ರಾಜ್ಯ ರಾಜಕಾರಣಕ್ಕೆ ಪ್ರಜ್ವಲ್ ರೇವಣ್ಣ ಎಂಟ್ರಿ?

ಬೆಂಗಳೂರು,ಫೆಬ್ರವರಿ18: ಕರ್ನಾಟಕ ವಿಧಾನಸಭಾ ಚುನಾವಣೆಗೆ ಕೆಲ ತಿಂಗಳು ಮಾತ್ರ ಬಾಕಿ ಉಳಿದಿದ್ದು, ಈಗಾಗಲೇ ರಾಜಕೀಯ ಪಕ್ಷಗಳು ಬಿರುಸಿನ ಪ್ರಚಾರವನ್ನ ನಡೆಸಿವೆ. ಇತ್ತ ಕೆಲವು ಪ್ರಭಾವಿ ನಾಯಕರು ಕ್ಷೇತ್ರ ಬದಲಾವಣೆಯ ಚರ್ಚೆಗಳು ರಾಜ್ಯ ರಾಜಕಾರಣದಲ್ಲಿ ಹೆಚ್ಚಾಗಿ ಚರ್ಚೆಯಾಗುತ್ತಿವೆ.

ಈ ಬಾರೀ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಬೇಕು ಎಂದು ಪ್ಲಾನ್ ಹಾಕಿ ಕೊಂಡಿರುವ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಬೆಂಗಳೂರು ಭಾಗದಲ್ಲಿ ಹೆಚ್ಚಿನ ಸ್ಥಾನವನ್ನ ಪಡೆಯುವ ನಿಟ್ಟಿನಲ್ಲಿ ದಳಪತಿಗಳು ಸಿದ್ದತೆಯನ್ನ ನಡೆಸಿದ್ದಾರೆ.

ಮಿಷನ್ 123 ಮೂಲಕ ಅಧಿಕಾರಕ್ಕೆ ಬರಬೇಕು ಎಂದು ಕೊಡಿರುವ ಜೆಡಿಎಸ್ ಈಗಾಗಲೇ 93 ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನ ಘೋಷಣೆ ಮಾಡಿದ್ದು, ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಈಗಾಗಲೇ ಪಂಚರತ್ನ ರಥಯಾತ್ರೆಯ ಮೂಲಕ ರಾಜ್ಯಾದ್ಯಂತ ಪ್ರವಾಸವನ್ನ ನಡೆಸುತ್ತಿದ್ದಾರೆ. ಈ ನಡುವೆ ರಾಜ್ಯ ಯುವ ನಾಯಕನನ್ನ ರಾಜ್ಯ ರಾಜಕಾರಣದತ್ತ ಕರೆತರುವ ನಿಟ್ಟಿನಲ್ಲಿ ಜೆಡಿಎಸ್ ಪಾಳಯದಲ್ಲಿ ಚರ್ಚೆ ನಡೆದಿದೆ ಎನ್ನಲಾಗಿದೆ.

ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಪ್ರಜ್ವಲ್ ರೇವಣ್ಣ ಸ್ಪರ್ಧೆ.?

ಈ ಇಳಿ ವಯಸ್ಸಿನಲ್ಲೂ ಪಕ್ಷವನ್ನ ಸಂಘಟಿಸಿರುವ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಜೊತೆಗಿದ್ದ ಸಾಕಷ್ಟು ಜನ ಹಿರಿಯ ನಾಯಕರು ಜೆಡಿಎಸ್ ಪಕ್ಷವನ್ನ ಬಿಟ್ಟು ಅನ್ಯ ಪಕ್ಷಗಳಿಗೆ ಹೋಗುತ್ತಿದ್ದಾರೆ. ಹೀಗಿರುವಾಗ ಈ ಬಾರೀ ಚುನಾವಣೆಯಲ್ಲಿ ಮಿಷನ್ 123 ಟಾರ್ಗೆಟ್ ಇಟ್ಟುಕೊಂಡಿರುವ ದಳಪತಿಗಳು ಪಕ್ಷ ಸಂಘಟನೆಯ ಸಲುವಾಗಿ ಮಾಸ್ಟರ್ ಪ್ಲ್ಯಾನ್ ನಡೆಸಿದ್ದಾರೆ ಎನ್ನಲಾಗಿದೆ. ಹೌದು, ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರನ್ನ ರಾಜ್ಯ ರಾಜಕಾರಣಕ್ಕೆ ಕರೆತರು ಪ್ರಯತ್ನಗಳು ಜೆಡಿಎಸ್ ಪಾಳಯದಲ್ಲಿ ನಡೆಯುತ್ತಿದೆ ಎನ್ನಲಾಗಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬೆಂಗಳೂರು ಭಾಗದಲ್ಲಿ ಕೆಲ ಜೆಡಿಎಸ್ ನಾಯಕರು ಗೆಲುವು ಸಾಧಿಸಿದ್ರು. ಆದರೆ , ತದನಂತರವಾದ ರಾಜಕೀಯ ಬೆಳವಣಿಗೆಯಿಂದಾಗಿ ಜೆಡಿಎಸ್ ಶಾಸಕರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು. ಹೀಗಾಗಿ ಈ ಬಾರಿಯಾ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಯುವ ನಾಯಕ ಹಾಗೂ ಸಂಸದರಾದ ಪ್ರಜ್ವಲ್ ರೇವಣ್ಣ ಅವರಿಗೆ ರಾಜ್ಯ ರಾಜಕಾರಣಕ್ಕೆ ಕರೆತರುವ ಮೂಲಕ ಆರ್ ಆರ್ ನಗರ ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟ್ ನೀಡುವ ಮೂಲಕ ಸ್ಪರ್ಧೆ ಮಾಡಲಿದ್ದಾರೆ ಎಂದು ಹೇಳಲಾಗಿದೆ.

