ಲಂಚ ಪ್ರಕರಣದಲ್ಲಿ ಪಂಜಾಬ್ AAP ಶಾಸಕ ಅಮಿತ್ ರತ್ತನ್ ಅರೆಸ್ಟ್!

 

 

ಚಂಡೀಗಢ, ಫೆ .23 -ಲಂಚ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್‍ನ ಬಟಿಂಡಾ ಗ್ರಾಮಾಂತರ ಕ್ಷೇತ್ರದ ಎಎಪಿ ಶಾಸಕ ಅಮಿತ್ ರತ್ತನ್ ಕೋಟ್‍ಫಟ್ಟಾ ಅವರನ್ನು ವಿಜಿಲೆನ್ಸ್ ಬ್ಯೂರೋ ಪೊಲೀಸರು ಬಂಧಿಸಿದ್ದಾರೆ.ಪ್ರಕರಣದಲ್ಲಿ ಈಗಾಗಲೆ ಶಾಸಕರ ಆಪ್ತ ಸಹಾಯಕ ರಶೀಮ್ ಗಾರ್ಗ್ ಅವರನ್ನು ಬಂಧಿಸಿದ ಕೆಲವು ದಿನಗಳ ನಂತರ ಕಳೆದ ರಾತ್ರಿ ಅಮಿತ್ ರತ್ತನ್ ಅವರನ್ನು ಬಂಧನವಾಗಿದೆ.ಎಂದು ಉನ್ನತ ಅಕಾರಿಯೊಬ್ಬರು ತಿಳಿಸಿದ್ದಾರೆ. ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ತನಿಖೆಗಾಗಿ ಕಸ್ಟಡಿಗೆ ಪೆಡೆಯಲಾಗುವುದು ಹೇಳಿದ್ದಾರೆ. ಆಡಳಿತ ಪಕ್ಷದ ಶಾಸಕನ ಬಂಧನ ಸರ್ಕಾಕ್ಕೆ ಮುಜುಗರ ತಂದಿದೆ. ಗ್ರಾಮ ಪಂಚಾಯಿಗೆ 25 ಲಕ್ಷ ರೂಪಾಯಿ ಸರ್ಕಾರದ ಅನುದಾನವನ್ನು ಬಿಡುಗಡೆ ಮಾಡಲು ಶಾಸಕ 5 ಲಕ್ಷ ಲಂಚ ಕೇಳಿದ್ದರು.ಇದನ್ನು ವಿರೋಧಿಸಿ ಕಳೆದ ಫೆ. 16 ರಂದು ಬಟಿಂಡಾದ ಘುಡಾ ಗ್ರಾಮದ ಮುಖ್ಯಸ್ಥ ಜಿಲೆನ್ಸ್ ಬ್ಯೂರೋಗೆ ದೂರು ನೀಡಿದ್ದರು. ಬಟಿಂಡಾದಲ್ಲಿ ವಿಜಿಲೆನ್ಸ್ ಬ್ಯೂರೋದ ತಂಡದಿಂದ ಬಲೆ ಬೀಸಿ ಶಾಸಕರ ಅಪ್ತ ಸಹಾಯಕ ರಶೀಮ್ ಗರ್ಗ್ 4 ಲಕ್ಷ ರೂಪಾಯಿ ಲಂಚ ಪಡೆಯುವಾಗ ನಗದು ಜೊತೆ ಗಾರ್ಗ್ ಸಿಕ್ಕಿಬಿದ್ದಿದ್ದಾರೆ. ಘಟನೆ ನಂತರ ಶಾಸಕ ಗಾರ್ಗ್ ಜೊತೆ ಯಾವುದೇ ಸಂಬಂಧ ಇಲ್ಲ ಎಂದು ಆರೋಪ ನಿರಾಕರಿಸಿದ್ದರು. ಆದರೆ ಇಂದು ಶಾಸಕರ ಬಂಧನವಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಒಂದೇ ರಾತ್ರಿಯಲ್ಲಿ 140 ಪಾಸ್‌ಪೋರ್ಟ್‌

Thu Feb 23 , 2023
ಟರ್ಕಿಯಲ್ಲಿ ಭೂಕಂಪದಿಂದ ತೊಂದರೆಗೆ ಒಳಗಾದ ಪ್ರದೇಶಗಳಲ್ಲಿ ದೇಶದ ವಿಪತ್ತು ನಿರ್ವಹಣಾ ದಳ ನಡೆಸಿದ ಕಾರ್ಯಾಚರಣೆಗೆ ಆ ದೇಶದ ಜನರು ಮುಕ್ತ ಕಂಠದ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.ಒಂದೇ ರಾತ್ರಿಯಲ್ಲಿ 140 ಮಂದಿಗೆ ಅಲ್ಲಿಗೆ ತೆರಳಲು ತುರ್ತಾಗಿ ಪಾಸ್‌ಪೋರ್ಟ್‌ ಒದಗಿಸಿದ ಪ್ರಕ್ರಿಯೆ, ಸರಿಯಾದ ರೀತಿಯಲ್ಲಿ ಸ್ನಾನ ಇಲ್ಲದೆ ದಿನಗಳನ್ನು ಕಳೆದ ಬಗ್ಗೆ “ಪಿಟಿಐ’ ಸುದ್ದಿ ಸಂಸ್ಥೆ ಜತೆಗೆ ಹಂಚಿಕೊಂಡಿದೆ.ನಿಸ್ವಾರ್ಥ ಸೇವೆಗೆ ಆ ದೇಶದ ಜನರ ಪ್ರೀತಿ, ಮನತುಂಬಿದ ಹಾರೈಕೆ, ಕೃತಜ್ಞತೆಯ ಬಿಸಿ ಕಣ್ಣಹನಿಯನ್ನು ತಂಡ […]

Advertisement

Wordpress Social Share Plugin powered by Ultimatelysocial