಕಾಸ್ಟ್‌ ಇಎಂಐ ಸಾಲವು ಕಡಿಮೆ ರೂಪದ ಇಎಂಐ ಸಾಲವಾಗಿರುತ್ತದೆ. ಗ್ರಾಹಕರು ನಗದು ರೂಪದಲ್ಲಿ ಖರೀದಿ ವೇಳೆ ನೀಡುವ ಮೊತ್ತಕ್ಕಿಂತ ಹೆಚ್ಚಿನ ಹಣವನ್ನು ಪಾವತಿಸುವ ಸಾಧ್ಯತೆಯೂ ಬರಬಹುದು. ಈ ರೀತಿಯ ಉಚಿತ ಇಎಂಐಗಳು ಗ್ರಾಹಕರನ್ನು ಅನಗತ್ಯ ಖರೀದಿಗಳಿಗೆ ಉತ್ತೇಜಿಸಬಹುದು. ಇಎಂಐಗಳನ್ನು ಸಕಾಲದಲ್ಲಿ ಪಾವತಿಸಲು ವಿಫಲವಾದರೆ ಕ್ರೆಡಿಟ್‌ ಸ್ಕೋರ್‌ ಕೂಡ ಕಡಿಮೆಯಾಗುತ್ತದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಲಂಚ ಪ್ರಕರಣದಲ್ಲಿ ಪಂಜಾಬ್ AAP ಶಾಸಕ ಅಮಿತ್ ರತ್ತನ್ ಅರೆಸ್ಟ್!

Thu Feb 23 , 2023
    ಚಂಡೀಗಢ, ಫೆ .23 -ಲಂಚ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್‍ನ ಬಟಿಂಡಾ ಗ್ರಾಮಾಂತರ ಕ್ಷೇತ್ರದ ಎಎಪಿ ಶಾಸಕ ಅಮಿತ್ ರತ್ತನ್ ಕೋಟ್‍ಫಟ್ಟಾ ಅವರನ್ನು ವಿಜಿಲೆನ್ಸ್ ಬ್ಯೂರೋ ಪೊಲೀಸರು ಬಂಧಿಸಿದ್ದಾರೆ.ಪ್ರಕರಣದಲ್ಲಿ ಈಗಾಗಲೆ ಶಾಸಕರ ಆಪ್ತ ಸಹಾಯಕ ರಶೀಮ್ ಗಾರ್ಗ್ ಅವರನ್ನು ಬಂಧಿಸಿದ ಕೆಲವು ದಿನಗಳ ನಂತರ ಕಳೆದ ರಾತ್ರಿ ಅಮಿತ್ ರತ್ತನ್ ಅವರನ್ನು ಬಂಧನವಾಗಿದೆ.ಎಂದು ಉನ್ನತ ಅಕಾರಿಯೊಬ್ಬರು ತಿಳಿಸಿದ್ದಾರೆ. ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ತನಿಖೆಗಾಗಿ ಕಸ್ಟಡಿಗೆ ಪೆಡೆಯಲಾಗುವುದು […]

Advertisement

Wordpress Social Share Plugin powered by Ultimatelysocial