ಆರ್ ಆರ್ ನಗರ ಕ್ಷೇತ್ರದಲ್ಲಿಯೇ ಪ್ರಜ್ಜಲ್ ರೇವಣ್ಣ ಸ್ಪರ್ಧೆ ಯಾಕೆ.?

2018 ರಲ್ಲಿ ಆರ್ ಆರ್ ನಗರ ಕ್ಷೇತ್ರಕ್ಕೆ ನಾನೂ ಕೂಡಾ ಟಿಕೆಟ್ ಆಕಾಂಕ್ಷಿ ಎಂದು ಹೇಳಿಕೆ ನೀಡಿದ್ದ ಪ್ರಜ್ವಲ್ ರೇವಣ್ಣ ಕಾರ್ಯಕರ್ತರ ಮೂಲಕ ಪಕ್ಷವನ್ನ ಸಧೃಡಗೊಳಿಸಿದ್ದರು. ಅಲ್ಲದೇ ವರಿಷ್ಠರು ನಿರ್ಣಯಕ್ಕೆ ನಾನು ತಲೆಬಾಗುತ್ತೇವೆ. ಒಂದು ವೇಳೆ ಟಿಕೆಟ್ ನೀಡದೇ ಇದ್ದರೆ ಕಾರ್ಯಕರ್ತನಾಗಿ ದುಡಿಯುತ್ತೇವೆ ಎಂದು ಹೇಳಿದ್ದರು.

ಇನ್ನೂ ವಿಧಾನಸಭಾ ಚುನಾವಣೆಯ ಬಳಿಕ ಬಿಬಿಎಂಪಿ ಚುನಾವಣೆಯ ದೃಷ್ಠಿಯಿಂದಾಗಿ ಬೆಂಗಳೂರು ಭಾಗದಲ್ಲಿ ಜೆಡಿಎಸ್ ಈ ಬಾರಿ ಹಲವು ಕ್ಷೇತ್ರಗಳಲ್ಲಿ ಗೆಲ್ಲಬೇಕು ಎಂದು ಪಣತೊಟ್ಟಿದೆ. ಹೀಗಾಗಿ ಪ್ರಜ್ವಲ್ ರೇವಣ್ಣ ಅವರಿಗೆ ರಾಜರಾಜೇಶ್ವರಿ ಕ್ಷೇತ್ರದಲ್ಲಿ ಸ್ಲರ್ಧೆಗೆ ಟಿಕೆಟ್ ಕೊಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಎ.ಟಿ ರಾಮಸ್ವಾಮಿ, ಎ.ಮಂಜು ಪಕ್ಷಾಂತರ ಪರ್ವ

ಮುಂದಿನ ವಿಧಾನಸಭಾ ಚುನಾವಣೆಗೂ ಮುನ್ನ ಜೆಡಿಎಸ್ ಪಕ್ಷದಲ್ಲಿ ಸಾಕಷ್ಟು ಬದಲಾವಣೆಗೆ ಹಾಸನ ಜಿಲ್ಲೆಯ ಅರಕಲಗೂಡು ವಿಧಾನಸಭಾ ಕ್ಷೇತ್ರ ಸಾಕ್ಷಿಯಾಗಲಿದೆ. ಈಗಾಗಳೆ ಪಕ್ಷದಿಂದ ಸಾಕಷ್ಟು ಅಂತರವನ್ನ ಕಾಯ್ದು ಕೊಂಡಿದ್ದ ಎ ಟಿ ರಾಮಸ್ವಾಮಿ ಜೆಡಿಎಸ್ ಪಕ್ಷವನ್ನ ತೊರೆಯಲು ಸಜ್ಜಾಗಿದ್ದು, ಜೆಡಿಎಸ್‌ನ ಹಾಲಿ ಶಾಸಕ ಎ.ಟಿ.ರಾಮಸ್ವಾಮಿ ಹಾಗೂ ಬಿಜೆಪಿ ಮುಖಂಡ ಎ ಮಂಜು ಅವರು ರಾಜಕೀಯ ಪಕ್ಷಗಳನ್ನು ಬದಲಿಸಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ.

