covid: ಪ್ರಭಾಸ್ ನಟನೆಯ ‘ರಾಧೆ ಶ್ಯಾಮ್’ ಚಿತ್ರ ಬಿಡುಗಡೆ ದಿನಾಂಕ ಮುಂದೂಡಿಕೆ;

ನವದೆಹಲಿ: ದೇಶದಾದ್ಯಂತ ಕೊರೋನಾ ಉಲ್ಭಣಗೊಳ್ಳುತ್ತಿದ್ದು, ಈ ಬೆಳವಣಿಗೆ ಆತಂಕವನ್ನು ಹೆಚ್ಚಿಸಿದೆ. ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ಆರ್’ಆರ್’ಆರ್ ಸಿನಿಮಾ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿತ್ತು. ಇದೀಗ ಪ್ರಭಾಸ್ ನಟನೆಯ ರಾಧೆ ಶ್ಯಾಮ್ ಸಿನಿಮಾ ಬಿಡುಗಡೆ ದಿನಾಂಕವನ್ನೂ ಮುಂದೂಡಿಕೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಪ್ರಭಾಸ್​ ಹಾಗೂ ಪೂಜಾ ಹೆಗ್ಡೆ ಅಭಿನಯದ ‘ರಾಧೆ ಶ್ಯಾಮ್​’ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಇತ್ತೀಚೆಗೆ ಬಿಡುಗಡೆ ಆದ ಟ್ರೇಲರ್​ ಕೂಡ ಸಾಕಷ್ಟು ಮೆಚ್ಚುಗೆ ಪಡೆದುಕೊಂಡಿತ್ತು. ಈ ಸಿನಿಮಾ ಸಂಕ್ರಾಂತಿ ನಿಮಿತ್ತ ಜನವರಿ 14ರಂದು ತೆರೆಗೆ ಬರಬೇಕಿತ್ತು. ಆದರೆ, ಕೊವಿಡ್​ ಕಾರಣದಿಂದ ಸಿನಿಮಾ ರಿಲೀಸ್​ ದಿನಾಂಕವನ್ನು ಮುಂದೂಡುವ ಅನಿವಾರ್ಯತೆ ಎದುರಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮೂರನೇ ಸಿನಿಮಾಗಾಗಿ 'ಬೈ ಟು ಲವ್' ಹೀರೋ ಸಿದ್ಧತೆ!

Wed Jan 5 , 2022
ಬಜಾರ್ ಮತ್ತು ಬೈ ಟು ಲವ್ ಸಿನಿಮಾದಲ್ಲಿ ನಟಿಸಿರುವ ಧನ್ವೀರ್ ಮೂರನೇ ಚಿತ್ರಕ್ಕಾಗಿ ರೆಡಿಯಾಗಿದ್ದಾರೆ. ಧನ್ವೀರ್ ನಟನೆಯ ಬೈ ಟು ಲವ್ ಸಿನಿಮಾ ಇನ್ನೂ ರಿಲೀಸ್ ಆಗಬೇಕಾಗಿದೆ. ಆದರೆ ಶಂಕರ್ ರಾಮನ್ ನಿರ್ದೇಶನದ ಮುಂದಿನ ಸಿನಿಮಾಗೆ ಧನ್ವೀರ್ ಕೈ ಜೋಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕನ್ನಡ ಮತ್ತು ತೆಲುಗು ಚಿತ್ರಗಳಿಗೆ ಸ್ಕ್ರಿಪ್ಟ್ ರೈಟರ್ ಆಗಿರುವ ಶಂಕರ್ ರಾಮನ್ ಈಗ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಡುತ್ತಿದ್ದಾರೆ. ಇದೊಂದು ಆಕ್ಷನ್ ಎಂಟರ್‌ಟೈನರ್ ಸಿನಿಮಾ […]

Advertisement

Wordpress Social Share Plugin powered by Ultimatelysocial