ಗರ್ಭಿಣಿಯಾದಾಗ ಮಹಿಳೆಯಲ್ಲಿ ಮಾನಸಿಕ ಹಾಗೂ ಶಾರೀರಿಕ ಬದಲಾವಣೆಗಳಾಗುತ್ತವೆ.

ಅನೇಕ ಸಮಸ್ಯೆಗಳನ್ನೂ ಆಕೆ ಎದುರಿಸಬೇಕಾಗುತ್ತದೆ. 9 ತಿಂಗಳವರೆಗೆ ತನ್ನ ಹಾಗೂ ಹೊಟ್ಟೆಯಲ್ಲಿರುವ ಮಗುವಿನ ಆರೋಗ್ಯ ನೋಡಿಕೊಳ್ಳಬೇಕಾಗುತ್ತದೆ. ಪ್ರತಿ ದಿನವೂ ಒಂದೊಂದು ಬದಲಾವಣೆ ಕಾಣಿಸಿಕೊಳ್ಳುತ್ತದೆ.

ಇದು ಮನಸ್ಸಿನ ಮೇಲೂ ಪ್ರಭಾವ ಬೀರುತ್ತದೆ.

ಗರ್ಭಿಣಿಯಾದಾಗ ಎಲ್ಲ ಮಹಿಳೆಯರು ಒಂದೇ ರೀತಿ ಇರೋದಿಲ್ಲ. ಶಾರೀರಿಕ ಸಂಬಂಧ ಬೆಳೆಸುವ ಇಚ್ಛೆ ಕೂಡ ಕಡಿಮೆಯಾಗಿರುತ್ತದೆ. ಗರ್ಭಿಣಿ ಯಾಕೆ ಸಂಬಂಧ ಬೆಳೆಸಲು ನಿರಾಕರಿಸ್ತಾಳೆ ಎನ್ನುವುದಕ್ಕೆ ಕೆಲವು ಕಾರಣಗಳು ಇಲ್ಲಿವೆ.

ಶಾರೀರಿಕ ಸಂಬಂಧ ಬೆಳೆಸುವುದರಿಂದ ಮಕ್ಕಳ ಆರೋಗ್ಯದಲ್ಲಿ ಏರುಪೇರಾಗಬಹುದೆಂಬ ಭಯ ಅನೇಕ ಗರ್ಭಿಣಿಯರನ್ನು ಕಾಡುತ್ತದೆ. ಹಾಗಾಗಿ ಅವರು ಶಾರೀರಿಕ ಸಂಬಂಧ ನಿರಾಕರಿಸುತ್ತಾರೆ.

ಪ್ರತಿಯೊಬ್ಬ ಮಹಿಳೆಗೂ ಅಮ್ಮನಾಗುವುದು ಜೀವನದ ಒಂದು ಬಹುದೊಡ್ಡ ಘಟ್ಟ. ಜೀವನದ ಅತ್ಯಂತ ಖುಷಿ ಸಮಯ. ಹಾಗಾಗಿ ಅವರು ಈ ಸಮಯವನ್ನು ಸಾಕಷ್ಟು ಎಂಜಾಯ್ ಮಾಡಲು ಬಯಸುತ್ತಾರೆ.

ಹಾರ್ಮೋನ್ ಬದಲಾವಣೆಯಿಂದ ಸಂಬಂಧ ಬೆಳೆಸುವ ಇಚ್ಛೆ ಕೆಲವರಿಗೆ ಹೆಚ್ಚಾದ್ರೆ ಮತ್ತೆ ಕೆಲವರಿಗೆ ಕಡಿಮೆಯಾಗುತ್ತದೆ. ಅನೇಕ ಮಹಿಳೆಯರಿಗೆ ಕಿರಿಕಿರಿಯುಂಟು ಮಾಡುತ್ತದೆ.

ಆರಂಭದ ತಿಂಗಳುಗಳಲ್ಲಿ ಸುಸ್ತು ಹೆಚ್ಚಾಗಿರುವುದರಿಂದ ಮಹಿಳೆಯರು ಶಾರೀರಿಕ ಸಂಬಂಧದಿಂದ ದೂರ ಇರ್ತಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕೂದಲು ಉದುರಲು ಈ ಅಭ್ಯಾಸಗಳೇ ಕಾರಣ!

Sun May 15 , 2022
ಕೂದಲು ಉದುರುವಿಕೆ ಎಲ್ಲರನ್ನೂ ಕಾಡುವ ಸಮಸ್ಯೆ. ಬೆಳಗ್ಗೆ ಎದ್ದ ತಕ್ಷಣ ತಲೆದಿಂಬಿನ ಮೇಲೆ ಉದುರಿದ ಕೂದಲು ನೋಡಿದ್ರೆ ಆತಂಕವಾಗೋದು ಸಹಜ. ಮುಂದಿನ ವರ್ಷ ಇಷ್ಟೊತ್ತಿಗೆ ಕೂದಲು ಪೂರ್ತಿ ಉದುರಿ ಬೋಳಾಗಿಬಿಡುತ್ತೇನೋ ಅಂತಾನೇ ಎಲ್ಲರೂ ಟೆನ್ಷನ್ ಮಾಡಿಕೊಳ್ತಾರೆ.ಕೂದಲು ಉದುರುವಿಕೆಗೆ ಜೆನೆಟಿಕ್ಸ್ ಜೊತೆಗೆ ಇನ್ನೂ ಕೆಲವು ಕಾರಣಗಳಿವೆ. ನಿಮ್ಮ ಕೂದಲ ಆರೈಕೆಯ ಕೆಲವೊಂದು ಹವ್ಯಾಸಗಳೇ ಮಾರಕವಾಗಬಹುದು. ಅವು ಯಾವುದು ಅನ್ನೋದನ್ನು ನೋಡೋಣ. ಬಿಗಿಯಾಗಿ ಹೇರ್ ಬ್ಯಾಂಡ್ ಹಾಕುವುದು : ಬೆಳಗ್ಗೆ ಎದ್ದ ತಕ್ಷಣ ಎಲ್ರೂ […]

Advertisement

Wordpress Social Share Plugin powered by Ultimatelysocial