ಕಗ್ಗಂಟಾಗ ಹಾಸನ ಕ್ಷೇತ್ರದ ಟಿಕೆಟ್ ಹಂಚಿಕೆ

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಹಾಸನ ವಿಧಾನಸಭಾ ಕ್ಷೇತ್ರಕ್ಕೆ ಯಾರಿಗೆ ಟಿಕೆಟ್ ನೀಡಬೇಕು ಎಂಬುದೇ ಕಗ್ಗಂಟಾಗಿ ಪರಿಗಣಿಸಿದೆ. ಹಾಸನ ಕ್ಷೇತ್ರದಲ್ಲಿ ನಾನೇ ಅಭ್ಯರ್ಥಿ ಎಂದು ಭಾವನಿ ರೇವಣ್ಣ ಹೇಳಿಕೆ ಕೊಟ್ಟ ಬಳಿಕ ಈ ಕುರಿತು ದೇವೇಗೌಡದ ಕುಟುಂಬದಲ್ಲಿ ಸಾಕಷ್ಟು ಚರ್ಚೆಗಳು ನಡೆದಿವೆ ಎನ್ನಲಾಗಿದೆ.

ಜೆಡಿಎಸ್ ಈಗಾಗಲೇ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನ ಪ್ರಕಟಿಸಿದ್ದು, ಹಾಸನ ವಿಧಾನಸಭಾ ಕ್ಷೇತ್ರ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಜೆಡಿಎಸ್ ವರಿಷ್ಠರಾದ ಹೆಚ್ ಡಿ ದೇವೇಗೌಡರು ಮೌನಕ್ಕೆ ಶರಣವಾಗಿದ್ದು, ಈ ತಿಂಗಳ ಕೊನೆಯಲ್ಲಿ ಹಾಸನ ಟಿಕೆ ವಿಚಾರವಾಗಿ ಚರ್ಚೆ ನಡೆಸಿ, ಈ ಕ್ಷೇತ್ರ ಟಿಕೆಟ್ ಫೈನಲ್ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನಗರತ್ ಪೇಟೆ ಯಲ್ಲಿ ಹೋಟೆಲ್ ಧ್ವಂಸ ಪ್ರಕರಣ.

Sat Feb 18 , 2023
ನಗರತ್ ಪೇಟೆ ಯಲ್ಲಿ ಹೋಟೆಲ್ ಧ್ವಂಸ ಪ್ರಕರಣ. ಹಲಸೂರು ಗೇಟ್ ಪೊಲೀಸರಿಂದ ಆರು ಆರೋಪಿಗಳ ಬಂಧನ ಎಸ್.ಎಲ್.ಎನ್‌ ಹೋಟೆಲ್ ಗೆ ನುಗ್ಗಿ ರಾತ್ರೋ ರಾತ್ರಿ ಧ್ವಂಸ‌ ಮಾಡಿದ್ದ ಆರೋಪಿಗಳು ವಿನೋದ್, ಪ್ರಸನ್ನ, ಪ್ರಭು, ಸೇರಿ ಆರು‌ ಜನರ ಬಂಧನ. ಪ್ರಭು ಮತ್ತು ಪ್ರಸನ್ನ ತಾವು ಮಾಲೀಕರು ಎಂದು ಹೇಳಿಕೊಂಡಿದ್ದರು. ಈ ಹಿಂದೆ ಟ್ರಸ್ಚ್ ಒಂದಕ್ಕೆ ಸೇರಿದ್ದ ಕಟ್ಟಡವಾಗಿತ್ತು. ಹೀಗಾಗಿ ಹಲವಾರು ವರ್ಷಗಳಿಂದ ಟ್ರಸ್ಟ್ ಖಾತೆಗೆ ಬಾಡಿಗೆ ಹಣ ನೀಡುತ್ತಿದ್ದ ಹೋಟೆಲ್ […]

Advertisement

Wordpress Social Share Plugin powered by Ultimatelysocial